nil
“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ ಪುಸ್ತಕಗಳನ್ನ ಕೈಲಿಡ್ದು “ ಅಣ್ಣೋ ತೇಜಸ್ವಿಯವರ್ದು ಕರ್ವಾಲೋ, ಮಾದ್ಹೇವಣ್ಣಂದು ಎದೆಗೆ ಬಿದ್ದ ಅಕ್ಷರ, ಕುವೆಂಪುರವರದ್ದು ಮಂತ್ರ ಮಾಂಗಲ್ಯ, ಬೇಂದ್ರೆ ಅಜ್ಜಂದು ನಾಕುತಂತಿ. ಇವೆಲ್ಲಾ ಕನ್ನಡ ಪುಸ್ತಕಗಳು ಕಣಣ್ಣ, ಒಂದೇ ಒಂದ್ ಪುಸ್ತಕ ತಗೋ ಬಾ ಅಣ್ಣ, ಬಾರಕ್ಕ, ಸಾರ್, ಮೇಡಂ ಅಂತ ಕೂಗಿ -ಕೂಗಿ ಕರ್ದು, ನಾನಾ ನಮೂನಿ ಕನ್ನಡ ಸಾಹಿತ್ಯ ಪುಸ್ತಕಗಳನ್ನ ಮಾರಿ ಇಂದು ಬದ್ಕ ಕಟ್ಕೊಂಡಿವ್ನಿ. ಅವತ್ ನಾನು ಸೂಳೆ ದಿಟ, ಆದ್ರೆ ಇವತ್ ನಾನ್ ಸೂಳೆ ಅಲ್ಲ ಕನ್ರಪ್ಪೋ ಅಂತ ನಿರೂಪಿಸೀವ್ನಿ. ವೇಶ್ಯೆ ಅನ್ನೋ ಹಳೇ ನೀರು ಹರಿದೋಗಿ, ಹೊಸ ಹೆಣ್ಣಾಗಿ ಕನ್ನಡ ಪುಸ್ತಕಗಳ ಹೊಳೇಲಿ ತೇಲ್ತೀವ್ನಿ.” ಒಂದು ಪುಸ್ತಕ ಒಂದು ಬದಲಾವಣೆಗೆ ಕಾರಣವಾಗುತ್ತೆ, ಕಲ್ಲೆದೆಯಲ್ಲೂ ಭಾವನೆಗಳ ನೀರುಕ್ಕಿಸುವ ಕೆಲಸ ಕೆಲವು ಪುಸ್ತಕಗಳು ಮಾಡ್ತವೆ. ಈಗಿನ ಕಾಲದಲ್ಲಿ, ಕೈಲಿ ಪುಸ್ತಕಗಳನ್ನಿಡಿಯೋ ಬದಲು ಮೊಬೈಲ್ಗಳನ್ನ ಹಿಡಿಯೋ ಕೈಗಳೆ ಹೆಚ್ಚಿರುವಾಗ, ನೀನು ಪುಸ್ತಕಗಳನ್ನ ಮಾರಿ ಬದುಕ್ತಿನಿ ಅಂತಿದೀಯ
ಸದಾ ನಿಸರ್ಗದ ನಿಯಂತ್ರಣಕ್ಕೆ ಒಳಪಟ್ಟ ಕಾಡೊಂದರ ಅಭಿವೃದ್ಧಿಯ ಹಿಂದಿನ ರೂವಾರಿಗಳ ಶ್ರಮ, ಪ್ರತಿಭೆಗಳು ಸಾಮಾನ್ಯವಾಗಿ ಕಾಡಿನ ಗರ್ಭದಲ್ಲೇ ಕಣ್ಮರೆಯಾಗುವುದುಂಟು. ಇಡೀ ಜೀವನವನ್ನು ಅರಣ್ಯಗಳ ಏಳಿಗೆಗಾಗಿಯೇ ಮೀಸಲಿರಿಸಿ ಎಲೆಮರೆಯಲ್ಲೇ ಕಾಯಾಗಿ ನೇಪಥ್ಯಕ್ಕೆ ಸರಿದ ಮಹನೀಯರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇಂಥ ಕೆಲವೇ ವ್ಯಕ್ತಿತ್ವಗಳಲ್ಲಿ ಅರಣ್ಯಾಧಿಕಾರಿ ಮಾರಪ್ಪನವರೂ ಒಬ್ಬರು. ಅರಣ್ಯದ ಕಿರು ಉತ್ಪನ್ನವೆಂದೇ ಪರಿಗಣಿಸಲಾದ ಹುಣಸೆ ಮೂಲಕವೇ ಬರಡು ಜಿಲ್ಲೆಯೊಂದರ ಜನಸಮುದಾಯದ ಆರ್ಥಿಕ ಉನ್ನತಿ ಸಾಧಿಸುವ ಕನಸು ಕಂಡ ಮಾರಪ್ಪನವರ ದೂರದೃಷ್ಟಿ, ಆಶಯಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲು ಯತ್ನಿಸಲಾಗಿದೆ. ಅಧಿಕಾರದ ನಡುವೆಯೂ ಜನಸಮುದಾಯದ ಬಗ್ಗೆ ಸಹಜಪ್ರೀತಿ, ಅರಣ್ಯ, ಪರಿಸರಗಳ ಬಗ್ಗೆ ಸಾಮಾಜಿಕ ಎಚ್ಚರ ಎರಡನ್ನು ಹೊಂದಿದ್ದ ಮಾರಪ್ಪನವರಂಥ ವ್ಯಕ್ತಿಯೊಬ್ಬರನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವುದೇ ಒಂದು ಸಾಮಾಜಿಕ ಜವಾಬ್ದಾರಿ. ಈ ಕಾರ್ಯವನ್ನು ಈ ಕೃತಿಯಲ್ಲಿ ಎಚ್.ಎ. ಪುರುಷೋತ್ತಮರಾವ್ ಪ್ರೀತಿಯಿಂದ ನಿರ್ವಹಿಸಿದ್ದಾರೆ. ವೃತ್ತಿಯಿಂದ ಅರಣ್ಯ ಇಲಾಖೆಯ ಉದ್ಯೋಗಿಯಾಗಿ ನಿವೃತ್ತರಾಗಿರುವ ಎಚ್.ಎ. ಪುರುಷೋತ್ತಮರಾವ್ ಪ್ರವೃತ್ತಿಯಿಂದ ಲೇಖಕರು. ಸಾಹಿತ್ಯಾಭಿರುಚಿಯುಳ್ಳ ಇವರು ನಮ್ಮ ನಿತ್ಯಬದುಕಿಗೆ ಸಂಬಂಧಿಸಿದಂತೆ ಹಲವಾರು ವಿಜ್ಞಾನ ಬರಹಗಳನ್ನು ಬರೆದಿದ್ದಾರೆ. 'ಕಿವುಡನಮಾಡಯ್ಯ ತಂದೆ', 'ಭೂರಮೆಗೆ ಸೈಥೋಸ್ಕೋಪ್', 'ಗಾಳಿ ಬೇರುಗಳು', 'ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು' ಇನ್ನೂ ಮುಂತಾದ ಕೃತಿಗಳನ್ನು ಈಗಾಗಲೆ ಪ್ರಕಟಿಸಿದ್ದಾರೆ. ನಾಡು ಮರೆತ ಕಾಡು ಪ್ರತಿಭೆ ಮಾರಪ್ಪನವರ ಜೀವನ, ಸಾಧನೆ ಕುರಿತಂತೆ ಇಂಥದ್ದೊಂದು ವಿಶಿಷ್ಟ ಕೃತಿಯನ್ನು ರಚಿಸಿರುವ ಪುರುಷೋತ್ತಮರಾವ್ ಅಭಿನಂದನಾರ್ಹರು. -ಪ್ರಕಾಶಕ
ಈ ಭೂಮಿಯೆಂಬ ಗ್ರಹದಲ್ಲಿ ನಮ್ಮ ಸಹ ಪ್ರಯಾಣಿಕರಾಗಿ ಸಂಚರಿಸುವ ಸಮಸ್ತ ಜೀವಕೋಟಿಯೂ ಒಂದೇ ಜೀವಜಾಲದ ಭಾಗಗಳು. ಈ ಜೀವ ಜಾಲವನ್ನು ರಕ್ಷಿಸುವುದು ಅನಿವಾರ್ಯವೂ ಅಗತ್ಯವೂ ಆಗಿದೆ. ಇದರ ಜೊತೆಗೆ ಆರಣ್ಯ ಸಂರಕ್ಷಣೆಯೂ ಅಷ್ಟೇ ಮುಖ್ಯ. ಕಾಡುಪ್ರಾಣಿಗಳ ಜಾಡಿನಲ್ಲಿ ಪುಸ್ತಕದಲ್ಲಿ ಕಾರಂತರು ಈ ವಿಚಾರಗಳನ್ನು ಸವಿಸ್ತಾರವಾಗಿ ಚರ್ಚಿಸಿದ್ದಾರೆ.
ಅಗ್ನಿ ಶ್ರೀಧರ್
#
NA
Showing 1111 to 1140 of 4973 results