ಪ್ರಸನ್ನ
nil
NA
ಭಾಷಾಂತರವೆನ್ನುವುದು 'ನೆರಳು' ಎಂದರು ದ ರಾ ಬೇಂದ್ರೆಯವರು, ಯಾವುದಾದರೂ ವಸ್ತುವಿನ ನೆರಳು ಆ ವಸ್ತುವಿನ ಆಕಾರದಲ್ಲಿಯೇ ಇರುತ್ತದೆಯಷ್ಟೆ ಅನುವಾದ ಕೂಡ ಹಾಗೆಯೇ. ನೂರಕ್ಕೆ ನೂರರಷ್ಟು ಮೂಲ ಕೃತಿಯನ್ನು ಅನುಸರಿಸಿದ ಅನುವಾದ ಕೂಡ ಸ್ವಸಂಪೂರ್ಣ ಕೃತಿಯಲ್ಲ ಕೊನೆಗೂ ಅದೊಂದು ಅನುವಾದವಷ್ಟೆ ಹಾಗಾಗಿ ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ತರುವವರ ಅನುವಾದದಲ್ಲಿ ಅವರದೇ ಭಾಷೆ, ಗ್ರಹಣಶಕ್ತಿ, ಸಂವೇದನೆ, ಅಭಿರುಚಿ ಮುಂತಾದವು ಇರುವ ಹಾಗೆಯೇ ಅವರ ಕಾಲಧರ್ಮವೂ ಉಸಿರಾಡುತ್ತಿರುತ್ತದೆ. ಈ ಮಾತು ಶ್ರೀರಾಮ್ ಅವರ ಈ ಅನುವಾದಕ್ಕೂ ಸಲ್ಲುವಂಥದು. ಹೀಗಿದ್ದೂ ಇಲ್ಲಿನ ಕೆಲವು ಕತೆಗಳಲ್ಲಿ ಮೂಲ ಕತೆಗಳ ಧಾಟಿ ಧೋರಣೆಗಳಿಗೆ ಅನುಗುಣವಾದ, ಕನ್ನಡದಲ್ಲಿ ಸಾಮಾನ್ಯವಾಗಿ ಕಾಣದ ವಾಕ್ಯರಚನೆಗಳೂ ನುಡಿಗಟ್ಟುಗಳೂ ಇವೆಯೆಂಬುದು ಗಮನಾರ್ಹ. ಇಂಥವು ಯಾವುದೇ ಭಾಷೆಯ ಅಭಿವೃದ್ಧಿಗೆ ಅತ್ಯಗತ್ಯ ಕೂಡ. ಎಸ್ ದಿವಾಕರ್
ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹ-ರಿಯ ಬಿಡುತ್ತಾರೆ. ನದಿ ತನ್ನ ಚಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಡ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿದ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ. ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ భృహో జీవించిగ మిడియుత్తార, నూ+విగ మిడియన ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ ಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತವೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು. ಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ, ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ಒಂದು ಹಿಡಿ ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ. ಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಮೋಸಮಾಡುವುದಿಲ್ಲ. -ಸದಾಶಿವ ಸೊರಟೂರು ಕವಿ, ಹೊನ್ನಾಳಿ
ಸುಬ್ಬಣ್ಣ ರಂಗನಾಥ ಎಕ್ಕುಂಡಿ
#
ಡಾ ಗಜಾನನ ಶರ್ಮ
ಒಂದು ಮಕ್ಕಳ ಕಥೆ ಹೇಳೇಕಾದ್ರೆ ಅದ್ರಲ್ಲಿ ಮಕ್ಕಿಗೆ ಒಂದು ಮಾರಲ್ ಇರ್ಬೇಕಾಗುತ್ತೆ. ಮತ್ತೆ ಮಕ್ಕಿಗೆ encourage ಮಾಡೋಕಾಗಿರೋ ಗುಣಗಳು ಅದ್ರಲ್ಲಿ ಇರ್ಬೇಕಾಗುತ್ತೆ. ಅದ್ರು ಜೊತೆಗೆ ಒಂದಷ್ಟು ಮಾಹಿತಿನೂ ಕೊಡೋಕಾಗುತ್ತೆ. ಈ ಪುಸ್ತಕದಲ್ಲಿ ನಾನು ಓದಿದ ಕಥೆ ಒಬ್ಬ ಹುಡುಗ ಸೈಕಲ್ ತಗೋಬೇಕು ಅಂಥ ಅವ್ರ ಬದುಕನ್ನ ಕಟ್ಟಿಕೊಳ್ಳಲು ಹೊಡೆದಾಡುವ ಸಂದರ್ಭದಲ್ಲಿ, ಒಬ್ಬ ಪ್ರಿನ್ಸಿಪಾಲ್ ಹೇಗೆ ಅವನಿಗೆ ಅರಿವಿಲ್ಲದಂತೆ ಒಂದ್ ಎಕ್ಸಾಮ್ ಬರ್ಸಿ, ಆ ಎಕ್ಸಾಮ್ ಇಂದ ಅನ್ನು ಜೀವನದಲ್ಲಿ ಹೇಗೆ ಮುಂದೆ ಹೋಗ್ತಾನೆ ಅನ್ನೋ ವಿಷಯ ತುಂಬಾ ಅರ್ಥಪೂರ್ಣವಾಗಿದೆ. ಇನ್ನರ್ಮೇಷನ್ ಇಲ್ವ, ಅದು ಮಕ್ಕಿಗೆ ಮಾತ್ರ ಅಲ್ಲ ಎಲ್ಲೂ ಓದಿದಾಗ ಈ ತರಹದ ಪರೀಕ್ಷೆ ಒಂದು ಇದೆ. ನಾವು ತುಂಬಾ ಜನಕ್ಕೆ ಇದನ್ನ ತಲುಪಿಸಬೇಕು ಮತ್ತು ಅದರ ಜವಾಬ್ದಾರಿ ಕೂಡ ನಮ್ಮದೇ ಎನ್ನುವುದು ತಿಳಿಯುತ್ತದೆ. ಇಷ್ಟೆಲ್ಲವನ್ನು ಹೊಂದಿಸಿ ಬರೆದಿರುವ ಈ ಕಥೆ ನನಗೆ ಬಹಳ ಇಷ್ಟವಾಗಿದೆ, ಆಮೇಲೆ ಪೂರ್ಣಿಮಾ ಹೆಗ್ಗಡೆಯವರು ಒಬ್ಬರು ಪ್ರಿನ್ಸಿಪಾಲ್ ಆಗಿ ಮಕ್ಕಳನ್ನ ಹತ್ತಿರದಿಂದ ನೋಡಿ ಮಕ್ಕಿಗೆ ಏನೇನೂ ಅವಶ್ಯಕತೆಗಳಿವೆ, ಆ ಮಕ್ಕು ಹೇಗೆ ಬೆಳೀಬೇಕು, ಆ ಮಕ್ಕಿಗೆ ನಾವು ಟೀಚರ್ ಗಳಾಗಿ ಏನೇನನ್ನ ತಲುಪಿಸಬೇಕು ಅನ್ನೋ ಬದ್ಧತೇನ ತಮ್ಮ ಕಥೆಗಳು ಮತ್ತು ಜೀವನ ಎರಡರಲ್ಲೂ ಅಳವಡಿಸಿಕೊಂಡಿರೋದು ಬಹಳ ಖುಷಿ ಕೊಡುತ್ತೆ. ಪೂರ್ಣ ಚಂದ್ರ ಚಲನಚಿತ್ರ ನಟರು
ಯಂಡಮೂರಿ ವೀರೇಂದ್ರನಾಥ್ ಯಂಡಮೂರಿ ವೀರೇಂದ್ರನಾಥ್ ಒಬ್ಬ ಭಾರತೀಯ ಕಾದಂಬರಿಕಾರರು ಮತ್ತು ಚಿತ್ರಕಥೆಗಾರರು. ಇವರು ತೆಲುಗು ಭಾಷೆಯಲ್ಲಿನ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ.ಅವರು ತಮ್ಮ ಸಾಮಾಜಿಕವಾಗಿ ಸಂಬಂಧಿತ ಬರಹಗಳು ಮತ್ತು ಯೂಟ್ಯೂಬ್ ವೀಡಿಯೊಗಳೊಂದಿಗೆ ಯುವ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತಾರೆ. ಅವರ ಬರಹಗಳಲ್ಲಿ ಅವರು ಬಡತನ, ಪೂರ್ವಾಗ್ರಹಗಳು ಮತ್ತು ಮೂಢನಂಬಿಕೆಗಳಂತಹ ಭಾರತದಲ್ಲಿನ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರಲು ಜನರನ್ನು ಪ್ರೋತ್ಸಾಹಿಸುತ್ತಾರೆ. ಅವರು ಸಾಹಿತ್ಯದ ಆದರ್ಶವಾದಿ ಮತ್ತು Read More...
Showing 1471 to 1500 of 3497 results