nil
ಮಲೆನಾಡಿನ ಶ್ರೀಮಂತ ಜಮಿನ್ದಾರಿ ಕುಟುಂಬ ಶತಮಾನಗಳ ಕಾಲ ಪಾಳೆಗಾರರಾಗಿ ಸ್ವಂತ ಸೈನ್ಯವನ್ನು ಹೊಂದಿ ಸಾವಿರಾರು ಎಕರೆ ಭೂ ಮಾಲಿಕರಾಗಿ ಆಳು ಕಾಳು ಒಕ್ಕಲು ಹತ್ತಾರು ಗ್ರಾಮದ ಪಟೇಲ್ ಜವಬ್ದಾರಿ ಘರ್ವದಿಂದ ಗತ್ತಿನಿಂದ ಎಂತವರಿಗು ಅವರ ಆಡಳಿತ ಮತ್ತು ಶ್ರೀಮಂತಿಕೆ ಬೆರುಗು ತರುವಂತಿತ್ತು. ಇಲ್ಲಿ ಬರುವ ಪಟೇಲರು ಒಮ್ಮೆ ಹೈದರಾಲಿ ಆತನ ಮಗ ಟಿಪ್ಪು ವಿರುದ್ಧ ಬ್ರಿಟೀಷರ ಸಹಾಯ ಪಡೆದು ಸಮರ ಸಾರಿದವರು. ಒಮ್ಮೊಮ್ಮೆ ಗೆಲುವು ಕಂಡವರು. ಹೈದರ್ ಮತ್ತು ಟಿಪ್ಪು ಸಂತತಿ ಅಳಿದ ನಂತರ ಬ್ರಿಟೀಷರ ಕಾನೂನು ಮತ್ತು ಮತಾಂತರದ ವಿರುದ್ಧ ಸಮರ ಸಾರಿದವರು. ಹೀಗೆ ಹಲವಾರು ಘಟನೆಗಳ ಚಿತ್ರಣವನ್ನು ಈ ಕಾದಂಬರಿಯಲ್ಲಿ ಸೆರೆ ಹಿಡಿಯಲಾಗಿದೆ. ಒಮ್ಮೊಮ್ಮೆ ಕೆಲವು ಕಡೆ ಉತ್ತೇಕ್ಷೆಯಂತೆ ಕಂಡರು ಕೆಲವು ಕಡೆ ಗೊಂದಲವಾಗಿಯೂ ಕಂಡು ಬರಬಹುದು. ಅದೆಲ್ಲದಕ್ಕು ಕೂನೆಯಲ್ಲಿ ಉತ್ತರ ದೊರೆತಂತೆ ಕಾಣುತ್ತದೆ. ನಾನು ಹೇಳಬೇಕಾದ ಕೆಲವು ವಿಚಾರಗಳನ್ನು ಕಥಾ ನಾಯಕರ ಬಾಯಿಯಿಂದ ಹೇಳಿಸುವ ಪ್ರಯತ್ನ ಮಾಡಿದ್ದೇನೆ ಎನ್ನುವುದು ಸತ್ಯ. ಈ ಕೃತಿ ಓದಿ ತಾವು ಪ್ರಾಮಾಣಿಕ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತೀರೆಂದು ನಂಬಿದ್ದೇನೆ.
#
ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ. ಹಳೆಯ ಕಾಲದ ಆರಾಧನೆ ಹಿಂದೆ ಸರಿದು ವಸ್ತು ನಿಷ್ಠವಾಗಿ, ನಿರ್ದಾಕ್ಷಿಣ್ಯವಾಗಿ, ಕೆಲವೊಮ್ಮೆ ತೀರ ಕಟುವಾಗಿ ಗಾಂಧಿ ಜೀವನ ಮತ್ತು ದರ್ಶನವನ್ನು ವಿಮರ್ಶಿಸುವ ಪರಿಪಾಠ ಬೆಳೆದಿದೆ. ಅಂತೆಯೇ ಮುಸಲ್ಮಾನರ ಪರ, ಹಿಂದೂ ವಿರೋಧಿ ಎಂಬ ನೆಲೆಯಲ್ಲಿ ಗಾಂಧಿಯವರ ಬಗ್ಗೆ ಕಡುದ್ವೇಷವನ್ನು ಬೆಳೆಸುವ ಮತ್ತು ಹಂತಕ ಗೋಡೆಯನ್ನು ಆರಾಧಿಸುವ ಪರಂಪರೆಗೆ ಚಾಲನೆ ನೀಡಲಾಗಿದೆ. ಡಾ. ಮಹಾಬಲೇಶ್ವರ ರಾವ್ ಈ ಎರಡೂ ಚಿಂತನಧಾರೆಗಳನ್ನು ಮತ್ತು ಗಾಂಧಿ ಪ್ರತಿಪಾದಿಸಿದ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ, ಸ್ವರಾಜ್ಯ, ಚರಕ ಮೊದಲಾದ ಪರಿಕಲ್ಪನೆಗಳನ್ನು ಪರಾಮರ್ಶಿಸುತ್ತಾರೆ. ಗಾಂಧಿ ಕೊಲೆಯ ಆರಂಭಿಕ ವಿಫಲಯತ್ನಗಳು ಮತ್ತು ಹತ್ಯೆಯ ಹಿಂದಿನ ಕಾರಣಗಳ ಮೇಲೆ ಕ್ಷಕಿರಣ ಬೀರುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷದ ಸಂವಾದದ ಸಂಬಂಧವನ್ನು ವಿವರಗಳ ಮೂಲಕ ಕಟ್ಟಿಕೊಡುತ್ತಾರೆ. ಈ ಸಂಕಲನ ಗಾಂಧಿಚಿಂತನ ಸಂಕಥನಗಳ ಮಾಲೆಗೆ ಡಾ. ಮಹಾಬಲೇಶ್ವರ ರಾವ್ ನೀಡಿರುವ ಸಮದರ್ಶಿತ್ವದ ಕೊಡುಗೆ.
ನಾರಾಯಣಾಚಾರ್ಯ ಕೆ ಎಸ್
ಕತೆಗಾರಿಕೆಯ ಕೌಶಲವನ್ನು ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು.
'ಹಾಡು ಹರಡಬೇಕು, ಮಾತು ಮರೀಬೇಕು' ಎನ್ನುತ್ತಾರೆ. ತಮ್ಮ ಬದುಕಿನ ಉದ್ದಕ್ಕೂ ಹಾಡನ್ನು ಹರಡುತ್ತಾ ಸಾಗಿದವರು ಎಚ್ ಆರ್ ಲೀಲಾವತಿ. ಕನ್ನಡದ ಮನೆ, ಮನಗಳಲ್ಲಿ ಅಚ್ಚೊತ್ತಿ ನಿಂತ ಹೆಸರು. 'ಹಾಡು' ಎನ್ನುವುದಕ್ಕೆ ಅನ್ವರ್ಥನಾಮವೇ ಲೀಲಾವತಿ ಎನ್ನುವಂತೆ ಇವರು ಹಾಡಾಗಿ ಹರಿದಿದ್ದಾರೆ. 'ಹಾಡಾಗಿ ಹರಿದಾಳೆ..' ಲೀಲಾವತಿ ಅವರ ಆತ್ಮಕಥನ. ಹಾಡನ್ನೇ ಉಸಿರಾಗಿಸಿಕೊಂಡ ಮಹಾನ್ ಪ್ರತಿಭೆಯ ಪಯಣದ ಕಥೆ. ಒಂದು ಅರ್ಥದಲ್ಲಿ ಈ ಕೃತಿ ಅದರ ಮುಂದುವರಿಕೆ. ಇದು ಕೇವಲ ಗಾನ ಯಾನವಲ್ಲ, ಕವಿಗಳ ಜೊತೆಗಿನ ಒಡನಾಟದ ಮೆಲುಕು ಸಹಾ. ಹಾಗಾಗಿಯೇ ಇದು 'ಗಾನ ಯಾನ, ಕಾವ್ಯ ಮಿಲನ'. ಈ ಕೃತಿ ಓದಿದರೆ ಲೀಲಾವತಿಯವರ ಬಗ್ಗೆ ಇರುವ ನಮ್ಮ ಪ್ರೀತಿ ಒಂದು ಹಿಡಿ ಹೆಚ್ಚೇ ಆಗುತ್ತದೆ.
ಸದಾಶಿವ ಸೊರಟೂರು ಅವರ ಬರಹಕ್ಕೆ ಇರುವ ಶಕ್ತಿಗೆ ನಾನು ಬೆರಗಾಗಿದ್ದೇನೆ. ಅವರ ಬರಹಕ್ಕೆ ಮಾಂತ್ರಿಕ ಶಕ್ತಿ ಇದೆ. ಇವರು ಕಥೆ ಬರೆಯಲಿ, ಕವಿತೆ ಬರೆಯಲಿ, ಲೇಖನ ಬರೆಯಲಿ ಎಲ್ಲದರಲ್ಲೂ ಸೊರಟೂರುತನವನ್ನು ಉಳಿಸುತ್ತಾರೆ. ಇವರ ಅಪಾರ ಓದು, ತನ ಓದುಗನನು ಗನನ್ನು ಓದಲು ಇವರು ಪಟ್ಟಿರುವ ಶ್ರಮ ಇವರ ಬರಹಗಳ ಯಶಸ್ಸಿಗೆ ಕಾರಣ. ಈಗ 'ಗಾಯಗೊಂಡ ಸಾಲುಗಳು ಕವನ ಸಂಕಲನದ ಜೊತೆಗೆ ಹಾಜರಾಗಿದ್ದಾರೆ. ಇವರ ಕವಿತೆಗಳಲ್ಲಿ ಕಳೆದು ಹೋಗೋಣ ಬನ್ನಿ ಜಿ. ಎನ್. ಮೋಹನ್
Showing 1411 to 1440 of 4977 results