#
ಇಪ್ಪತ್ತನೆಯ ಶತಮಾನದ ನಲ್ವತ್ತರ ದಶಕದಲ್ಲಿ ಅಲ್ಬೆ ಕಮೂ ಬರೆದ ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲಾಗುವ ದಿ ಪ್ಲೇಗ್ ಕೃತಿಯೂ ಮನುಷ್ಯರ ಅಸಹಾಯಕತೆ, ದಾರುಣತೆ, ದುಷ್ಟತನ ಮತ್ತು ಕರುಣೆಯನ್ನು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ. ಕಾಯಿಲೆಯೊಂದು ರೂಪಕವಾಗಿ ಕೊಳೆತ ಸಮಾಜದ ಅಸ್ವಾಸ್ಥ್ಯವನ್ನು ಬೆಳಕಿಗೆ ತರುವುದೇ ಈ ಕೃತಿಯ ಮುಖ್ಯ ಆಶಯ. ಅದಾಗಿ ಏಳು ದಶಕದ ಬಳಿಕ ನಾವು ಬದುಕುತ್ತಿರುವ ವಿಶ್ವವು ಒಂದು ಜಾಗತಿಕ ಸಾಂಕ್ರಾಮಿಕವನ್ನು ಎದುರಿಸಿತು. ಇಂದು ಬದುಕುಳಿದಿರುವ ನಾವೆಲ್ಲ ಅದಕ್ಕೆ ಸಾಕ್ಷಿಯಾದೆವು. ಪತ್ರಕರ್ತರಾದ ಸಂತೆಕಸಲಗೆರೆ ಪ್ರಕಾಶ್ ಅವರು ಕೂಡ ಆ ಕಾಲಘಟ್ಟದ ಅನುಭವವನ್ನು ಕಥೆಗಳ ರೂಪದಲ್ಲಿ 'ಬೂಸ್ಟರ್ ಡೋಸ್ ಮುನಿಯಮ್ಮ' ಎಂಬ ಸಂಕಲನದ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಹನ್ನೆರಡು ಕಥೆಗಳ ಈ ಸಂಕಲನವು ಜಾಗತಿಕ ಮಹಾಮಾರಿಯ ರುದ್ರಭಯಾನಕತೆಯ ವಿವಿಧ ರೂಪವನ್ನು ಕಥೆಗಳಲ್ಲಿ ಹಿಡಿದಿರಲು ಯತ್ನಿಸುತ್ತದೆ. ಜಾಗತಿಕ ಕಾಯಿಲೆಯ ಸ್ವರೂಪ ಮನೆ-ಕುಟುಂಬ-ಗ್ರಾಮ-ನಗರದ ಬೀದಿಗಳಲ್ಲಿ ಹೇಗೆ ಕಾಣಿಸಿಕೊಂಡಿತು. ಯಾವ ಪರಿಣಾಮವನ್ನುಂಟು ಮಾಡಿತು ಎಂದು ಇಲ್ಲಿನ ಕಥೆಗಳು ಅರಿಯಲು ಪ್ರಯತ್ನಿಸುತ್ತವೆ.
nil
ಪ್ರತಾಪ್ ಸಿಂಹ
ಬೇಲೂರು ರಾಮಮೂರ್ತಿ ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.
Showing 2101 to 2130 of 3497 results