ಇಲ್ಲಿನ ಕಥೆಗಳಲ್ಲಿ ಟರ್ಕಿಯ ಒಟ್ಟೋಮನ್ ಸುಲ್ತಾನರ ಅಂತಃಪುರದ ಬೇಗುದಿಯ ಸುಡುಶಾಖವಿದೆ, ನಮ್ಮದೇ ಕೆಂಪೇಗೌಡರ ಕಾಲದ ಹೆಣ್ಣುಮಗಳೊಬ್ಬಳ ಬಲಿದಾನದ ಮೇಲೆ ಇದೆ, ರಾಷ್ಟ್ರಕೂಟರ ಅರಸರ ಆಸ್ಥಾನದಲ್ಲಿನ ಪ್ರಜೆಗಳ ಒಕ್ಕೊರಲ ಸದ್ದು ಇದೆ, ಪಾಳೇಗಾರರ ಶೌರ್ಯ ಇದೆ. ಮಹಾನ್ ರಾಜರ ಆಡಳಿತದಲ್ಲಿ ಆಗಿಹೋದ ಸಾಮಾನ್ಯರ ಅಸಾಮಾನ್ಯ ಕಥೆಗಳೂ ಇವೆ. ವಿಜಯನಗರ ಅರಸರು, ಕೆಳದಿಯ ರಾಜರು, ಆದಿಲ್ ಶಾಹಿಗಳು, ಸುಲ್ತಾನರು, ಹೈದರಾಲಿಯಂಥವರೆಲ್ಲ ಇಲ್ಲಿ ತಂತಮ್ಮ ಆಸ್ಥಾನಗಳಲ್ಲಿದ್ದಾರೆ, ಸಾಮಂತ ರಾಜರು ಸಿರಿವಂತಿಕೆ ಮೆರೆಯುತ್ತಿದ್ದಾರೆ, ನಾಡು-ನುಡಿಯ ವೈಭವವಂತೂ ಕಳೆಗಟ್ಟಿದೆ. ಚರಿತ್ರೆಯ ಬಗೆಬಗೆ ಪುಟಗಳು ಕುತೂಹಲಕರ ಕಥೆಗಳಾಗಿ ತೆರೆದುಕೊಂಡಿರುವ ರೀತಿ ಇದು. ವಿಜಯ ಕರ್ನಾಟಕ-ವೀರಲೋಕ ಜಂಟಿಯಾಗಿ ಆಯೋಜಿಸಿದ್ದ 2025ರ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅಗ್ರ 25 ಸ್ಥಾನ ಗಳಿಸಿದ ಕಥೆಗಳ ಗುಚ್ಛ ಇದು. ಐತಿಹಾಸಿಕ ಕಥೆಗಳ ಕೃಷಿ ಕನ್ನಡದಲ್ಲಿ ಆಗಿರುವುದು ಕಡಿಮೆ. ಇಂಥ ಸಂದರ್ಭದಲ್ಲಿ ಕನ್ನಡದ ಕಥೆಗಾರರನ್ನು ಐತಿಹಾಸಿಕ ಕಥೆ ಬರೆಯಲು ಪ್ರೇರೇಪಿಸಿರುವ ಈ ಸ್ಪರ್ಧೆ ಬಲು ಆಪೂರ್ವ ನಡೆ. ಈ ಸವಾಲಿಗೆ ತೆರೆದುಕೊಂಡ ನೂರಾರು ಕಥೆಗಾರರ ಕಥೆಗಳಲ್ಲಿ ಗಮನ ಸೆಳೆದ ಕಥೆಗಳು ಇಲ್ಲಿವೆ. ಇದು ಇಂದಿನವರು ಬರೆದ ಅಂದಿನವರ ಕಥಾಜಗತ್ತು.
nil
#
ಅಶೋಕ್ ಕುಮಾರ್ ಡಿಸಲೆ
Nil
ರಾಘವೇಂದ್ರ ಮಾಯಕೊಂಡ
ಅರವಿಂದ್ ಚೊಕ್ಕಾಡಿ, ರೋಹನ್ ಜಗದೀಶ್
ಹದಿನೆಂಟು ದಿನದ ಯುದ್ಧ. ಹದಿನೆಂಟು ಅಕ್ಷೌಹಿಣೀ ಸೈನ್ಯ. ಅತಿರಥ-ಮಹಾರಥರ ಘನೋಪಸ್ಥಿತಿ. ಐದು ತಲೆಮಾರಿನ ಯೋಧರ ಸಮ್ಮಿಲನ. ಒಟ್ಟು ಸತ್ತವರು ಅರವತ್ತೆರಡು ಕೋಟಿ ಜನ. ಆನೆ-ಕುದುರೆಗಳ ಲೆಕ್ಕವಿಲ್ಲ. ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ. ಇದು ಕುರುಕ್ಷೇತ್ರದ ಯುದ್ಧದ ಕಥೆ. ಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದಿದ್ದು ಹೇಗೆ? ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.
ಒಂದು ಉದ್ಯಾನದ ಹಲವಾರು ಹೂಗಳ ನಡುವೆ ನಮ್ಮ ಕಣ್ಣಿಗೆ ಸುಂದರವಾಗಿ ಕಂಡ ಹೂವನ್ನು ಮೆಚ್ಚುವುದು, ಅದರ ಗಿಡಕ್ಕೆ ನೀರುಣಿಸುವುದು-ಪ್ರೇಮ. ಆ ಹೂವನ್ನು ಕಿತ್ತು ನಮ್ಮ ಬಳಿ ಇಟ್ಟುಕೊಳ್ಳುವುದು-ಕಾಮ. ಅದೇ ಉದ್ಯಾನದಲ್ಲಿ ಎಲ್ಲ ಹೂಗಳೂ ಸುಂದರವಾಗಿ ಕಂಡು, ಎಲ್ಲವನ್ನೂ ಮೆಚ್ಚಿ, ಎಲ್ಲ ಹೂಗಿಡಗಳಿಗೂ ನೀರುಣಿಸುವುದು-ಅಧ್ಯಾತ್ಮ.
ಗೋಪಾಲಕೃಷ್ಣ ಕುಂಟಿನಿ
Showing 1 to 30 of 3487 results