#
nil
ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಬರೆದಂತವು. ಹೆಚ್ಚಿನ ಕಥೆಗಳು ಮಹಿಳಾ ಪ್ರಧಾನ ಕಥೆಗಳು. ವರದಕ್ಷಿಣೆ, ಗಂಡು ಮಗುವಿನ ಮೋಹ, ನಶಿಸಿ ಹೋಗುತ್ತಿರುವ ಸಂಬಂಧಗಳ ಮೌಲ್ಯ, ಹಣದ ವ್ಯಾಮೋಹ ಮೊದಲಾದ ಸಾಮಾಜಿಕ ಸಮಸ್ಯೆಗಳ ಕುರಿತಾಗಿರುವ ಕಥೆಗಳಲ್ಲಿ ನೀತಿ ಪಾಠವಿದೆ. ಅಮ್ಮ. ಬಲಿದಾನ, ಮನೆಯ ಅದೃಶ್ಯ ಕಂಬಗಳು ನಮ್ಮಲ್ಲೇ ಎಲ್ಲೋ ನಡೆದಿರಬಹುದಾದ ಕಥೆಗಳು. ಸುಂದರಗೊಂದಲ, ಮ್ಯಾಜಿಕ್ ಲ್ಯಾಂಪ್, ಅದಲು ಬದಲು ಕಥೆಗಳು ಗಂಭೀರ ಕಥೆಗಳ ನಡುವೆ ತಿಳಿ ಹಾಸ್ಯ ಹೊಂದಿದೆ. ಜೊತೆಗೆ ಹೆಚ್ಚಿನ ಕಥೆಗಳು ಯುವ ಜನತೆಗೆ ಪಾಠವಾಗಬಲ್ಲ ಕಥೆಗಳು.
ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.
1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ವಿ. ಗುರುಪ್ರಸಾದ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು ಮತ್ತು ಕರ್ನಾಟಕ ಕೇಡರ್ ಅನ್ನು ನೀಡಲಾಯಿತು. ಬೀದರ್, ಗುಲ್ಬರ್ಗ ಮತ್ತು ಕೊಡಗು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಗುಲ್ಬರ್ಗ ರೇಂಜ್‌ನ ಡಿಐಜಿ Read More...
Showing 2071 to 2100 of 5363 results