nil
#
ಮನುಷ್ಯ ತನ್ನನ್ನು ತಾನು ಕಂಡುಕೊಳ್ಳಬೇಕು. ಬೇರೆ ಗ್ರಹಗಳಿಗೆ ಹೋಗುವುದಕ್ಕಿಂತ, ತನ್ನೊಳಗೆ ತಾನು ತೂರಿ ಹೋಗುವ ಪ್ರಯತ್ನ ಮಾಡಬೇಕು. ಪರಮಾತ್ಮನನ್ನು ನೋಡುವ ಹಂಬಲಕ್ಕಿಂತ, ತನ್ನ ಅತ್ಯವನ್ನೊಮ್ಮೆ ಭೇಟಿ ಮಾಡುವ ಹುಮ್ಮಸ್ಸಿರಬೇಕು. ಅಗಾಧ ಪಾಂಡಿತ್ಯವಿದ್ದೂ, ಏನೂ ಗೊತ್ತಿರದಂತೆ ಮೂಕನಾಗಿರಬೇಕು. ಜಾತ್ರೆಯ ಜನಜಂಗುಳಿ. ದೇವಾಲಯದ ಘಂಟಾಘೋಷ, ಸಿಡಿಲು ಗುಡುಗಿನ ಆರ್ಭಟದ ಮಧ್ಯೆಯೂ ತನ್ನ ಹೃದಯದ ಢಕ್-ಡಕ್ ಎಂಬ ಸಣ್ಣ ಮಿಡಿತ ತನ್ನ ಕಿವಿಗೆ ಕೇಳಿಸುವಂತಿರಬೇಕು, ಹೌದು! ನಾವೆಲ್ಲ ಆಗಾಗ ಒಮ್ಮೆ ಈ ಸ್ಥಿತಿಗೆ ಜಾರುತ್ತಿರಬೇಕು. ಮೂಕನಾಗಿರಬೇಕು. ಏಕಾಂಗಿಯಾಗಿರಬೇಕು. ಮೌನಿಯಾಗಿರಬೇಕು. ಮೇಲಾಗಿ ತಾನಾರು? ಎಂದು ತನ್ನನ್ನು ತಾನು ಅನ್ವೇಷಿಸಿಕೊಳ್ಳಬೇಕು. ತನ್ನನ್ನು ತಾನು ಅನ್ವೇಷಿಸಿಕೊಳ್ಳಲಕ್ಕಾದರೂ ಬಲವಂತವಾಗಿಯಾದರೂ ನಮ್ಮ ಮನಸ್ಸನ್ನು ಮೌನಕ್ಕೆ ತಳ್ಳಬೇಕು. ದೇಹ ಎಚ್ಚರವಾಗಿದ್ದಲೇ. ಪ್ರಜ್ಞೆಯನ್ನು ನಿದ್ರಾವಸ್ಥೆಗೆ ದೂಡಬೇಕು. ಮೈ ಮನಗಳನ್ನು ಹಗುರವಾಗಿ, ನೀಲ ನಭದಲ್ಲಿ ಸ್ವಚ್ಛಂದದಲ್ಲಿ ಹಾರಾಡುವ ಹಕ್ಕಿಗಳಂತೆ ಹಾರಿಬಿಡಬೇಕು. ಆತ್ಮವನ್ನು ಒಂಟಿತನದಿಂದ ಏಕಾಂತದೆಡೆಗೆ, ಮನಸ್ಸನ್ನು ಕಲ್ಮಶದಿಂದ ನಿರ್ಮಾನುಷ್ಯದೆಡೆಗೆ ಜಾರಿಸಿಬಿಡಬೇಕು. ಉತ್ತಟ ಆನಂದದ ತುತ್ತತುದಿಯನ್ನು ಮುಟ್ಟಿ, ಪ್ರಶಾಂತತೆಯ ಸಾಗರದ ಕಡಲ ತಡಿಯನ್ನು ಈಜಬೇಕು. ಈ ಮೂಲಕ ಪ್ರತಿಯೊಬ್ಬ ಮನುಜನೂ ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳಬೇಕು. ಅದೂ ಏಕಾಂತವಾಗಿ, ನಾನು-ಶೆಫಾಲಿ ಆ ಏಕಾಂತದಲ್ಲಿ ಈಗ ವಿಹರಿಸುತ್ತಿದ್ದೇವೆ. ಶೆಫಾಲಿ ತನ್ನ ಮುಂದಿನ ಜೀವನವನ್ನು ನೆನೆಯುತ್ತಾ... ನಾನು ನನ್ನ ಹಿಂದಿನ ಜೀವನವನ್ನು ಮರೆಯುತ್ತಾ...
ಅಪಾರ ಅಧ್ಯಯನ, ಅಧ್ಯಾಪನ, ಅನುಭವಗಳಿಂದ ಮೂಡಿಬಂದ ನೇರ ಹಾಗೂ ಸರಳ ನಿರೂಪಣೆ, ಅಗತ್ಯ ವಿವರಗಳು, ಅಲ್ಲಲ್ಲಿ ಶೋಭಿಸುವ ಗಾದೆ ಮಾತುಗಳು ಲೇಖನಗಳ ವಾಚ್ಯಾಸಕ್ತಿಯನ್ನು ಹೆಚ್ಚಿಸುತ್ತವೆ. ಬದುಕನ್ನು ಬಂದಹಾಗೆ ಸ್ವೀಕರಿಸುವ ಆಲೋಚನೆ, ಬರೆದಿದ್ದು ಕಮ್ಮಿ ಬರೆಯಬೇಕಾದ್ದು ಇನ್ನೂ ಇದೆ ಎಂಬ ಆಸೆ ಎಲ್ಲವೂ ಲೇಖಕಿಯ ಘನಾತ್ಮಕ ಅಂಶಗಳು. ಈಗಾಗಲೇ ಹಲವಾರು ಸಾಂದರ್ಭಿಕ ಲೇಖನಗಳು, ಕಥೆ, ಕವನ, ವಿಮರ್ಶೆ, ನಾಟಕ, ಅನುವಾದಗಳ ಮೂಲಕ ಹೆಸರಾಗಿರುವ ಡಾ.ಸತ್ಯವತಿ ಮೂರ್ತಿ ಅವರು ರಚಿಸಿರುವ 'ನಾನೂ ಮತ್ತು ನನ್ನವರ ಸ್ವೀಟಿ ಮತ್ತು ಇತರ ಪ್ರಬಂಧಗಳು ಸಂಕಲನವನ್ನು ಓದಿ ನನ್ನ ಅರಿವು,ಆಲೋಚನೆಗಳ ಮಿತಿಯಲ್ಲಿ ಒಂದಿಷ್ಟು ಅಭಿಪ್ರಾಯಗಳನ್ನು ಇಲ್ಲಿ ನೀಡಿದ್ದೇನೆ.ಈ ಮೂಲಕ ಅವರಿಗೆ ಶುಭ ಹಾರೈಸುತ್ತ,ಅವರಿಂದ ಇನ್ನಷ್ಟು ಮತ್ತಷ್ಟು ಸಾಹಿತ್ಯ ಕೈಂಕರ್ಯ ನಡೆಯಲೆಂದು ಆಶಿಸುತ್ತೇನೆ ಕೆ.ಎನ್.ಭಗವಾನ್
Showing 2281 to 2310 of 4981 results