ಭಾಷಾಂತರವೆನ್ನುವುದು 'ನೆರಳು' ಎಂದರು ದ ರಾ ಬೇಂದ್ರೆಯವರು, ಯಾವುದಾದರೂ ವಸ್ತುವಿನ ನೆರಳು ಆ ವಸ್ತುವಿನ ಆಕಾರದಲ್ಲಿಯೇ ಇರುತ್ತದೆಯಷ್ಟೆ ಅನುವಾದ ಕೂಡ ಹಾಗೆಯೇ. ನೂರಕ್ಕೆ ನೂರರಷ್ಟು ಮೂಲ ಕೃತಿಯನ್ನು ಅನುಸರಿಸಿದ ಅನುವಾದ ಕೂಡ ಸ್ವಸಂಪೂರ್ಣ ಕೃತಿಯಲ್ಲ ಕೊನೆಗೂ ಅದೊಂದು ಅನುವಾದವಷ್ಟೆ ಹಾಗಾಗಿ ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ತರುವವರ ಅನುವಾದದಲ್ಲಿ ಅವರದೇ ಭಾಷೆ, ಗ್ರಹಣಶಕ್ತಿ, ಸಂವೇದನೆ, ಅಭಿರುಚಿ ಮುಂತಾದವು ಇರುವ ಹಾಗೆಯೇ ಅವರ ಕಾಲಧರ್ಮವೂ ಉಸಿರಾಡುತ್ತಿರುತ್ತದೆ. ಈ ಮಾತು ಶ್ರೀರಾಮ್ ಅವರ ಈ ಅನುವಾದಕ್ಕೂ ಸಲ್ಲುವಂಥದು. ಹೀಗಿದ್ದೂ ಇಲ್ಲಿನ ಕೆಲವು ಕತೆಗಳಲ್ಲಿ ಮೂಲ ಕತೆಗಳ ಧಾಟಿ ಧೋರಣೆಗಳಿಗೆ ಅನುಗುಣವಾದ, ಕನ್ನಡದಲ್ಲಿ ಸಾಮಾನ್ಯವಾಗಿ ಕಾಣದ ವಾಕ್ಯರಚನೆಗಳೂ ನುಡಿಗಟ್ಟುಗಳೂ ಇವೆಯೆಂಬುದು ಗಮನಾರ್ಹ. ಇಂಥವು ಯಾವುದೇ ಭಾಷೆಯ ಅಭಿವೃದ್ಧಿಗೆ ಅತ್ಯಗತ್ಯ ಕೂಡ. ಎಸ್ ದಿವಾಕರ್
Nil
nil
NA