• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಕವಲು|Kavalu

nil

₹370   ₹370

ಕವಿರಾಜ್‌ ಮಾರ್ಗದಲ್ಲಿ... | Kaviraj Margadalli...

ಒಟ್ಟು 28 ಅಧ್ಯಾಯಗಳಿರುವ ಈ ಪುಸ್ತಕದ ಎಲ್ಲಾ ಅಧ್ಯಾಯಗಳೂ ಭರಪೂರ ಆತ್ಮ ನಿವೇದನೆಯಂಥಾ ರಸಪಾಕಗಳೇ. ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಎಂದು ವಿಂಗಡಿಸುವುದು ಸಾಧ್ಯವೇ ಇಲ್ಲ. ಒಮ್ಮೆ ಓದಲು ಶುರುವಿಟ್ಟುಕೊಂಡರೆ ಸಾಕು ನಿಲ್ಲಿಸುವ ಮನಸ್ಸೇ ಬಾರದು. ಉದಾಹರಣೆಗೆ 'ಎನೌಂಟರ್ ವಿತ್ ಮುತ್ತಪ್ಪ ರೈ' ಅಧ್ಯಾಯವನ್ನೇ ತೆಗೆದುಕೊಳ್ಳಿ, ಇಲ್ಲಿ ಯಾವುದಿಲ್ಲ, ಯಾವುದುಂಟು ಎಂದು ವಿಂಗಡಿಸುವುದು ಕಷ್ಟ ಕಷ್ಟ.. 'ಹಮ್ಮುಬಿಮ್ಮಿಲ್ಲದ ಹೃದಯವಂತ ದೊರೆ'ಯಲ್ಲಿನ ಅಂಬರೀಶ್ ನಮ್ಮ ಮುಂದೆ ಬೇರೆಯದ್ದೇ ಅವತಾರ ತಾಳಿ ಪ್ರತ್ಯಕ್ಷರಾಗುತ್ತಾರೆ. 'ಸಾಹಸಸಿಂಹನ ಸನ್ನಿಧಿಯಲ್ಲಿ'ನ ವಿಷ್ಣುವರ್ಧನ್ ಮತ್ತಷ್ಟು ಹತ್ತಿರವಾಗುವುದು ಕವಿಯ ನಿರ್ಮಲ ಹೃದಯದ ಅಭಿವ್ಯಕ್ತಿಯಿಂದ. 'ಈ ಮನುಷ್ಯರನ್ನೇಕೆ ದೇವತಾ ಮನುಷ್ಯ ಅನ್ನೋದು' ಅಧ್ಯಾಯದ ರಾಜಕುಮಾರ್ ನಮ್ಮ ಮುಂದೆ ಪ್ರತ್ಯಕ್ಷವಾಗುವ ರೀತಿ ಬೇರೆಯದ್ದೇ ಆದ ಅಂಗಲ್‌ನಲ್ಲಿ. 'ಕಿಚ್ಚನ ಪತ್ನಿಯ ಕಿವಿಯೋಲೆ ಪ್ರಸಂಗ'ದಲ್ಲಿ ಈ ಕವಿ ತಮ್ಮನ್ನು ತಾವೇ ಹೀಯಾಳಿಸುತ್ತಾರೋ, ಸಾಂತ್ವನಗೊಳಿಸುತ್ತಾರೋ, ರಹಸ್ಯ ಬಿಚ್ಚಿಡುತ್ತಾರೋ... ಅದೊಂದು ಸಸ್ಪೆನ್ಸ್. ಹಾಗೆಯೇ 'ಸಲಾಂ ಯಶ್ ಭಾಯ್', 'ರಶ್ಮಿಕಾ ಕ್ರಶ್ಮಿಕಾ ಆಗುವ ಮುನ್ನ...' ಮೊದಲಾದ ಅಧ್ಯಾಯಗಳು ರಸಿಕ ಹೃದಯದ ಸಂವೇದನೆಗಳು! ಸರಾಗವಾಗಿ ಓದಿಸಿಕೊಂಡು ಹೋಗುವ ಕವಿಯ ಶೈಲಿಗೆ ನಮೋ ನಮಃ. ಕಣ್ಣಿಗೆ ಕಟ್ಟಿದಂತೆ ಅಕ್ಷರಗಳಲ್ಲಿ ಘಟನೆಗಳನ್ನು ಹೆಣೆಯುವ ಪರಿಗೆ ಯಾರಾದರೂ ಅಚ್ಚರಿಗೊಳ್ಳಲೇಬೇಕು. ಎಲ್ಲೂ ಬೋರು ಹೊಡೆಯದಂತೆ ವಾಕ್ಯ ರಚನೆಯಲ್ಲಿ ತೆಗೆದುಕೊಂಡ ಜಾಗ್ರತೆ ನಿಚ್ಚಳವಾಗಿ ಎದ್ದುಕಾಣುತ್ತದೆ. ಇದು ಈ ಕೃತಿಯ ಸಾರ್ಥಕತೆ. ಗಣೇಶ್ ಕಾಸರಗೋಡು

₹250   ₹223

ಕಶೀರ | Kasheer

nil

₹375   ₹334

ಕಳಿಂಗ ಶಿಲ್ಪಕಲಾ ವೈಭವ | Kalinga Shilpakala Vaibhava

ಭುವನೇಶ್ವರ ಸುತ್ತ ಮುತ್ತಲಿನ ಆಯ್ದ ಸುಂದರ ದೇವಾಲಯಗಳ ಪರಿಚಯ ಹಾಗೂ ಮಾರ್ಗಸೂಚಿ

₹90   ₹80

ಕಳಿಂಗ ಶಿಲ್ಪಕಲಾ ವೈಭವ | Kalingha shilpakala vaibhava

ಎನ್ ಎಸ್ ಶ್ರೀನಿವಾಸಮೂರ್ತಿ

₹85   ₹76

ಕಾಂಗ್ರೆಸ್ ಕರಾಳ ಕಥೆ | Congress Karaala Kathe

ಬ್ರಿಟಿಷ್ ವಿದ್ವಾಂಸರು ಮತ್ತು ಸ್ವಾತಂತ್ಯೋತ್ತರ ಕಾಲದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನು ಮರೆಮಾಜಿ, ತಪ್ಪು ಇತಿಹಾಸವನ್ನೇ ಯುವ ಪೀಳಿಗೆಯ ತಲೆಯಲ್ಲಿ ತುಂಬಿತು. ನೈಜ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪ್ರಾಮಾಣಿಕ ಅನಾವರಣ ಹಾಗೂ ಗಂಭೀರ ಅಧ್ಯಯನ ನಡೆಯಲೇ ಇಲ್ಲ. ತಮಗೆ ಬೇಕಾದಂತೆ ನೈಜ ಇತಿಹಾಸವನ್ನು ತಿರುಚಿ, ಭಾರತದ ಹೋರಾಟದ ಇತಿಹಾಸವನ್ನು ಕಾಂಗ್ರೆಸ್ ಇತಿಹಾಸವಾಗಿ ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮಸ್ತಿಷ್ಕದಲ್ಲಿ ತುರುಕಲಾಯಿತು. ಇದೊಂದು ಕಾಂಗ್ರೆಸ್ ಸರಕಾರದ ಅನುಚಿತ, ಅಸಂಬದ್ಧ ಹಾಗೂ ಅಹಂಕಾರದ ಕ್ರಮವೇ ಆಗಿತ್ತು ಏ. ಓ.ಹೂಮ್ ಎಂಬ ವಿದೇಶೀಯನಿಂದ ಸ್ಥಾಪನೆಗೊಂಡು ಇಟಿಷರನ್ನು ಓಲೈಸುವುದಕ್ಕಾಗಿಯೇ ಹುಟ್ಟಿದ ಕಾಂಗ್ರೆಸ್‌ಗೆ ಈಗಲೂ ಭಾರತ ನಿಷ್ಠೆಗಿಂತ ವಿದೇಶಿ ನಿಷ್ಠೆಯೇ ಹೆಚ್ಚು ಎನ್ನುವುದು ಪದೇಪದೇ ಸಾಬೀತಾಗುತ್ತಲೇ ಇದೆ. ಕಾಂಗ್ರೆಸ್‌ ಕರಾಳ ಇತಿಹಾಸ ಮುಂದುವರೆಯುತ್ತಲೇ ಇದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಕಾಂಗ್ರೆಸ್ ನಡೆಸಿದ ಅಪಸವ್ಯಗಳ ಇತಿಹಾಸವನ್ನು ಆಧಾರಸಹಿತ ಈ ಕೃತಿಯಲ್ಲಿ ಆದಷ್ಟೂ ಸರಳವಾಗಿ ವಿಶ್ಲೇಷಿಸಲಾಗಿದೆ.

₹150   ₹134

ಕಾಡ ಹೂ! ಕಾಡೋ ಹೂ! | Kaada Hoo! Kaado Hoo!

“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ ಪುಸ್ತಕಗಳನ್ನ ಕೈಲಿಡ್ದು “ ಅಣ್ಣೋ ತೇಜಸ್ವಿಯವರ್ದು ಕರ್ವಾಲೋ, ಮಾದ್ಹೇವಣ್ಣಂದು ಎದೆಗೆ ಬಿದ್ದ ಅಕ್ಷರ, ಕುವೆಂಪುರವರದ್ದು ಮಂತ್ರ ಮಾಂಗಲ್ಯ, ಬೇಂದ್ರೆ ಅಜ್ಜಂದು ನಾಕುತಂತಿ. ಇವೆಲ್ಲಾ ಕನ್ನಡ ಪುಸ್ತಕಗಳು ಕಣಣ್ಣ, ಒಂದೇ ಒಂದ್ ಪುಸ್ತಕ ತಗೋ ಬಾ ಅಣ್ಣ, ಬಾರಕ್ಕ, ಸಾರ್, ಮೇಡಂ ಅಂತ ಕೂಗಿ -ಕೂಗಿ ಕರ್ದು, ನಾನಾ ನಮೂನಿ ಕನ್ನಡ ಸಾಹಿತ್ಯ ಪುಸ್ತಕಗಳನ್ನ ಮಾರಿ ಇಂದು ಬದ್ಕ ಕಟ್ಕೊಂಡಿವ್ನಿ. ಅವತ್ ನಾನು ಸೂಳೆ ದಿಟ, ಆದ್ರೆ ಇವತ್ ನಾನ್ ಸೂಳೆ ಅಲ್ಲ ಕನ್ರಪ್ಪೋ ಅಂತ ನಿರೂಪಿಸೀವ್ನಿ. ವೇಶ್ಯೆ ಅನ್ನೋ ಹಳೇ ನೀರು ಹರಿದೋಗಿ, ಹೊಸ ಹೆಣ್ಣಾಗಿ ಕನ್ನಡ ಪುಸ್ತಕಗಳ ಹೊಳೇಲಿ ತೇಲ್ತೀವ್ನಿ.” ಒಂದು ಪುಸ್ತಕ ಒಂದು ಬದಲಾವಣೆಗೆ ಕಾರಣವಾಗುತ್ತೆ, ಕಲ್ಲೆದೆಯಲ್ಲೂ ಭಾವನೆಗಳ ನೀರುಕ್ಕಿಸುವ ಕೆಲಸ ಕೆಲವು ಪುಸ್ತಕಗಳು ಮಾಡ್ತವೆ. ಈಗಿನ ಕಾಲದಲ್ಲಿ, ಕೈಲಿ ಪುಸ್ತಕಗಳನ್ನಿಡಿಯೋ ಬದಲು ಮೊಬೈಲ್ಗಳನ್ನ ಹಿಡಿಯೋ ಕೈಗಳೆ ಹೆಚ್ಚಿರುವಾಗ, ನೀನು ಪುಸ್ತಕಗಳನ್ನ ಮಾರಿ ಬದುಕ್ತಿನಿ ಅಂತಿದೀಯ

₹99   ₹89

ಕಾಡು | Kadu

nil

₹100   ₹89