• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಜಗದ ಗೆಳತಿ | Jagada Gelati

ಕಾವ್ಯವು ಕಾಲಕಾಲದ ಅಗತ್ಯಗಳಿಗೆ ತಕ್ಕಂತೆ ತನ್ನ ಪ್ರಸ್ತುತಿಯಲ್ಲಿ ಬದಲಾವಣೆ ಮಾಡಿಕೊಂಡ ಒಂದು ಪ್ರಕಾರವೆನ್ನಬಹುದು. ಕವಿಯ ಕಲ್ಪನಾ ಯಾನದ ಅಭಿವ್ಯಕ್ತಿಯಾಗಿ ಮೂಡಿ ಬಂದ ಭಾವಗೀತೆಗಳ ಪರಂಪರೆಯನ್ನು ಹಾದು ನವ ಕವನಗಳು ವರ್ತಮಾನದ ಅನುಭೂತಿಯನ್ನು ದಕ್ಕಿಸಿಕೊಂಡರೂ ಇಂದಿಗೂ ಭಾವ ಗೀತೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ ತನ್ನ ಇರುವಿಕೆಗೆ ಭಾವ, ಲಯ, ಪ್ರಾಸವನ್ನು ಬಯಸುವ ಈ ಕವಿತೆಗಳು ಅದರ ಚೆಲುವು ಮತ್ತು ಗೇಯತೆಯ ಗುಣಗಳಿಂದಾಗಿ ಜನ ಸಾಮಾನ್ಯರನ್ನೂ ಒಲಿಸಿಕೊಳ್ಳುತ್ತದೆ. ಇಂತಹ ಗೇಯತೆಗೆ ಒಗ್ಗಿಕೊಳ್ಳುವ ಕವಿತೆಗಳಿಂದಾಗಿಯೇ ರೂಪಕಲಾ ಆಳರ 'ಜಗದ ಗೆಳತಿ' ಸಂಕಲನದ ಬಹಳಷ್ಟು ಕವಿತೆಗಳು ಈಗಾಗಲೇ ಜನಮನವನ್ನು ಗೆದ್ದುಕೊಂಡಿದೆ. ಅದು ಬರಿಯ ಭಾವ ಲಹರಿಯಾಗಿರದೆ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಬಹುದಾದ ಅಭಿನಂದನಾ ಗೀತೆಗಳು, ಸಾಂದರ್ಭಿಕ ಕವಿತೆಗಳು, ಆಶಯ ಗೀತೆಗಳಿಂದಾಗಿಯೂ ಬಹುಮುಖಿಯಾಗಿ ಸಮೃದ್ಧವಾಗಿದೆ. ಬೇರೆ ಬೇರೆ ಸಂಸ್ಥೆಗಳ ಉತ್ಸವಗಳಿಗೆಂದೇ ಬರೆದ ಹಾಡುಗಳೂ ಇವೆ. ಬಹಳಷ್ಟು ಕವನಗಳಲ್ಲಿ ಶುಭಹಾರೈಕೆಗಳು, ಹರಕೆಗಳು, ಮನೆಯ ಚಾವಡಿಯೊಳಗಿನ ಅನುನಯದ ಆಶೋತ್ತರಗಳು ಬಯಲಾಗಿವೆ. ಹುಟ್ಟು ಹಬ್ಬದ ದಿನ ಕನ್ನಡದಲ್ಲಿಯೇ ಶುಭ ಹಾರೈಸಬಹುದಾದ ಎರಡೆರಡು ಹಾಡುಗಳು 'ಹುಟ್ಟು ಹಬ್ಬಕ್ಕೆ ಹಾರೈಕೆ' ಮತ್ತು 'ಜನುಮ ದಿನದ ಹಾರೈಕೆ'ಯಾಗಿ ಮೂಡಿಬಂದಿದೆ. 'ಗೆದ್ದು ಬಾರೋ ವೀರ', 'ಎದ್ದೇಳು ಕನ್ನಡಿಗ', 'ಕನ್ನಡ ಮರ', 'ಹಣತೆ ಹಳ್ಳೋಣ ಬನ್ನಿ', 'ಜಗದ ಗೆಳತಿ, 'ಅಮ್ಮ ನೆನಪಾಗುತ್ತಾಳೆ', ಮುಂತಾದ ಕವನಗಳು ಆಯಾ ಸಂದರ್ಭದಲ್ಲಿ ಹಾಡಬಹುದಾದ ಕವಿತೆಗಳು, ಅವುಗಳನ್ನು ಬರಿಯ ಪುಸ್ತಕದೊಳಗಿನ ಅಕ್ಷರಗಳಾಗಿರಲು ಬಿಡದೆ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಎದೆಯ ಭಾವನೆಗಳನ್ನು ಹೃದಗೊಳಿಸುವ ಹಾದಿಯಲ್ಲಿ ಗೇಯಗೀತೆಗಳು ಬಯಸುವ ಪ್ರಾಸ ಲಯಗಳನ್ನು ಅರ್ಥಕ್ಕೆ ಚ್ಯುತಿ ಬರದಂತೆ ಹೊಂದಿಸಿಕೊಳ್ಳುವಲ್ಲಿ ಅವರ ಶ್ರಮ ಸಾರ್ಥಕವಾಗಬಹುದು.

₹130   ₹116

ಜಂಗ್ಲಿ | Jingili

nil

₹200   ₹178

ಜನಮುಖಿ|janamukhi/

nil

₹250   ₹223

ಜನವಾಣಿ|janavaani

nil

₹200   ₹178

ಜನಾಂಗ ಪರಿಚಯ | janangha parichaya

ಡಿ.ಬಿ.ಢಂಗ

₹60   ₹53

ಜಪಾನಿನಲ್ಲಿ ರಂಗ | JAPANINALLI RANGA

ನಾವು ಬದುಕನ್ನು ನೋಡುವ ರೀತಿ ಬದಲಿಸಿಕೊಂಡರೆ ಸಾಕು, ನಮಗೆ ಬಹಳಷ್ಟು ವಿಷಯಗಳು ಸಹ್ಯವಾಗುತ್ತವೆ. ಮನಸ್ಸಿನಲ್ಲಿದ್ದ ದುಃಖ, ದುಮ್ಮಾನಗಳು ಮರೆಯಾಗುತ್ತವೆ. ನಾನು ಬದುಕಿನಲ್ಲಿ ಎಂದಿಗೂ ಪರ್ಫೆಕ್ಷನ್‌ ಹುಡುಕಿದವನಲ್ಲ. ಏಕೆಂದರೆ ಇದು ಪರ್ಫೆಕ್ಟ್‌ ಎಂದು ಸರ್ಟಿಫಿಕೇಟ್‌ ಕೊಡುವವರು ಯಾರು? ಅದೇ ಪರ್ಫೆಕ್ಟ್‌ ಎನ್ನುವುದಕ್ಕೆ ಪುರಾವೆಯಾದರೂ ಏನಿದೆ? ಅಲ್ಲದೆ ಈ ಪರ್ಫೆಕ್ಟ್‌ ಎನ್ನುವುದು ಟೈಮ್‌ ಸೆನ್ಸಿಟಿವ್‌ ವಿಷಯ. ಇಂದು, ಈಗ ಪರ್ಫೆಕ್ಟ್‌ ಎನ್ನಿಸಿದ್ದು ಮರುಘಳಿಗೆ ಬದಲಾಗಿರಬಹುದಲ್ವಾ? ಸೃಷ್ಟಿಯಲ್ಲಿ ಯಾವುದೂ ಪೂರ್ಣವೂ ಅಲ್ಲ, ಯಾವುದೂ ಅಪೂರ್ಣವೂ ಅಲ್ಲ. ಪೂರ್ಣದ ತೃಣ ಅಪೂರ್ಣ, ಆದರೂ ತನ್ನ ಪರಿಧಿಯಲ್ಲಿ ಪೂರ್ಣ ಕೂಡ ಹೌದಲ್ಲ! ಸೃಷ್ಟಿಯಲ್ಲಿ “imperfect, impermanent and incomplete” ಅಷ್ಟೆ ಸತ್ಯ. ಹೀಗೆ ಪ್ರಕೃತಿಯಲ್ಲಿ ಇದ್ದದ್ದು ಇದ್ದಹಾಗೆ ನೋಡುವ ಪರಿಪಾಠಕ್ಕೆ ಜಪಾನೀಯರು `ವಾಬಿ ಸಬಿ' ಎನ್ನುತ್ತಾರೆ. ಜಪಾನ್‌ ಪ್ರವಾಸ ನನ್ನ ಹಲವಾರು ನಂಬಿಕೆಗಳಿಗೆ ನೀರೆರೆದಿದೆ. ಬದುಕೆಂದರೆ ಅದೊಂದು Endless Discovery!

₹180   ₹160

ಜಮಲಾಪುರದ ಜಡೆಮುನಿ ಕೇಸು | Jamalapurada Jademuni Kesu

"ಆ ಜಡೆಮುನಿ ಇದ್ಯಲ್ಲ, ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ. ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗ್ತಿದ್ರೆ ಅದರ ಹಿಂದೆ ಕೊಳ್ಳಿದೆವ್ವಗಳು ಆ ಜಡೆಮುನಿಯ ಕಿಲೋಮೀಟರಿನಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿದ್ವು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ಕೋಂಡ್ರು ಸಾಕು, ಕೇಳಿದ್ದನ್ನೇಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂದ್ಲು ಕೀಳೇಕಾದ್ರೇ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ಕೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳದೆವ್ವಗಳಿಗೆ ಊಟವಂತೆ! ಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡ್ಬೋದು ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ಲಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಜಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು. ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ - ನಿದ್ರೆ ಇಲ್ದೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ಮೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ರಂತೆ!!" ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಜಡೆಮುನಿ'' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!

₹275   ₹245