
Category: | ಕನ್ನಡ |
Sub Category: | ಕಾದಂಬರಿ |
Author: | Nagaveni H |
Publisher: | Aharnishi Prakashana |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸುಮಾರು ಎಂಟು ವರ್ಷಗಳಷ್ಟು ದೀರ್ಘವಾದ ಬರವಣಿಗೆಯ ಮೌನದಿಂದ ಹೊರಬಂದಿದ್ದು ಮೊನ್ನೆಯ ಮುಂಗಾರು ಕಾಲಕ್ಕಷ್ಟೆ. ಈ ಕೃತಿಯ ಮೊದಲ ಸಾಲನ್ನು ಬರೆಯತೊಡಗಿದಾಗ ಇದರ ಸ್ವರೂಪವಾಗಲಿ, ದಿಕ್ಕು ದೆಸೆಗಳಾಗಲಿ ನನಗೆ ತಿಳಿದಿರಲಿಲ್ಲ. ಖಾಲಿ ಹಾಳೆಗಳ ಮುಂದೆ ಗಂಟಗಟ್ಟಲೆ ಮೈ ಮರೆತು ಕುಳಿತಾಗ ಸಹಜವಾಗಿಯೇ ಮತ್ತೆ ಎದುರಾದದ್ದು ನನ್ನ ತುಳುನಾಡು. ಅಲ್ಲಿ ಕಂಡ ಚಿತ್ರಗಳು, ಕೇಳಿದ ಕತೆಗಳು, ಕಥಾನಕಗಳು ಸುರುಳಿ ಬಿಚ್ಚುತ್ತಾ ಹೋದವು. ಭೋರ್ಗರೆಯುವ ಕಡಲು, ಮುಖಕ್ಕೆ ಹನಿ ರಾಚಿದ ಮುಂಗಾರು, ಗದ್ದೆ, ತೋಟ, ಬಯಲು, ಗುಡ್ಡ, ನದಿ, ಕೊಳ, ಮೀನು, ಹಕ್ಕಿಗಳೆಲ್ಲ ನನ್ನ ಕಾಡಿಸಿದ್ದವು. (1999 ಮೊದಲ ಮುದ್ರಣಕ್ಕೆ) ಹೆಣ್ಣಿನ ಶೋಕವನ್ನು ಅರ್ಥೈಸಿಕೊಳ್ಳುವಂತಹ 'ಭಾಷೆ' ಮತ್ತು 'ಅರಿವು' ನನ್ನೊಳಗೆ ಮೂಡಿದಾಕ್ಷಣ ನಾನು ಮುಂದಾಗಿದ್ದೇ ಅಮ್ಮ ಹೇಳಿದ ಕತೆಯನ್ನು ರೂಪಾಂತರಗೊಳಿಸಿ ಬರಹರೂಪಕ್ಕಿಳಿಸಲು. ಆದರೆ ಈ ಕತೆ ಬರಹರೂಪಕ್ಕಿಳಿಯಲು ಮಾಡಿದ ತಕರಾರು ಮಾತ್ರ ಅಷ್ಟಿಷ್ಟಲ್ಲ. ಆದರೂ ಹದಿಮೂರು ವರ್ಷಗಳ ಹಿಂದೆ ಈ ಕತೆಯನ್ನು ಬರೆಯಲೇಬೇಕೆಂಬ ಹಠ ನನ್ನಲ್ಲಿ ಹುಟ್ಟಿದ್ದು ಈ ತುಳುವ ನೆಲದ ಕೋಮು ಸಾಮರಸ್ಯವನ್ನು ಮತ್ತಷ್ಟು ಆಳವಾಗಿ ಕದಡುವಂತಹ ಕೋಮುಜ್ವಾಲೆ ಸದ್ಯದಲ್ಲೇ ಇಲ್ಲಿ ಪ್ರಜ್ವಲಿಸಲಿದೆ ಎಂಬ ಮುನ್ಸೂಚನೆ ಸಿಕ್ಕ ಹೊತ್ತಲ್ಲಿ. ಆ ಹೊತ್ತಲ್ಲೇ ನಾನು ಬರೆಯತೊಡಗಿದ ಕತೆಯು ನಿಧಾನಕ್ಕೆ ಕಾದಂಬರಿಯಾಗಿ ರೂಪುಗೊಳ್ಳತೊಡಗಿತ್ತು. (2011 ನಾಲ್ಕನೆ ಮುದ್ರಣಕ್ಕೆ) ನಾನು ಒಂದೇ 'ಗುಟುಕಿಗೆ' ಈ ಕಾದಂಬರಿಯನ್ನು ಬರೆದೆ ಎನ್ನಬಹುದು. ಬರೆದ ನಂತರದಲ್ಲಿ ಒಂದಷ್ಟು ವರ್ಷಗಳ ಕಾಲ 'ಹೊತ್ತು ಹೆತ್ತ ಸಂಭ್ರಮವೇ' ನನ್ನೊಳಗಿತ್ತು. ಆದರೆ ನಂತರದಲ್ಲಿ ನನ್ನೊಳಗೆ ನಿಜಕ್ಕೂ ಹುಟ್ಟಿದ್ದು ಒಂದು ತೆರನಾದ ವಿಷಾದ ಭಾವ. ಯಾಕಾಗಿ ಬರೆದೆ? ಯಾರಿಗಾಗಿ ಬರೆದೆ ಇದನ್ನು? ಇಂತಹ ಬರಹಗಳಿಂದ ಎಂದಾದರೂ ಕೋಮು ಜ್ವರಪೀಡಿತರ 'ಮಿಡಿತ' ಬದಲಾಗುವುದು ಸಾಧ್ಯವೇ? ಎಂಬ ಪ್ರಶ್ನೆ ಅಂದು ಮಾತ್ರವಲ್ಲ. ಈ ಕ್ಷಣದಲ್ಲೂ ನನ್ನಲ್ಲಿ ಇದೆ. ನನ್ನ ಹಿರೀಕರ ಕಾಲದಿಂದಲೂ ಸೌಹಾರ್ದಕ್ಕೆ ಹೆಸರಾಗಿದ್ದ ಈ ತುಳುನಾಡ ಸೆರಗು ಇತ್ತೀಚೆಗಂತೂ ಸಂಪೂರ್ಣವಾಗಿ ಕೋಮು ಧ್ರುವೀಕರಣದ ಪ್ರಯೋಗ ಶಾಲೆಯಾಗಿ, ಮತೀಯವಾದಿಗಳಿಂದ ತುಂಬಿ ತುಳುಕುತ್ತಿದ್ದು, ಅವರ ವಿಲಕ್ಷಣವಾದ ಅಧಿಕಾರದಾಟದಿಂದ ಹಲವು ಅಮಾಯಕ ಜೀವಗಳು ಈ ಕೋಮು ದ್ವೇಷಕ್ಕೆ ಬಲಿಯಾಗುತ್ತಾ ಇವೆ. (2025 ಆರನೇ ಮುದ್ರಣಕ್ಕೆ)
Nagaveni H |
0 average based on 0 reviews.