"ನಮ್ಮ ಕಾಲ ಹಿಂಗ್ ಇರ್ಲಿಲ್ಲಪ್ಪ.." ಅನ್ನೋ ಆಪಾದನೆ ಇಂದಿನ ಜನರೇಶನ್ನಿನ ಮೇಲಿದೆ. ಅದನ್ನು ಒಪ್ಪುವಂತೆಯೇ ಇಂದಿನ ಜನರೇಶನ್ನಿನ ವರ್ತನೆ ಕೂಡ ಇದೆ. ವ್ಯವಹಾರಗಳಷ್ಟೇ ಮುಖ್ಯ, ದುಡ್ಡಿದ್ರೆ ದುನಿಯಾ ಅನ್ನೋ ಮನಸ್ಥಿತಿಯವರೇ ಹೆಚ್ಚು. ವಿಜ್ಞಾನ ತಂತ್ರಜ್ಞಾನಗಳು ಪ್ರಾಯೋಗಿಕವಾಗಿ ಎಷ್ಟೊಂದು ವಿಷಯಗಳನ್ನು ಜನರಿಗೆ ಹತ್ತಿರದಿಂದ ಅರ್ಥ ಮಾಡಿಸಿದರೂ.. ಬದುಕಿನ ಶಿಸ್ತು, ಪ್ರೀತಿ, ಸ್ನೇಹ, ಸಂಬಂಧಗಳನ್ನು ಮನುಷ್ಯನಿಗೆ ಯಾರೂ ಸಂಪಾದಿಸಿಕೊಡುವುದಿಲ್ಲ. ಉನ್ನತ ಸ್ಥಾನವನ್ನೇರಲು ಯಾರೂ ಸಹಕರಿಸುವುದಿಲ್ಲ. ನಮಗೆ ನಾವೇ ಧೈರ್ಯ ತುಂಬಿಕೊಳ್ಳಬೇಕು, ನಮಗೆ ನಾವೇ ಆತ್ಮಸ್ಥೆರ್ಯ ಹುಡುಕಿಕೊಳ್ಳಬೇಕು, ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕು. ಸರಿ ಯಾವುದು? ತಪ್ಪು ಯಾವುದು? ಸಮಾಜದಲ್ಲಿ ನಾನು ಹೇಗಿರಬೇಕು? ನನಗೊಂದು ಅಸ್ತಿತ್ವ ಇದೆಯಾ? ನನ್ನ ಬದುಕಿಗೆ ಅರ್ಥ ಇದೆಯಾ? ಇವೆಲ್ಲಾ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ? ನಾವೇ! ಹೇಗೆ? ಗೊತ್ತಿಲ್ಲ! ಅರ್ಥಪೂರ್ಣ ಬದುಕಿಗೆ ವ್ಯಕ್ತಿತ್ವ ವಿಕಸನದ ಪಾಠಗಳು ಅತ್ಯಗತ್ಯ. ಅವುಗಳನ್ನು ಎಲ್ಲಿಂದ ಬೇಕಾದರೂ ಕಲಿಯಬಹುದು. 'ಜಾಲಿರೈಡ್' ಎಂಬಂತಹ ಪುಸ್ತಕಗಳಿಂದಲೂ ಹಿರಿಯರ ಅನುಭವಗಳನ್ನು ಓದಿ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು. - ಅನಂತ ಕುಣಿಗಲ್
ಇದು ನನ್ನ ಇಂತಹ ಬರಹಗಳ ಮೂರನೆಯ ಸಂಪುಟ. ಇದರಲ್ಲಿ ಹದಿನೇಳು ಜನರ ವ್ಯಕ್ತಿತ್ವ ಚಿತ್ರಣಗಳಿವೆ. ನಾನು ಬಾಲ್ಯದಲ್ಲಿ ನೋಡಿದವರು, ನನಗೆ ವೇದಪಾಠ ಹೇಳಿಕೊಟ್ಟವರು, ಜೊತೆಯಲ್ಲಿ ಕೆಲಸ ಮಾಡಿದ ಪತ್ರಕರ್ತರು, ಚಿತ್ರ ಕಲಾವಿದರು, ನಮ್ಮ ಕಾಲದ ರಸಿಕ ವಿದ್ವಾಂಸರು, ಪರ್ಯಾಯ ಚಿಕಿತ್ಸಕರು, ನಮ್ಮ ತಂದೆಯ ಓರಗೆಯವರು, ನಮ್ಮ ಮನೆಯ ಭಾಗವಾಗಿದ್ದವರು, ಪರಿವ್ರಾಜಕ ಮನೋಭಾವದ ಮಿತ್ರರು, ತಮ್ಮ ಸಾಹಿತ್ಯ-ಚಿಂತನೆಗಳಿಂದ ನನ್ನನ್ನು ರೂಪಿಸಿದವರು.... ಹೀಗೆ ಹಲವರಿದ್ದಾರೆ. ಇಂತಹ ಯಾರ ಲೋಪವನ್ನೂ ಎತ್ತಿ ತೋರಿಸುವುದು ಇಲ್ಲಿಯ ಆಶಯವಲ್ಲ. ಇಂಥವರ ಮೂಲಕ ನಮ್ಮ ಸಮಾಜವನ್ನು ಗ್ರಹಿಸುವುದು ಇಲ್ಲಿರುವ ಬಯಕೆ. ಇಲ್ಲಿ ಚಿತ್ರಣಗೊಂಡಿರುವವರೆಲ್ಲರೂ ನನ್ನ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಇವರೆಲ್ಲರ ಚೈತನ್ಯದಿಂದ ಬದುಕಿನ ಚೆಲುವು ವರ್ಧಿಸಿದೆ; ಜಗತ್ತು ಸ್ವಾರಸ್ಯವಾಗಿ ಕಂಡಿದೆ; ಮನುಷ್ಯಸ್ವಭಾವದ ಮೇಲಿನ ಕುತೂಹಲ ಹೆಚ್ಚಾಗಿದೆ.
ಕೆಲವರು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡದೇ ತಮ್ಮ ತಮ್ಮ ಕ್ಯಾಬಿನ್‌ಗಳಲ್ಲಿ ಮತ್ತು ಅಲ್ಲಲ್ಲಿ ನಿಂತುಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇನ್ನೂ ಕೆಲವು ಪ್ರಯಾಣಿಕರು ಟ್ರಂಕುಗಳು ಮತ್ತು ಉಳಿದ ವಸ್ತುಗಳನ್ನು ಹಿಡಿದುಕೊಂಡು ಡೆಕ್ ಗಳಲ್ಲಿ ನಿಂತುಕೊಂಡು ಯಾರಾದರು ಬಂದು ತಮ್ಮನ್ನ ಕರೆದುಕೊಂಡು ಹೋಗುವರೆಂದು ಕಾಯುತ್ತಿದ್ದರು. ಮನಶಾಸ್ತ್ರಜ್ಞ ವೈನ್ ಕ್ರೇಗ್ ವೇಡ್ ಇದನ್ನು ಸಾಮಾಜಿಕ ಮೇಲಾಧಿಕಾರಿಗಳ ಪೀಳಿಗೆಗಳಿಂದ ಉತ್ಪತ್ತಿಯಾಗುವ Stoic Passitivity ಎಂದು ಹೇಳುತ್ತಾರೆ. ಇವರಲ್ಲಿ ಹೆಚ್ಚಿನವರು ಬದುಕುಳಿಯಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ನೂರಾರು ಜನರು ಸಭಾಂಗಣಗಳಲ್ಲಿ ಬೋಧಕರೊಂದಿಗೆ ನಿಂತುಕೊಂಡು ಪ್ರಾರ್ಥಿಸುತ್ತಿದ್ದರು, ದೇವರು ಮತ್ತು ಮೇರಿ ಅವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಕೆಲವರು ಅಲ್ಲಿಯೇ ಮಲಗಿಕೊಂಡು ಚೀರಾಡುತ್ತಿದ್ದರು, ಅವರು ತಮ್ಮ ಸ್ವಂತ ಇಚ್ಛಾಶಕ್ತಿಯನ್ನು ಕಳೆದುಕೊಂಡಿದ್ದರು ಮತ್ತು ದೇವರೇ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸುತ್ತಿದ್ದರು. ಟೈಟಾನಿಕ್ ದುರಂತ ಸಾಗರ ಇತಿಹಾಸದಲ್ಲಿ ಮೈ ನವಿರೇಳಿಸುವ ಮತ್ತು ಕೇಳಲಾರದ ವಿದ್ರಾವಕ ಸತ್ಯಕತೆಯಾಗಿದೆ. ಸಹಸ್ರಮಾನಗಳ ಇತಿಹಾಸದಲ್ಲಿ ಇಂತಹ ನರಕಸದೃಶ ದುರಂತ ಹಿಂದೆ ಎಂದೂ ನಡೆದಿರಲಿಲ್ಲ. ಈ ದುರಂತದ ನಂತರ ಸಾಗರ ಕಾನೂನುಗಳನ್ನು ಬದಲಿಸಬೇಕಾಯಿತು ಮತ್ತು ಅನೇಕ ಕಟ್ಟೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಯಿತು. ಇದರಿಂದ ಇಡೀ ಜಗತ್ತು ಸಾಗರಲೋಕದಲ್ಲಿ ಒಂದು ಹೊಸ ಪಾಠವನ್ನೇ ಕಲಿತುಕೊಂಡಿತು. ನಂತರದ ಕಾಲದಲ್ಲಿ ಯಾವುದೇ ದೊಡ್ಡ ದುರಂತಗಳು ನಡೆಯಲಿಲ್ಲ. ಈ ದುರಂತದಲ್ಲಿ ಮಡಿದವರ ಸಂಖ್ಯೆ ಗೊಂದಲಗಳಿಂದ ಕೂಡಿದ್ದು ಸುಮಾರು 1,490 ರಿಂದ 1635ರ ಎನ್ನಲಾಗಿದೆ. ಇನ್ನು ಸಮುದ್ರದಿಂದ ಸಂಗ್ರಹಿಸಿದ ಮೃತದೇಹಗಳ ಸಂಖ್ಯೆ ಕೇವಲ 333. ಒಟ್ಟಿನಲ್ಲಿ ಈ ಟೈಟಾನಿಕ್ ಹಡಗಿನ ಕತೆಯ ವ್ಯಥೆಯನ್ನು ಓದಿಯೇ ತಿಳಿಯಬೇಕು. ಡಾ. ಎಂ. ವೆಂಕಟಸ್ವಾಮಿ
ಗ್ರೀಕ್ ಇತಿಹಾಸದಲ್ಲೇ ಒಮ್ಮೆ ಕಾಲ್ಪನಿಕ… ಒಮ್ಮೆ ಪೌರಾಣಿಕ… ಮತ್ತೊಮ್ಮೆ ಜನಪದ ಕಥೆ ಎನ್ನುವ ವಿವಾದದೊಂದಿಗೇ ಅತ್ಯಂತ ಹೆಸರುವಾಸಿಯಾದ… ಅತ್ಯಂತ ಭೀಕರ ಯುದ್ಧವೊಂದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆ ಈ ” ಟ್ರಾಯ್” .
ಈ ಐದೂ ರುಪಕಗಳಲ್ಲಿ ನಾನು ಕಂಡ ಕಾಣೆ ಶಾಂತಿಯ ಸಂವೇದನೆ. ಮೊದಲ ರಂಗರೂಪ ಮಾನವತೆಯ ಕವಿ ಪುತಿನ ಅವರ ಜೀವನವ ಆಧರಿಸಿದ್ದು. ಅಲ್ಲಿ ಫಲಾಪೇಕ್ಷೆಗಳಿಲ್ಲದ ಸ್ವೀಕೃತಿ ಮತ್ತು ಜೀವನ ರಾಗದೊಳು ಭವದ ಮಾಯೆ ಇಲ್ಲದಂತ ನಾದದ ಬೇಡಿಕೆ, ಇದು ಕೂಡಾ ಶಾಂತಿಯ ಬಯಕೆ. ಅದನು ಕವಿ ಕಾಣುವುದು, ಆತನ ಕೃತಿಯ ಉಳಿಯುವಿಕೆಯಲ್ಲಿ. ಇದೇ ಭಾವದೊಳಿದೆ ಜಿ ಎಸ್ ಎಸ್ ಅವರ ಕುರಿತ ಕಾವ್ಯ ರೂಪಕ. ಕವಿ ಅದೃಶ್ಯನಾದರೂ ಆತನ ಕಾವ್ಯ ಜನಸಮುದಾಯದಲ್ಲಿ ಕಾಣಿಕೆಯಾಗಿರುತ್ತದೆ. ಗೀತನಾಟಕವಾಗಿರುವ "ಧ್ರುವನ ದಾರಿ", ಸಾಧಿಸುವ ಛಲವಿದ್ದಾಗ, ಗುರಿಯ ದಾರಿ ಸ್ಪಷ್ಟ ಗೋಚರ. ಹಾಗೇನೇ "ಗಂಗಾತರಂಗವು" ಹೇಗೆ ನೆಲವ ಮುಟ್ಟಿದ ಗಂಗೆ ಜೀವ ಜಂತುಗಳಿಗೆ ಜೀವ ಸೆಲೆಯಾಗಿ, ಲೋಕ ಪಾಲಿನಿಯಾಗಿ, ಶುಭದಾಯಿನಿ ಎಂಬದನ್ನು ಕಾಣಿಸಲಾಗಿದೆ. ಕೊನೆಯದು ಭೀಮ ದುರ್ಯೋಧನರ ನಡುವಿನ ಅಂತಿಮ ಸಂಗ್ರಾಮದ ಗಧಾಯುದ್ಧದ ಚಿತ್ರಣ. ಯುದ್ಧದಲ್ಲಿನ ಸೋಲು ಗೆಲುವಿಗೆ ಅರ್ಥವಿಲ್ಲ, ಆಸನ ಇರುವವರೆಗೆ ಯುದ್ಧ ನಿಲ್ಲದು, ಅದಕ್ಕೆ ಶೂನ್ಯ ಸಿಂಹಾಸನವೊಂದೇ ಉಳಿಯುವುದು, ಅದೂ ಅಲ್ಲಮನ ಶೂನ್ಯ ಸಿಂಹಾಸನ ಮಾತ್ರ ಎಂಬ ಚಿತ್ರಣ ಕಾಣುತ್ತೇವೆ. ಒಟ್ಟಿನಲ್ಲಿ ಇವೆಲ್ಲವೂ ರ೦ಗದ ಮೇಲೆ ರೂಪುಗೊಂಡಾಗ ಸಾರ್ಥಕತೆಯ ಭಾವ. ಹಾಗೇನೆ ರಂಗಕರ್ಮಿಗಳಿಗೊಂದು ಆಹ್ವಾನ. ಅದು ಸಾಧ್ಯವಾಗಲಿ. ಶ್ರೀಪತಿ ಮಂಜನಬೈಲು ನಟ, ರಂಗ ನಿರ್ದೇಶಕ
ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.
ಕಥೆ ಅಂದರೆ ಕಟ್ಟು ಕಥೆಯಲ್ಲ, ಒಂದು ಅಳತೆಗೆ ಕಟ್ಟಿದ ಕಥೆ, ಸಹಜವಾಗಿ ಹೆಣೆದಾಗ ಅದು ಕಣ್ಣಿಗೆ ಕಟ್ಟುವಂಥಾ ಕಥೆಯಾಗುತ್ತದೆ. ಕಥೆಗಳ ಸ್ವರೂಪವೇ ಹಾಗಿರಬೇಕು. ಓದುತ್ತಾ ಇದ್ದ ಹಾಗೆ ಕಥೆಯ ಪಾತ್ರಗಳು ಕಣ್ಣು ಮುಂದೆ ಬಂದು ನಿಲ್ಲಬೇಕು. ಪಾತ್ರಗಳು ಆಡುವ ಮಾತುಗಳು ಯಾವುದೂ ನಾಟಕೀಯವಾಗಿರಬಾರದು. ಇಂಥಾ ಸಂದರ್ಭಗಳಲ್ಲಿ ನಾವು ಮಾತಾಡಿದರೂ ಹಾಗೇ ಮಾತಾಡುತ್ತೀವಿ ಎನ್ನುವಂತಿರಬೇಕು. ಇನ್ನು ಕಥೆಯಲ್ಲಿ ಬರುವ ಘಟನೆಗಳೂ ನೈಜತೆಗೆ ದೂರವಾಗಿರಬಾರದು. ಹೌದು ಇದು ಎಲ್ಲರ ಬದುಕಲ್ಲೂ ನಡೆಯುವಂಥದು, ಎಲ್ಲ ಪಾತ್ರಗಳೂ ಹೀಗೇ ನಡೆದುಕೊಳ್ಳುವಂಥವು ಎನಿಸಬೇಕು. ಆಗ ಮಾತ್ರ ಕಥೆ ಬರೆದವನಿಗೂ ಕಥೆ ಓದುವವನಿಗೂ ಒಂದು ಸಹೃದಯ ಸಂಪರ್ಕ ಬರುತ್ತದೆ. ಅಲ್ಲಿಗೆ ಕಥೆಯೂ ಗೆಲ್ಲುತ್ತದೆ, ಕಥೆಗಾರನೂ ಗೆಲ್ಲುತ್ತಾನೆ. ಪ್ರಸ್ತುತ ನಿಮ್ಮ ಕೈಯಲ್ಲಿರುವ ದಡ ಸೇರದ ದೋಣಿಗಳು ಕಥೆಯಲ್ಲಿ ಇರುವ ಎಲ್ಲಾ ಇಪ್ಪತ್ತೈದು ಕಥೆಗಳ ಸ್ವರೂಪವೂ ಹೀಗೇ ಇದೆ. ಈ ಎಲ್ಲಾ ಕಥೆಗಳನ್ನು ಓದುವಾಗ ಲೇಖಕರ ಸುಮಾರು 50 ವರ್ಷಕ್ಕೂ ಹೆಚ್ಚಿನ ಸಾಹಿತ್ಯ ವ್ಯವಸಾಯದ ಅನುಭವದ ಸಾರ ಓದುಗರಿಗೆ ಅರಿವಾಗುತ್ತದೆ. ಪಾತ್ರಗಳು ಯಾವುದೂ ಸೃಷ್ಟಿಯಾಗಿಲ್ಲ, ಬದಲಿಗೆ ಅವುಗಳೇ ಬಂದು ಬೆಸೆದುಕೊಂಡಿವೆ. ಸೃಷ್ಟಿಕರ್ತ ಬ್ರಹ್ಮ ಒಬ್ಬನೇ ಆದರೂ ಅವನು ಸೃಷ್ಟಿಸಿರುವ ಪಾತ್ರಗಳೂ, ಅವುಗಳ ಸ್ವಭಾವಗಳೂ, ಮಾತುಗಳೂ, ನಡವಳಿಕೆಗಳೂ ಹೇಗೆ ಬೇರೆಬೇರೆ ಯಾಗಿರುವುವೋ ಹಾಗೆ ಕಥೆಗಾರ ಒಬ್ಬನೇ ಆದರೂ ಅವನು ತನ್ನ ಕಥೆಯಲ್ಲಿ ಸೃಷ್ಟಿಸಿರುವ ಪಾತ್ರಗಳು ಅವನ ಮೂಗಿನ ನೇರಕ್ಕೆ ನಡೆದುಕೊಂಡರೂ, ಮಾತಾಡಿದರೂ ಎಲ್ಲವೂ ಸಹಜವಾಗಿರುತ್ತವೆ. ಯಾವುದೂ ನಾಟಕೀಯ ಎನಿಸುವುದಿಲ್ಲ, ಬಲವಂತ ಎನಿಸುವುದಿಲ್ಲ. ಒಟ್ಟಿನಲ್ಲಿ ಕಥೆ ಅಂದರೆ ಅದು ಬರೀ ಕಥೆಯಲ್ಲ, ಅದು ನಮ್ಮ ಬದುಕಿನ ಅನೇಕ ಘಟನೆಗಳಿಗೆ ಹಿಡಿದ ಕನ್ನಡಿ ಎನ್ನುವಂತೆ ಈ ಸಂಗ್ರಹದ ಕಥೆಗಳೆಲ್ಲಾ ನಿಮ್ಮನ್ನು ಸೆರೆಹಿಡಿದು ಓದಿಸಿ ಕೊಳ್ಳುವುದರಲ್ಲಿ ಅನುಮಾನವಿಲ್ಲ. ನಿಮಗೆ ಈ ಎಲ್ಲಾ ಕಥೆಗಳ ಓದಿನ ಸುಖ ದೊರೆಯಲಿ. -ಬೇಲೂರು ರಾಮಮೂರ್ತಿ
'ದೂರ ದೇಶದ ದೇವರು' ಕಥಾಸಂಕಲನದ ಪಾತ್ರಗಳಲ್ಲಿ ನೈಜತೆಯಿದ್ದು ಅವು ಬಹು ಆಯಾಮವನ್ನು ಹೊಂದಿವೆ. ಕತೆ ಸಾಗುತ್ತಿದ್ದಂತೆ ಅಲ್ಲೊಂದು ಬೆಳವಣಿಗೆ, ಒಂದು ಬದಲಾವಣೆ ಕಂಡುಬರುತ್ತದೆ. ಅಲ್ಲಿನ ಸಂಬಂಧ-ಸಂಘರ್ಷಗಳು ನೈಜವಾಗಿ ನಡೆಯುವಂತೆ ಕತೆಯನ್ನು ಮುಂದಕ್ಕೆ ಕೊಂಡೊಯ್ಯಲಾಗಿದೆ. ಪ್ರತಿ ಕತೆಯಲ್ಲೂ ಇರುವ ಸಂಘರ್ಷದಲ್ಲಿ ಓದುಗನೂ ಪಾಲುಗೊಳ್ಳುವಂತಾಗುವುದು ಇಲ್ಲಿನ ವಿಶೇಷ. ಕುಣಿಗಲರು ಕತೆ ಹೇಳುವ ರೀತಿಯೂ ಸ್ವಾರಸ್ಯಕರವಾಗಿದ್ದು, ಕತೆಗಳು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತವೆ. ಕತೆಯ ಭಾಷೆ, ನಿರೂಪಣಾ ಶೈಲಿ, ಪದಗಳ ಆಯ್ಕೆಯಲ್ಲಿರುವ ಶಿಸ್ತು ಮತ್ತು ವಿಷಯವನ್ನು ಕೆಲವೇ ಶಬ್ದಗಳಲ್ಲಿ ಹೇಳುವ ಅಚ್ಚುಕಟ್ಟುತನ ಈ ಎಲ್ಲ ಅಂಶಗಳು ಅನಾಯಾಸವಾಗಿ, ಸಹಜವಾಗಿ ಬಂದು, ಅಲ್ಲೊಂದು ಸಮತೋಲನವಿದೆ. ಓದಿ ಮುಗಿದ ನಂತರವೂ ಓದುಗರೊಂದಿಗೆ ಉಳಿಯುವ ಗುಣವಿದೆ. ಮಾನವ ಸ್ವಭಾವದ ಬಗ್ಗೆ ಸೂಕ್ಷ್ಮವಾದ ಒಳನೋಟವನ್ನು ನೀಡುವ ಈ ಸಂಕಲನದ ಕತೆಗಳು ವೈಯುಕ್ತಿಕವಾಗಿದ್ದಂತೆ ಅಲ್ಲೊಂದು ಸಾರ್ವತ್ರಿಕತೆಯೂ ಇದೆ. ಮುಖ್ಯವಾಗಿ, ಕತೆಯ ಓಘವು ಎಲ್ಲವನ್ನೂ ಕಾಗುಣಿತಗೊಳಿಸದೆ ಬದುಕಿನ ವ್ಯಾಖ್ಯಾನಕ್ಕೆ ಅವಕಾಶವನ್ನು ನೀಡುತ್ತವೆ. ಹೊಸ ಆಲೋಚನೆಗಳು ವೈಯಕ್ತಿಕ ಮಟ್ಟದಲ್ಲಿ ಆಳವಾಗಿ ಪ್ರತಿಧ್ವನಿಸುವಂತಿದ್ದು, ಕೆಲವು ಕತೆಗಳು ಓದುಗನ ದೃಷ್ಟಿಕೋನಕ್ಕೆ ಸವಾಲೊಡ್ಡುವಂತಿವೆ. ಮಿತ್ರಾ ವೆಂಕಟ್ರಾಜ | ಹಿರಿಯ ಕಥೆಗಾರ್ತಿ | ಮುಂಬಯಿ
ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ದಿ ಇಷ್ಟಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು ಇಷ್ಟ ಪಡುವ ಪುಸ್ತಕಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ಇನ್ಮುಂದೆ 'ವೀರಲೋಕ ಬುಕ್ಸ್' ಹೊರಲಿದೆ. ನಿಶ್ಚಿಂತೆಯಿಂದ ಓದುವ ಸುಖ ನಿಮ್ಮದಾಗಲಿ. ಯುವ ಜನತೆ ಪುಸ್ತಕ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅವರನ್ನು ಓದಿಸಬೇಕಾದ ಜವಾಬ್ದಾರಿ ಕೂಡ ನಮ್ಮದು ಎನ್ನುವುದು ಅಷ್ಟೇ ಸತ್ಯ. ಅವರಿಗೆ ಓದಿನ ರುಚಿ ಹೆಚ್ಚಿ, ಪುಸ್ತಕಗಳ ಮಹತ್ವ ತಿಳಿಸುವ ಉದ್ದೇಶ ವೀರಲೋಕ ಬುಕ್ಸ್ ಹಿಂದಿದೆ. ಪ್ರಾಮೀಸ್, ನಾವು ರಾಜ್ಯದ ಕಟ್ಟಕಡೆಯ ಓದುಗನಿಗೆ ಪುಸ್ತಕ ತಲುಪಿಸುವ ಬಹು ದೊಡ್ಡನೆಟ್ ವರ್ಕ್ ಹೊಂದಿದ್ದೇವೆ. ನಿಮ್ಮೂರು ಯಾವುದೇ ಆಗಿರಲಿ, ಅಲ್ಲಿಗೆ ಪುಸ್ತಕ ಮುಟ್ಟಿಸುತ್ತೇವೆ. ಈ ಕಾರ್ಯದಲ್ಲಿ ನಮ್ಮ ಬೆನ್ನಹಿಂದೆ ಈ ನಾಡಿನ ಅಸಂಖ್ಯಾತ ಲೇಖಕರ ಬಳಗವೇ ಇದೆ. ನಮ್ಮದು ಉದ್ಯಮವಲ್ಲ. ಇದೊಂದು ಅಕ್ಷರ ಕ್ರಾಂತಿ ಹಂಚುವ ಕಾಯಕ. ಸದಭಿರುಚಿ ಪುಸ್ತಕಗಳ ತಲುಪಿಸುವ ಅಭಿಯಾನ. ಈ ಕೆಲಸದಲ್ಲಿ ನಮ್ಮೊಂದಿಗೆ ನೀವೂ ಕೈಜೋಡಿಸಿ. ಹೆಚ್ಚಿನ ಮಾಹಿತಿ ಮತ್ತು ನಮ್ಮ ಉದ್ದೇಶವನ್ನು ಇತರರಿಗೆ ತಲುಪಿಸಲು ವೀರಲೋಕ ಬುಕ್ಸ್ ಕಾಮ್ ಗೆ ಭೇಟಿ ನೀಡಿ. ಪುಸ್ತಕ ಖರೀದಿಸಿ, ಕೊಂಡುಕೊಳ್ಳುವಂತೆ ಪ್ರೋತ್ಸಾಹಿಸಿ.
ತೀರಾ ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದು ಅನಿವಾರ್ಯವಾಗಿ ಶಾಸ್ತ್ರಿಗಳ ಮನೆ ಸೇರುವ ಸೌಭಾಗ್ಯಳಿಗೆ ವಾದ್ಯ, ಸಂಗೀತಗಳಲ್ಲಿ ಆಸಕ್ತಿ. ಶಾಸ್ತ್ರಿಯವರ ಬಳಿ ಸಂಗೀತ ಅಭ್ಯಾಸ ಮಾಡಿ ಪಕ್ಕದ ಮನೆಯವರ ಬಳಿ ವೀಣೆ ನುಡಿಸುವುದನ್ನು ಕಲಿತರೂ ಅವಳ ಪ್ರತಿಭೆಗೆ ಅವಕಾಶವಿರುವುದಿಲ್ಲ. ಶಾಸ್ತ್ರಿಗಳೇ ತಮ್ಮ ಬೆಂಗಳೂರಿನ ಗೆಳೆಯ ಅವಧಾನಿಯ ಬಳಿಗೆ ಕಳುಹಿಸಿ ಅವಳ ಪ್ರತಿಭೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾರೆ. ಅವಧಾನಿಗಳ ಮನೆ ಕೂಡ ಸಂಗೀತಾರಾಧನೆಯ ದೇಗುಲ. ಅವರ ಮಗ ಮುರಳಿಗೆ ಇದು ಒಮ್ಮತವಿಲ್ಲದ್ದು. ತನಗೆ ಅದೃಷ್ಟ ದೊರಕಿತೆಂದು ಸೌಭಾಗ್ಯ ಹರ್ಷಿಸುತ್ತಿರುವಾಗಲೇ ಜಿ ಮನೆಯಿಂದ ಹೊರಹೋಗಬೇಕಾದ ಸನ್ನಿವೇಶ ಏರ್ಪಡುತ್ತದೆ. ಅವಳು ನೊಂದುಕೊಂಡರು ಜೀವನೋಪಾಯಕ್ಕಾಗಿ ತನ್ನ ಪ್ರತಿಭೆಯನ್ನು ಬಳಸಿಕೊಳ್ಳುವುದು ಸಮಂಜಸವೆನಿಸಿ, ಮುಗ್ಗಳಾದ ಆಕೆ ಪತ್ರಿಕೆಯ ಜಾಹೀರಾತು ನೋಡಿ ಅಲ್ಲಿಗೆ ಹೋಗುತ್ತಾಳೆ. ಅವಳ ಪ್ರತಿಭೆಗೆ ಸದಾವಕಾಶವಿದ್ದರೂ ಅದು ಸರಿಯಾದ ಸ್ಥಳವಲ್ಲವೆನ್ನುವುದು ತಿಳಿಯುತ್ತದೆ. ಮುಂದೆ ಅವಳ ಬದುಕಿನಲ್ಲಿ ಸಂಕರ್ಷ ನೆನ್ನುವ ಆಧುನಿಕ ಮನೋಭಾವದ ಯುವಕನ ಪ್ರವೇಶವಾಗುತ್ತದೆ. ಅಲ್ಲಿಯವರೆಗೂ ಎಲ್ಲವೂ ಒಳ್ಳೆಯ ರೀತಿಯಲ್ಲಿಯೇ ಸಾಗುವ ಬದುಕು ಇದ್ದಕ್ಕಿದ್ದಂತೆ ಸಂಕಷ್ಟಕ್ಕಿದಾಗುತ್ತದೆ. ಸಂಕರ್ಷ್, ಆಕರ್ಷ್. ಮುರಳಿ ಅವಳ ಬದುಕಿನಲ್ಲಿ ಮೂಡಿದ ಮಂಜಿನ ಬಿಂದುಗಳಾಗುತ್ತಾರೆಯೇ? ಅವಳ ಕನಸುಗಳು ಸಾಕಾರಗೊಳ್ಳುತ್ತವೆಯೇ? ಇವಕ್ಕೆಲ್ಲ ಉತ್ತರ... ನಗು ಎಂದಿದೆ... ಕಾದಂಬರಿಯಲ್ಲಿದೆ.
ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹ-ರಿಯ ಬಿಡುತ್ತಾರೆ. ನದಿ ತನ್ನ ಚಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಡ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿದ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ. ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ భృహో జీవించిగ మిడియుత్తార, నూ+విగ మిడియన ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ ಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತವೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು. ಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ, ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ಒಂದು ಹಿಡಿ ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ. ಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಮೋಸಮಾಡುವುದಿಲ್ಲ. -ಸದಾಶಿವ ಸೊರಟೂರು ಕವಿ, ಹೊನ್ನಾಳಿ
ಎರಡು ಗಂಟೆ ಕೆಲಸ ಮಾಡುವ ವೇಳೆಗೆ ಅವನ ಮನಸ್ಸಿಗೆ ಜೋರಾಗಿ ಕಿರುಚ ಬೇಕೆನ್ನಿಸಿತು. ಉಸಿರಾಡಲು ಕಷ್ಟವಾಗಿ ಹೊರಗೆದ್ದುಬಂದ
ಕವಿತೆಗೆ ಓದುಗರೇ ಇಲ್ಲವೆನ್ನುವವರ ಮುಂದೆ ಇಲ್ಲಿನ ಕವಿತೆಗಳನ್ನು ನಿಲ್ಲಿಸಬೇಕು. ಯಾಕೆಂದರೆ ಅಬ್ದುಲ್ ರಶೀದ್ ಅವರ ಕವಿತೆಗಳನ್ನು ಓದುವುದೇ ಒಂದು ಪರಮಸುಖ. ಅಷ್ಟು ತೀಕ್ಷ್ಮವಾದ ವೇಗ ಇಲ್ಲಿನ ಕವಿತೆಗಳಿಗಿವೆ. ಇಲ್ಲಿನ ಕವಿತೆಗಳು ಓದುಗನೊಳಗೆ ಹುದುಗಿರುವ ಕವಿಯನ್ನು ಬಡಿದೆಬ್ಬಿಸುವುದಂತು ನಿಜ!
ಮನೆಯ ಎದುರೇ ಇರುವ ಹಸಿರುಕ್ಕುವ ಗದ್ದೆ ಬಯಲು ದಾಟಿ, ತೊರೆಯೊಂದರ ನೀರಿನಲ್ಲಿ ಕಾಲಾಡಿಸಿ, ಸನಿಹದ ಕಾಡಿನಲ್ಲಿ ನಡೆಯತೊಡಗಿದರೆ, ಸಿಹಿ ನೀರಿನ ಬುಗ್ಗೆ, ಹಾರುವ ಓತಿ, ಕನ್ಯಾಸ್ತ್ರೀ ಹೆಸರಿನ ಅಪರೂಪದ ಅಣಬೆ, ಬಕುಳದ ಹೂ, ಚೇಂಪಿ ಹಣ್ಣು – ಇವೆಲ್ಲವೂ ಕಾಣಸಿಗುತ್ತವೆ, ಆಪ್ತವಾಗುತ್ತವೆ. ಇಂತಹ ಅನುಭವಗಳಲ್ಲಿ ನೀವೂ ಭಾಗಿಯಾಗಬೇಕೆ? ಹಾಗಿದ್ದಲ್ಲಿ ಈ ಪುಸ್ತಕ ಓದಿ.
‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಮದುವೆಯ ಪ್ರಮಾಣದಲ್ಲಿ ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ ನಂಬಿಕೆ, ಭರವಸೆ ಆಗಬೇಕಿದ್ದ ಈ ಪ್ರಮಾಣ ಗೌರಿಯ ಪಾಲಿಗೆ ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು, ನಿರೀಕ್ಷೆಗಳದ್ದು. ಗಂಡ ಬಿಟ್ಟು ಹೋದಮೇಲೆ ಸಹ ದಾಂಪತ್ಯದ ಈ ಪ್ರಮಾಣವನ್ನು ಕಳಚಿಕೊಳ್ಳುವುದು ಗೌರಿಗೆ ಸಲೀಸಲ್ಲ. ಇದು, ಗೌರಿ ಅವುಗಳನ್ನು ದಾಟುವ ಕಥೆ, ಆ ಮೂಲಕ ಬದುಕಿನ ಸಮೀಕರಣದಲ್ಲಿ ತನ್ನನ್ನು ತಾನು ಪಡೆದುಕೊಳ್ಳುವ ಕಥೆ
nil
ಲೇಖಕರು, ಪತ್ರಕರ್ತರು ಆದ ಅನಂತ ಹುದೆಂಗಜೆ ಅವರು ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸರಳ ಭಾಷೆ, ಶೈಲಿಯಲ್ಲಿ ಬರೆದಿರುವ ಪುಸ್ತಕವಿದು. ನಮ್ಮ ‘ಕನ್ನಡ ಮಾಣಿಕ್ಯ’ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳ ಸಂಕಲನವೇ ಇದಾಗಿದೆ. ಇದೂ ಕೂಡ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರದ ವಿಚಾರಗಳ ಕುರಿತ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಹಣವನ್ನು ಮನುಷ್ಯ ಮಾಡುವುದು ಮುಖ್ಯವಲ್ಲ; ಅದರ ಸದ್ಬಳಕೆ ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಹಾಗೂ ಜ್ಞಾನ ನಮಗೆ ಈ ಪುಸ್ತಕದಿಂದ ಲಭಿಸುತ್ತದೆ.
ಆವರಣಗಳಿಂದ ಕಳಚಿಕೊಂಡ ಆತ್ಮದ ಹೊನಲು ಈ ಕವಿತೆಗಳಲ್ಲಿವೆ.. ವಿವರಿಸಲು ಹೋದರೆ ಮಾತು ಸೋಲುತ್ತದೆ. ಈ ಕವಿತೆಗಳನ್ನು ಓದಿದಾಗ, ಒಂದು ವಿಚಿತ್ರವಾದ ನಿರುಮ್ಮಳ ಶಾಂತ ಸ್ಥಿತಿಯ ಅನುಭೂತಿ ಉಂಟಾಗುತ್ತದೆ.
ಪ್ರೀತಿನಿ ಧನಂಜಯ ಅವರ “ನಿಷಿತೆ”. ಈ ಕಾದಂಬರಿಯು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಪ್ರೀತಿನಿ ಅವರು ತಮ್ಮ ಮೊದಲ ಕೃತಿಯಲ್ಲೇ ಇಂಥದ್ದೊಂದು ಪ್ರಯೋಗಕ್ಕೆ ಅಣಿಯಾಗಿದ್ದು ಮೆಚ್ಚಬೇಕಾದ ಸಂಗತಿ. ದೆವ್ವ, ಭೂತ, ವಾಸ್ತವ, ಕಲ್ಪನೆ ಮತ್ತು ವೈಜ್ಞಾನಿಕ ವಿಷಯಗಳ ಸುತ್ತಲೇ ಸುತ್ತುವ ಈ ಕಾದಂಬರಿಯ ಮೂಲಕ ನಿಜಕ್ಕೂ ದೆವ್ವ ಭೂತಗಳಿಗೆ ಅಸ್ತಿತ್ವ ಇದೆಯೋ? ಇಲ್ಲವೋ? ಎನ್ನುವ ವೈಚಾರಿಕತೆಯ ಬೆಳಕು ಚೆಲ್ಲಲು ಲೇಖಕಿ ಪ್ರಯತ್ನಿಸಿದ್ದಾರೆ. ಎಷ್ಟೊಂದು ಸಿನೆಮಾಗಳನ್ನು ನೋಡಿದರೂ ದೆವ್ವ ಭೂತಗಳ ಬಗೆಗಿನ ಕುತೂಹಲ ತಣಿಯದವರಿಗೆ ಈ ಕೃತಿ ರಸಾನುಭವ ನೀಡಬಲ್ಲುದು ಮತ್ತು ಒಂದೊಳ್ಳೆ ಎಂಟರ್‌ಟ್ರೈನರ್ ಆಗಬಲ್ಲುದು.
ಮಂಗಳೂರು ನಗರ ಹಲವು ಬದುಕುಗಳ ವಿವಿಧ್ಯಮಯ ನಗರ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಹಾಗೂ ಪಾಕ ವೈವಿಧ್ಯತೆಗಳನ್ನು ಹಿತವಾಗಿ ತನ್ನ ಜನರಿಗೆ ದೊರಕಿಸುವ ಉದಾರನಗರ ಎನಿಸಿಕೊಂಡಿದೆ.
ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ.
ಗೊತ್ತಿದೆ, ಗೊತ್ತಾಗುತ್ತಿದೆ ಎಂಬ ಭಾಸವನ್ನು ಹುಟ್ಟಿಸುತ್ತಲೆ ಗೊತ್ತಿಲ್ಲದ ವಿಸ್ತಾರದ ಕಡೆಗೆ ಇಲ್ಲಿನ ಕವಿತೆಗಳು ತುಡಿಯುತ್ತವೆ.
ಪ್ರಿಯ ಪ್ರಸಾದ್ ಚತುರ್ಮುಖ ಬಸದಿಯ ಕಲ್ಲ ಮೇಲೆ ಕೂತು ಪುಟ್ಟ ಚೀಲದಿಂದ ಬಿಟು, ಚಕ್ಕುಲಿ, ಬನ್ನುಗಳನ್ನು ಮುಖದ ಬಣ್ಣ, ತುಟಿಯ ಕೆಂಪು ಹಾಳಾಗದಂತೆ ತಿನ್ನುವ ಮರಿ ಮಹಿಷಾಸುರ "ವೇಷದ ಸಂತು". ನಿಗೂಢ ಮಳೆಯ ಕಾಡಿನಲ್ಲಿ ಕಂಬಳಿಕೊಪ್ಪೆ ಹಾಕಿಕೊಂಡು, ಅದೃಷ್ಟಕ್ಕಾಗಿ ಕಾದವನಂತೆ, ಕಲ್ಲಣಬೆಗಾಗಿ ಅಲೆಯುವ ನಿಚ್ಚು, ತನ್ನ ಸಿರಿಕಂಠದ ಭಾಗವತಿಕೆಯ ಯಕ್ಷಬಿಂಬಕೆ ತಾನೇ ಮಾರು ಹೋಗಿ, ತನ್ನನ್ನೇ ಕಳೆದುಕೊಂಡು ಕಂಗಾಲಾದ ಗಿರಿಧರ, ಇಂಥವರ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದೀಯ. ಮೇಲ್ನೋಟಕ್ಕೆ ಒಂದು ಬಗೆಯ ವರ್ಣನಾತ್ಮಕ ಗುಣ ಈ ನಿರೂಪಣೆಗಳಲ್ಲಿ ಎದ್ದು ಕಂಡರೂ, ಸೂಕ್ಷ್ಮವಾಗಿ ನೋಡಿದರೆ ಅದು ಆಯಾ ಜೀವಿಗಳ ಖಾಸಗೀ ಜೀವನದ ದಾರುಣತೆಯ ವಿರೋಧಾಭಾಸವನ್ನು ಧ್ವನಿಸುತ್ತದೆ. ಹಬ್ಬದ ನೆಪದಲ್ಲಿ ಪುರಾಣದ ವೇಷಗಳನ್ನು ತೊಟ್ಟುಕೊಂಡು ಮನೆಮನೆಗೆ ಕಾಣಿಕೆಗಾಗಿ ಅಲೆಯುವುದು, ಕಲ್ಲಣಬೆಯ ರುಚಿ ಏನೆಂದೇ ತಿಳಿಯದವ ಅದನ್ನು ಅಲೆದಾಡಿ ಹಕ್ಕಿ ತಂದು ತನಗಾಗಿ ಒಂದನ್ನೂ ಉಳಿಸಿಕೊಳ್ಳದೇ ಪುಡಿಗಾಸಿಗೆ ಮಾರುವುದು, ಸಾರ್ವಜನಿಕರ ಕಣ್ಣಲ್ಲಿ ಏರುತ್ತ ಹೋದ ಕಲಾವಿದ ಅತ್ಮಮೋಹದ ನರಕಕ್ಕೆ ಜಾರುವುದು, ಇಂಥ ವಿರೋಧಾಭಾಸಗಳು ಈ ಕತೆಗಳ ಮುಖ್ಯ ಲಕ್ಷಣಗಳಾಗಿ ನನ್ನನ್ನು ತಟ್ಟಿದವು. ಮೊದಲೇ ಅಸ್ಪಷ್ಟವಾಗಿಯಾದರೂ ಮನಗಂಡಿರುವ ಕತೆಯನ್ನು ಆರಾಮಾಗಿ “ಎಲೆಗೆ ಸುಣ್ಣ ಹಚ್ಚುತ್ತ ಹೇಳುವ ಶೈಲಿ" ನಿನ್ನದು. ಹೀಗಾಗಿ ಚೂರೂ ಹದ ತಪ್ಪಿದರೂ ವಿರೋಧಾಭಾಸದ ಆ ಅಜ್ಞಾತ ನಾಡಿಬಿಂದು ಎಲ್ಲೋ ಹಗುರಾಗಿಬಿಡಬಹುದು, ಅಥವಾ ಮರೆಯಾಗಿಬಿಡಬಹುದು. ನಿನಗೂ ಗೊತ್ತಿರದ ಸಂಗತಿಗಳು ಬಂದು ಸೇರಿಕೊಳ್ಳಲು ನೀನು ಬಾಗಿಲುಗಳನ್ನು ತೆರೆದಿಟ್ಟುಕೊಂಡಾಗ ಮಾತ್ರ ಹೊಸತೊಂದು ಅನಿರೀಕ್ಷಿತ, ಅಸಂಗತ ಅಂಶ ಬಂದು ನಿನ್ನನ್ನು ಚಕಿತಗೊಳಿಸಬಹುದು. ಗಿರಿಧರನಿಗೆ ಅನಿಸುವಂತೆ, ಕಥನವೂ ಸಹ ಕಾಣದ ಕಡಲಿನೆಡೆಗೆ ಚಲಿಸುತ್ತಿರುವ ನದಿಯಂತೆ, ಅದು ತನ್ನ ದಂಡೆಯನ್ನು ತಾನೇ ರೂಪಿಸಿಕೊಳ್ಳುತ್ತದೆ. ನಿನ್ನ ಬರವಣಿಗೆ ನಿನ್ನನ್ನು ಒರೆಗೆ ಹಚ್ಚುತ್ತಲೇ ಇರಲಿ, ಹೊಸ ಹೊಸ ಅಸಂಗತ, ಅನಿರೀಕ್ಷಿತ ತಿರುವುಗಳಿಗೆ ತೆರೆದುಕೊಳ್ಳುತ್ತ ಜೀವಜಾಲದೊಂದಿಗಿನ ನಂಟನ್ನು ಒಳಗೊಳ್ಳುತ್ತ ಪ್ರವಹಿಸಲಿ, ಜಯಂತ ಕಾಯ್ಕಿಣಿ
ಹಿರಿಯರಾದ ಕೊಡಸೆ ಸರ್. ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು ತಾಜಾ ಉದಾಹರಣೆಯಾಗಿ ನಿಲ್ಲಬಲ್ಲರಿ!! ನೀವು ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಬರವಣಿಗೆಯಿಂದ, ಪ್ರಾಮಾಣಿಕ ಕೆಲಸದಿಂದ, ಕರ್ತೃತ್ವಶಕ್ತಿಯಿಂದ, ಜಾಣ್ಯ, ದಕ್ಷತೆಗಳಿಂದ, ಹುರುಪು, ಹುಮ್ಮಸ್ಸಿನಿಂದ, ನಿರಂತರ ಚಿಂತನಶೀಲತೆಯಿಂದ, ಕಳಕಳಿ-ಕಾಳಜಿಯಿಂದ. ಕರ್ತವ್ಯ ನಿಷ್ಠೆಯಿಂದ ಮಾಡಿರುವ ಸೇವೆ ಅನುಪಮವಾದುದು. ಪ್ರೊ. ಓಂಕಾರ ಕಾಕಡೆ
ವಿಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ
...ಒಂದು ಶಾಸ್ತ್ರನಿರ್ಮಾಣಕ್ಕೆ ನೆರವಾಗಬಲ್ಲ ಪದಗಳ ಪ್ರಪಂಚವನ್ನೇ ಪರಿಚಯ ಮಾಡಿಕೊಡುವ 'ಪರಿಸರ ನಿಘಂಟು' ಇದೀಗ ಇಬ್ಬರು ತರುಣ ಮಿತ್ರರ ಸಾಹಸದ ಪರಿಣಾಮವಾಗಿ ಕನ್ನಡದಲ್ಲಿ ಮೊಟ್ಟಮೊದಲಿಗೆ ಸಿದ್ಧವಾಗಿದೆ. ...ಇದು ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಕೇವಲ ಪಾರಿಭಾಷಿಕ ಪದಗಳ ನಿಘಂಟಲ್ಲ; ಒಟ್ಟಾರೆಯಾಗಿ ಪರಿಸರ ವಿಜ್ಞಾನದ 'ಭಾಷಿಕ ನಿಘಂಟು', ಕನ್ನಡದಲ್ಲಿ ಪರಿಸರ ವಿಜ್ಞಾನವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ, ಬರೆಯಬೇಕೆನ್ನುವವರಿಗೆ ಈ ಕುರಿತ ಜಾಗತಿಕ ತಿಳುವಳಿಕೆಯನ್ನು ಹಿಡಿದಿರಿಸಿದ ಭಾಷೆಯನ್ನು ಪರಿಚಯ ಮಾಡಿಕೊಡುವ ನಿಘಂಟು. ಆದ ಕಾರಣವೇ ಈ ನಿಘಂಟುಕಾರರ ಉದ್ದೇಶ, ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ಇರಬಹುದಾದ ಅರ್ಥವನ್ನು ಸೂಚಿಸಿ ವಿರಮಿಸುವಷ್ಟಕ್ಕೆ ಸೀಮಿತವಾಗಿಲ್ಲ.. -ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಡಾ. ಟಿ.ಎಸ್. ವಿವೇಕಾನಂದ.. ಪರಿಸರವಾದವನ್ನು ಸೃಜನಾತ್ಮಕವಾಗಿ ಪುನರಾವಲೋಕನಕ್ಕೊಳಪಡಿಸಿದ ಮಹತ್ವದ ಕೃತಿ 'ಭೂಮಿಗೀತೆ', ತೇಜಸ್ವಿಯವರೊಂದಿಗೆ ಕೂಡಿ ಮಾಡಿದ 'ಕಿರಿಯರಿಗಾಗಿ ಪರಿಸರ', ಭಾರತದ ವೃಕ್ಷಗಳನ್ನು ಕುರಿತು ನಿರ್ಮಿಸಿದ 'ಹಸಿರ ಕೊಳಲು', ಹಂಪಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯನ್ನು ದೊರಕಿಸಿಕೊಟ್ಟ ಅಧ್ಯಯನದ ಪುಸ್ತಕರೂಪ 'ಪರಿಸರ ಕಥನ' ಇವರ ಮಹತ್ವದ ಕೃತಿಗಳಲ್ಲಿ ಕೆಲವು. ಹಲವಾರು ಬಹುಮಾನಿತ ಕಥೆ, ಪದ್ಯಗಳೊಂದಿಗೆ ಜಿಮ್ ಕಾರ್ಬೆಟ್‌ರ ಇಡೀ ಶಿಕಾರಿ ಕಥೆಗಳ ಕನ್ನಡ ರೂಪಾಂತರ ಇವರ ಹೆಸರಿನಲ್ಲಿದೆ. ಭೂಮಿಗೀತೆ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರ ಮಹತ್ವಾಕಾಂಕ್ಷೆಯ ಪ್ರಯತ್ನ 'ಪರಿಸರ ನಿಘಂಟು' ಭಾರತೀಯ ಭಾಷೆಗಳಲ್ಲಿಯೇ ಮೊದಲ ಪ್ರಯತ್ನ. ಇದು ಕನ್ನಡದ ಪರಿಸರ ಸಾಹಿತ್ಯದಲ್ಲಿಯೇ ಒಂದು ನಿರ್ಣಾಯಕ ಮೈಲುಗಲ್ಲು ಸಹ ಸಂಪಾದಕರಾದ ಶೇಷಗಿರಿ ಜೋಡಿದಾರ್ ಈ ಪ್ರಯತ್ನದ ಜೊತೆಗಾರ. -ಪ್ರೊ. ಕಿ.ರಂ. ನಾಗರಾಜ,
Showing 61 to 90 of 170 results