nil
#
Nil
ತನ್ನ ಕಾಲದ ಹಲವು ಬಗೆಯ ಒತ್ತಡಗಳನ್ನು ಒಳಗೊಂಡು, ಅರಗಿಸಿಕೊಂಡ ನಂತರವೂ ಸೃಜನಶೀಲತೆಯ ಹೊಸ ಹಾದಿಗಳನ್ನು ಹುಡುಕುವ, 'ಸಯರ ಸಮ್ಮತ ಸಂತೆಯ ದಾರಿ'ಯನ್ನು ಅನುಸರಿಸದ ಲೇಖಕರು ಮಾತ್ರವೇ ಒಂದು ಭಾಷೆಯ ಸಾಹಿತ್ಯವನ್ನು ಕಟ್ಟಬಲ್ಲರು. ರಂಗಭೂಮಿ, ಚಲನಚಿತ್ರ, 'ಜೀವಂತ' ಜೀವನ ಮುಂತಾದ ಹತ್ತು ಹಲವು ಸಂಗತಿಗಳಲ್ಲಿ ತೀವ್ರವಾದ ಆಸಕ್ತಿಗಳನ್ನು ಹೊಂದಿರುವ ಗೆಳೆಯ ಮೌನೇಶ ಬಡಿಗೇರ್ ಅವರು ಅಂತಹ ಕೆಲವು ತರುಣ-ತರುಣಿಯರಲ್ಲಿ ಒಬ್ಬರು. ಕಥೆ, ಕವಿತೆ, ಕಾದಂಬರಿ ಮುಂತಾದ ಪುಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಸಾರನಿಗೆ ಲೋಕವನ್ನು ಅದರ ಸ್ಕೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಸುಣವೂ ಬೇಕು. ಮೂರ' ಮತ್ತು 'ಅಮೂರ' ಒಟ್ಟಿಸೆ ಗ್ರಹಿಸುವ, ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದಾರೆ. ಆದ್ದರಿಂದ ಅವರ ಈ ಕಾದಂಬರಿ ನನಗೆ ಇಷ್ಟವಾಯಿತು. ನನ್ನನ್ನು ಬೆಳೆಸಿತು. ನಾನು ಅವರ ಕಥೆ, ಕವಿತೆಗಳನ್ನೂ ಪ್ರೀತಿಯಿಂದ ಓದಿದ್ದೇನೆ. -ಎಚ್. ಎಸ್. ರಾಘವೇಂದ್ರ ರಾವ್
ವಿನಾಯಕ ನಾಯಕ್ , ರಾಜನ್ ದೇಶಪಾಂಡೆ
Showing 1711 to 1740 of 4939 results