#
nil
ಬಡತನವನ್ನು ಎದುರಿಸಿ ಗೆದ್ದ ಸಾಧಕರಿಗೆ ನನ್ನ ನಲ್ಮೆಯ ಮಾತು. ಸಾಧಕರ ಜೀವನ ಚರಿತ್ರೆಯನ್ನು ಓದಿದ ಹಲವರಿಗೆ, ಈ ಸಾಧಕರು ಸ್ಫೂರ್ತಿಯಾಗುತ್ತಾರೆ. ಆದರ್ಶದ ಜ್ಯೋತಿ ಆಗುತ್ತಾರೆ, ಜ್ಯೋತಿಯ ಬೆಳಕಿನಲ್ಲಿ ಕಾಣುವ ಮಾರ್ಗದಲ್ಲಿ ತಾವೂ ನಡೆಯಲು ಪ್ರಯತ್ನಿಸುತ್ತಾರೆ. ಬಡತನ ಸಂಕಷ್ಟಗಳು ಭಗವಂತನ ಶಾಲೆಯಲ್ಲಿ ಅವನಿಟ್ಟ ಒಂದು ಪರೀಕ್ಷೆ ಅದರಲ್ಲಿ ಪೂರ್ತಿ ಅಂಕಗಳೊಂದಿಗೆ ತೇರ್ಗಡೆಯಾದ ಸಾಧಕರ ಹೆಸರು ಅಜರಾಮರವಾಗಿ ನಿಲ್ಲುತ್ತದೆ. 84 ಲಕ್ಷ ಜನ್ಮಗಳನ್ನು ದಾಟಿ ಶ್ರೇಷ್ಠವಾದ ಮಾನವ ಜನ್ಮಕ್ಕೆ ಕಾಲಿರಿಸಿದ ನಮಗೆ ಬಡತನ, ಕಷ್ಟಗಳನ್ನು ಒಂದು ವರವಾಗಿ ಕೊಟ್ಟಿದ್ದಾನೆ ಭಗವಂತ. ಬಡತನ, ಸಂಕಷ್ಟಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ನಮಗೆ ಪ್ರಪಂಚದ ನಾನಾ ವಿಚಾರಗಳು ಅರ್ಥವಾಗುತ್ತವೆ ನಾನಾ ಮನುಷ್ಯರ ಪರಿಚಯ ಆಗುತ್ತದೆ. ತಾಯಿ-ತಂದೆ ಬಂಧು ಬಳಗ, ಯಾರನ್ನು ನಂಬಬೇಕು ಬಿಡಬೇಕು, ಸ್ನೇಹಿತರು, ಮಕ್ಕಳು, ಗಂಡ ಹೆಂಡತಿ, ಎನ್ನುವ ಪಾತ್ರಗಳ ಪರಿಚಯವಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಸಾಧನೆಯ ಬದುಕು ಸ್ವಾಭಿಮಾನದಿಂದ ನಿಸ್ವಾರ್ಥತೆಯಿಂದ ಪುಟಕ್ಕಿಟ್ಟ ಚಿನ್ನವಾಗುತ್ತದೆ. ನಾವು ಬಡವರು, ಕಷ್ಟಜೀವಿಗಳು ಎಂಬ ಭಾವನೆ ಸಲ್ಲದು. ಭಗವಂತನ ಪರೀಕ್ಷೆಗೆ ಒಳಪಟ್ಟಿರುವ ನಾವು ನಿಜಕ್ಕೂ ಧನ್ಯರು, ಮಾನ್ಯರು. ಈ ದಿಸೆಯಲ್ಲಿ ಇಂತಹ ಹಲವು ಸಾಧಕರನ್ನು ಪರಿಚಯಿಸುವ ಸ್ತುತ್ಯ ಕಾರ್ಯ ಮಾಡಿರುವ ಲೇಖಕರಾದ ಡಾ.ಶ್ರೀನಿವಾಸ ಪ್ರಸಾದ್ ಅವರಿಗೂ, ಈ ಕೃತಿಯನ್ನು ಪ್ರಕಟಿಸುತ್ತಿರುವ ವೀರಲೋಕ ಪ್ರಕಾಶನ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರಿಗೂ ಶುಭಾಶಯ.
ಬದುಕೇ ಭಗವಂತಡಾ. ಶ್ರೀನಿವಾಸ ಪ್ರಸಾದ್ ಅವರು ಈ ವಿಶಿಷ್ಟ ಪುಸ್ತಕದಲ್ಲಿ ಜೀವನದ ಒಳ್ಳೆಯತನಗಳನ್ನು ಪರಿಚಯಿಸುವಾಗ ಅನೇಕ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಕೂಡ ಪರಿಚಯಿಸುತ್ತಾರೆ.
Nil
ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ರಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನ ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ದಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ 'ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ' ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು 'ಬನವಾಸಿ ಮತ್ತು ಕದಂಬರ ಇತಿಹಾಸ" ಎಂಬ ಈ ಕೃತಿಯಲ್ಲಿ ಬನವಾಸಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಹಾಗೂ ಕನ್ನಡದ ಪ್ರಥಮ ಸಾಮ್ರಾಜ್ಯ ಸ್ಥಾಪಕರೆನಿಸಿದ ಕದಂಬರ ಕುರಿತು ಸಮಗ್ರ ಮಾಹಿತಿಯನ್ನು ವಸ್ತುನಿಷ್ಠವಾಗಿ ಉಲ್ಲೇಖಿಸಿರುತ್ತಾರೆ. ಈ ಕೃತಿಯಲ್ಲಿ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಕುರಿತಾಗಿದ್ದ ಪೂರ್ವಾಗ್ರಹಗಳು, ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆಯ ಆವರಣಕ್ಕೊಳಪಡಿಸಿದ್ದಾರೆ. ಅಂತೆಯೇ ಕದಂಬರ ರಾಜಕೀಯ ಇತಿಹಾಸ, ಬನವಾಸಿಯಲ್ಲಿ ನಡೆದ ಉತ್ಪನನಗಳು, ಕದಂಬರ ಶಾಸನಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳಿವೆ. ಕನ್ನಡ ನಾಡನ್ನು ಪ್ರೀತಿಸುವ, ಆರಾಧಿಸುವ ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಇರಬೇಕಾದ ಕೃತಿ ಇದಾಗಿದೆ. ಪ್ರಕಾಶಕರು
Showing 2941 to 2970 of 5120 results