• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಮಿಕ್ಸ್ & ಮ್ಯಾಚ್ | Mix & Match

"ಹೇ ಇದ್ರೇನ್ ಇಲ್ಲಿ..!?” ಆತನನ್ನು ಅಲ್ಲಿ ನೋಡಿದ ಕೂಡಲೇ, ಆ ಸಾವಿನ ಮನೆಯಲೆಲ್ಲ ಸಂಚಲನದ ಜೊತೆಗೆ ಗುಸುಗುಸು ಹಬ್ಬಿತ್ತು. ಅರವತ್ತು ವರ್ಷಗಳ ತುಂಬು ಜೀವನವನ್ನ ನಡೆಸಿದ್ದ ಅನ್ನಪೂರ್ಣ ಅಂದು ಇಹ ಲೋಕ ತ್ಯಜಿಸಿದ್ದರು. ಅವರ ಪಾರ್ಥಿವ ದೇಹವನ್ನ ದರ್ಶನ ಮಾಡಲು ಬರುತ್ತಿದ್ದವರ ಸಾಲಿನಲ್ಲಿ, ಅನ್ನಪೂರ್ಣರವರಷ್ಟೇ ವಯಸ್ಸಾದ, ಆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಯೊಬ್ಬ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದ ಗುಸು, ಗುಸು ಅನ್ನಪೂರ್ಣರವರ ತಮ್ಮನ ಕಿವಿಗೂ ತಲುಪಿ, ಯಾರೆಂದು ಬಗ್ಗಿ ನೋಡಿದವನ ಕಣ್ಣಲ್ಲಿ ಅರೆಕ್ಷಣ ಅಚ್ಚರಿಯೊಂದು ಹಾದುಹೋಗಿತ್ತು. ಅನ್ನಪೂರ್ಣ ಮನಸಾರೆ ಪ್ರೀತಿಸಿದ ವ್ಯಕ್ತಿಯವನು. ಅವರಿಬ್ಬರೆದು ಅಮರ ಪ್ರೇಮಕತೆ. ಜೀವಕ್ಕೆ ಜೀವವಾಗಿ ಪ್ರೀತಿಸಿ, ಕೊನೆಗೆ ಅಮ್ಮ ಅಪ್ಪನ ಮಾತಿಗೆ, ಬೆದರಿಕೆಗೆ ಹೆದರಿ ಬೇರೆಯವನನ್ನು ಮದುವೆಯಾಗಿದ್ದರು ಅನ್ನಪೂರ್ಣಮ್ಮ, ಆಮೇಲೆ ಎಂದಿಗೂ ಅವರು ಭೇಟಿಯಾಗಿರಲಿಲ್ಲ. ಒಬ್ಬರಿಗೊಬ್ಬರ ಇರುವುಗಳ ಮಾಹಿತಿಯಿದ್ದರೂ ಮುಖತಃ ಎಂದು ಭೇಟಿಯಾಗಲೇ ಇಲ್ಲ. ಅದಾದ ಮೇಲೆ ಬಹುಷಃ ಇದೇ ಅವರ ಮೊದಲ ಭೇಟಿ. ಗುಸುಗುಸು ಮಾತುಗಳ ಪರಿವೆಯೇ ಇಲ್ಲದ ಆತ, ಕಣ್ಣಲ್ಲಿ ಹರಿಯುತ್ತಿದ್ದ ನೀರನ್ನು ಒರೆಸಿಕೊಳ್ಳುವ ಗೋಜಿಗೆ ಬೀಳದೆ "ಹೇಳಿಲ್ಲ ನಿಂಗೆ, 'ಎಲ್ಲೇ ಇರು, ಯಾರಜೊತೆನಾದ್ರು ಇರು, ಖುಷಿಯಾಗಿರು, ಆದ್ರೆ ನಂಗಿಂತ ಮುಂಚೆ ಈ ಭೂಮಿ ಬಿಟ್ಟೋಗ್ಗೇಡ, ನಿನ್ನ ಭೌತಿಕ ಇರುವಿಲ್ಲದೆ ನಾ ಇರಲ್ಲ ಅಂತ'. ಹೇಳು ಯಾಕ್ ಬಿಟ್ಟೋದೇ 17' ಅನ್ನಪೂರ್ಣರ ಜೀವವಿಲ್ಲದ ದೇಹದೊಡನೆ, ಮನಸ್ಸಲ್ಲೇ ಮಾತನಾಡುತ್ತಿದ್ದನಾತ. #ಕೆಲವೊಂದು ಪ್ರೇಮಕತೆಗಳಿಗೆ ಮೊದಲಷ್ಟೇ ಇರುತ್ತದೆ, ಕೊನೆಯಲ್ಲ. ಒಳಗೆ ಇನ್ನಷ್ಟು ನಮ್ಮ-ನಿಮ್ಮ ಕಥೆಗಳಿವೆ. ಓದಿ ನೋಡಿ. ಹ್ಯಾಪಿ ರೀಡಿಂಗ್... - ಅರ್ಜುನ್ ದೇವಾಲದಕೆರೆ.

₹195   ₹166

ಮಿಸ್ಸಿನ ಡೈರಿ | Missina Diary

ಒಂದು ಕಾಲಕ್ಕೆ ಸಾಹಿತ್ಯಲೋಕದಲ್ಲಿ ಶಿಕ್ಷಕರದ್ದೇ ಸಿಂಹಪಾಲು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಶಿಕ್ಷಕರಿಗೆ ಬರೆಯುವಷ್ಟು ಸಮಯ ಪಕ್ಕಕ್ಕಿಡಿ, ಓದಲೂ ಸಮಯವಿಲ್ಲದಂತಾಗಿದೆ ಶಿಕ್ಷಕವರ್ಗವೇ ಓದಿನಿಂದ ವಿಮುಖರಾಗಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ನಡುವೆ ಓದು ಅಂಕಗಳಿಕೆಗೆ ಮಾತ್ರ ಬಳಕೆಯಾಗುತ್ತಿರುವುದು ಹೊಸ ಸಂಗತಿ ಏನಲ್ಲ. ದೇಶದ ಪಿತಾಮಹರಂತಹ ದೊಡ್ಡ ಪ್ರಶ್ನೆಗಳನ್ನು ಬಿಡಿ, ದೇಶದ ರಾಷ್ಟ್ರಪತಿ, ರಾಜ್ಯಪಾಲರು ಯಾರೆಂಬುದು ಗೊತ್ತಾಗದಂತಹ ಶಿಕ್ಷಣವನ್ನು ನಾವು ಮಕ್ಕಳಿಗೆ ನೀಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಶಾಲೆ, ಶಿಕ್ಷಕಿ ಮತ್ತವರ ದಿನಚರಿ ತುಸು ವಿಭಿನ್ನ ಮತ್ತು ಮಾದರಿಯಂತಿದೆ. ಚೂರು ಹೊಸ ಭರವಸೆಯನ್ನು ಮೂಡಿಸುತ್ತಿದೆ.

₹200   ₹170

ಮುಸ್ಸಂಜೆ ಮಾತು | Mussanje maatu

ವಯಸ್ಸಾಗುವುದು ಎಂಬ ಅನುದಿನದ ಪ್ರಕ್ರಿಯೆಯೇ ಸೃಷ್ಟಿಯ ಒಂದು ಸೋಜಿಗ. ಸಾವಿನ ಹಾದಿಯಲ್ಲಿ ಬರುವ ಒಂದು ಹಂತವಾದ ಕಾರಣಕ್ಕೋ ಏನೋ ವಯಸ್ಸಾಗುವುದೆಂದರೆ ನಿಡುಸುಯ್ಯುವವರೇ ಹೆಚ್ಚು. ಹಾಗಂತ ವಯಸ್ಸಾಗುವುದೇನು ನಿಲ್ಲುತ್ತದೆಯೇ? ಖಂಡಿತ ಇಲ್ಲ! ಮುಪ್ಪು, ವೃದ್ಧಾಪ್ಯ, ವಾನಪ್ರಸ್ಥಾಶ್ರಮಗಳೆಂದು ಹಲವು ಹೆಸರುಗಳಲ್ಲಿ ಕರೆಯಲಾಗುವ ಈ ಹಂತವು ಬರುವ ಸಮಯದಲ್ಲಿ ಬಂದೇ ಬರುತ್ತದೆ. ವರ್ಷಗಳಲ್ಲಿ ಆಯಸ್ಸನ್ನು ಅಳೆಯುವ ನಮಗೆ, ನಿಮಿಷಗಳಲ್ಲಿ ಸೋರಿಹೋಗುವ ಆಯಸ್ಸೇಕೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ? ವೃದ್ಧಾಪ್ಯದಲ್ಲೂ ಚಂದದ ಬದುಕು ಸಾಧ್ಯವಿಲ್ಲವೇ? ವೃತ್ತಿಬದುಕಿನಲ್ಲಿ ನಿವೃತ್ತಿಗೆ ತಯಾರಾದಂತೆ, ಬದುಕಿನಲ್ಲಿ ವೃದ್ಧಾಪ್ಯಕ್ಕೆ ತಯಾರಾದರೆ ತಪ್ಪೇನಿದೆ? ಹೀಗೆ ಹಲವು ಪ್ರಶ್ನೆ-ತಲಾಶೆಗಳ ಚುಂಗು ಹಿಡಿಯುತ್ತಾ ಹೊರಟ ನನಗೆ ದಕ್ಕುತ್ತಾ ಹೋದ ಸಂಗತಿಗಳು ಸಾಕಷ್ಟು. ಈ ವಿಷಯದ ಬಗ್ಗೆ ಪುಸ್ತಕವೊಂದನ್ನು ಬರೆಯಲು ನನಗೇನು ಮಹಾವಯಸ್ಸು ಎಂಬ ಪ್ರಶ್ನೆಯು ಕಾಡಿದ್ದೇನೋ ಹೌದು. ಆದರೆ ಬರಹಗಾರನೊಬ್ಬ ತನ್ನನ್ನು ಬಲವಾಗಿ ಕಾಡಿದ ಸಂಗತಿಗಳ, ಕತೆಗಳ ಬಗ್ಗೆ ತನ್ನ ಓದುಗರೊಂದಿಗೆ ಹೇಳಿಕೊಳ್ಳದೆ ಹೆಚ್ಚು ಕಾಲ ಇರಲಾರ. ಇವೆಲ್ಲದರ ಫಲವೇ ಈ ಪುಸ್ತಕ. "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ನಿಮಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ ಮುಸ್ಸಂಜೆಯನ್ನು ನೋಡಲಿರುವ ಪ್ರತಿಯೊಬ್ಬರೂ ಒಮ್ಮೆ ಓದಬೇಕಾದ ಪುಸ್ತಕವಿದು ಎಂದು ವಿನಯದಿಂದ ಹೇಳಬಲ್ಲೆ! - ಪ್ರಸಾದ್ ನಾಯ್ಕ

₹210   ₹179

ಮೆಮರೀಸ್ ಆಫ್ ಬಾರ್ಸ | Memories Of Barca

ಆಸ್ಕರ್ ಟಿವಿಯಲ್ಲಿ 1992ರ ಬಾರ್ಸಿಲೋನಾ ಒಲಂಪಿಕ್ಸ್ ಹೈಲೈಟ್ಸ್ ಹಲ್ಲು ಕಿಸಿದು ಕೊಂಡು ನೋಡಿದ ನೆನಪು ಅಚ್ಚಳಿಯದೆ ಮಸ್ತಕದಲ್ಲಿ ಅಚ್ಚಾಗಿದೆ.

₹160   ₹136

ಮೇರುನಟ – ದೇಶಕ್ಕೊಬ್ಬ ದುರಂತ ನಾಯಕ | Merunata

`ಒಬ್ಬ ತಾರೆಯ ಎಂಟ್ರಿ ಮತ್ತು ಎಗ್ಸಿಟ್ ಅದ್ಭುತವಾಗಿರಬೇಕು; ನೆನಪಿನಲ್ಲಿಡುವಂತಿರಬೇಕು’ ಎಂದು ಚಿತ್ರರಸಿಕರ ಮನದ ಅನಭಿಷಿಕ್ತ ದೊರೆಯಾಗಿ ಮೆರೆದ ಡಾ.

₹120   ₹102

ಯಾರು ಹೇಳದ ಕಥೆಗಳು | Yaru Helada Kathegalu

ಕನ್ನಡದಲ್ಲಿ ಸಣ್ಣಕಥೆಗ ಆಗೀಗ ದೆಸೆ ತಿರುಗಿ, ಕಥಾಸ್ಪರ್ಧೆಯ ಮೊತ್ತಬೀಗ ಅರ್ಧ ಲಕ್ಷ ಮುಟ್ಟದೆ. ಇದು ಯುವ ಕಥೆಗಾರರಿಗೆ ಇಂಬಾಗುವ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೆ ಹೌದು, ಐದುನೂರು ರೂಪಾಯಿಯಿಂದ ಐವತ್ತು ಸಾವಿರದವರೆಗೆ ನಮ್ಮ ಹಣ್ಣಕಥೆಗಳನ್ನು ವಿಸ್ತರಿಸುತ್ತಿರುವ ಪತ್ರಿಕೆಗಳು ಮತ್ತು ಪ್ರಾಯೋಜಕರು ಪ್ರಶಂಸಾರ್ಹರು.

₹150   ₹128

ರುಚಿಗೆ ತಕ್ಕಷ್ಟು..? | Ruchige takkashtu..?

ವಸ್ತ್ರವಿನ್ಯಾಸ, ರುಚಿಕಟ್ಟಾದ ಅಡುಗೆಯೂ ಸೇರಿದಂತೆ ದಶಾವತಾರಗಳಲ್ಲಿ ಮುಖ್ಯವಾಗಿ ಅಭಿನೇತ್ರಿಯಾಗಿರುವ ಅಕ್ಷತಾ, ಏನೇ ಮಾಡಿದರೂ ಅಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ದಾಖಲಿಸುತ್ತಾರೆ. ಇವರ ಬರಹಗಳು ಕೂಡ ಇದರದ್ದೇ ಒಂದು ವಿಸ್ತರಣೆ. ಹಿಂದೆ ಲೀಕ್ ಔಟ್ ಕತೆಗಳನ್ನು ಪ್ರಕಟಿಸಿ, ಅವನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಜನ - ನಾಟಕವನ್ನಾಗಿಸಿ ಯಶಸ್ವಿಯಾಗಿದ್ದರು ಅಕ್ಷತಾ. ಏನೇ ಮಾಡಿದರೂ ಜನರನ್ನು ಒಳಗೊಳಿಸಿಕೊಂಡೇ ಮಾಡುವ ಇವರ ಅಡುಗೆ ಮಾತು ಪ್ರಯೋಗವೂ ಅಷ್ಟೇ ವಿಭಿನ್ನ. ಇವರ 'ರುಚಿಗೆ ತಕ್ಕಷ್ಟು' ಕತೆಗಳು ಮುಂದೆ ಇಂಥದೇನೋ ಟ್ವಿಸ್ಟ್ ಕೊಡುವ ಸುಳಿವಿನೊಂದಿಗೇ ಹೆಣೆದುಕೊಂಡಂತೆ ತೋರುತ್ತವೆ.

₹175   ₹149

ಲಾಸ್ಟ ಡೇಸ್ ಆಫ್ ಲೆಜೆಂಡ್ಸ್ | Last Days Of Legends

ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ.

₹225   ₹191

ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ | Lets Make A Short Film

ಬೇರೆಯವರಿಗೆ ಕತೆ ಹೇಳುವ, ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ. ಕತೆಗಳಿರುವವರೆಗೂ ಮನುಷ್ಯನಿರುತ್ತಾನೆ. ಈಗ ಸ್ಮಾರ್ಟ್ ಯುಗ. ಎಲ್ಲರ ಕೈಯಲ್ಲೊಂದು ಸ್ಮಾರ್ಟ್ ಫೋನು. ಎಲ್ಲರ ಎದೆಯೊಳಗೆ ಕತೆಗಳಿರುವ ಕಾಲ. ಇಂತಹ ಕತೆಗಳನ್ನು ಸಶಕ್ತವಾಗಿ ದಾಟಿಸುವ ಮಾಧ್ಯಮ ದೃಶ್ಯಮಾಧ್ಯಮ. ಬನ್ನಿ ನಿಮ್ಮೊಳಗಿನ ಕತೆಗಳನ್ನು ದೃಶ್ಯಮಾಧ್ಯಮಕ್ಕೆ ತರೋಣ, ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ!

₹120   ₹102

ಲೈಫ್ 360 | Life 360

ಸೋತವರಿಗೆ, ಗೆಲುವನ್ನು ಎದುರು ನೋಡುವವರಿಗೆ, ಸಮಾನ ಮನಸ್ಕರಿಗೆ ಉಡುಗೊರೆಯಾಗಿ ನೀಡಲು ಈ ಕೃತಿ ಬೆಸ್ಟ್‌ ಆಯ್ಕೆ. ನಮ್ಮ ಬದುಕು ಹುಟ್ಟಿನಿಂದಲೇ ಶುರುವಾಗಬಹುದು. ಆದರೆ ಸೋಲು-ಗೆಲುವುಗಳು ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆಯೇ.. ಆಲೋಚನೆಗಳು ಇಲ್ಲದೆ ಬದುಕಿಲ್ಲ! ಬದುಕಿನ 360 ಕೋನದಲ್ಲೂ ಯೋಚಿಸುವಂತಹ ಶಕ್ತಿಯನ್ನು ನಾವು ಗಳಿಸದಿದ್ದರೆ ಖಂಡಿತ ಸ್ಪರ್ಧೆಯ ಸಾಲಿನಿಂದ ತುಂಬಾ ಹಿಂದೆ ಉಳಿದುಬಿಡುತ್ತೇವೆ. ಇವತ್ತು ಯಾರಿಗೂ ಹಿಂದೆ ಉಳಿಯಲು ಇಷ್ಟವಿಲ್ಲವಾದ್ದರಿಂದ ಆಲೋಚನಾಕ್ರಮದ ಬಗ್ಗೆ ಈ ಕೃತಿ ನಿಮಗೆ, ನಿಮ್ಮ ಗೊಂದಲಗಳಿಗೆ ಉತ್ತರಿಸುತ್ತಲೇ ನಿಮ್ಮ ಯಶಸ್ಸಿನ ದಾರಿಗೆ ನೆರವಾಗಬಲ್ಲದು..

₹250   ₹212

ವರದಾ ತೀರದ ಕಥೆಗಳು | Varada Teerada Kathegalu

ವರದಾ ತೀರದ ಕಥೆಗಳನ್ನು ಓದುತ್ತಾ ಮನಸಾರೆ ನಕ್ಕಿದ್ದೇನೆ. ಅರಿವಿಲ್ಲದೇ ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡಿದ್ದೇನೆ. ಹೀಗಾಗಬಾರದಿತ್ತು ಎಂದು ನೊಂದುಕೊಂಡಿದ್ದೇನೆ. ಬರಹಗಾರನ ಕಥೆಯ ಭಾವಕ್ಕೆ ಓದುಗನ ಭಾವನೆಗಳು ಹೊಂದಿದ್ದೇ ಆದರೆ ಕಥಾಪ್ರಸವ ಅನುಭವಿಸಿದ ಕಥೆಗಾರನಿಗೂ ನೆಮ್ಮದಿಯ ನಿಟ್ಟುಸಿರು. ರವೀಂದ್ರ ಮುದ್ದಿಯವರ ಸಿನಿಮಾ, ಟಿವಿಗಳಲ್ಲಿ ಇನ್ನೂ ಬಳಕೆಯಾಗದ ಜವಾರಿ ಭಾಷೆಯ ಪದ ಪ್ರಯೋಗ ಮಾತ್ರ ಅದ್ಭುತ. ವರದಾ ತೀರದ ಕತೆಗಳನ್ನು ಓದುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಾವು ಆಡಿ ಬೆಳೆದ ನಮ್ಮೂರು ಚಿತ್ರಣ ಕಣ್ಮುಂದೆ ಮುಂದೆ ಬರುವುದು ಗ್ಯಾರಂಟಿ.

₹160   ₹136

ವಾಸ್ತವ ಪ್ರತಿವಾಸ್ತವ | Vastava Prativastava

ವಿಮರ್ಶಾ ವಿವೇಕ ಇಲ್ಲದ ಬರಹಗಾರ ಅತ್ಯುತ್ತಮ ಸಾಹಿತ್ಯ ಸೃಚಿಸಲಾರ. ಕನ್ನಡದ ಯಾವುದೇ ಅತ್ಯುತ್ತಮ ಕವಿ ಅಥವಾ ಕಥೆಗಾರನ ಉದಾಹರಣೆ ತೆಗೆದುಕೊಂಡರೂ, ಅದರೊಳಗೊಬ್ಬ ಸಹೃದಯಿ ವಿಮರ್ಶಕ ಇಣುಕುತ್ತಿರುತ್ತಾನೆ. ಅತ್ಯುತ್ತಮ ಲೇಖಕ ಒಳ್ಳೆಯ ವಿಮರ್ಶಕನೂ ಮೀಮಾಂಸಕನೂ ಆಗಿರುವ ವಿರಳ ಉದಾಹರಣೆಗಳ ಸಾಲಿಗೆ ಸೇರುವಂತಿದೆ 'ವಾಸ್ತವ ಪ್ರತಿವಾಸ್ತವ' ಕೃತಿ ಕಥೆ, ಕವಿತೆ, ಪ್ರಬಂಧಗಳಿಂದ ಕನ್ನಡ ಸಾಹಿತ್ಯದ ದಿಗಂತಗಳನ್ನು ವಿಸ್ತರಿಸುತ್ತಲೇ ಇರುವ ಎಸ್. ದಿವಾಕರ್ ಅವರ ಈ ಕೃತಿ, ಓದಿನ ಹೊಳಯಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಸೃಜನಶೀಲ ಬರಹಗಾರನೊಬ್ಬನ ಮಹತ್ವಾಕಾಂಕ್ಷೆಯ ಅಭಿವ್ಯಕ್ತಿಯಂತಿದೆ. ಒಂದು ಒಳ್ಳೆಯ ಸಾಹಿತ್ಯ ಕೃತಿ ಅಥವಾ ಕಲಾಕೃತಿಯನ್ನು ಹೇಗೆ ನೋಡಬೇಕು ಎನ್ನುವ ಅರಿವನ್ನು ಸಹೃದಯರಲ್ಲಿ ಉದ್ದೀಪಿಸುವ ಬರಹಗಳಿವು, ದಿವಾಕರ್ ಅವರು ತಮ್ಮ ಬರಹಗಳಿಗೆ ಸಂಬಂಧಿಸಿದಂತೆ ಸಾಹಿತ್ಯ, ವಿಮರ್ಶೆ ಮತ್ತು ಸಂಸ್ಕೃತಿ ಎನ್ನುವ ವಿಶೇಷಣಗಳನ್ನು ಬಳಸಿದ್ದಾರಾದರೂ, 'ವಿಮರ್ಶೆ' ಅಥವಾ ಸಂಸ್ಕೃತಿ ಚಿಂತನೆ' ಎನ್ನುವಂಥ ಹಣೆಪಟ್ಟಿಗಳ ಚೌಕಟ್ಟಿಗೆ ನಿಲುಕದಿರುವುದು ದಿವಾಕರ್ ಬರಹಗಳ ಅನನ್ಯತೆ, ವಿಮರ್ಶೆಯ ಪಾರಿಭಾಷಿಕ ಚೌಕಟ್ಟು ಹಾಗೂ ಚಿಂತನೆಯ ಸೋಗಿನ ಗಾಂಭೀರ್ಯದಿಂದ ಮುಕ್ತವಾದ ಈ ಬರಹಗಳು ಸಾಹಿತ್ಯದ ಮೂಲಕ ಜೀವನಸೌಂದರ್ಯ ಕಾಣಬಯಸುವವರಿಗೆ ರಸದ ಒರತೆಗಳಂತಿದೆ; ಕನ್ನಡ ಹಾಗೂ ವಿಶ್ವಸಾಹಿತ್ಯದ ಅತ್ಯುತ್ತಮ ಕೃತಿ ಹಾಗೂ ಮನಸ್ಸುಗಳನ್ನು ಪರಿಚಯಿಸುತ್ತಿವೆ. ದಿವಾಕರ್ ಬರವಣಿಗೆಯ ವಿಶಿಷ್ಟ ಲಕ್ಷಣವಾದ ಹಾಗೂ ಅವರಿಗಷ್ಟೇ ಸಾಧ್ಯವಾದ ಪ್ರಯೋಗಶೀಲತೆ ಈ ಸಂಕಲನದ ಬರಹಗಳಲ್ಲೂ ಇದೆ. ಓದುಗರನ್ನು 'ಪುಸ್ತಕದ ಓಣಿ'ಗಳಲ್ಲಿ ಕೈ ಹಿಡಿದು ನಡೆಸುವಂತಿರುವ ಈ ಬರಹಗಳು. ಸಾಹಿತ್ಯಪ್ರವೇಶದ ಕಿಂಡಿಗಳನ್ನೂ ಕಂಡಿಗಳನ್ನೂ ಸಹೃದಯರಿಗೆ ಕರುಣಿಸುವಂತಿವೆ. ವಿಮರ್ಶೆ ಹಾಗೂ ಚಿಂತನೆ ವಿರಳವಾಗಿರುವ ದಿನಗಳಲ್ಲಿ ಎರಡಕ್ಕೂ ಘನತೆ ತಂದುಕೊಡುವ ಪ್ರಯತ್ನದ ರೂಪದಲ್ಲಿ ದಿವಾಕರ್ ಅವರ 'ವಾಸ್ತದ ಪ್ರತಿವಾಸ್ತವ' ಕೃತಿಗೆ ವಿಶೇಷ ಮಹತ್ವವಿದೆ. ರಘುನಾಥ ಚ.ಹ.

₹375   ₹319

ವಿಶ್ವಯಾನಕ್ಕೆ ಗಣಿತವಾಹನ | Vishwayanakke Ganitavahana

ಒಂದು… ಎರಡು… ಮೂರು… ಈ ಎಣಿಕೆಗೆ ಕೊನೆ ಎಲ್ಲಿದೆ? ಅಥವಾ ಕೊನೆಯೇ ಇಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ.

₹200   ₹170

ವಿಶ್ವಸುಂದರಿ | Vishwasundari

ಕನ್ನಡದ ಪ್ರಸಿದ್ಧ ಲೇಖಕರಾದ ಕುಂ. ವೀರಭದ್ರಪ್ಪ ಅವರು ಬರೆದಿರುವ ವಿನೂತನ ಕಾದಂಬರಿ ಇದಾಗಿದೆ. ಕುತೂಹಲ ಕಥಾವಸ್ತು ಹೊಂದಿರುವ ಕಾದಂಬರಿ ರೋಚಕವಾಗಿದೆ.

₹160   ₹136

ವೀರ ಬಲ್ಲಾಳ | Veera Ballaala

ಹೊಯ್ಸಳ ದೊರೆಗಳಲ್ಲಿ ರಾಜ್ಯವನ್ನು ವಿಸ್ತರಿಸಿ ಸಾಮ್ರಾಜ್ಯವನ್ನಾಗಿ ಮಾರ್ಪಡಿಸುವ ಮನಸ್ಸು ವಿಷ್ಣುವರ್ಧನನಿಗಿತ್ತು. ಅದಕ್ಕಾಗಿ ಅವನು ನಿರಂತರ ಪ್ರಯತ್ನವನ್ನೂ ಮಾಡಿದ್ದ ಆದರೆ ಕಲ್ಯಾಣದ ಚಾಲುಕ್ಯ ಚಕ್ರವರ್ತಿ ಆರನಯ ವಿಕ್ರಮಾದಿತ್ಯ ಅವನ ಮಹದಾನೆಯ ಮೇಲೆ ತಣ್ಣೀರೆರಚಿದ. ಅವನು ಕೊನೆಯವರೆಗೂ ಕಲ್ಯಾಣ ಚಾಲುಕ್ಯರ ಸಾಮಂತನಾಗಿ ಉಳಿಯಬೇಕಾಯಿತು. ವಿಷ್ಣುವರ್ಧನನ ಮರಣದ ನಂತರ ಹೊಯ್ಸಳ ಸಿಂಹಾಸನವನ್ನೇರಿದ ಇಮ್ಮಡಿ ನರಸಿಂಹ ತಂದೆಗೆ ತಕ್ಕ ಮಗನಾಗಿರಲಿಲ್ಲ. ಅವನು ಸಿಂಹಾಸನ ದೊರಕಿಸಿದ ಅಧಿಕಾರವನ್ನು ತನ್ನ ಸುಖ ಲೋಲುಪತೆಗಾಗಿ ಕಳೆದ.

₹450   ₹383

Sold Out
ವೀರ ಸಿಂಧೂರ ಲಕ್ಷ್ಮಣ | Veera Sindhoora Laksmana

`ವೀರ ಸಿಂಧೂರ ಲಕ್ಷ್ಮಣ’ ಕೌಂಡಿನ್ಯ ಅವರು ದಾಖಲೆಗಳೊಂದಿಗೆ ಸಂಶೋಧನೆ ಮಾಡಿ ರಚಿಸಿರುವ ಮಹೋನ್ನತ ಕೃತಿಯಾಗಿದೆ. ಬ್ರಿಟಿಷರ ವಿರುದ್ಧ ಮತ್ತು ಶೋಷಿತ ಬಡವರ ಪರವಾಗಿ ಹೋರಾಡಿದ, ‘ಕರ್ನಾಟಕ ರಾಬಿನ ಹುಡ್’ ಎಂದು ಪ್ರಖ್ಯಾತನಾಗಿರುವ ಈ ಮಹಾನ್ ದೇಶ ಭಕ್ತ ಮತ್ತು ಅಪ್ರತಿಮ ಹೋರಾಟಗಾರನ ಕಥೆಯನ್ನು ತಿಳಿಸುವ ಕಾದಂಬರಿಯಾಗಿದೆ.

₹190   ₹162

ವ್ಯಗ್ರ ಮತ್ತು ಇತರ ಕಾದಂಬರಿಗಳು | Vyagra Mattu Itara Kadambarigalu

‘ವ್ಯಗ್ರ’ ‘ಅಳಿವು’ ‘ಅವಸಾನ’ ಈ ಮೂರೂ ಕಾದಂಬರಿಗಳು ಏನೋ ಒಂದು ಸಮಸ್ಯೆ, ಸವಾಲು, ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು.

₹180   ₹144

ವ್ಯಾಘ್ರಹತ್ಯೆಯ ನಿಗೂಢಗಳು | Vyagrahatyeya Nigoodagalu

ಡಾ. ಟಿಸ್ವಿ ಪರಿಸರವನ್ನು ಕುರಿತು ತಮ್ಮ ಅಧ್ಯಯನಗಳಿಂದಾಗಿ ಕನ್ನಡ ಸಂವೇದನಾಶೀಲ ಮನಸ್ಸುಗಳಿಗೆ ಪರಿಚಿತರು. ಬಹುತೇಕರ ಹಾಗೆ ಪರಿಸರ ಅಧ್ಯಯನವೆಂದರೆ ಜೀವವೈವಿಧ್ಯ ಕುರಿತ ವಿಸ್ಮಯಕಾರಿಯಾದ ಶುಪ್ಕ ಮಾಹಿತಿಗಳನ್ನು ಒದಗಿಸುವುದು ಎನ್ನುವ ಕ್ರಮ ಇವರದ್ದಲ್ಲ, ಬದಲಾಗಿ ಇದು ಸಾಮಾಜಿಕ, ಧಾರ್ಮಿಕ, ಆರ್ಥಿಕ, ನೈತಿಕತೆಗಳ ಸಂಕಥನವೆಂದು ಇವರು ಪರಿಭಾವಿಸುವುದರಿಂದಾಗಿ ಇವರ ಪರಿಸರ ಅಧ್ಯಯನ ಜೀವಪರ ನೆಲೆಗಳ ಹುಡುಕಾಟದ ವೇದಿಕೆಯಾಗಿ ರೂಪಗೊಂಡಿದೆ.

₹200   ₹170

ಶತಮಾನಂ ಭವತಿ | Shatamanam Bhavati

'ಶತಮಾನಂಭವತಿ' ಅನ್ನೋದು ನೂರು ವರ್ಷ ಚೆನ್ನಾಗಿ ಬಾಳಲಿ ಎಂದು ಆಶೀರ್ವದಿಸುವ ಮಂತ್ರ. ಈ ಮಂತ್ರದ ಆಶಯವೇ ಕಾದಂಬರಿಯ ತಲೆಬರಹ, ಈ ಆಶಯದಂತೆ ರಘು ಅನ್ನುವ ಪ್ರಮುಖ ಪಾತ್ರದಾರಿ ಪರಿಶುದ್ಧ ಪ್ರೀತಿಗಾಗಿ ಹಪಾಹಪಿಸುತ್ತಾನೆ ಜೊತೆಗೆ ಆ ಪ್ರೀತಿಯನ್ನ ಗಳಿಸಿ ಜೀವನ ಪೂರ್ತಿ ಕಾಪಿಟ್ಟುಕೊಳ್ಳುವ ಉದ್ದೇಶವನ್ನು ಸಹ ಇಟ್ಟುಕೊಂಡಿರುತ್ತಾನೆ. ಅಷ್ಟೇ ಅಲ್ಲ ಅಂತಹ ಪ್ರೀತಿ ಪಡೆಯಲು ಪರಿಶುದ್ಧನಾಗೇ ಈತನು ಇರುತ್ತಾನೆ. ಮ್ಯಾಟ್ರಿಮೊನಿಯಲ್ ಅನ್ನೋದು ಮದುವೆ ಮಾಡಸಲಿಕ್ಕೆ ಇರುವ ಆನ್ ಲೈನ್ ವೆಬ್ ಸೈಟ್, ಈ ಆನ್ ಲೈನ್ ಪೇಜ್ ಗೆ ಮದುವೆಯಾಗುವ ಹುಡುಗಿಯ ತಲಾತ್ ಮಾಡಲು ನೋಂದಾಯಿಸಿಕೊಳ್ಳುವ ಕಥಾನಾಯಕ ರಘು ಪ್ರೊಫೈಲ್ ಮೂಲಕ ಪರಿಚಯ ಆಗುವ ಹುಡುಗಿ ಜೊತೆಯಲ್ಲಿ ಚಾಟ್ ಆರಂಭಿಸಿದ ನಂತರ ಅವಳೆಡೆಗೆ ಅನುರಾಗ ತೋರಿ ಆ ನಂತರ ಅವಳು ಸಿಗದೆ ಮೋಸಕ್ಕೆ ಒಳಗಾಗುತ್ತಾನಾ? ಅಥವಾ ಅವನಿಗೆ ಅವಳ ಪ್ರೀತಿ ಧಕ್ಕುತ್ತಾ? ಅನ್ನುವ ಹುಡುಕಾಟದಲ್ಲಿರುವ ನಮಗೆ, ಅದೇ ವಂಚನೆ ಮೋಸದ ಕಾರಣಗಳಿಂದ ಮತ್ತೆ ಹೇಗೆ ಅತ ಪ್ರೀತಿಯನ್ನ ಗಳಿಸುತ್ತಾನೆ ಅನ್ನುವ ಕಥಾ ಹೂರಣ ಇರುವ ಕಾದಂಬರಿ ಶತಮಾನಂಭವತಿ, ಕಾದಂಬರಿಯ ಅಂತ್ಯದಲ್ಲಿ ಹೇಳುವ ವಿಷಯವನ್ನ ನಮಗೆ ಗೊತ್ತಿಲ್ಲದಂತೆ ಮೊದಲಿಂದಲೂ ಬೆಸೆದುಕೊಂಡೆ ಬಂದಿರುತ್ತಾರೆ. ಅದೇ ಈ ಕಾದಂಬರಿಯ ಹೆಗ್ಗುರುತು. ಕಾದಂಬರಿಕಾರ ರಾಜಶೇಖರ್ ಮೂಲತಃ ಸಿನೆಮಾ ನಿರ್ದೇಶನ ಮಾಡಲು ಬಂದಾತ. ಆ ರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಕೆಲಸ ಮಾಡಿ ಸದಭಿರುಚಿಯ ಹಾಗೂ ಹೊಸತನ ಇರುವ ಸಿನೆಮಾ ಕೊಡಬೇಕೆಂಬ ಸದಾ ಇಚ್ಚೆಯುಳ್ಳ ವ್ಯಕ್ತಿ, ವರ್ತಮಾನದ ಹದಿಹರೆಯದ ಪ್ರೀತಿ, ಪ್ರೇಮ ತಲ್ಲಣಗಳನ್ನ ಹೊಸತನದ ಹಚ್ಚಿಗೆ ಹಾಕಿ ಚೆಂದದ ರೂಪಗಳನ್ನ ಕೊಟ್ಟಿದ್ದಾರೆ. ಇದನ್ನ ಓದುತ್ತಿರುವಾಗಲೇ ಒಂದು ಸಿನೆಮಾ ನೋಡಿದ ಅನುಭವವಾಗುತ್ತದೆ, ಅಂದರೆ ಆ ರೀತಿಯಲ್ಲಿ ಕಾದಂಬರಿಕಾರರು ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ. ಇದು ಅವರ ಚೊಚ್ಚಲ ಕೃತಿ, ಮುಂದೆ ಏನಾಗಬಹುದು ಅನ್ನುವ ಕುತೂಹಲಗಳ ನಡುವೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಒಳ್ಳೆಯ ಬರಹಗಾರರಾಗುವ ಕುರುಹುಗಳನ್ನ ಈ ಪುಸ್ತಕದ ಮೂಲಕ ಮಿತ್ರರು ನೀಡಿದ್ದಾರೆ. ಓದುಗರು ಅರೆಕೊರೆಗಳನ್ನ ಮನ್ನಿಸಿ ಸ್ವೀಕರಿಸಿ ಪ್ರೋತ್ಸಾಹಿಸಲಿ ಅನ್ನುವ ಸದಾಶಯ. ರಾಜು ಸೂನಗಹಳ್ಳಿ ಬರಹಗಾರ, ಚಲನಚಿತ್ರ ನಿರ್ದೇಶಕ

₹130   ₹111

ಶಿವಾಜಿ ಟೆಂಟ್ | SHIVAJI TENT

ಪುಸ್ತಕದ ಈ ಹತ್ತೂ ಕಥೆಗಳು ನನ್ನದೇ ಬಾಲ್ಯದಿಂದ ರೂಪು ತಳೆದಂತಹವು. ಒಂದಲ್ಲಾ ಒಂದು ರೀತಿಯಲ್ಲಿ ನನ್ನನ್ನು ತೀವ್ರವಾಗಿ ಕಾಡಿದ ಕಥೆಗಳಿವು. ಬಾಲ್ಯಕಾಲದ ನನ್ನೂರಿನ, ನನ್ನ ಬೀದಿಯ, ಕೇರಿಯ ಆತ್ಮಪ್ರಜ್ಞೆ ಈ ಕಥೆಗಳು, ಇವು ನಿಜಕ್ಕೆ ನಿಜ, ಕಲ್ಪನೆಗೆ ಕಲ್ಪನೆಯಂತಹದ್ದೇ ರೂಪಕಗಳು. ಇವು ಕೇವಲ ನನ್ನ ಬಾಲ್ಯದ ಕಥೆಗಳಾಗಿರದೆ, ಪುಟ್ಟ-ಪಟ್ಟಣಗಳಲ್ಲಿ ಬೆಳೆದ ನನ್ನಂಥ ಅನೇಕರು ತಮ್ಮ ಬಾಲ್ಯವನ್ನು ಸಮೀಕರಿಸಿಕೊಳ್ಳಬಹುದಾದ ಕಥೆಗಳು. ಇವು ಮಕ್ಕಳ ಕಥೆಗಳೂ ಹೌದು, ದೊಡ್ಡವರ ಕಥೆಗಳೂ ಹೌದು! ಎಲ್ಲಾ ವಯಸ್ಸಿನವರಿಗೂ ದಕ್ಕುವ ಹಾಗೆ, ನನಗೆ ಒಲಿದಿರುವ ಸರಳ ಭಾಷೆಯಲ್ಲಿ ಕಥೆಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಕಥೆಯು, ಸರಳವಾದ ಭಾಷೆ ಮತ್ತು ನಿರೂಪಣೆಯಲ್ಲಿದ್ದರೆ ಮಕ್ಕಳೂ ಕೂಡ ಸಲೀಸಾಗಿ ಓದಬಹುದೆಂಬ ಸಣ್ಣ ಉದ್ದೇಶವೂ ಇದರ ಹಿಂದಿದೆ. -ಮಂಜುನಾಥ್ ಕುಣಿಗಲ್

₹230   ₹195

ಶ್ರೀಮಂತರಾಗೋಣ ಬನ್ನಿ | shreemantaragona banni

ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತೀರಾ ಆದರೆ ಎಲ್ಲಿಂದ ಪ್ರಾರಂಭಿಸಬೇಕೆಂದು ತಿಳಿದಿಲ್ಲವೇ? "ಶ್ರೀಮಂತರಾಗೋಣ ಬನ್ನಿ" ಅರುಣ್ ಕಿಲ್ಲೂರು ಅವರು ಯಶಸ್ವಿ ಹೂಡಿಕೆಗಾಗಿ ಪ್ರಾಯೋಗಿಕ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುತ್ತಾರೆ. ನಿಮ್ಮ ಪ್ರತಿಯನ್ನು ಇಂದು ಪಡೆದುಕೊಳ್ಳಿ ಮತ್ತು ನಿಮ್ಮ ಆರ್ಥಿಕ ಭವಿಷ್ಯವನ್ನು ನಿರ್ಮಿಸಲು ಪ್ರಾರಂಭಿಸಿ!

₹185   ₹157

ಸತ್ಯದ ಅನಾವರಣ | Sathyada Anavarana

ಹೆಣ್ಣೂಬ್ಬಳು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು.

₹100   ₹85

ಸದನದಲ್ಲಿ ಡಾ. ವಿಷ್ಣುವರ್ಧನ್ | Sadanadalli Dr.Vishnuvardhana

ವಿಷ್ಣುವರ್ಧನ್ ಅವರ ನಿರ್ಗಮನವನ್ನು ಸದನವು ಯಾವ ರೀತಿ ಅವಲೋಕಿಸಿತು ಎನ್ನುವ ಕುತೂಹಲಕ್ಕೆ ಸಾಕ್ಷಿಯಾಗಿ ಈ ಪುಸ್ತಕವು ನಿಮ್ಮ ಕೈಲಿದೆ. ನಾಡಿನ ಅತ್ಯಂತ ಜನಪ್ರಿಯ ನಟರಾಗಿದ್ದ ಅವರಿಗೆ ನಟನೆಯನ್ನು ಮೀರಿದ ಮಾನವೀಯ ಮೌಲ್ಯಗಳು ಎಷ್ಟು ಮುಖ್ಯವಿತ್ತು ಎಂಬುದು ಸದನದ ಚರ್ಚೆಗಳ ಒಟ್ಟಾರೆ ಫಲಿತಾಂಶವಾಗಿ ಕಾಣುತ್ತದೆ. ಇದು ಸಹಜವಾಗಿ, ಇಡೀ ನಾಡಿನ ಜನಮಿಡಿತದ ದ್ಯೋತಕವೂ ಹೌದು. ಅವರ ಜೀವನ, ಅವರ ಮೌಲ್ಯಗಳು, ಅವರ ಸಾತ್ವಿಕತೆ ಇವೆಲ್ಲವೂ ಮುಂದಿನ ಪೀಳಿಗೆಗೆ ದಾರಿ ತೋರಲಿ ಎನ್ನುವ ಈ ಕೃತಿಯ ಉದ್ದೇಶ ಸಾರ್ಥಕವಾಗಿದ್ದು, ಅತಿ ಕ್ಷಿಪ್ರ ಅವಧಿಯಲ್ಲಿ ಅತ್ಯಂತ ಸಮಗ್ರವಾಗಿ ಈ ಕೃತಿಯನ್ನು ಹೊರ ತಂದಿರುವ ಡಾ. ಸಂತೋಷ ಹಾನಗಲ್ಲ ಅವರು ಅಭಿನಂದಾರ್ಹರು. ಅವರು ವಿಷ್ಣುವರ್ಧನ್ ಅವರ ಶುದ್ಧ ಮನೋಧರ್ಮವನ್ನು ದಾಖಲೆಗಳ ಮೂಲಕ ಪ್ರತಿಬಿಂಬಿಸಿದ್ದು, ಈ ಪುಸ್ತಕ ಕೇವಲ ಒಂದು ದಾಖಲೆಯಲ್ಲ. ಅದು ಒಂದು ಯುಗದ ಸ್ಪಂದನೆ ಎ೦ದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿ ಎಂ ಶ್ರೀನಿವಾಸ ರಾಜ್ಯಾಧ್ಯಕ್ಷರು ವಿಷ್ಣು ಸೇನಾ ಸಮಿತಿ, ಬೆಂಗಳೂರು

₹160   ₹136