| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ವಿನಾಯಕ ಅರಳಸುರಳಿ | Vinayaka Aaralasurali |
| Publisher: | ಸಸಿ ಪ್ರಕಾಶನ | sasi prakashana |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9788198 921079 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನೆನ್ನೆ... ಇಂದು. ನಡುವೆ ಜಾರಿದ್ದು ಕೆಲವೇ ಗಂಟೆಗಳು. ಅಷ್ಟರಲ್ಲೇ ಅದೆಷ್ಟು ಬದಲಾವಣೆಗಳು! ಇಲ್ಲೇ ಕುಳಿತಿದ್ದ, ಕೈಗೆಟಕುವಷ್ಟು ಸಮೀಪದಲ್ಲಿದ್ದ, ಕೂಗಿದರೆ ಓ ಎನ್ನುತ್ತಿದ್ದ, ತುತ್ತುಣಿಸುವಂತೆ ಬಾಯ್ದೆರೆಯುತ್ತಿದ್ದ, ಅಪ್ಪಿ ಮುತ್ತಿಡಬಹುದಾಗಿದ್ದ, ಮಡಿಲಿಗೊರಗಿ ನಿದ್ರಿಸಬಹುದಾಗಿದ್ದ, ಯಾವಾಗ ಬೇಕಾದರೂ ಪ್ರೀತಿಗೆ, ಮಮತೆಗೆ, ಮುನಿಸಿಗೆ ದಕ್ಕುತ್ತಿದ್ದ ಅತ್ಯಾಪ್ತ ಜೀವವೊಂದು ಅಷ್ಟರಲ್ಲೇ ಎದ್ದು ಹೋಗಿ ಬಿಟ್ಟಿತಲ್ಲಾ? ನೆನ್ನೆಯೊಂದು ಕಳೆದು ಇಂದು ಬರುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಕುರ್ಚಿಯೊಂದು ಶಾಶ್ವತವಾಗಿ ಖಾಲಿಯೇ ಆಯಿತಲ್ಲಾ? ಮಾತಾಡುತ್ತಾ ಆಡುತ್ತಾ ನಡೆದ ಅದೇ ದಾರಿ.. ಜೊತೆಗೆ ನಗುತ್ತಾ ಹೊರಳಿದ ಅದೇ ತಿರುವು.. ಪಕ್ಕ ನಡೆಯುತ್ತಿದ್ದ ಆ ಜೀವ ಮರೆಯಾದ ಮರುಕ್ಷಣವೇ ಎಲ್ಲವೂ ಇಷ್ಟೊಂದು ಗಾವುದ ಗಾವುದವಾಗಿಬಿಟ್ಟಿತು ಹೇಗೆ? ಆಡುತ್ತಿದ್ದ ಸವಿ ಮಾತೊಂದು ಅರ್ಧದಲ್ಲೇ ಇರುವಾಗ, ಜೊತೆ ಕುಳಿತಿದ್ದ ಕುರ್ಚಿಯಿನ್ನೂ ಅಲ್ಲೇ ನಿಂತಿರುವಾಗ, ಎದುರು ನಿಂತ ರೂಪ ಬಿಂಬವಾಗಿ ಕಣ್ಣಲ್ಲೇ ಕದಲುತ್ತಿರುವಂತೆಯೇ ಅದೆಲ್ಲಿಗೆ ಹೋಗಿಬಿಟ್ಟೆ ಜೀವವೇ? ಪ್ರತಿ ಕ್ಷಣವೂ ಕಾಡುವ ನೆನಪನ್ನುಳಿಸಿ ನೀ ನಡೆದ ದಾರಿ ಅಷ್ಟೊಂದು ದೂರವೇಕೆ? ದಾರಿಗಳೇ ಇಲ್ಲದ, ಹಿಂಬಾಲಿಸಲೇ ಆಗದ ಗಮ್ಯದತ್ತ ಅದೇಕೆ ನಡೆದು ಹೋದೆ? ಹೇಳು.. ಅದ್ಯಾವ ಬಸ್ಸು ನಿನ್ನೂರಿನ ನಿಲ್ದಾಣವ ಹಾಯುತ್ತದೆ? ಅದ್ಯಾವ ಪುಷ್ಪಕ ವಿಮಾನ ನಿನ್ನ ಸಮೀಪ ಹಾರುತ್ತದೆ? ಅದ್ಯಾವ ರೈಲು ನೀನೀಗ ಇರುವ ನಿಲ್ದಾಣದೊಳಕ್ಕೆ ಸುಳಿಯುತ್ತದೆ? ನಿನ್ನನ್ನು ಮತ್ತೆ ಸೇರಲು ಯಾವ ಸ್ಟೇಷನ್ನಿನಲ್ಲಿ ಹತ್ತಲಿ? ಯಾವ ತಿರುವಿನಲ್ಲಿ ಇಳಿಯಲಿ? ಯಾವ ಕಾಲುದಾರಿಯತ್ತ ಹೊರಳಲಿ? ಯಾವ ಅಪರಿಚಿತ ಬಾಗಿಲನ್ನು ಬಡಿಯಲಿ?
ಒಮ್ಮೆ ಬಂದುಬಿಡು...
ವಿನಾಯಕ ಅರಳಸುರಳಿ | Vinayaka Aaralasurali |
|
ವಿನಾಯಕ ಆರಳಸುರಳಿ |
0 average based on 0 reviews.