ಕೆ ಎಂ ಸುರೇಶ
nil
ಸಾಧಕರ ಬದುಕುಗಳು ನಮ್ಮ ಬದುಕನ್ನು ಎತ್ತರಿಸಿಕೊಳ್ಳುವುದಕ್ಕೆ, ಉದಾತ್ತೀಕರಿಸಿಕೊಳ್ಳುವುದಕ್ಕೆ ನಿದರ್ಶನ, ಪ್ರೇರಣೆ ಮತ್ತು ಮಾರ್ಗದರ್ಶನಗಳನ್ನು ನೀಡುತ್ತವೆ. ನಮ್ಮ ನಾಡಿನಲ್ಲಿ ಅನೇಕ ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರಿಗೆ ಅವರೇ ಗುರುವಾಗಿದ್ದಾರೆ. ಈ ನಿಟ್ಟಿನಲ್ಲಿ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಸಾಲುಗಳು ನೆನಪಾಗುತ್ತವೆ. 'ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ದಿನವ ಕಳೆ, ಗುರು ಶಿಷ್ಯಪಟ್ಟಗಳು ನಿನಗೇಕೆ? ನಿನಗೆ ನೀನೇ ಗುರುವೊ ಮಂಕುತಿಮ್ಮ'. ಡಿ.ವಿ.ಜಿ.ಯವರು ಹೇಳುವಂತೆ ನಾವು ಪಡೆದ ಎಂಜಲು ಅಂದರೆ ಅನ್ಯರಿಂದ ದೊರೆತ ತಿಳಿವಳಿಕೆ. ಇದು ಸಾರ್ಥಕವಾಗಬೇಕಾದರೆ ನಮ್ಮ ಪ್ರಜ್ಞೆ ಜಾಗೃತವಾಗಿರಬೇಕು. ಅದಕ್ಕೆ “ನಿನಗೆ ನೀನೇ ಗುರು" ಎಂದಿದ್ದಾರೆ. ಅರಿವಿನ ಬೆಳಕಾಗಿ ದಾರಿ ತೋರುವ ಗುರು ನಮ್ಮೊಳಗೆ ಇದ್ದಾನೆ. ಅಂತರಂಗದ ಆತ್ಮಸಾಕ್ಷಿಗಿಂತ ಮಿಗಿಲಾದ ಜ್ಞಾನ ಬೇರೊಂದಿಲ್ಲ. ನಮ್ಮೊಳಗಿನ ಪ್ರಜ್ಞೆ ಜಾಗೃತವಾಗದಿದ್ದರೆ ನಾವು ಪಡೆದ ಜ್ಞಾನವೆಲ್ಲವೂ ವ್ಯರ್ಥವಾಗುತ್ತದೆ. ಗುರುಶಿಷ್ಯ ಪಟ್ಟಗಳನ್ನು ಬಿಟ್ಟು ನಮಗೆ ನಾವೇ ಬೆಳಕಾಗಬೇಕು, ಸ್ಫೂರ್ತಿಯ ಸೆಲೆಯಾಗಬೇಕು, ಪ್ರೇರಣೆಯ ಅಲೆಯಾಗಬೇಕು. ಈ ಶಕ್ತಿಯು ಇಂತಹ ಸಕಾರಾತ್ಮಕ ದೃಷ್ಟಿಯಿಂದಲೇ ಜೀವನ ಸಾರ್ಥಕವಾಗುವುದಲ್ಲವೇ? ಕನ್ನಡ ನಾಡಿನ ವಿವಿಧ ಕ್ಷೇತ್ರಗಳ ಸಾಧಕರ ಕುತೂಹಲಕಾರಿ ವಿವರಗಳ ಹಿನ್ನೆಲೆಯೊಂದಿಗೆ ಅವರ ವೈಶಿಷ್ಟ್ಯಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಇಂದು ನಮ್ಮೆದುರು ಸಾಧನೆಗೆ ಅನೇಕ ಬಾಗಿಲುಗಳು ತೆರೆದಿವೆ. ಸಾಧನೆಯ ರಂಗ ಕೈಬೀಸಿ ಕರೆದಿದೆ. ಈ ಎಲ್ಲ ಅವಕಾಶಗಳನ್ನು ನಮ್ಮ ತಾರುಣ್ಯದ ಬಿಸುಪಿನಲ್ಲಿ ಇರುವವರು ಬಳಸಿಕೊಳ್ಳಲಿ ಎಂಬುದು ನನ್ನ ಪುಟ್ಟ ಆಸೆ. ಸಾಧನೆಯ ರಂಗಕ್ಕೆ ಅವರನ್ನು ಆಹ್ವಾನಿಸುವ ಸಣ್ಣ ಪ್ರಯತ್ನ ಈ ಪುಸ್ತಕ. ಇಲ್ಲಿನ ಸಾಧಕರ ಬದುಕು ಇಂದಿನ ತಲೆಮಾರಿಗೆ ಮಾದರಿಯಾಗಲಿ ಎಂದು ಆಶಿಸುತ್ತೇನೆ.
#
ಲೇಖಕರು, ಪತ್ರಕರ್ತರು ಆದ ಅನಂತ ಹುದೆಂಗಜೆ ಅವರು ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸರಳ ಭಾಷೆ, ಶೈಲಿಯಲ್ಲಿ ಬರೆದಿರುವ ಪುಸ್ತಕವಿದು. ನಮ್ಮ ‘ಕನ್ನಡ ಮಾಣಿಕ್ಯ’ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳ ಸಂಕಲನವೇ ಇದಾಗಿದೆ. ಇದೂ ಕೂಡ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರದ ವಿಚಾರಗಳ ಕುರಿತ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಹಣವನ್ನು ಮನುಷ್ಯ ಮಾಡುವುದು ಮುಖ್ಯವಲ್ಲ; ಅದರ ಸದ್ಬಳಕೆ ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಹಾಗೂ ಜ್ಞಾನ ನಮಗೆ ಈ ಪುಸ್ತಕದಿಂದ ಲಭಿಸುತ್ತದೆ.
ಅಬ್ದುಲ್ ಕಲಾಂ ಎ ಪಿ ಜೆ
ಡಾ. ಸಿ ಆರ್ ಚಂದ್ರಶೇಖರ್ ನಿವೃತ್ತ ಮನೋವೈದ್ಯ ಪ್ರಾಧ್ಯಾಪಕರು ನಿಮಾನ್ಸ್ ಬೆಂಗಳೂರು ಲೇಖಕರು 300+ ಕನ್ನಡ ಪುಸ್ತಕಗಳು 50+ ಇಂಗ್ಲಿಷ್ ಪುಸ್ತಕಗಳು ಸಮಾಧಾನ ಕೇಂದ್ರದಲ್ಲಿ ಉಚಿತ ಸಲಹೆ ಚಿಕಿತ್ಸೆ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಆಪ್ತ ಸಮಾಲೋಚನೆ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ವಿಶ್ವ ಆರೋಗ್ಯ ಸೇವಾ ಸಂಸ್ಥೆಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ
ಐತಿಹಾಸಿಕ ಕಥನವನ್ನು ಜನಪದೀಯ ನೆಲೆಯಲ್ಲಿ ವಿಕಸನಗೊಳಿಸುತ್ತ ಕಥನಕಾಲದ ಜೊತೆಗೆ ಆಯಾ ದೇಶಕಾಲದ ಚಿತ್ರಣವನ್ನು ತೆರೆದಿಡುವ ಕಾದಂಬರಿ ಈ ‘ನಿಯುಕ್ತಿಪುರಾಣ’, ಕತೆಯ ಮಟ್ಟಿಗೆ ಅಗಾಧ ಅಳತೆಯ ಕ್ಯಾನ್ವಾಸ್ ಹೊಂದಿರುವ ಇದು ಸುಲಭಕ್ಕೆ ಗ್ರಹಿಸಿ ಹಿಡಿದಿಡಲು ಆಗದಷ್ಟು ದೊಡ್ಡ ಕಥನ. ಲಾವಣಿ, ಜನಪದ ಶಬ್ದ ಭಂಡಾರ, ಕಥನ ಕುತೂಹಲಕ್ಕಾಗಿ ಏರಿಳಿತದ ಅನುಸರಣೆಯ ತಂತ್ರಗಾರಿಕೆ. ಪಾತ್ರಗಳು ಕಟ್ಟಿಕೊಡುವ ಗಟ್ಟಿತನ, ವಿಸ್ತಾರವಾದರೂ ಕೈ ತಪ್ಪದ ಸಂವಹನ ಮತ್ತು ಸಂಪರ್ಕಗಳು, ಸುತ್ತು ಬಳಸಿದರೂ ಮರೆಯದೆ ಜತೆಗೊಯ್ಯುವ ಸಂದರ್ಭದ ಹಲವು ಆವರ್ತಗಳಲ್ಲೂ ಹದತಪ್ಪದ ನಿರೂಪಣೆ ಪುರಾಣದ ವಿಶೇಷತೆಯಾದರೆ, ಹೊಸ ಓದುಗನಿಗೆ ಮತ್ತು ಜನಪದೀಯ ರುಚಿ ಗ್ರಹಿಸಿದವರಿಗೆ, ಗ್ರಂಥಸ್ಥ ಭಾಷೆಯನ್ನಷ್ಟೇ ಓದುವವರಿಗೆ ‘ನಿಯುಕ್ತಿಪುರಾಣ’ ಕೊಂಚ ಒಗರು ಕೂಡ. ಆದರೆ ಪಟ್ಟು ಬಿಡದೆ ಓದಿ ಬಿದ್ದರೆ ಪಳಗಿ ಬಿಡುವ ಬರಹದ ಶೈಲಿಗೆ ಗೊತ್ತಿಲ್ಲದೆ ಆಪ್ತವಾಗಿಸುವ ಹಿಡಿತ ಇಲ್ಲಿದೆ.
Showing 1621 to 1650 of 3497 results