nil
ಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು, ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕರವಸ್ತ್ರಕ್ಕಂಟಿದ ಕಣ್ಣೀರು- ನಾವೆಲ್ಲ ನಿರ್ಲಕ್ಷಿಸಿ ಮುನ್ನಡೆಯಬಹುದಾದ ಇಂಥ ಸಣ್ಣ ವಿಷಯಗಳೇ ಷರ್ಲಾಕ್ ಹೋಮ್ಸ್ನನ್ನು ಹಿಡಿದು ನಿಲ್ಲಿಸುತ್ತಿದ್ದವು. ಅಪರಾಧದ ಸ್ಥಳದಲ್ಲಿ ಕಂಡ ನಗಣ್ಯವೆನ್ನುವಂತೆ ತೋರುವ ಸುಳಿವುಗಳನ್ನು ಹಿಂಬಾಲಿಸಿ, ಅವಕ್ಕೆ ತನ್ನ ಸರಿಸಾಟಿಯಿಲ್ಲದ ತರ್ಕಸರಣಿಯನ್ನು ಹೊಂದಿಸಿ, ಅಚ್ಚರಿಯೆನಿಸುವಂತೆ ಕೊಲೆಗಾರನನ್ನು ಪತ್ತೆ ಮಾಡುವ ವಿಶಿಷ್ಟ ದಾರಿಯೊಂದು ಅವನಿಗೆ ಗೊತ್ತಿತ್ತು. ಟೋಪಿ, ಸಿಗಾರ್ ಹಾಗೂ ಸಣ್ಣದೊಂದು ಭೂತಗನ್ನಡಿಯ ಜೊತೆ ಜಗತ್ತಿನ ಓದುಗರೆಲ್ಲರ ಮನಸ್ಸಿನಲ್ಲಿ ಅಷ್ಟೊತ್ತಿದಂತೆ ಉಳಿದಿರುವ ಪತ್ತೇದಾರ ಷರ್ಲಾಕ್ ಹೋಮ್ಸ್. ಈ ಕಾಲ್ಪನಿಕ ಪಾತ್ರದ ಸೃಷ್ಟಿಕರ್ತ ಅರ್ಥರ್ ಕಾನನ್ ಡಾಯ್ಸ್, ಹೋಮ್ಸ್ ಇರುವವರೆಗೆ ತಾನು ಬೇರೇನೂ ಬರೆಯಲಾರೆ ಎಂದೆನಿಸಿ ಒಂದು ಕತೆಯಲ್ಲಿ ಅವನನ್ನು ಸಾಯಿಸಿಬಿಟ್ಟನಂತೆ. ಆದರೆ ಅದಕ್ಕೆ ಓದುಗರ ಪ್ರತಿಕ್ರಿಯೆ ಹೇಗಿತ್ತೆಂದರೆ, ವಿಧಿಯಿಲ್ಲದೆ ಕೆಲ ವರ್ಷಗಳ ನಂತರ ಡಾಯ್ಸ್ ಇನ್ನೊಂದು ಕತೆ ಬರೆದು ಹೋಮ್ಸ್ನನ್ನು ಬದುಕಿಸಬೇಕಾಯ್ತು! ಅದ್ಭುತ ಪಾತ್ರಗಳೇ ಹಾಗೆ ಅಜರಾಮರ- ಸೃಷ್ಟಿಕರ್ತನೇ ಬಯಸಿದರೂ ಅವು ಸಾಯುವುದಿಲ್ಲ!
ಪರ್ವತವಾಡಿ...ಅಲ್ಲ..ಅಲ್ಲ.ಪರ್ವತವಾಣಿ ಅದು ನಾನೇ
ಪರ್ವತವಾಡಿ...ಅಲ್ಲ ಅಲ್ಲ..ಪರ್ವತವಾಣಿ ಅದು ನಾನೇ
ಐವತ್ತರ ಜೇಬುಗಳ್ಳ ಹರಿಕೇದಾರನಿಗೆ ಇದ್ದಕ್ಕಿದ್ದಂತೆ ಪಂಚೇಂದ್ರಿಯಗಳು ಕೆಲಸ ಮಾಡದಿದ್ದಾಗ 'ಗಾಬರಿಯಾಗುತ್ತಾನೆ. ತನ್ನ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಅವನನ್ನು ಅದು ದೇಶದ ಅನೇಕ ಊರುಗಳಿಗೆ ಕರೆದೊಯ್ಯುತ್ತದೆ. ಅವನ ಈ ಪ್ರಯಾಣದ ಕೊನೆ ಏನು? ಯತಿರಾಜ್ ವೀರಾಂಬುಧಿ ಬರೆದಆಸಕ್ತಿಕರ ಕಾದಂಬರಿ
ಕೆ. ಸತ್ಯನಾರಾಯಣ
ರಾಜಶೇಖರ್ ಭೂಸನೂರ್ಮಥ್
ಶ್ರೀಧರ ಹೆಗ್ಗೋಡು
Showing 2611 to 2640 of 4981 results