ವಿಷ್ಣುವರ್ಧನ್ ಅವರ ನಿರ್ಗಮನವನ್ನು ಸದನವು ಯಾವ ರೀತಿ ಅವಲೋಕಿಸಿತು ಎನ್ನುವ ಕುತೂಹಲಕ್ಕೆ ಸಾಕ್ಷಿಯಾಗಿ ಈ ಪುಸ್ತಕವು ನಿಮ್ಮ ಕೈಲಿದೆ. ನಾಡಿನ ಅತ್ಯಂತ ಜನಪ್ರಿಯ ನಟರಾಗಿದ್ದ ಅವರಿಗೆ ನಟನೆಯನ್ನು ಮೀರಿದ ಮಾನವೀಯ ಮೌಲ್ಯಗಳು ಎಷ್ಟು ಮುಖ್ಯವಿತ್ತು ಎಂಬುದು ಸದನದ ಚರ್ಚೆಗಳ ಒಟ್ಟಾರೆ ಫಲಿತಾಂಶವಾಗಿ ಕಾಣುತ್ತದೆ. ಇದು ಸಹಜವಾಗಿ, ಇಡೀ ನಾಡಿನ ಜನಮಿಡಿತದ ದ್ಯೋತಕವೂ ಹೌದು. ಅವರ ಜೀವನ, ಅವರ ಮೌಲ್ಯಗಳು, ಅವರ ಸಾತ್ವಿಕತೆ ಇವೆಲ್ಲವೂ ಮುಂದಿನ ಪೀಳಿಗೆಗೆ ದಾರಿ ತೋರಲಿ ಎನ್ನುವ ಈ ಕೃತಿಯ ಉದ್ದೇಶ ಸಾರ್ಥಕವಾಗಿದ್ದು, ಅತಿ ಕ್ಷಿಪ್ರ ಅವಧಿಯಲ್ಲಿ ಅತ್ಯಂತ ಸಮಗ್ರವಾಗಿ ಈ ಕೃತಿಯನ್ನು ಹೊರ ತಂದಿರುವ ಡಾ. ಸಂತೋಷ ಹಾನಗಲ್ಲ ಅವರು ಅಭಿನಂದಾರ್ಹರು. ಅವರು ವಿಷ್ಣುವರ್ಧನ್ ಅವರ ಶುದ್ಧ ಮನೋಧರ್ಮವನ್ನು ದಾಖಲೆಗಳ ಮೂಲಕ ಪ್ರತಿಬಿಂಬಿಸಿದ್ದು, ಈ ಪುಸ್ತಕ ಕೇವಲ ಒಂದು ದಾಖಲೆಯಲ್ಲ. ಅದು ಒಂದು ಯುಗದ ಸ್ಪಂದನೆ ಎ೦ದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿ ಎಂ ಶ್ರೀನಿವಾಸ ರಾಜ್ಯಾಧ್ಯಕ್ಷರು ವಿಷ್ಣು ಸೇನಾ ಸಮಿತಿ, ಬೆಂಗಳೂರು