ಸ್ಪೇನಿನ ಮಣ್ಣಿಗೆ ಮಲ್ಲಿಗೆಯ ಕಂಪುಣಿಸಿ ಸ್ಪೇನನ್ನು ಬೆಳಗಿಸಿದ ಲೋರ್ಕಾ ಜಗತ್ತಿನ ವಿಸ್ಮಯ ಪ್ರತಿಭೆ. ರೂಪ, ಜಾಣೆ, ಎದೆಗೆ ರೆಕ್ಕೆ, ಜಲಪಾತದ ಮಿಂಚು- ಈ ಎಲ್ಲವೂ ಲೋರ್ಕಾನಲ್ಲಿ ಮೇಚ್ಚಿಸಿದಂತೆ ಬೇರೆ ಯಾರಲ್ಲೂ ನಾನು ಕಂಡಿಲ್ಲ. -ಪ್ಯಾಬ್ಲೊ ನೆರೂಡ ಪಿಕಾಸೋ ಮತ್ತು ಡಾಲಿಯ ಸರ್ರಿಯಲಿಸ್ಟಿಕ್ ಗ್ರಹಿಕೆಗಳು ಮತ್ತು ಅಬ್ಸರ್ಡ್ ನಾಟಕಗಳ ಅಸಂಗತ ರೂಪಕಗಳು, ನವ್ಯ ಕವಿಗಳ ಸಂಕೀರ್ಣ ಸೃಷ್ಟಿಗಳು ಎಲ್ಲವನ್ನೂ ಒಳಗೊಂಡ ಲೋರ್ಕಾನ ಕಾವ್ಯ ಮತ್ತು ನಾಟಕ ಇಪ್ಪತ್ತನೆಯ ಶತಮಾನದ ಅಚ್ಚರಿಗಳು. - ಪಿ. ಲಂಕೇಶ್ ಗೆಳೆಯರಾದ ಗಂಗಾಧರಯ್ಯ ಲೋರ್ಕಾನ ನಾಲ್ಕು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ರಂಗಭೂಮಿಯ ಸಾಧ್ಯತೆಯನ್ನು ಜೊತೆಗೆ ಅನುವಾದ ಸಾಧ್ಯತೆಯನ್ನು ಹಿಗ್ಗಿಸಿ, ಕನ್ನಡಕ್ಕೆ ಧೈರ್ಯ ತಂದಿದ್ದಾರೆ. - ನಟರಾಜ್ ಹೊನ್ನವಳ್ಳಿ
ಪ್ರತಿಷ್ಠಿತ ಸಮಾಜದ ಹುಸಿ ಮೌಲ್ಯವನ್ನು, ಗಾಂಭೀರ್ಯವನ್ನು ಚುಚ್ಚಿ ವಿಡಂಬಿಸಿ ಘಾಸಿಗೊಳಿಸುವುದರಲ್ಲಿ ನಿಷ್ಣಾತರಾಗಿರುವ ಕುಂವೀಯವರು ಕನ್ನಡ ಕಾದಂಬರಿ ಲೋಕಕ್ಕೆ ವಿನೂತನ ತಿರುವು ನೀಡಿದ ಅಪೂರ್ವ ಕತೆಗಾರ. ಪ್ರತಿ ವರ್ಷ ಒಂದು ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುತ್ತಿರುವ ಅವರು ನಿರ್ಲಕ್ಷಿತ ಸಮುದಾಯಗಳ ಮಾನಾವಮಾನಗಳಿಗೆ ದನಿ ಕೊಟ್ಟು ಮಡಿವಂತರನ್ನು ಗೇಲಿ ಮಾಡಿ ವಿಡಂಬನೆಗೆ ಗುರಿ ಮಾಡುವ ಮೂಲಕ ಸಾಮಾಜಿಕವಾಗಿ ಪ್ರಸ್ತುತವೆನ್ನಿಸಿದ್ದಾರೆ. ಅತಿ ರಂಜಿತ ವರ್ಣನಾ ಶೈಲಿ ಮತ್ತು ಪಾತ್ರವನ್ನು ಭೂತಗನ್ನಡಿಯಲ್ಲಿಟ್ಟು ಹಿಗ್ಗಿಸಿ ನೋಡುವ ಅವರ ನಿರೂಪಣೆ ಉದ್ದೇಶಪೂರ್ವಕವಾಗಿದ್ದು ವಿಡಂಬನಾತ್ಮಕ ಗುರಿ ಹೊಂದಿದೆ. ಪ್ರಸ್ತುತ ‘ಲ್ಯಾಟರೀನಾ’ ವಸ್ತುವೆ ವಿಶಿಷ್ಟವಾಗಿದ್ದು ಬಹಿಷ್ಕೃತವೆನ್ನಿಸಿದ್ದನ್ನು ಎಗ್ಗಿಲ್ಲದೆ ಚರ್ಚಿಸಿ ಎಲ್ಲರನ್ನು ಗಾಬರಿಗೊಳಿಸುವಂತಿದೆ. ಮಲವಿಸರ್ಜನೆಯಂತಹ ಸಹಜ ದೈಹಿಕ ಕ್ರಿಯೆಯನ್ನು ಮುಚ್ಚುಮರೆಯ ಅಸಹ್ಯದ ಸಂಗಾತಿಯನ್ನಾಗಿಸಿರುವ ಸಾಮಾಜಿಕ ವಾಸ್ತವವನ್ನು ವಿಡಂಬಿಸಿ ಬೃಹತ್ ಕಾದಂಬರಿಯ ವಸ್ತುವಾಗಿಸಿಕೊಂಡು ತನ್ಮೂಲಕ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾದ ರಾಜಕಾರಣಿಗಳು, ಮಠಾಧಿಪತಿಗಳು, ಪತ್ರಕರ್ತರು, ಲೇಖಕರು ಮತ್ತು ಗಾಂಧಿವಾದಿಗಳೆಲ್ಲರನ್ನೂ ಗೇಲಿ ಮಾಡಲಾಗಿದೆ. ಹೆಗಲ ಮೇಲೆ ಮಲ ಹೊತ್ತು ಸಾಗಿಸುವ ಹೆಣ್ಣು ಮಕ್ಕಳ ಪಡಿಪಾಟಲಿಗೆ ಕನಿಕರಿಸುತ್ತಲೇ ಅವರ ಹೊಟ್ಟೆಪಾಡಿನ ಕ್ರೂರ ವಾಸ್ತವವನ್ನೂ ಮನವರಿಕೆ ಮಾಡಿಕೊಡಲಾಗಿದೆ. ಹಂದಿಗಳು, ಎಮ್ಮೆ, ಹಸು, ನಾಯಿಗಳೂ ಶುದ್ದೀಕರಣದಲ್ಲಿ ಪಾಲ್ಗೊಳ್ಳುವ ಚಿತ್ರ ನಮ್ಮ ದೇಶದ ಹುಸಿ ಪ್ರತಿಷ್ಠೆಯನ್ನು ಬಯಲು ಮಾಡುತ್ತದೆ. ಹಾಸ್ಯ ಮತ್ತು ವಿಡಂಬನೆಯೇ ಕಾದಂಬರಿಯ ಸ್ಥಾಯಿಭಾವವೆಂಬಂತಿದ್ದರೂ, ಆಳದಲ್ಲಿ ವ್ಯವಸ್ಥೆಯ ಬಗೆಗೆ ಆಕ್ರೋಶವಿದೆ. ಹುಸಿ ಸಾಮಾಜಿಕ ಪ್ರತಿಷ್ಠೆ ಬಗೆಗೆ ತಿರಸ್ಕಾರವಿದೆ. ಮನಸ್ಸಿನಲ್ಲಿ ತುಂಬಿಕೊಂಡಿರುವ ಗಲೀಜು ಬಾಹ್ಯ ಕೊಳಕಿಗಿಂತ ಅಸಹ್ಯಕಾರಿ ಎಂಬ ಸಂದೇಶದೊಂದಿಗೆ ಕಾದಂಬರಿಗೆ ಅರ್ಥಪೂರ್ಣ ಮುಕ್ತಾಯ ದೊರಕಿಸಿಕೊಡಲಾಗಿದೆ. – ಡಾ. ಕೆ. ಮರುಳಸಿದ್ದಪ್ಪ
nil
ವಾಸ್ತವ-ಕಲ್ಪನೆ-ಅತೀಂದ್ರಿಯ-ದೈವೀಕ ಈ ಎಲ್ಲ ನೆಲೆಗಳ ಚಿತ್ರಣವನ್ನೂ ಏಕತ್ರಗೊಳಿಸಿ ಪ್ರತಿಮಾತ್ಮಕವಾಗಿ ಕಟ್ಟಿಕೊಡುವಲ್ಲಿ ಆಶಾ ರಘು ಅವರು ಯಶಸ್ವಿಯಾಗಿದ್ದಾರೆ. ಸ್ವಾರಸ್ಯಕರವಾಗಿ ಕಥಾನಕವನ್ನು ಕಟ್ಟಿಕೊಡುವುದರಲ್ಲ. ಭಾಷೆಯನ್ನು ಸಮರ್ಥವಾದ ವಾಹಕವಾಗಿಸುವಲ್ಲ ಆಶಾ ಅವರು ಸಿದ್ಧಹಸ್ತರು. ಜೀವನ, ಅದರ ಅರ್ಥ, ಪ್ರೇಮ-ವಿಯೋಗ-ಮಿಲನ-ಆತ್ಮ-ಪರಮಾತ್ಮ ಹೀಗೊಂದು ಮಾಯಾಜಗತ್ತನ್ನು ಅನನ್ಯವಾಗಿ ಸೃಷ್ಟಿಸುವ 'ವಕ್ಷಸ್ಥಲ' ಕಾದಂಬರಿ ಓದುಗರ ಹೃದಯಕ್ಕೆ ಹತ್ತಿರವಾಗಲಿ ಎಂದು ಆಶಿಸುತ್ತೇನೆ. ರಂಜನಿ ಪ್ರಭು
#
Showing 3871 to 3900 of 4939 results