| Category: | ಕನ್ನಡ |
| Sub Category: | ಕಾದಂಬರಿ |
| Author: | ತನುಜ ಎಂ | Thanuja M |
| Publisher: | ಗಗನ ಪ್ರಕಾಶನ | Gagana Prakashana |
| Language: | Kannada |
| Number of pages : | 212 |
| Publication Year: | 2025 |
| Weight | 300 |
| ISBN | :978-81-968950-8-2 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇದು 'ಅದಮ್ಯ ಪ್ರೀತಿ' ಮತ್ತು 'ನನಗಾಗಿ ಬಂದವನು' ಎಂಬ ಎರಡು ಕಾದಂಬರಿಗಳ ಸಂಕಲನ ಕೃತಿ. ಇದರೊಳಗೆ ಪ್ರಸ್ತುತ ಸನ್ನಿವೇಶದಲ್ಲಿ ಅಪರೂಪವಾಗಿರುವ ನೈಜ ಪ್ರೀತಿ, ಅಂತಃಕರಣ ಮಿಡಿಯುವ ಸಂಬಂಧಗಳ ಮೌಲ್ಯವನ್ನು ಎತ್ತಿ ಹಿಡಿಯುವ ಕಥನವಿದೆ.
ಪ್ರೀತಿ ಎನ್ನುವುದು ಆಕರ್ಷಣೆಗಷ್ಟೇ ಸೀಮಿತವಾದದ್ದಲ್ಲ. ಮನದ ಭಾವಕ್ಕೆ ಮಿಡಿಯುವ ಎರಡು ಹೃದಯಗಳ ಅಂತರಂಗದ ಸಂಗಮವದು. ಮೊದಲ ಕಥನವು, ಸುಧನ್ವ ಮತ್ತು ಸ್ಪಂದನಳ ಪ್ರೇಮ ಬಾಂಧವ್ಯದ ಆಳವನ್ನು ತೆರೆದಿಡುವುದರ ಮೂಲಕ ಅದಮ್ಯ ಪ್ರೀತಿಯನ್ನು ಅರ್ಥೈಸುತ್ತದೆ. ಇವರಿಬ್ಬರ ಜೊತೆಗೆ ಸಾಗುವ ಇತರ ಪಾತ್ರಗಳು ಸಣ್ಣತನ, ಈರ್ಷ, ಅಹಂಕಾರ ಎಲ್ಲವೂ ಸೇರಿ ಬದುಕಿನ ಬಂಡಿಯನ್ನು ಹೇಗೆಲ್ಲಾ ಬುಡಮೇಲು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತವೆ. ಹೀಗೆ ಆಸ್ತಿ ಅಂತಸ್ತು ಎನ್ನುವ ಸ್ವಾರ್ಥಿಗಳ ನಡುವೆ ನಿಜವಾದ ಪ್ರೀತಿ ಎನ್ನುವುದು ತನ್ನ ಮೌಲ್ಯವನ್ನು ಕಳೆದುಕೊಂಡು ಬಿಡುತ್ತದೆ. ಆದರೆ ಏನೇ ಬರಲಿ, ಎಂತಹ ಸಂದರ್ಭದಲ್ಲೂ ಪ್ರೀತಿಯ ಮೌಲ್ಯವನ್ನು ಎತ್ತಿ ಹಿಡಿಯಲು ಯಾರಾದರೂ ಆಪದ್ಭಾಂದವರಂತೆ ಬಂದೇ ಬರುತ್ತಾರೆ ಎನ್ನುವುದು ಈ ಕಥಾವಸ್ತು ಕಟ್ಟಿಕೊಡುವ ಭರವಸೆಯ ಆಶಯ.
ಎರಡನೆಯದು, 'ನನಗಾಗಿ ಬಂದವನು' ಇನ್ನೊಂದು ವಿಶೇಷ ಪ್ರೇಮದ ಕಥನ. ಇದರ ನಾಯಕಿ ಅಮೂಲ್ಯಳ ಕಳೆದುಕೊಂಡ ಪ್ರೀತಿಗೆ ಜೊತೆಯಾಗುವ, ನೊಂದ ಮನಕ್ಕೆ ಸಾಂತ್ವನ ನೀಡಲು ತುಡಿಯುವ ಅಭಿನಂದನ್ ಸ್ನೇಹ ಅಪೂರ್ವವಾದುದು. ಅದಕ್ಕಾಗಿ ಆತ ತನ್ನನ್ನೇ ತಾನು ಅರ್ಪಿಸಿಕೊಂಡು ಅಮೂಲ್ಯಳೊಂದಿಗೆ ಸಪ್ತಪದಿ ತುಳಿದು, ಅವಳ ಅಸ್ತಿತ್ವಕ್ಕೆ ಭದ್ರ ಬುನಾದಿ ಹಾಕುತ್ತಾನೆ. ಆ ಮೂಲಕ ಪ್ರೀತಿಯ ಮತ್ತೊಂದು ರೂಪವನ್ನು ತೋರಿಸುತ್ತಾನೆ. ಈ ರೀತಿ ಇಲ್ಲಿ ಒಂದು ಸುಂದರ ಸಂಬಂಧ ಹಲವು ಬಾಂಧವ್ಯಗಳ ಒಟ್ಟಿಗೆ ಸಾಗಿ ಜೀವನದ ಮೌಲ್ಯವನ್ನು ಸಂರಕ್ಷಿಸುತ್ತದೆ. ಜೀವನ ಎಂಬುದು ಒಂದು ಕೃಷಿ ಇದ್ದಂತೆ. ಈ ಕೃಷಿಯಲ್ಲಿ ಉತ್ತಮ ಫಸಲು ಬರಬೇಕು ಅಂದರೆ ಪ್ರೀತಿ,ವಿಶ್ವಾಸ, ನಂಬಿಕೆ, ಸ್ನೇಹ, ಬಾಂಧವ್ಯ ಎಂಬ ಸಾಧನಗಳು ತುಂಬಾ ಮುಖ್ಯ. ಈ ಸಾಧನಗಳ ಸದ್ಬಳಕೆ ಅದರಷ್ಟೇ ಜೀವನ ಉತ್ಕೃಷ್ಟ ಫಸಲನ್ನು ಅನುಭವಿಸಲು ಸಾಧ್ಯ.
de ಅರ್ಥದಲ್ಲಿ ಇಲ್ಲಿನ ಕಾದಂಬರಿಗಳು ಓದುಗರಿಗೆ ಪ್ರೀತಿಯ ರಸದೌತಣವನ್ನೇ ಬಡಿಸುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ.
ತನುಜ ಎಂ | Thanuja M |
0 average based on 0 reviews.