• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಚೂಡಾರತ್ನ ಶತಕ |Choodarathna Shataka

ಆತ್ಮೀಯರೆ, ನಾನು ತನಾಶಿ. ಜ್ಞಾನೇಶ್ವರನು ಪರಿಷ್ಕರಿಸಿದ 125 ಕಂದಪದ್ಯಗಳ ಚೂಡಾರತ್ನ ಶತಕವನ್ನು ನಿಮ್ಮ ಮುಂದೆ ತಂದಿದ್ದೇನೆ. ನಿತ್ಯವೂ ನೆನೆಯಬೇಕಾದ ನೀತಿಶತಕವಿದು.ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕಾದ ಭಾವನೆಗಳ ಗೊಂಚಲು ಇಲ್ಲಿದೆ. ಸತ್ವದ ಝೇಂಕಾರವಿದೆ. ಸತ್ಯದ ಓಂಕಾರವಿದೆ. ನೀತಿಯ ಸಾಕಾರವಿದೆ. ಬದುಕಿನ ವೈವಿಧ್ಯಗಳ ಆಕಾರವಿದೆ. ಕಣ್ಣಿಗೊತ್ತಿಕೊಂಡು ಓದುವ, ಎದೆಯಲಿಟ್ಟು ಆಸ್ವಾದಿಸುವ ಸಾರಸತ್ವಗಳ ಹೂರಣವಿದೆ. ಸಹೃದಯ ಬಂಧುಗಳೇ ನೀವು ಸವಿದು ನಿಮ್ಮ ಅಮೃತವಾಣಿಗಳಿಂದ ಜಗವನ್ನೂ ತಣಿಸಿರಿ. ನಿಮ್ಮನ್ನೇ ನೀವು ಕಾಣುವ ಕನ್ನಡಿಯ ತೆರದಿ ಇದನ್ನೂ ಕಾಣಿರಿ. ಆಸ್ವಾದಿಸಿ ಹಾರೈಸಿರಿ. ನಿಮ್ಮವ ತನಾಶಿ

₹280   ₹249

ಚೇಳು | Chelu

nil

₹120   ₹108

ಚೌತಿಯ ಗುಗ್ಗರಿ | cowthiya guggari

ಎಸ್ ಸಾಯಿಲಕ್ಷ್ಮಿ

₹55   ₹49

ಜಗತ್ತಿನ ಭೀಕರ ಯುದ್ಧಗಳು | Jagattina Bheekara Yuddhagalu

ಜಗತ್ತನ್ನು ಕಟ್ಟಿದವರು ಮತ್ತು ಕಟ್ಟುತ್ತಿರುವವರೆಂದರೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು ಪಿರಮಿಡ್ ಳಿಂದ ಹಿಡಿದು ಯಾವುದೇ ನಾಗರಿಕ ತೊಟ್ಟಿಲುಗಳನ್ನು ಕಟ್ಟಿ ಬೆಳೆಸಿದವರು ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರು, ಜೊತೆಗೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಮೂಕಪ್ರಾಣಿಗಳು, ಜಗತ್ತಿನಲ್ಲಿ ಮುಂದೆಯೂ ಈ ತಾರತಮ್ಯ ಹೀಗೆ ಮು೦ದುವರಿಯುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು ಮಹನೀಯರು ಹುಟ್ಟಿ ಬಂದು ಈ ಅಸಮಾನತೆಯ ಸಮಾಜದ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡರೆ ವಿನಹಃ ಈ ಜಗತ್ತು ಮಾತ್ರ ಬದಲಾಗಲೇ ಇಲ್ಲ.

₹495   ₹421

ಜಗತ್ತಿನ ಭೀಕರ ಯುದ್ಧಗಳು ಇಬುಕ್ | Jagattina Bheekara Yuddhagalu Ebook

ಜಗತ್ತನ್ನು ಕಟ್ಟಿದವರು ಮತ್ತು ಕಟ್ಟುತ್ತಿರುವವರೆಂದರೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು

₹495   ₹248

ಜಗದ ಗೆಳತಿ | Jagada Gelati

ಕಾವ್ಯವು ಕಾಲಕಾಲದ ಅಗತ್ಯಗಳಿಗೆ ತಕ್ಕಂತೆ ತನ್ನ ಪ್ರಸ್ತುತಿಯಲ್ಲಿ ಬದಲಾವಣೆ ಮಾಡಿಕೊಂಡ ಒಂದು ಪ್ರಕಾರವೆನ್ನಬಹುದು. ಕವಿಯ ಕಲ್ಪನಾ ಯಾನದ ಅಭಿವ್ಯಕ್ತಿಯಾಗಿ ಮೂಡಿ ಬಂದ ಭಾವಗೀತೆಗಳ ಪರಂಪರೆಯನ್ನು ಹಾದು ನವ ಕವನಗಳು ವರ್ತಮಾನದ ಅನುಭೂತಿಯನ್ನು ದಕ್ಕಿಸಿಕೊಂಡರೂ ಇಂದಿಗೂ ಭಾವ ಗೀತೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ ತನ್ನ ಇರುವಿಕೆಗೆ ಭಾವ, ಲಯ, ಪ್ರಾಸವನ್ನು ಬಯಸುವ ಈ ಕವಿತೆಗಳು ಅದರ ಚೆಲುವು ಮತ್ತು ಗೇಯತೆಯ ಗುಣಗಳಿಂದಾಗಿ ಜನ ಸಾಮಾನ್ಯರನ್ನೂ ಒಲಿಸಿಕೊಳ್ಳುತ್ತದೆ. ಇಂತಹ ಗೇಯತೆಗೆ ಒಗ್ಗಿಕೊಳ್ಳುವ ಕವಿತೆಗಳಿಂದಾಗಿಯೇ ರೂಪಕಲಾ ಆಳರ 'ಜಗದ ಗೆಳತಿ' ಸಂಕಲನದ ಬಹಳಷ್ಟು ಕವಿತೆಗಳು ಈಗಾಗಲೇ ಜನಮನವನ್ನು ಗೆದ್ದುಕೊಂಡಿದೆ. ಅದು ಬರಿಯ ಭಾವ ಲಹರಿಯಾಗಿರದೆ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಬಹುದಾದ ಅಭಿನಂದನಾ ಗೀತೆಗಳು, ಸಾಂದರ್ಭಿಕ ಕವಿತೆಗಳು, ಆಶಯ ಗೀತೆಗಳಿಂದಾಗಿಯೂ ಬಹುಮುಖಿಯಾಗಿ ಸಮೃದ್ಧವಾಗಿದೆ. ಬೇರೆ ಬೇರೆ ಸಂಸ್ಥೆಗಳ ಉತ್ಸವಗಳಿಗೆಂದೇ ಬರೆದ ಹಾಡುಗಳೂ ಇವೆ. ಬಹಳಷ್ಟು ಕವನಗಳಲ್ಲಿ ಶುಭಹಾರೈಕೆಗಳು, ಹರಕೆಗಳು, ಮನೆಯ ಚಾವಡಿಯೊಳಗಿನ ಅನುನಯದ ಆಶೋತ್ತರಗಳು ಬಯಲಾಗಿವೆ. ಹುಟ್ಟು ಹಬ್ಬದ ದಿನ ಕನ್ನಡದಲ್ಲಿಯೇ ಶುಭ ಹಾರೈಸಬಹುದಾದ ಎರಡೆರಡು ಹಾಡುಗಳು 'ಹುಟ್ಟು ಹಬ್ಬಕ್ಕೆ ಹಾರೈಕೆ' ಮತ್ತು 'ಜನುಮ ದಿನದ ಹಾರೈಕೆ'ಯಾಗಿ ಮೂಡಿಬಂದಿದೆ. 'ಗೆದ್ದು ಬಾರೋ ವೀರ', 'ಎದ್ದೇಳು ಕನ್ನಡಿಗ', 'ಕನ್ನಡ ಮರ', 'ಹಣತೆ ಹಳ್ಳೋಣ ಬನ್ನಿ', 'ಜಗದ ಗೆಳತಿ, 'ಅಮ್ಮ ನೆನಪಾಗುತ್ತಾಳೆ', ಮುಂತಾದ ಕವನಗಳು ಆಯಾ ಸಂದರ್ಭದಲ್ಲಿ ಹಾಡಬಹುದಾದ ಕವಿತೆಗಳು, ಅವುಗಳನ್ನು ಬರಿಯ ಪುಸ್ತಕದೊಳಗಿನ ಅಕ್ಷರಗಳಾಗಿರಲು ಬಿಡದೆ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಎದೆಯ ಭಾವನೆಗಳನ್ನು ಹೃದಗೊಳಿಸುವ ಹಾದಿಯಲ್ಲಿ ಗೇಯಗೀತೆಗಳು ಬಯಸುವ ಪ್ರಾಸ ಲಯಗಳನ್ನು ಅರ್ಥಕ್ಕೆ ಚ್ಯುತಿ ಬರದಂತೆ ಹೊಂದಿಸಿಕೊಳ್ಳುವಲ್ಲಿ ಅವರ ಶ್ರಮ ಸಾರ್ಥಕವಾಗಬಹುದು.

₹130   ₹116

ಜನ ನಾಯಕ | Jananayaka

ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ

₹125   ₹106