| Category: | ಕನ್ನಡ |
| Sub Category: | ಕಾದಂಬರಿ |
| Author: | ರಾಘವೇಂದ್ರ ಪ್ರಸನ್ನ | Raghavendra Prasanna |
| Publisher: | ಸಂವಹನ | Samvahana |
| Language: | Kannada |
| Number of pages : | 392 |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
"ದೆಹಲಿಯ ಸಿಂಹಾಸನವೆಂಬುದು ಒಂದು ರೀತಿ ಎರಡು ಅಲುಗಿನ ಕತ್ತಿ ಇದ್ದಂತೆ. ಈ ಹಿಂದಿನಿಂದಲೂ ಧೈರ್ಯ ಮತ್ತು ಬುದ್ದಿವಂತಿಕೆಯನ್ನು ಬಳಸಿ ಈ ಕತ್ತಿಯನ್ನು ಅಳುತ್ತಾ ಬರಲಾಗಿದೆ. ಸಿಂಹಾಸನವನ್ನು ವಶಪಡಿಸಿಕೊಂಡ ಹಲವು ಸುಲ್ತಾನರು ಆ ನಂತರದಲ್ಲಿ ಅದನ್ನು ನಿಭಾಯಿಸಲಾರದೇ ಪ್ರಾಣ ಕಳೆದುಕೊಂಡಿದ್ದಾರೆ. ಈಗ ದೆಹಲಿಯ ಸಿಂಹಾಸನವು ಹಿಂದೆಂದಿಗಿಂತಲೂ ಹೆಚ್ಚು ವಿಶಾಲವಾಗಿದೆ. ಬಲಿಷ್ಠವಾಗಿದೆ. ಹಾಗೆಯೇ ಸಮಸ್ಯೆಗಳು ಹೆಚ್ಚಾಗಿಯೇ ಇವೆ. ಹೊರಗಿನಿಂದ ನೋಡಿದವರಿಗೆ ಸುಲ್ತಾನರ ವೈಭವಗಳು ಮಾತ್ರ ಗೋಚರವಾಗುತ್ತವೆ. ಆದರೆ ಅದರ ಮೇಲೆ ಕುಳಿತವನಿಗೆ ಮಾತ್ರ ಗೊತ್ತು ಅದೆಂತಹ ಮುಳ್ಳಿನ ಹಾಸಿಗೆ ಎಂಬುದು. ಅಲ್ಲಾವುದ್ದೀನರು ಈ ಸಿಂಹಾಸನವನ್ನು ಏರಿದ ನಂತರ ಯಶಸ್ವಿಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸಿದ್ದರು. ಆದರೆ ಕೊನೆಗೆ ಅವರ ಸ್ಥಿತಿ ಏನಾಯಿತು ಎಂಬುದನ್ನು ಎಲ್ಲರೂ ಬಲ್ಲರು. ಅಷ್ಟು ಬಲಿಷ್ಠರಾಗಿದ್ದ ಅವರು ಮರಣ ಹೊಂದಿದ ಕೇವಲ ನಾಲಕ್ಕು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅವರ ಉತ್ತರಾಧಿಕಾರಿಗಳು ಎನಿಸಿದ ಎಲ್ಲರೂ ನಾಶವಾಗಿ ಹೋದರು. ಕೊನೆಗೆ ಅವರ ವಂಶವೇ ನಿರ್ನಾಮವಾಗಿ ಹೋಯಿತು. ಅದೇಕೆ ಹಾಗಾಯಿತು? ಅದಾದ ನಂತರ ಸಿಂಹಾಸನದ ಆಸೆಗಾಗಿ ಏನೆಲ್ಲಾ ಆಗಿ ಹೋಯಿತು ಎಂಬುದನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಸದಾ ಯಾರಾದರೊಬ್ಬ ಸಮರ್ಥ ವ್ಯಕ್ತಿ ಮತ್ತು ಗುಂಪುಗಳು ದೆಹಲಿಯ ಸಿಂಹಾಸನವನ್ನು ವಶಪಡಿಸಿಕೊಳ್ಳುವತ್ತ ಹೋರಾಡುತ್ತಲೇ ಇರುವುದನ್ನು ನಾವು ನೀವೆಲ್ಲರೂ ಬಲ್ಲೆವು. ನನ್ನ ತಂದೆ ಘಿಯಾಸುದ್ದೀನರು ಇದನ್ನು ಏರಲು ಏನೇನೆಲ್ಲಾ ಶಕ್ತಿ ವ್ಯಯ ಮಾಡಿದರು ಎಂಬುದನ್ನು ಅವರ ಜೊತೆಗಿದ್ದು ನಾನು ಕಣ್ಣಾರೆ ಕಂಡಿದ್ದೇನೆ. ಈಗ ಅವರ ಪತನವಾಗಿದೆ. ಸಿಂಹಾಸನದ ಆಸೆಗಾಗಿ ಸಾಮ್ರಾಜ್ಯದಾದ್ಯಂತ ಆಸೆಭರಿತ ಕಣ್ಣುಗಳಿಂದ ನೋಡುತ್ತಿರುವ ವ್ಯಕ್ತಿಗಳ ಬಗ್ಗೆ ನನಗೆ ಅರಿವಿದೆ, ಅವರ ಕುತಂತ್ರಗಳ ಅರಿವೂ ಇದೆ. ಹಾಗಾಗಿ ಇಷ್ಟು ವಿಶಾಲ ಸಾಮ್ರಾಜ್ಯದ ಆಡಳಿತದ ಹಿತದೃಷ್ಟಿಯಿಂದ ಕೆಲವೊಮ್ಮೆ ಕಠಿಣ ನಿಲುವುಗಳಿಗೆ ಸುಲ್ತಾನನಾದವನು ಬದ್ಧನಾಗಿರಬೇಕಾಗುತ್ತದೆ. ಇಲ್ಲಿ ದೆಹಲಿಯ ಸುಲ್ತಾನ ಎಂಬ ಪದವಿಯು ಶಾಶ್ವತವಾಗಿ ನಿಲ್ಲುತ್ತದೆಯೇ ವಿನಃ ಪದವಿಗೇರಿದ ವ್ಯಕ್ತಿಯಲ್ಲ. ಆದ್ದರಿಂದ ನ್ಯಾಯದ ದೃಷ್ಟಿಯಲ್ಲಿ ಸುಲ್ತಾನನಾಗಲೀ ಸಾಮಾನ್ಯನಾಗಲಿ ಅಥವಾ ಸಂಬಂಧಿಯೇ ಆಗಲಿ ಎಲ್ಲವೂ ಒಂದೇ.
ಮಹಮ್ಮದ್ ಬಿನ್ ತುಘಲಕ್
ರಾಘವೇಂದ್ರ ಪ್ರಸನ್ನ | Raghavendra Prasanna |
0 average based on 0 reviews.