ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು. ಈವರೆಗೂ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಸಿದ್ದ ವಾರ, ಮಾಸ ಪತ್ರಿಕೆಗಳೆಲ್ಲೆಲ್ಲಾ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ತೀರ್ಥಹಳ್ಳಿಯ ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ತುಂಗಾ ಮಹಾವಿದ್ಯಾಲಯದಲ್ಲಿ ಸರಿ ಸುಮಾರು ಮುವತ್ತೈದು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಕಾಶಬುಟ್ಟಿ ನಟರಾಜ್ ಅರಳಸುರಳಿಯವರ ಚೊಚ್ಚಲ ಕೃತಿ.
ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ.
ಕ್ರಿಕೆಟ್ ಅಂದರೆ ಕೇವಲ ರನ್ನು ವಿಕೆಟ್ಟು ಬಾಲ್‌ಗಳ ಆಟವಲ್ಲ, ಅಲ್ಲಿ ದೊಡ್ಡದೊಂದು ಇತಿಹಾಸ, ದಾಖಲೆ, ಕೌತುಕ, ಸ್ವಾರಸ್ಯ, ರೋಚಕ ಕಥನ, ವಿವಾದ, ಆಕ್ರೋಶ, ಸೇಡು, ಜೋಶ್, ತಮಾಷೆ, ಪರಿಶ್ರಮ… ಎಲ್ಲವೂ ಇದೆ.
ಇದು ನನ್ನ ಇಂತಹ ಬರಹಗಳ ಮೂರನೆಯ ಸಂಪುಟ. ಇದರಲ್ಲಿ ಹದಿನೇಳು ಜನರ ವ್ಯಕ್ತಿತ್ವ ಚಿತ್ರಣಗಳಿವೆ. ನಾನು ಬಾಲ್ಯದಲ್ಲಿ ನೋಡಿದವರು, ನನಗೆ ವೇದಪಾಠ ಹೇಳಿಕೊಟ್ಟವರು, ಜೊತೆಯಲ್ಲಿ ಕೆಲಸ ಮಾಡಿದ ಪತ್ರಕರ್ತರು, ಚಿತ್ರ ಕಲಾವಿದರು, ನಮ್ಮ ಕಾಲದ ರಸಿಕ ವಿದ್ವಾಂಸರು, ಪರ್ಯಾಯ ಚಿಕಿತ್ಸಕರು, ನಮ್ಮ ತಂದೆಯ ಓರಗೆಯವರು, ನಮ್ಮ ಮನೆಯ ಭಾಗವಾಗಿದ್ದವರು, ಪರಿವ್ರಾಜಕ ಮನೋಭಾವದ ಮಿತ್ರರು, ತಮ್ಮ ಸಾಹಿತ್ಯ-ಚಿಂತನೆಗಳಿಂದ ನನ್ನನ್ನು ರೂಪಿಸಿದವರು.... ಹೀಗೆ ಹಲವರಿದ್ದಾರೆ. ಇಂತಹ ಯಾರ ಲೋಪವನ್ನೂ ಎತ್ತಿ ತೋರಿಸುವುದು ಇಲ್ಲಿಯ ಆಶಯವಲ್ಲ. ಇಂಥವರ ಮೂಲಕ ನಮ್ಮ ಸಮಾಜವನ್ನು ಗ್ರಹಿಸುವುದು ಇಲ್ಲಿರುವ ಬಯಕೆ. ಇಲ್ಲಿ ಚಿತ್ರಣಗೊಂಡಿರುವವರೆಲ್ಲರೂ ನನ್ನ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಇವರೆಲ್ಲರ ಚೈತನ್ಯದಿಂದ ಬದುಕಿನ ಚೆಲುವು ವರ್ಧಿಸಿದೆ; ಜಗತ್ತು ಸ್ವಾರಸ್ಯವಾಗಿ ಕಂಡಿದೆ; ಮನುಷ್ಯಸ್ವಭಾವದ ಮೇಲಿನ ಕುತೂಹಲ ಹೆಚ್ಚಾಗಿದೆ.
ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.
ಮನೆಯ ಎದುರೇ ಇರುವ ಹಸಿರುಕ್ಕುವ ಗದ್ದೆ ಬಯಲು ದಾಟಿ, ತೊರೆಯೊಂದರ ನೀರಿನಲ್ಲಿ ಕಾಲಾಡಿಸಿ, ಸನಿಹದ ಕಾಡಿನಲ್ಲಿ ನಡೆಯತೊಡಗಿದರೆ, ಸಿಹಿ ನೀರಿನ ಬುಗ್ಗೆ, ಹಾರುವ ಓತಿ, ಕನ್ಯಾಸ್ತ್ರೀ ಹೆಸರಿನ ಅಪರೂಪದ ಅಣಬೆ, ಬಕುಳದ ಹೂ, ಚೇಂಪಿ ಹಣ್ಣು – ಇವೆಲ್ಲವೂ ಕಾಣಸಿಗುತ್ತವೆ, ಆಪ್ತವಾಗುತ್ತವೆ. ಇಂತಹ ಅನುಭವಗಳಲ್ಲಿ ನೀವೂ ಭಾಗಿಯಾಗಬೇಕೆ? ಹಾಗಿದ್ದಲ್ಲಿ ಈ ಪುಸ್ತಕ ಓದಿ.
ಒಂದು ಕಾಲಕ್ಕೆ ಸಾಹಿತ್ಯಲೋಕದಲ್ಲಿ ಶಿಕ್ಷಕರದ್ದೇ ಸಿಂಹಪಾಲು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಶಿಕ್ಷಕರಿಗೆ ಬರೆಯುವಷ್ಟು ಸಮಯ ಪಕ್ಕಕ್ಕಿಡಿ, ಓದಲೂ ಸಮಯವಿಲ್ಲದಂತಾಗಿದೆ ಶಿಕ್ಷಕವರ್ಗವೇ ಓದಿನಿಂದ ವಿಮುಖರಾಗಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ನಡುವೆ ಓದು ಅಂಕಗಳಿಕೆಗೆ ಮಾತ್ರ ಬಳಕೆಯಾಗುತ್ತಿರುವುದು ಹೊಸ ಸಂಗತಿ ಏನಲ್ಲ. ದೇಶದ ಪಿತಾಮಹರಂತಹ ದೊಡ್ಡ ಪ್ರಶ್ನೆಗಳನ್ನು ಬಿಡಿ, ದೇಶದ ರಾಷ್ಟ್ರಪತಿ, ರಾಜ್ಯಪಾಲರು ಯಾರೆಂಬುದು ಗೊತ್ತಾಗದಂತಹ ಶಿಕ್ಷಣವನ್ನು ನಾವು ಮಕ್ಕಳಿಗೆ ನೀಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಶಾಲೆ, ಶಿಕ್ಷಕಿ ಮತ್ತವರ ದಿನಚರಿ ತುಸು ವಿಭಿನ್ನ ಮತ್ತು ಮಾದರಿಯಂತಿದೆ. ಚೂರು ಹೊಸ ಭರವಸೆಯನ್ನು ಮೂಡಿಸುತ್ತಿದೆ.
ಆಸ್ಕರ್ ಟಿವಿಯಲ್ಲಿ 1992ರ ಬಾರ್ಸಿಲೋನಾ ಒಲಂಪಿಕ್ಸ್ ಹೈಲೈಟ್ಸ್ ಹಲ್ಲು ಕಿಸಿದು ಕೊಂಡು ನೋಡಿದ ನೆನಪು ಅಚ್ಚಳಿಯದೆ ಮಸ್ತಕದಲ್ಲಿ ಅಚ್ಚಾಗಿದೆ.
ವಿಷ್ಣುವರ್ಧನ್ ಅವರ ನಿರ್ಗಮನವನ್ನು ಸದನವು ಯಾವ ರೀತಿ ಅವಲೋಕಿಸಿತು ಎನ್ನುವ ಕುತೂಹಲಕ್ಕೆ ಸಾಕ್ಷಿಯಾಗಿ ಈ ಪುಸ್ತಕವು ನಿಮ್ಮ ಕೈಲಿದೆ. ನಾಡಿನ ಅತ್ಯಂತ ಜನಪ್ರಿಯ ನಟರಾಗಿದ್ದ ಅವರಿಗೆ ನಟನೆಯನ್ನು ಮೀರಿದ ಮಾನವೀಯ ಮೌಲ್ಯಗಳು ಎಷ್ಟು ಮುಖ್ಯವಿತ್ತು ಎಂಬುದು ಸದನದ ಚರ್ಚೆಗಳ ಒಟ್ಟಾರೆ ಫಲಿತಾಂಶವಾಗಿ ಕಾಣುತ್ತದೆ. ಇದು ಸಹಜವಾಗಿ, ಇಡೀ ನಾಡಿನ ಜನಮಿಡಿತದ ದ್ಯೋತಕವೂ ಹೌದು. ಅವರ ಜೀವನ, ಅವರ ಮೌಲ್ಯಗಳು, ಅವರ ಸಾತ್ವಿಕತೆ ಇವೆಲ್ಲವೂ ಮುಂದಿನ ಪೀಳಿಗೆಗೆ ದಾರಿ ತೋರಲಿ ಎನ್ನುವ ಈ ಕೃತಿಯ ಉದ್ದೇಶ ಸಾರ್ಥಕವಾಗಿದ್ದು, ಅತಿ ಕ್ಷಿಪ್ರ ಅವಧಿಯಲ್ಲಿ ಅತ್ಯಂತ ಸಮಗ್ರವಾಗಿ ಈ ಕೃತಿಯನ್ನು ಹೊರ ತಂದಿರುವ ಡಾ. ಸಂತೋಷ ಹಾನಗಲ್ಲ ಅವರು ಅಭಿನಂದಾರ್ಹರು. ಅವರು ವಿಷ್ಣುವರ್ಧನ್ ಅವರ ಶುದ್ಧ ಮನೋಧರ್ಮವನ್ನು ದಾಖಲೆಗಳ ಮೂಲಕ ಪ್ರತಿಬಿಂಬಿಸಿದ್ದು, ಈ ಪುಸ್ತಕ ಕೇವಲ ಒಂದು ದಾಖಲೆಯಲ್ಲ. ಅದು ಒಂದು ಯುಗದ ಸ್ಪಂದನೆ ಎ೦ದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿ ಎಂ ಶ್ರೀನಿವಾಸ ರಾಜ್ಯಾಧ್ಯಕ್ಷರು ವಿಷ್ಣು ಸೇನಾ ಸಮಿತಿ, ಬೆಂಗಳೂರು
ಕನ್ನಡದ ಪ್ರತಿಭಾಶಾಲಿ ಲೇಖಕಿ, ಅಧ್ಯಾಪಕರಾದ ದೀಪಾ ಹಿರೇಗುತ್ತಿ ಅವರು ಬರೆದಿರುವ ವ್ಯಕ್ತಿತ್ವ ವಿಕಸನದ ಬರಹದ ಪುಸ್ತಕ ಇದಾಗಿದೆ. ಜೀವನದಲ್ಲಿ ಸೋಲು, ಗೆಲುವು ಸಹಜ. ಗೆಲುವಿನಿಂದ ನಾವು ಪಾಠ ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಪಾಠ ಕಲಿಸುತ್ತೆ. ಅದಕ್ಕೇ ಲೇಖಕರು ಇಲ್ಲಿ ‘ಸೋಲೆಂಬ ಗೆಲುವು’ ಎಂಬ ಹೆಸರನ್ನು ಪುಸ್ತಕಕ್ಕೆ ಇಟ್ಟಿದ್ದಾರೆ. ಹಲವು ಸಾಧಕರ ಹಿಂದೆ ನೋವು, ಅಪಮಾನ, ತಾತ್ಸಾರ, ನಿಂದನೆಗಳು ಇರುತ್ತವೆ. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಛಲ ಬಿಡದೆ ತನ್ನ ಗುರಿ ಸಾಧನೆಗಾಗಿ ಮುನ್ನುಗ್ಗುವವನೇ ನಿಜವಾದ ಸಾಧಕ ಆಗುತ್ತಾನೆ ಎಂಬ ಗುಣಾಂಶ ಈ ಪುಸ್ತಕದಲ್ಲಿದೆ. ಅಂತಹ ಮಹಾನ್ ಸಾಧಕರ ಜೀವನ ಚಿತ್ರಣ ಇಲ್ಲಿದೆ. ಇವರೆಲ್ಲರೂ ಪುಸ್ತಕ ಓದುವವರಿಗೆ ಸ್ಫೂರ್ತಿ, ಪ್ರೇರಣೆ ನೀಡುತ್ತಾರೆ.