nil
ನಾರಾಯಣಾಚಾರ್ಯ ಕೆ ಎಸ್
#
ಕತೆಗಾರಿಕೆಯ ಕೌಶಲವನ್ನು ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು.
'ಹಾಡು ಹರಡಬೇಕು, ಮಾತು ಮರೀಬೇಕು' ಎನ್ನುತ್ತಾರೆ. ತಮ್ಮ ಬದುಕಿನ ಉದ್ದಕ್ಕೂ ಹಾಡನ್ನು ಹರಡುತ್ತಾ ಸಾಗಿದವರು ಎಚ್ ಆರ್ ಲೀಲಾವತಿ. ಕನ್ನಡದ ಮನೆ, ಮನಗಳಲ್ಲಿ ಅಚ್ಚೊತ್ತಿ ನಿಂತ ಹೆಸರು. 'ಹಾಡು' ಎನ್ನುವುದಕ್ಕೆ ಅನ್ವರ್ಥನಾಮವೇ ಲೀಲಾವತಿ ಎನ್ನುವಂತೆ ಇವರು ಹಾಡಾಗಿ ಹರಿದಿದ್ದಾರೆ. 'ಹಾಡಾಗಿ ಹರಿದಾಳೆ..' ಲೀಲಾವತಿ ಅವರ ಆತ್ಮಕಥನ. ಹಾಡನ್ನೇ ಉಸಿರಾಗಿಸಿಕೊಂಡ ಮಹಾನ್ ಪ್ರತಿಭೆಯ ಪಯಣದ ಕಥೆ. ಒಂದು ಅರ್ಥದಲ್ಲಿ ಈ ಕೃತಿ ಅದರ ಮುಂದುವರಿಕೆ. ಇದು ಕೇವಲ ಗಾನ ಯಾನವಲ್ಲ, ಕವಿಗಳ ಜೊತೆಗಿನ ಒಡನಾಟದ ಮೆಲುಕು ಸಹಾ. ಹಾಗಾಗಿಯೇ ಇದು 'ಗಾನ ಯಾನ, ಕಾವ್ಯ ಮಿಲನ'. ಈ ಕೃತಿ ಓದಿದರೆ ಲೀಲಾವತಿಯವರ ಬಗ್ಗೆ ಇರುವ ನಮ್ಮ ಪ್ರೀತಿ ಒಂದು ಹಿಡಿ ಹೆಚ್ಚೇ ಆಗುತ್ತದೆ.
ಸದಾಶಿವ ಸೊರಟೂರು ಅವರ ಬರಹಕ್ಕೆ ಇರುವ ಶಕ್ತಿಗೆ ನಾನು ಬೆರಗಾಗಿದ್ದೇನೆ. ಅವರ ಬರಹಕ್ಕೆ ಮಾಂತ್ರಿಕ ಶಕ್ತಿ ಇದೆ. ಇವರು ಕಥೆ ಬರೆಯಲಿ, ಕವಿತೆ ಬರೆಯಲಿ, ಲೇಖನ ಬರೆಯಲಿ ಎಲ್ಲದರಲ್ಲೂ ಸೊರಟೂರುತನವನ್ನು ಉಳಿಸುತ್ತಾರೆ. ಇವರ ಅಪಾರ ಓದು, ತನ ಓದುಗನನು ಗನನ್ನು ಓದಲು ಇವರು ಪಟ್ಟಿರುವ ಶ್ರಮ ಇವರ ಬರಹಗಳ ಯಶಸ್ಸಿಗೆ ಕಾರಣ. ಈಗ 'ಗಾಯಗೊಂಡ ಸಾಲುಗಳು ಕವನ ಸಂಕಲನದ ಜೊತೆಗೆ ಹಾಜರಾಗಿದ್ದಾರೆ. ಇವರ ಕವಿತೆಗಳಲ್ಲಿ ಕಳೆದು ಹೋಗೋಣ ಬನ್ನಿ ಜಿ. ಎನ್. ಮೋಹನ್
Showing 1471 to 1500 of 5115 results