nil
`ಜರ್ನಿ ಆಫ್ ಜ್ಯೋತಿ’ ಜ್ಯೋತಿ ಎಸ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಚ್.ಎಸ್. ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ; ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣ ಕಳೆದುಕೊಂಡು ಹೆಣಗಾಡುತ್ತಿರುವ, ಆದರೆ ಜೀವನೋತ್ಸಾಹವನ್ನು ಕುಂದಿಸಿಕೊಳ್ಳದ ಚಿತ್ರ ಕಲಾವಿದರಿದ್ದಾರೆ, ಛಾಯಾಗ್ರಾಹಕರಿದ್ದಾರೆ, ಬೀದಿ ಬದಿಯ ವ್ಯಾಪಾರಿಗಳಿದ್ದಾರೆ, ರಂಗಭೂಮಿ-ತೊಗಲುಬೊಂಬೆಯಾಟದ ಕಲಾವಿದರಿದ್ದಾರೆ, ಸಮಾಜಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ, ಅನಾಥ ಹೆಣಗಳನ್ನು ಹುಡುಕಿತಂದು ಅವಕ್ಕೆ ಗೌರವದಿಂದ ಶವಸಂಸ್ಕಾರ ಮಾಡುವವರಿದ್ದಾರೆ, ಸಾಹಸಿ ಕೃಷಿಕರಿದ್ದಾರೆ, ಮಣ್ಣಿನ ಆಭರಣಗಳನ್ನು ತಯಾರಿಸುವವರಿದ್ದಾರೆ, ಭಿಕ್ಷೆಬೇಡುವ ಸಮುದಾಯದವರಿದ್ದಾರೆ, ತೃತೀಯ ಲಿಂಗಿಗಳಿದ್ದಾರೆ, ದೈಹಿಕ ನ್ಯೂನತೆಯ ನಡುವೆಯೂ ಬದುಕುವ ಹಕ್ಕನ್ನು ಸಾರ್ಥಕಗೊಳಿಸಿಕೊಂಡವರಿದ್ದಾರೆ, ಕೊಳಲುಗಳನ್ನು ತಯಾರಿಸಿ, ಅದನ್ನು ನುಡಿಸುತ್ತಾ ಮಾರುವ ಸಹೋದರರಿದ್ದಾರೆ, ಮಸಣದಲ್ಲಿ ಬದುಕು ನಡೆಸುವ ವೀರಬಾಹುಗಳಿದ್ದಾರೆ, ಸಾವನ್ನು ಗೆದ್ದವರಿದ್ದಾರೆ, ಅವಮಾನಗೊಂಡಲ್ಲೇ ಎತ್ತರಕ್ಕೆ ಬೆಳೆದು ನಿಲ್ಲಬೇಕೆಂಬ ಕನಸುಗಣ್ಣಿನವರಿದ್ದಾರೆ, ಕೌದಿ ಹೊಲಿದು ಮಾರುವವರಿದ್ದಾರೆ, ಇತ್ತೀಚೆಗೆ ಅಸುನೀಗಿದ ಅರ್ಜುನನೆಂಬ ಆನೆಯ ಮಾವುತರಿದ್ದಾರೆ, ಸೂಪರ್ ಕಾಪ್, ಲೇಖಕರು, ಕ್ರೀಡಾಪಟುಗಳು ಎಲ್ಲರೂ ಇದ್ದಾರೆ. ಪುಸ್ತಕವನ್ನು ಅವಲೋಕಿಸಿದವರಿಗೆ ಇಂತಹ ಹತ್ತು ಹಲವಾರು ಚೇತನಗಳು ಎದುರಾಗುತ್ತವೆ. ಇವೆಲ್ಲವೂ ಲೇಖಕಿಯ ಆಸಕ್ತಿಯ ಫಲವಾಗಿ ಪುಸ್ತಕದಲ್ಲಿ ಕಾಣಬರುವ ಸಾಹಸಮಯ ವ್ಯಕ್ತಿಚಿತ್ರಗಳು. ಬದುಕಿನಲ್ಲಿ ಬದುಕು ಗೆದ್ದ ‘ರಿಯಲ್ ಹೀರೋ’ಗಳು!
#
ಕೆ ಸಿ ಶಿವರಾಮ್
Showing 1681 to 1710 of 4939 results