| Category: | ಕನ್ನಡ |
| Sub Category: | ಕಾದಂಬರಿ |
| Author: | ದಿನೇಶ ಹುಲಿಮನೆ | Dinesha Hulimane |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 9789355 926777 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಲೇಖಕರೇ ಹೇಳುವಂತೆ, ಅಲಿಖಿತವಾಗಿ ಜಾರಿಗೆ ಬಂದ ಜಾತಿ ಪದ್ದತಿಯ ಆಳ ಮತ್ತು ಅಗಲ ನಿಬ್ಬೆರಗಾಗಿಸುವಂತದ್ದು. ಸಾಮಾನ್ಯರು ಇದನ್ನು ಬದುಕಿನ 'ಚೌಕಟ್ಟು' ಎಂದು ಭಾವಿಸಿದರೆ. ಕೆಲವರು ಇದನ್ನೇ ಬೇಲಿ'ಯಾಗಿಸಿಕೊಂಡು ಮುಗ್ಧ ಮನಸ್ಸುಗಳನ್ನು ಬಂಧಿಸಿದರು. ಪ್ರೀತಿ, ಸಂಬಂಧಗಳನ್ನೂ ಜಾತಿಯ ಆಧಾರದ ಮೇಲೆ ವ್ಯಾಖ್ಯಾನಿಸಲಾಯಿತು. ७ ಚೌಕಟ್ಟಿನಿಂದ ಆಚೆ ಬರುವುದಾಗಲಿ ಅಥವಾ ಹೊರಗಿನ ಪ್ರಪಂಚವನ್ನು ಕಣ್ಣೆತ್ತಿ ನೋಡುವುದಾಗಲಿ ಅವರಿಗೆ ಸಾಧ್ಯವಾಗಲಿಲ್ಲ. ಪಾತರಗಿತ್ತಿಯಂತೆ ಹಾರಲು ಪ್ರಯತ್ನಿಸಿದ ಜೀವಗಳು ಇವರಿಗೆ 'ದಾರಿ ತಪ್ಪಿದವರಂತೆ' ಕಂಡವು. ಇಂತಹ ಸಂಪ್ರದಾಯದ ಜೈಲಿನಲ್ಲಿ ತಮ್ಮನ್ನು ತಾವೇ ವೈಚಾರಿಕವಾಗಿ ಬಂಧಿಸಿಕೊಂಡವರ ಪ್ರತಿನಿಧಿಯೇ 'ಕಡೇಮನೆ ಗೋಪಾಲ'.
ರೆಕ್ಕೆ ಬಿಚ್ಚಿ ಹಾರಲು ಬಯಸುವ ಮಗಳು, ಅದನ್ನು ಒಪ್ಪದ ಗೋಪಾಲನ ಸಂಪ್ರದಾಯಬದ್ಧ ಮನಸ್ಸು ಇವರಿಬ್ಬರ ನಡುವಿನ ಸಂಘರ್ಷವೇ ಈ ಕಾದಂಬರಿಯ ಜೀವಾಳ, ಗೋಪಾಲನಂತಹ ಅಳುಕು ಮನಸ್ಸುಗಳನ್ನು ಬದಲಿಸಲು ಪ್ರಯತ್ನಿಸುವ ಮಾನವೀಯ ಜೀವಗಳು, ತಂದೆ-ಮಗಳ ವಾತ್ಸಲ್ಯ, ಅಗಲಿಕೆಯ ನೋವು ಮತ್ತು ಬದುಕಿನ ಅನಿರೀಕ್ಷಿತ ತಿರುವುಗಳು ಕಥೆಯನ್ನು ಕುತೂಹಲಕಾರಿಯಾಗಿ ಕೊಂಡೊಯ್ಯುತ್ತವೆ. ಮಲೆನಾಡಿನ ಸೊಗಡಿನ ಭಾಷೆ. ಅಲ್ಲಿನ ಪರಿಸರ ಕಥಾವಸ್ತುವಿಗೆ ಪೂರಕವಾಗಿ ಮೂಡಿಬಂದಿವೆ.
ಗೋಪಾಲ ತನ್ನ ಹಠಮಾರಿ ಧೋರಣೆ ಬದಲಿಸಿಕೊಂಡನೇ? ಅಥವಾ ತಂದೆಗಾಗಿ ಮಗಳು ತನ್ನ ಆಸೆಗಳನ್ನು ಬಲಿ ಕೊಟ್ಟಳೇ? ಸಮಾಜದ ಅಂಕುಡೊಂಕುಗಳನ್ನು ಮತ್ತು ಮಾನವೀಯ ಸಂಬಂಧಗಳ ತಲ್ಲಣಗಳನ್ನು ಅರ್ಥೈಸಿಕೊಳ್ಳಲು ಈ ಕಾದಂಬರಿಯನ್ನು ನೀವು ಓದುತ್ತೀರಿ ಎಂಬ ನಂಬಿಕೆ ನನಗಿದೆ.
ಅನಂತ ಕುಣಿಗಲ್
ಪ್ರಕಾಶಕ, ಅವ್ವ ಪುಸ್ತಕಾಲಯ
ದಿನೇಶ ಹುಲಿಮನೆ | Dinesha Hulimane |
0 average based on 0 reviews.