• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಜೈನ ಧರ್ಮ 63 ಒಳನೋಟಗಳು | Jaina Dharma 63 Olanotagalu

ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದಂಥ ಅನನ್ಯ ಬೋಧನೆಗಳ ಮೂಲಕ ಇಡೀ ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಜೈನ ಧರ್ಮವು ಭಾರತದ ಪುರಾತನ ಧರ್ಮಗಳಲ್ಲಿ ಒಂದು. ಭಾರತದ ಇತರ ಮತ್ತು ಪಾಶ್ಚಾತ್ಯ ಧರ್ಮಗಳ ತುಲನೆಯಲ್ಲಿ ಜೈನ ಧರ್ಮದ ಉನ್ನತ ಸ್ಥಾನಮಾನ ಗುರುತಿಸುವ ಈ ಪುಸ್ತಕ ಕನ್ನಡದ ಓದುಗರಿಗೆ ಒಂದು ಅಪೂರ್ವ ಕೊಡುಗೆ. ಜೈನ ಧರ್ಮದಲ್ಲಿ ೬೩ ಜನ ಶಲಾಕಾ ಪುರುಷರಿದ್ದಾರೆ. ಅದಕ್ಕಾಗಿಯೇ ಈ ಕೃತಿ ೬೩ ಅಧ್ಯಾಯಗಳಲ್ಲಿ ವಿಸ್ತರಿಸಿದೆ. ಜೈನ ಧರ್ಮದಲ್ಲಿ ಮತ್ತು ಧರ್ಮಗಳಲ್ಲಿ ಆಸಕ್ತಿ ಇರುವ ಯಾರೇ ಆದರೂ ಈ ಕೃತಿಯನ್ನು ಓದಬೇಕು. ದೇವದತ್ತ ಪಟ್ಟನಾಯಕರ ಈ ಅದ್ಭುತ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ಅನುಪಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ

₹375   ₹334

ಜ್ವಾಲಾ

nil

₹90   ₹80

ಟಾಪ್ ಒನ್ | Top One

ಸಾಕ್ಷಿ ಷಡಕ್ಷರಿ

₹60   ₹53

ಟಿಕೆಟ್ ಪ್ಲೀಸ್ | Ticket Please

ಕಾಡುತ್ತದೆ. ಸೃಜನಶೀಲ ಲೇಖಕ ಜೀವನದ ವಿಶ್ವವಿದ್ಯಾನಿಲಯದಲ್ಲಿ ಗಾಢವಾದ ಆಲೋಚನೆ ಮಾಡಿ ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ ('ನನ್ನ ವಿಶ್ವವಿದ್ಯಾನಿಲಯ'); ಕೊನೆ ಎಲೆ', ಕಲಾವಿದನೊಬ್ಬ ಮಹಾನ್ ಕಲಾಕೃತಿಯನ್ನು ಸೃಷ್ಟಿಸಿ ಅದರ ಮೂಲಕ ಸಾಯುವಂತಹ ಜೀವ ಒಂದಕ್ಕೆ ಬದುಕಬೇಕು ಆತ್ಮವಿಶ್ವಾಸವನ್ನು ತುಂಬಿದ ಸಾರ್ಥಕ ಕಥೆಯಾಗಿದೆ; 'ಖುಷಿ ರಾಜಕುಮಾರ' ಕಥೆಯಲ್ಲಿ ಚಿಕ್ಕ ಪಕ್ಷಿ ಮತ್ತು ರಾಜಕುಮಾರ ತಮ್ಮ ಚಟುವಟಿಕೆಗಳ ಮೂಲಕ ದೇವರಿಗೆ ಪ್ರಿಯರಾಗುತ್ತಾರೆ. ಒಳ್ಳೆಯತನ ಮತ್ತು ಕೆಡಕುತನ ಇವುಗಳ ನಿರಂತರ ಸಂಘರ್ಷದಲ್ಲಿ ಕೊನೆಗೆ ಒಳ್ಳೆಯದ್ದು ಗೆಲ್ಲುತ್ತದೆ ಎಂಬ ಆಶಾಭಾವ 'ಕನಸು' ಕಥೆಯಲ್ಲಿ ಧ್ವನಿಸುತ್ತದೆ. ಮನುಷ್ಯ ಸ್ವಭಾವದಲ್ಲಿರುವ ಒಳ್ಳೆಯತನಕ್ಕೆ ದಸ್ತಾಯೇವ್ಸ್ಕಿ ಒತ್ತುಕೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ್ದಾನೆ. ಪ್ರೀತಿ, ಪ್ರೇಮ, ಆದರ್ಶ, ತ್ಯಾಗ, ಇಂತಹ ಸೂಕ್ಷ್ಮಭಾವನೆಗಳೂ ಕಥೆಗಳಲ್ಲಿ ಕಲಾತ್ಮಕವಾಗಿ ಅನಾವರಣಗೊಂಡಿವೆ.

₹130   ₹116

ಟೈಟಾನಿಕ್ | Titanic

ಕೆಲವರು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡದೇ ತಮ್ಮ ತಮ್ಮ ಕ್ಯಾಬಿನ್‌ಗಳಲ್ಲಿ ಮತ್ತು ಅಲ್ಲಲ್ಲಿ ನಿಂತುಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇನ್ನೂ ಕೆಲವು ಪ್ರಯಾಣಿಕರು ಟ್ರಂಕುಗಳು ಮತ್ತು ಉಳಿದ ವಸ್ತುಗಳನ್ನು ಹಿಡಿದುಕೊಂಡು ಡೆಕ್ ಗಳಲ್ಲಿ ನಿಂತುಕೊಂಡು ಯಾರಾದರು ಬಂದು ತಮ್ಮನ್ನ ಕರೆದುಕೊಂಡು ಹೋಗುವರೆಂದು ಕಾಯುತ್ತಿದ್ದರು. ಮನಶಾಸ್ತ್ರಜ್ಞ ವೈನ್ ಕ್ರೇಗ್ ವೇಡ್ ಇದನ್ನು ಸಾಮಾಜಿಕ ಮೇಲಾಧಿಕಾರಿಗಳ ಪೀಳಿಗೆಗಳಿಂದ ಉತ್ಪತ್ತಿಯಾಗುವ Stoic Passitivity ಎಂದು ಹೇಳುತ್ತಾರೆ. ಇವರಲ್ಲಿ ಹೆಚ್ಚಿನವರು ಬದುಕುಳಿಯಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ನೂರಾರು ಜನರು ಸಭಾಂಗಣಗಳಲ್ಲಿ ಬೋಧಕರೊಂದಿಗೆ ನಿಂತುಕೊಂಡು ಪ್ರಾರ್ಥಿಸುತ್ತಿದ್ದರು, ದೇವರು ಮತ್ತು ಮೇರಿ ಅವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಕೆಲವರು ಅಲ್ಲಿಯೇ ಮಲಗಿಕೊಂಡು ಚೀರಾಡುತ್ತಿದ್ದರು, ಅವರು ತಮ್ಮ ಸ್ವಂತ ಇಚ್ಛಾಶಕ್ತಿಯನ್ನು ಕಳೆದುಕೊಂಡಿದ್ದರು ಮತ್ತು ದೇವರೇ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸುತ್ತಿದ್ದರು. ಟೈಟಾನಿಕ್ ದುರಂತ ಸಾಗರ ಇತಿಹಾಸದಲ್ಲಿ ಮೈ ನವಿರೇಳಿಸುವ ಮತ್ತು ಕೇಳಲಾರದ ವಿದ್ರಾವಕ ಸತ್ಯಕತೆಯಾಗಿದೆ. ಸಹಸ್ರಮಾನಗಳ ಇತಿಹಾಸದಲ್ಲಿ ಇಂತಹ ನರಕಸದೃಶ ದುರಂತ ಹಿಂದೆ ಎಂದೂ ನಡೆದಿರಲಿಲ್ಲ. ಈ ದುರಂತದ ನಂತರ ಸಾಗರ ಕಾನೂನುಗಳನ್ನು ಬದಲಿಸಬೇಕಾಯಿತು ಮತ್ತು ಅನೇಕ ಕಟ್ಟೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಯಿತು. ಇದರಿಂದ ಇಡೀ ಜಗತ್ತು ಸಾಗರಲೋಕದಲ್ಲಿ ಒಂದು ಹೊಸ ಪಾಠವನ್ನೇ ಕಲಿತುಕೊಂಡಿತು. ನಂತರದ ಕಾಲದಲ್ಲಿ ಯಾವುದೇ ದೊಡ್ಡ ದುರಂತಗಳು ನಡೆಯಲಿಲ್ಲ. ಈ ದುರಂತದಲ್ಲಿ ಮಡಿದವರ ಸಂಖ್ಯೆ ಗೊಂದಲಗಳಿಂದ ಕೂಡಿದ್ದು ಸುಮಾರು 1,490 ರಿಂದ 1635ರ ಎನ್ನಲಾಗಿದೆ. ಇನ್ನು ಸಮುದ್ರದಿಂದ ಸಂಗ್ರಹಿಸಿದ ಮೃತದೇಹಗಳ ಸಂಖ್ಯೆ ಕೇವಲ 333. ಒಟ್ಟಿನಲ್ಲಿ ಈ ಟೈಟಾನಿಕ್ ಹಡಗಿನ ಕತೆಯ ವ್ಯಥೆಯನ್ನು ಓದಿಯೇ ತಿಳಿಯಬೇಕು. ಡಾ. ಎಂ. ವೆಂಕಟಸ್ವಾಮಿ

₹150   ₹128

ಟ್ರಾಯ್ | Troy

ಗ್ರೀಕ್ ಇತಿಹಾಸದಲ್ಲೇ ಒಮ್ಮೆ ಕಾಲ್ಪನಿಕ… ಒಮ್ಮೆ ಪೌರಾಣಿಕ… ಮತ್ತೊಮ್ಮೆ ಜನಪದ ಕಥೆ ಎನ್ನುವ ವಿವಾದದೊಂದಿಗೇ ಅತ್ಯಂತ ಹೆಸರುವಾಸಿಯಾದ… ಅತ್ಯಂತ ಭೀಕರ ಯುದ್ಧವೊಂದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆ ಈ ” ಟ್ರಾಯ್” .

₹200   ₹170