• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ವಾರೆನ್ ಹೇಸ್ಟಿಂಗ್ಸ್‌ನ ಹೋರಿ | Warren hasting's Hori

ಇದು, ಹಿಂದಿಯ ಧೀಮಂತ ಲೇಖಕ ಶ್ರೀ ಉದಯ ಪ್ರಕಾಶ್‌ರ 'ವಾರೆನ್ ಹೇಸ್ಟಿಂಗ್ಸ್ ಕಾ ಸಾಂಡ್" ಎಂಬ ಕಿರು ಕಾದಂಬರಿಯ ಭಾವಾನುವಾದ. ಈ ಸಮಾಜೋ- ಆರ್ಥಿಕ ರಾಜಕೀಯ ಕಟಕಿಯಲ್ಲಿ ವಾರೆನ್ ಹೇಸ್ಟಿಂಗ್ಸ್ ಮತ್ತು ಅವನ ಹೋರಿ ರೂಪಕಗಳಾಗಿ ಬಳಸಲ್ಪಟ್ಟಿವೆ. ಉದಯ ಪ್ರಕಾಶರು ಒಂದು ವಿಲಕ್ಷಣ ಭ್ರಮೆ (Fantasy) ಯನ್ನು ಈ ಕಿರು ಕಾದಂಬರಿಯಲ್ಲಿ ಸೃಷ್ಟಿಸಿದ್ದಾರೆ. ಅದ್ಭುತಗಳ ನಾಡಾದ ಭಾರತವೆಂಬ ಕೂಟ ಪ್ರಶ್ನೆಯೊಂದಿಗೆ ವಾರೆನ್ ಹೇಸ್ಟಿಂಗ್ಸ್‌ನ ಒಡನಾಟ ಹಾಸ್ಯಾಸ್ಪದವೂ ಅಸಮಂಜಸವೂ ಆಗಿದೆ. ತನ್ನ ಸುತ್ತಲಿನ ಎಲ್ಲದರೊಂದಿಗೆ ಅವನ ನಡವಳಿಕೆ ಸಂವೇದನಾರಹಿತವಾಗಿದೆ; ಇದರಲ್ಲಿ ಆಳ ತಿಳುವಳಿಕೆ ಯಾಗಲೀ, ಒಳನಾಡಿ ಅರಿವಾಗಲೀ ಇಲ್ಲ, ಹಾಗಾಗಿ ಸತ್ವವೂ ಇಲ್ಲ. 'ವಾರೆನ್ ಹೇಸ್ಟಿಂಗ್ಸ್‌ನ ಹೋರಿ' ಇಂದು ನಮ್ಮ ಸುತ್ತ ನಡೆಯುತ್ತಿರುವ ಜಾಗತಿಕ ವಿದ್ಯಮಾನಗಳತ್ತ ನಮ್ಮನ್ನ ಕೊಂಡೊಯ್ಯುತ್ತದೆ. ಇಂದು ಭೋಗಲೋಲುಪತೆ ಮತ್ತು ಅಧಿಕಾರದಾಹ ವಿಕೃತಿಯ ರೂಪತಳೆದಿವೆ. ನಿಲ್ಲಪ್ತತೆ- ಸಂವೇದನಾರಾಹಿತ್ಯಗಳ ನಡುವೆಯೂ ಕೆಲವು ಜೀವಿಗಳು. ಕೆಲವು ಚಳುವಳಿಗಳು ಹೋರಿಯ ಕೋಡು ಹಿಡಿದು ಮಣಿಸುವ, ಜಗತ್ತಿನ ಗಡ್ಡಹಿಡಿದು ಜಗ್ಗುವ ಧೈರ್ಯ ಹೊಂದಿವೆ. ವಿನಾಶದ ಅಂಚಿನಲ್ಲಿರುವ ತಳಿಯೊಂದಕ್ಕೆ ಕೊಟ್ಟ ಪ್ರಶಸ್ತಿಯಂತಿದೆ ಈ ಕಾದಂಬರಿ, ಡಾ. ಪ್ರಕಾಶ್ ಗರುಡರ ಭಾವಾನುವಾದ ಮೂಲದೊಂದಿಗೆ ಅನುಸಂಧಾನ ಮಾಡುತ್ತಲೇ ತಿಳಿಗನ್ನಡದಲ್ಲಿ ಚೊಕ್ಕವಾಗಿ ಹರಿದು ಬಂದಿದೆ. ಪ್ರೊ. ಎಚ್.ಆರ್. ಅಮರನಾಥ

₹130   ₹116

ವಿದ್ಯಾರ್ಥಿ ದಾರಿದೀಪ | Vidyarthi dharideepa

ವಿಮಲಾ ರಾಮಾಜೋಯಿಸ್

₹95   ₹85

ಶ್...! ಇಲ್ಯಾರೋ ಇದ್ದಾರೆ.. | Shh...! ilyaaro iddare..

ಹಾನರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು ಓದಿ ಮಧ್ಯರಾತ್ರಿ ಎಚ್ಚರವಾದರೆ ನೀರು ಕುಡಿಯ ಹೋಗಲೂ, ಒಬ್ಬನೇ ರಾತ್ರಿ ನಡೆದು ಹೋಗಲೂ ಭಯಪಡುವ ಪರಿಸ್ಥಿತಿಯಾಗಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿದ ಈ ಕಥೆಗಳು ಇದೀಗ ಸಂಕಲನವಾಗಿದೆ. ಪ್ರಶಾಂತ್ ಭಟ್

₹175   ₹156

ಶ್ರೀ ಕೃಷ್ಣದೇವರಾಯ | Shree Krishnadevaraaya

ಭಾರತದ ಅರಸುಗಳಲ್ಲಿ ಶ್ರೀಕೃಷ್ಣದೇವರಾಯನಿಗೆ ವಿಶಿಷ್ಟವಾದ ಸ್ಥಾನವಿದೆ. ಸಮರ್ಥ ಆಡಳಿತಗಾರ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ,ಸಾಹಿತ್ಯ ರಂಗಗಳ ಪೋಷಕ; ತಾನು ವೈಷ್ಣವ ಧರ್ಮವನ್ನು ಅನುಸರಿಸಿದರೂ ಇತರ ಧರ್ಮಗಳ ಬಗ್ಗೆ ಒಬ್ಬ ರಾಜ ನಡೆದುಕೊಳ್ಳುವ ರೀತಿಯಲ್ಲಿ ನಡೆದುಕೊಂಡ ಸಂಯಮಿ. ತನ್ನನ್ನು ಕನ್ನಡ ರಾಯನೆಂದು ಕರೆಸಿಕೊಂಡ ಭಾಷಾಪ್ರೇಮಿ. ಯವನ ರಾಜ್ಯ ಸ್ಥಾಪಕನೆಂಬ ಬಿರುದನ್ನು ಪಡೆದ ರಣಧೀರ. ಬಹುಶಃ ಈತನ ಬಗ್ಗೆ ಪ್ರಚಲಿತದಲ್ಲಿರುವಷ್ಟು ದಂತಕಥೆಗಳು ಬೇರಾವ ರಾಜನ ಬಗ್ಗೆಯೂ ಇಲ್ಲ. ಹೀಗೆ ಇಂದಿಗೂ ಜನಮಾನಸದಲ್ಲಿ ನೆಲಸಿರುವ ವರ್ಣರಂಜಿತ ಐತಿಹಾಸಿಕ ವ್ಯಕ್ತಿ ಶ್ರೀಕೃಷ್ಣದೇವರಾಯ. ಈ ಕಾದಂಬರಿಯಲ್ಲಿ ಮಿತ್ರ ಶ್ರೀ ಸು.ರುದ್ರಮೂರ್ತಿಶಾಸ್ತ್ರಿ ಶ್ರೀಕೃಷ್ಣದೇವರಾಯನ ಚರಿತ್ರೆಯನ್ನು ನಿರೂಪಿಸುವುದಕ್ಕಿಂತಲೂ ಆತನ ಚಾರಿತ್ರ್ಯವನ್ನು ನಿರೂಪಿಸುವುದರತ್ತ ಹೆಚ್ಚು ಗಮನಹರಿಸಿದ್ದಾರೆ. ಶ್ರೀಕೃಷ್ಣದೇವರಾಯ ಈ ಕಾದಂಬರಿಯ ಪ್ರಧಾನ ಪಾತ್ರ. ಆದರೆ ಎಲ್ಲ ಪಾತ್ರಗಳ ಒಳಹೊರ ಚಾರಿತ್ರ್ಯಗಳನ್ನು ಗಮನಿಸಿ ಎಲ್ಲ ಪಾತ್ರಗಳನ್ನೂ ನಮ್ಮ ಮುಂದಿರಿಸಿದ್ದಾರೆ. ಬಹುಶಃ ಈ ಕಾರಣದಿಂದ ಶ್ರೀಕೃಷ್ಣದೇವರಾಯನ ಬದುಕಿನ ಸುತ್ತ ಹೆಣೆದುಕೊಂಡಿರುವ ಹಲವಾರು ಅಸಂಗತಗಳು ತಮ್ಮಷ್ಟಕ್ಕೆ ತಾವೇ ಕಳಚಿಕೊಂಡಿವೆ. ಆ ಕಾಲದ ಆಂತರಂಗಿಕ ಗೂಢಚರ್ಯೆ, ಅಧಿಕಾರ ದಾಹದ ಪಿತೂರಿಗಳು, ಉಪಾಯಗಳಿಗೆ ಪ್ರತ್ಯುಪಾಯಗಳು ಮುಂತಾದ ಕುತೂಹಲ ಮೂಡಿಸುವ ಪ್ರಸಂಗಗಳೂ ಹಿತವಾಗಿ ಮೂಡಿಬಂದಿವೆ. ಇವೆಲ್ಲವೂ ಆ ಪಾತ್ರಗಳ ವ್ಯಕ್ತಿತ್ವವನ್ನು ಆವಿಷ್ಕರಿಸುವಲ್ಲಿ ಸಹಕಾರಿಯಾಗಿವೆ.

₹650   ₹579

ಸತ್ಕುಲ ಪ್ರಸೂತರು | Satkula Prasutaru

ಹೀಗೆ, ಹಲವು ಪದರಗಳಿರುವ ನಿರೂಪಣೆ, ಹಲವು ಕೋನಗಳಿಂದ ನಡೆಯುವ ನಿರೂಪಣೆ ಇರುವ ಕನ್ನಡ ಕಾದಂಬರಿ ಓದಿ ಬಹಳ ಬಹಳ ವರ್ಷಗಳೇ ಕಳೆದಿವೆ. ಒಂದು ಮಾತಲ್ಲಿ ಹೇಳಬೇಕು ಅಂದರೆ ಇದು ನಾವು" ಬದುಕುತ್ತಿರುವ ಈ ೨೦೨೪ರ ಬದುಕಿಗೆ ನನ್ನ ತಲೆಮಾರಿನವರೊಬ್ಬರು ಅಮೆರಿಕದಲ್ಲಿ ಕೂತು ಹಿಡಿದಿರುವ ಕನ್ನಡಿ. ಬೇರೆ ಬೇರೆ ಕಾಲಘಟ್ಟಗಳಲ್ಲಿಯೂ ಬದಲಾಗದ ಸಮಸ್ಯೆಯನ್ನು 'ಸತ್ಕುಲಪ್ರಸೂತರು' ಪರಿಶೀಲಿಸಿದೆ. ಕಾದಂಬರಿಯೊಂದು ಕಥೆಯ ಕಾಲವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯ ಸಂಗತಿಯಾಗುತ್ತದೆ. ಈ ಕಾದಂಬರಿಯು ನವೋದಯ, ನವ್ಯಗಳ ಮಾರ್ಗವನ್ನು ಬಿಟ್ಟು ಕಾಲವನ್ನು ಕೌದಿಯ ಹಾಗೆ ಹೆಣೆದಿದೆ. ಇದು ಆತ್ಮಕಥೆಯೋ, ಸಮುದಾಯವೊಂದರ ಆಚರಣೆಗಳ ದಾಖಲೆಯೋ, ಹುಟ್ಟಿದ ನೆಲ ಮತ್ತು ಸಾಕಿದ ಕುಟುಂಬ, ನಂಟಸ್ತನ, ಪರಿಚಿತ ಉದ್ಯೋಗಗಳಿಲ್ಲದರಿಂದ ದೂರವಾಗಿ ಬದುಕುವ ಜನಸಮೂಹದ ಸ್ವವಿಮರ್ಶೆಯೋ, ಬರೆಯಲಿರುವ ಕಾದಂಬರಿಯೊಂದರ ಟಿಪ್ಪಣಿಯೋ, ಇದೇ ಕಾದಂಬರಿಯೋ, ಇಲ್ಲಿರುವಂಥ ನಿರೂಪಣೆ ಕಾದಂಬರಿಯ ನಿರೂಪಕನ ಅಗತ್ಯ ಮತ್ತು ಕಾದಂಬರಿಯ ಪಾತ್ರವೊಂದರ ಒತ್ತಾಯದಿಂದ ರೂಪುಗೊಂಡದ್ದೋ ಎಂದು 'ಸತ್ಕುಲಪ್ರಸೂತ'ರನ್ನು ಹಲವು ಕೋನಗಳಿಂದ ನೋಡಲು ಸಾಧ್ಯವಿದೆ. -ಓ ಎಲ್‌ ನಾಗಭೂಷಣ ಸ್ವಾಮಿ

₹295   ₹263

ಸಮಗ್ರ ಲಲಿತ ಪ್ರಬಂಧಗಳು | Samagra Lalita Prabandagalu

ಪ್ರೊಫೆಸರ್ ಅಕ್ಕಿಹೆಬ್ಬಾಳು ನರಸಿಂಹಮೂರ್ತಿ ರಾವ್ ಅವರು ಪರಿಪಕ್ವತೆಗೆ, ಸುಸಂಸ್ಕೃತ ಅಭಿರುಚಿಗೆ ಮತ್ತೊಂದು ಹೆಸರು. ಅವರದು ವಿಸ್ತಾರವಾದ, ಆಳವಾದ ಪುಸ್ತಕಜ್ಞಾನ; ಮೂರು ಖಂಡಗಳಲ್ಲಿ ಬದುಕನ್ನು ಕಂಡಿರುವ ವೈವಿಧ್ಯಮಯವಾದ ಲೋಕಾನುಭವ ಅವರದು. ಡಾಕ್ಟರ್ ಮೂರ್ತಿರಾಯರು ತಮ್ಮ ವಿದ್ವತ್ತು, ತಿಳಿಹಾಸ್ಯ, ಸರಳತೆ ಮತ್ತು ತೆರೆದ ಮನಸ್ಸಿನಿಂದ ಎಲ್ಲ ಪೀಳಿಗೆಗಳ ಪ್ರೀತಿ, ಗೌರವಗಳನ್ನು ಗೆದ್ದುಕೊಂಡ ಹಿರಿಯರಾಗಿದ್ದಾರೆ. ಕನ್ನಡದಲ್ಲಿ ಲಲಿತಪ್ರಬಂಧಕ್ಕೆ ವಿಶಿಷ್ಟ ರೂಪ ಕೊಟ್ಟು, ಅದರ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅವರು ಲಲಿತ ಪ್ರಬಂಧದ ಸಾಮ್ರಾಟರಾಗಿದ್ದಾರೆ.

₹330   ₹294

ಸರಸ | Sarasa

#

₹250   ₹223

ಸರ್ ಎಂ ವಿಶ್ವೇಶ್ವರಯ್ಯ | Sir M vishveshwariah

ಡಾ ಗಜಾನನ ಶರ್ಮ

₹195   ₹174