
ಇದೊಂದು ವಿನೂತನವಾದ ಶೈಕ್ಷಣಿಕ ಮನೋವಿಜ್ಞಾನದ ಗ್ರಂಥ. ಇದರ ಪುಟಪುಟಗಳಲ್ಲೂ ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಪುಲ ಮನೋವೈಜ್ಞಾನಿಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಗ್ರಂಥದ ಪರಿವಿಡಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು, ಅಲ್ಲಿಯ ಶೀರ್ಷಿಕೆಗಳು ವಿದ್ಯಾರ್ಥಿಗಳ ಮನಸ್ಸನ್ನು ಸೆರೆಹಿಡಿಯುತ್ತವೆ. ಶಿಕ್ಷಣದ ಜೀವಾಳವಾಗಿರುವ ವಾಚನ, ವ್ಯಾಸಂಗ, ಮನನ ಮುಂತಾದವುಗಳ ಸ್ವರೂಪದ ಕುರಿತು ಸಂಕ್ಷಿಪ್ತವಾದರೂ ಮನಮುಟ್ಟುವಂತೆ ವಿವರಿಸಿದ್ದಾರೆ. ಒಟ್ಟು ಶಿಕ್ಷಣದ ಪ್ರಕ್ರಿಯೆಗಳಾದ ಕಲಿಕೆಗೆ ಪ್ರೇರಣೆ, ಏಕಾಗ್ರತೆಯ ಸಂವರ್ಧನೆ, ಸಮಯದ ನಿರ್ವಹಣೆ, ಓದಿನ ವೇಗವನ್ನು ಹೆಚ್ಚಿಸಿಕೊಳ್ಳುವುದು, ಸುಂದರವಾಗಿ ಬರೆಯುವುದು, ನೂರಕ್ಕೆ ನೂರು ಅಂಕ ಗಳಿಕೆಯ ಅಭಿಲಾಷೆಯಿಂದ ಮುನ್ನಡೆಯುವುದು, ಪರೀಕ್ಷೆಯ ಬಗೆಗಿನ ಭಯಭೀತಿಗಳನ್ನು ಧೈರ್ಯದಿಂದ ಎದುರುಗೊಂಡು ನಿರ್ವಹಿಸುವುದು- ಹೀಗೆ ವಿದ್ಯಾರ್ಥಿಗಳಿಗೆ ಸೂಕ್ತ ಹಾಗೂ ವಾಸ್ತವಿಕ ಮಾರ್ಗದರ್ಶನ ಮಾಡಬಲ್ಲ ಸಂಗತಿಗಳನ್ನು ಬಹು ಸರಳವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಿದ್ದಾರೆ.
Category: | ಕನ್ನಡ |
Sub Category: | ಅಂಕಣ ಬರಹಗಳು |
Author: | Venkata Reddy |
Publisher: | Amulya pustaka |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬಹಳ ಕಾಲದಿಂದಲೂ ಮನೋವಿಜ್ಞಾನವನ್ನು ಅಧ್ಯಯನ ಮಾಡುವವರಲ್ಲಿ ಎರಡು ಪ್ರಮುಖ ಗುಂಪುಗಳಿರುವುದು ಕಂಡುಬರುತ್ತದೆ. ಒಂದು ಗುಂಪಿನವರ ಅಧ್ಯಯನ ಮತ್ತು ಆಸಕ್ತಿ ಇರುವುದೆಲ್ಲ "ಮನೋವಿಜ್ಞಾನವೆಂದರೆ ಏನು?" ಎನ್ನುವುದರ ಮೇಲೆ. ಇನ್ನೊಂದು ಗುಂಪಿನವರ ಆಸಕ್ತಿ ಇರುವುದು ''ಮನೋವಿಜ್ಞಾನ ಯಾಕೆ ಬೇಕು?" ಎನ್ನುವಲ್ಲಿ. ಮೊದಲನೆಯ ಗುಂಪಿನವರು ವಿವರಣಾತ್ಮಕ ಮನೋವಿಜ್ಞಾನದ ನಿರ್ಮಾಪಕರು. ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರಂಥದ ಕರ್ತೃ ಪ್ರೊ ವೆಂಕಟರೆಡ್ಡಿಯವರು, ನನ್ನ ಪ್ರಕಾರ, ಎರಡನೇ ಗುಂಪಿಗೆ ಸೇರಿದವರು. ರೆಡ್ಡಿ ಅವರನ್ನು ನಾನು ಅವರು ವಿದ್ಯಾರ್ಥಿಯಾಗಿದ್ದ ಕಾಲದಿಂದಲೂ ಬಲ್ಲೆ. ಅಂದಿನಿಂದಲೂ ಅವರ ಆಸಕ್ತಿ ಇದ್ದುದೆಲ್ಲ ಮನೋವಿಜ್ಞಾನ ಸೂತ್ರಗಳನ್ನು ಮಾನವರ ಜೀವನೋನ್ನತಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಾಗಿತ್ತು. ಈ ದಿಶೆಯಲ್ಲಿ ಅವರು ಬಹಳಷ್ಟು ಕೃಷಿ ಮಾಡಿದ್ದಾರೆ: ಲೇಖನಗಳನ್ನು ಬರೆದಿದ್ದಾರೆ; ಭಾಷಣ ಮಾಡಿದ್ದಾರೆ. ಗ್ರಂಥರಚನೆ ಮಾಡಿದ್ದಾರೆ. ನಿವೃತ್ತರಾದಮೇಲೂ ಅದೇ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ ಇನ್ನೊಂದು ಕೊಡುಗೆ ಈ ಪುಸ್ತಕ. ನಾನು ಈಗಾಗಲೇ ಅವರ ಒಂದು ಪುಸ್ತಕಕ್ಕೆ ಮುನ್ನುಡಿ ಬರೆದಿರುವುದ ರಿಂದ, ಈ ಪುಸ್ತಕಕ್ಕೆ ಬೆನ್ನುಡಿ ಬರೆಯುತ್ತಿದ್ದೇನೆ. ದೇವರು ರೆಡ್ಡಿಯವರಿಗೆ ಆಯುರಾರೋಗ್ಯ ನೀಡಲಿ, ಈ ನಿಟ್ಟಿನಲ್ಲಿ ಅವರು ಇನ್ನಷ್ಟು ಕೃಷಿ ಮಾಡಲಿ ಎಂದು ಹಾರೈಸುತ್ತೇನೆ.
-ಎಂ. ಬಸವಣ್ಣ
Venkata Reddy |
ವೆಂಕಟರೆಡ್ಡಿ ಆರ್ |
0 average based on 0 reviews.