• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಸತ್ಕುಲ ಪ್ರಸೂತರು | Satkula Prasutaru

ಹೀಗೆ, ಹಲವು ಪದರಗಳಿರುವ ನಿರೂಪಣೆ, ಹಲವು ಕೋನಗಳಿಂದ ನಡೆಯುವ ನಿರೂಪಣೆ ಇರುವ ಕನ್ನಡ ಕಾದಂಬರಿ ಓದಿ ಬಹಳ ಬಹಳ ವರ್ಷಗಳೇ ಕಳೆದಿವೆ. ಒಂದು ಮಾತಲ್ಲಿ ಹೇಳಬೇಕು ಅಂದರೆ ಇದು ನಾವು" ಬದುಕುತ್ತಿರುವ ಈ ೨೦೨೪ರ ಬದುಕಿಗೆ ನನ್ನ ತಲೆಮಾರಿನವರೊಬ್ಬರು ಅಮೆರಿಕದಲ್ಲಿ ಕೂತು ಹಿಡಿದಿರುವ ಕನ್ನಡಿ. ಬೇರೆ ಬೇರೆ ಕಾಲಘಟ್ಟಗಳಲ್ಲಿಯೂ ಬದಲಾಗದ ಸಮಸ್ಯೆಯನ್ನು 'ಸತ್ಕುಲಪ್ರಸೂತರು' ಪರಿಶೀಲಿಸಿದೆ. ಕಾದಂಬರಿಯೊಂದು ಕಥೆಯ ಕಾಲವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯ ಸಂಗತಿಯಾಗುತ್ತದೆ. ಈ ಕಾದಂಬರಿಯು ನವೋದಯ, ನವ್ಯಗಳ ಮಾರ್ಗವನ್ನು ಬಿಟ್ಟು ಕಾಲವನ್ನು ಕೌದಿಯ ಹಾಗೆ ಹೆಣೆದಿದೆ. ಇದು ಆತ್ಮಕಥೆಯೋ, ಸಮುದಾಯವೊಂದರ ಆಚರಣೆಗಳ ದಾಖಲೆಯೋ, ಹುಟ್ಟಿದ ನೆಲ ಮತ್ತು ಸಾಕಿದ ಕುಟುಂಬ, ನಂಟಸ್ತನ, ಪರಿಚಿತ ಉದ್ಯೋಗಗಳಿಲ್ಲದರಿಂದ ದೂರವಾಗಿ ಬದುಕುವ ಜನಸಮೂಹದ ಸ್ವವಿಮರ್ಶೆಯೋ, ಬರೆಯಲಿರುವ ಕಾದಂಬರಿಯೊಂದರ ಟಿಪ್ಪಣಿಯೋ, ಇದೇ ಕಾದಂಬರಿಯೋ, ಇಲ್ಲಿರುವಂಥ ನಿರೂಪಣೆ ಕಾದಂಬರಿಯ ನಿರೂಪಕನ ಅಗತ್ಯ ಮತ್ತು ಕಾದಂಬರಿಯ ಪಾತ್ರವೊಂದರ ಒತ್ತಾಯದಿಂದ ರೂಪುಗೊಂಡದ್ದೋ ಎಂದು 'ಸತ್ಕುಲಪ್ರಸೂತ'ರನ್ನು ಹಲವು ಕೋನಗಳಿಂದ ನೋಡಲು ಸಾಧ್ಯವಿದೆ. -ಓ ಎಲ್‌ ನಾಗಭೂಷಣ ಸ್ವಾಮಿ

₹295   ₹263

ಸಮಗ್ರ ಲಲಿತ ಪ್ರಬಂಧಗಳು | Samagra Lalita Prabandagalu

ಪ್ರೊಫೆಸರ್ ಅಕ್ಕಿಹೆಬ್ಬಾಳು ನರಸಿಂಹಮೂರ್ತಿ ರಾವ್ ಅವರು ಪರಿಪಕ್ವತೆಗೆ, ಸುಸಂಸ್ಕೃತ ಅಭಿರುಚಿಗೆ ಮತ್ತೊಂದು ಹೆಸರು. ಅವರದು ವಿಸ್ತಾರವಾದ, ಆಳವಾದ ಪುಸ್ತಕಜ್ಞಾನ; ಮೂರು ಖಂಡಗಳಲ್ಲಿ ಬದುಕನ್ನು ಕಂಡಿರುವ ವೈವಿಧ್ಯಮಯವಾದ ಲೋಕಾನುಭವ ಅವರದು. ಡಾಕ್ಟರ್ ಮೂರ್ತಿರಾಯರು ತಮ್ಮ ವಿದ್ವತ್ತು, ತಿಳಿಹಾಸ್ಯ, ಸರಳತೆ ಮತ್ತು ತೆರೆದ ಮನಸ್ಸಿನಿಂದ ಎಲ್ಲ ಪೀಳಿಗೆಗಳ ಪ್ರೀತಿ, ಗೌರವಗಳನ್ನು ಗೆದ್ದುಕೊಂಡ ಹಿರಿಯರಾಗಿದ್ದಾರೆ. ಕನ್ನಡದಲ್ಲಿ ಲಲಿತಪ್ರಬಂಧಕ್ಕೆ ವಿಶಿಷ್ಟ ರೂಪ ಕೊಟ್ಟು, ಅದರ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅವರು ಲಲಿತ ಪ್ರಬಂಧದ ಸಾಮ್ರಾಟರಾಗಿದ್ದಾರೆ.

₹330   ₹294

ಸರಸ | Sarasa

#

₹250   ₹223

ಸರ್ ಎಂ ವಿಶ್ವೇಶ್ವರಯ್ಯ | Sir M vishveshwariah

ಡಾ ಗಜಾನನ ಶರ್ಮ

₹195   ₹174

ಹದಿನಾಲ್ಕು ಕಿರು ಹಾಸ್ಯ ನಾಟಕಗಳು | Hadinalku kiru hasya naatakagalu

ಈ ಕಿರುನಾಟಕಗಳ ವಿಶೇಷತೆ ಏನು ಗೊತ್ತಾ ? ಇದು 3ಡಿ. ಕೇವಲ ಓದಿಯೂ ಖುಷಿ ಪಡಬಹುದು. ರೇಡಿಯೋ ನಾಟಕವಾಗಿಸಿಯೂ ಖುಷಿ ಪಡಬಹುದು ಮತ್ತು ರಂಗದ ಮೇಲೆ ಆಡಿಯೂ ಖುಷಿ ಪಡಬಹುದು. ಕೆಲವೇ ಕೆಲವು ಪಾತ್ರಗಳಿರುವುದರಿಂದ ಆಡುವವರಿಗೂ ಸುಲಭ. ಅದರಲ್ಲೂ ಶಾಲೆ, ಕಾಲೇಜುಗಳಲ್ಲಿ ಆಡುವುದಕ್ಕೆ, ರಾಜ್ಯೋತ್ಸವಾದಿ ಸಮಾರಂಭಗಳಲ್ಲಿ ಪ್ರದರ್ಶಿಸುವುದಕ್ಕೆ ಹೇಳಿ ಮಾಡಿಸಿದ ಹಾಗಿದೆ. ಅಲ್ಲಲ್ಲ, ಹೇಳಿ ಬರೆಸಿದ ಹಾಗಿದೆ. ಡುಂಡಿರಾಜರ ಶೈಲಿಯ ಪರಿಚಯವಿದ್ದವರು ನಾಟಕಗಳಲ್ಲಿ ಅವರ ಪಂಡ್ಗಳನ್ನು ಗುರುತಿಸಬಹುದಾದರೂ, ಇದರಲ್ಲಿ ಒಂದು ಸರ್‌ಪ್ರೈಸ್ ಎಲಿಮೆಂಟ್ ಕೂಡಾ ಇದೆ. ಏನು ಗೊತ್ತಾ? ಇವರು ದ ಕ ಆದರೂ ಕೆಲವು ಪ್ರಹಸನಗಳಲ್ಲಿ ಉಕ ಆಗಿದ್ದಾರೆ. ಅಂದರೆ ಉತ್ತರ ಕರ್ನಾಟಕದ ಭಾಷೆ ಬಳಸಿರೋದರಿಂದ ಈ ನಾಟಕಗಳು ಅಲ್ಲಿಯೂ ಜನಪ್ರಿಯವಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಇಡೀ ಕರ್ನಾಟಕಕ್ಕೆ ಸಲ್ಲುವ ನಾಟಕಗಳಿವು. "ಡಿವೈಡ್ ৬০মে ರೂಲ್" ಅಂತಾರಲ್ಲ? ಅದರಲ್ಲಿ ಡುಂಡಿರಾಜ್ ಸಿದ್ಧಹಸ್ತರು. "ಡಿವೈಡ್ ಅಂಡ್ ರೂಲ್" ಅಂದರೆ ಒಡೆದಾಳುವ ನೀತಿ. ಇವರದ್ದು "ಪದಗಳನ್ನು" ಒಡೆದು ಆಡುವ ರೀತಿ. ಅಲ್ಲದೆ ಹೊಸ ಹೊಸ ಪದಗಳನ್ನೂ ಕನ್ನಡ ಭಾಷೆಗೆ ಕಾಣಿಕೆಯಿತ್ತಿದ್ದಾರೆ. ಉದಾಹರಣೆಗೆ ಸಿನಿಮಹಾತ್ಮ, ಶೇಗ್ ಬಹದ್ದೂರ್, ಭಯವದನ, ಬರಿಯಪ್ಪ, ಮೋಸಪತ್ರಿಕೆ ಇತ್ಯಾದಿ.

₹195   ₹174

ಹೂ ಬಿಸಿಲಿನ ನೆರಳು | Hoo Bisilina neralu

ವಿಶ್ವೇಶ್ವರ್ ಭಟ್ ಪತ್ರಿಕೋದ್ಯಮದಲ್ಲಿ ಸದಾ ಕೇಳಿ ಬರುವ ಹೆಸರು ವಿಶ್ವೇಶ್ವರ ಭಟ್. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರಾದ ವಿಶ್ವೇಶ್ವರ ಭಟ್ ವೃತ್ತಿ ಜೀವನ ಆರಂಭಿಸಿದ್ದು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟೆಂಟ್ ಪ್ರೊಫಸರ್ ಆಗಿ. ಜೊತೆಗೆ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ವಿಶ್ವೇಶ್ವರ ಭಟ್ ಕೆಲಸ ನಿರ್ವಹಿಸಿದ್ದಾರೆ. ಪತ್ರಕರ್ತರಾಗಿ ಭಟ್ಟರ ಜೀವನ ಆರಂಭವಾಗಿದ್ದು ಸಂಯುಕ್ತ ಕರ್ನಾಟಕ ದಿನ Read More...

₹130   ₹116