ರಾಜಿರಹಿತ ಮನೋಭಾವದಲ್ಲಿ ಅಪಾರ ಆಶಾವಾದ, ಜೀವನೋತ್ಸಾಹ, ಆದರ್ಶವಾದಿ ನೆಲೆಯಲ್ಲಿ ಬರೆದ ಬರಹಗಳಿವು. ಲೇಖಕರು ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 2006ರ ಇಸವಿಯ ಸ೦ದರ್ಭದಲ್ಲಿ ಕರ್ನಾಟಕದಲ್ಲಿ ಆರಂಭಿಸಿದ "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಗೆ ಬರೆದ ಈ ಸಂಪುಟ-1 ಪುಸ್ತಕದಲ್ಲಿಯ ಲೇಖನಗಳಲ್ಲಿ ಕರ್ನಾಟಕ, ಭಾರತ, ಅಮೆರಿಕದ ತನಕ ವ್ಯಾಪಿಸಿಕೊಂಡ ರಾಜಕಾರಣವಿದೆ, ಸಾಮಾಜಿಕ ಸಂದರ್ಭಗಳ ವಿಶ್ಲೇಷಣೆ ಇದೆ, ಜನಬದುಕಿನ ಮೇಲೆ ವಿಜ್ಞಾನ-ತಂತ್ರಜ್ಞಾನಗಳ ನೂತನ ಆವಿಷ್ಕಾರ ಮತ್ತು ಅನ್ವಯಗಳ ಹಲವು ವಿವರಗಳಿವೆ, ಸಾಹಿತ್ಯ, ಸಿನಿಮಾ, ಕ್ರೀಡಾ ಸಂಬಂಧಿ ಲೇಖನಗಳಿವೆ. ಸ್ಥಳೀಯ ಮತ್ತು ಜಾಗತಿಕ ಆರ್ಥಿಕ ವಿದ್ಯಮಾನಗಳೂ ಚರ್ಚಿಸಲ್ಪಟ್ಟಿವೆ. ಪ್ರಜಾಪ್ರಭುತ್ವ ಮತ್ತು ಸಂವಾದದ ಮಹತ್ವವನ್ನು ಒಮ್ಮೊಮ್ಮೆ suttle ಆಗಿ, ಒಮ್ಮೊಮ್ಮೆ ಗಟ್ಟಿಯಾಗಿ ಹೇಳಲಾಗಿದೆ. ಹಲವು ವ್ಯಕ್ತಿಚಿತ್ರಗಳ ಮೂಲಕ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಪ್ರತಿಪಾದಿಸಲಾಗಿದೆ.
ಇಂಗ್ಲಿಷ್ ಲೇಖಕ ಕೆಂಟ್ ಎಂ. ಕೀತ್ ಆಂಗ್ಲ ಭಾಷೆಯಲ್ಲಿ ‘ಎನಿವೇ’ ಪುಸ್ತಕ ಬರೆದಿರುವ ಅನುಭವ ಕಥನವಿದು.
ಇಂಗ್ಲಿಷ್ ಲೇಖಕ ಕೆಂಟ್ ಎಂ. ಕೀತ್ ಆಂಗ್ಲ ಭಾಷೆಯಲ್ಲಿ ‘ಎನಿವೇ’ ಪುಸ್ತಕ ಬರೆದಿರುವ ಅನುಭವ ಕಥನವಿದು. ಇದರಲ್ಲಿ ಸಮಾಜದ ಸಾಕಷ್ಟು ಸಾಧಕ-ಬಾಧಕಗಳನ್ನು ಕಂಡಿರುವ ಲೇಖಕ ಒಬ್ಬ ವ್ಯಕ್ತಿಯಾಗಿ ನಾವು ಹೇಗೆ ನಡೆದುಕೊಂಡರೆ ಚೆಂದ ಎಂಬುದನ್ನು ಹೇಳುತ್ತಾರೆ. ನಮ್ಮನ್ನು ನಿಂದಿಸುವವರು, ಕೆಟ್ಟದ್ದು ಮಾಡುವವರು, ತೊಂದರೆ ಕೊಡುವವರು ಇದ್ದೇ ಇರುತ್ತಾರೆ. ಆದರೆ ಇವರಿಗೆ ನಾವು ನಮ್ಮ ಒಳ್ಳೆತನವನ್ನೇ ತೋರಿಸುತ್ತಲೇ ಇರಬೇಕು. ನೆಗೆಟಿವ್ ಅಂಶಗಳನ್ನು ಬಿಟ್ಟು ಸದಾ ಪಾಸಿಟಿವ್ ಆಲೋಚನೆಗಳನ್ನು ಮಾಡುತ್ತಾ ನಮ್ಮ ಮಾನಸಿಕ, ದೈಹಿಕ ಸ್ಥಿತಿಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕು ಎಂಬುದೇ ಈ ಪುಸ್ತಕದ ಸಂದೇಶವಾಗಿದೆ. ಒಟ್ಟಾರೆ ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಈ ಪುಸ್ತಕ
ಆರೋಗ್ಯಪೂರ್ಣ ದೀರ್ಘಾಯುಷ್ಯದ ಬಯಕೆ ನಿಮಗಿದೆಯೇ? ಪ್ರಾಣಾಯಾಮ, ಯೋಗಾಸನಗಳನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಎಂದು ತಿಳಿಯಬೇಕೆ? ಯಾವುದೇ ತರಗತಿಗಳಿಗೆ ಅಥವಾ ಶಿಬಿರಗಳಿಗೆ ಹೋಗದೆ ಧ್ಯಾನವನ್ನು ಮನೆಯಲ್ಲಿಯೇ ಅಭ್ಯಾಸ ಮಾಡಲು ಸರಳಸೂತ್ರಗಳು ಬೇಕೆ? ಯಾವ ರೀತಿಯ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿದುಕೊಳ್ಳಬೇಕೆ? ಉತ್ತಮ ಆರೋಗ್ಯಕ್ಕಾಗಿ ನೆಮ್ಮದಿ ಮತ್ತು ಮನಃಶಾಂತಿ ಎಷ್ಟು ಮುಖ್ಯ ಮತ್ತು ಅದಕ್ಕಾಗಿ ಯಾವೆಲ್ಲಾ ಜೀವನ ಸಿದ್ಧಾಂತಗಳನ್ನು ಮತ್ತು ಜೀವನಶೈಲಿಯನ್ನು ರೂಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕಿದೆಯೇ? ಹಾಗಿದ್ದಲ್ಲಿ, ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಮತ್ತು ಬಯಕೆಗಳಿಗೆ "ಸಹಜ ಜೀವನ"ದಲ್ಲಿ ಉತ್ತರಗಳಿವೆ, ಸುಲಭ ಮಾರ್ಗೋಪಾಯಗಳಿವೆ. ತಮ್ಮ ಹಲವಾರು ವರ್ಷಗಳ ಪ್ರಯೋಗ, ಅಭ್ಯಾಸ, ಓದು, ಅಧ್ಯಯನಗಳ ಸ್ವಾನುಭವದಿಂದ, ವೈಚಾರಿಕ ಚಿಂತನೆಗಳನ್ನಾಧರಿಸಿ ಮತ್ತು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಅರಿವಿನ ಬೆಳಕಿನಲ್ಲಿ ಲೇಖಕ ಮತ್ತು ರಾಜಕಾರಣಿ ರವಿ ಕೃಷ್ಣಾರೆಡ್ಡಿ ಸರಳಗನ್ನಡದಲ್ಲಿ ಬರೆದಿರುವ ಕೈಪಿಡಿ - "ಸಹಜ ಜೀವನ".
Nil