nil
ಹಿರಿಯರಾದ ಕೊಡಸೆ ಸರ್. ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು ತಾಜಾ ಉದಾಹರಣೆಯಾಗಿ ನಿಲ್ಲಬಲ್ಲರಿ!! ನೀವು ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಬರವಣಿಗೆಯಿಂದ, ಪ್ರಾಮಾಣಿಕ ಕೆಲಸದಿಂದ, ಕರ್ತೃತ್ವಶಕ್ತಿಯಿಂದ, ಜಾಣ್ಯ, ದಕ್ಷತೆಗಳಿಂದ, ಹುರುಪು, ಹುಮ್ಮಸ್ಸಿನಿಂದ, ನಿರಂತರ ಚಿಂತನಶೀಲತೆಯಿಂದ, ಕಳಕಳಿ-ಕಾಳಜಿಯಿಂದ. ಕರ್ತವ್ಯ ನಿಷ್ಠೆಯಿಂದ ಮಾಡಿರುವ ಸೇವೆ ಅನುಪಮವಾದುದು. ಪ್ರೊ. ಓಂಕಾರ ಕಾಕಡೆ
#
ಕನ್ನಡದ ಸಾಮಾನ್ಯ ಜನರಿಗೆ ಕನ್ನಡ ಭಾಷೆ- : ಕಲಿಯಲಿಚ್ಚಿಸುವವರಿಗೆ, ವಿಶೇಷವಾಗಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಪುಸ್ತಕ ರಚಿಸಲಾಗಿದೆ. ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹುಟ್ಟಿಸಿ, ಚಿಂತನೆಗೆ ತೊಡಗಿಸಿ ತನ್ಮೂಲಕ ಪದಗಳ : ಬಳಕೆ ಹೆಚ್ಚಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಸದುದ್ದೇಶ ಈ ಪುಸ್ತಕದ್ದು,
ಅ.ನಾ. ಪ್ರಹ್ಲಾದರಾವ್
ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಈ ಕ್ಷೇತ್ರಗಳ ಸಾಧಕರ ವಿವರಗಳನ್ನು ಸುಳಿವುಗಳಲ್ಲಿ ಅಳವಡಿಸಲಾಗಿದೆ. ಈ ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು. ಸಾಮಾನ್ಯ ಬಳಕೆಯ ಪದಗಳ ಜೊತೆಗೆ ಅಷ್ಟೇನೂ ಬಳಕೆಯಲ್ಲಿಲ್ಲದ ಗ್ರಾಂಥಿಕ ಪದಗಳು ಮತ್ತು ಕೆಲ ಪ್ರಾಂತೀಯ ಪದಗಳೂ ಸೇರಿಕೊಂಡಿವೆ.
Showing 2551 to 2580 of 4981 results