nil
#
NA
ಕಥೆಗಳೆಂದರೇನು? ನನ್ನ ಪ್ರಕಾರ ಅನುಭವದ ಹಗೇವಿನಲ್ಲಿ ಕಾಲ್ಪನಿಕತೆಯ ಲೇಪವನ್ನು ಹೊತ್ತು ಹುಟ್ಟುವ ಬರಹಗಳೇ ಕಥೆಗಳು. ಹಾಗೇ ಹುಟ್ಟಬೇಕು ಕಥೆಗಳು, ಅನುಭವಿಸಿ ಬರೆಯದ ಹೊರತು, ಅಸ್ವಾದಿಸಿಕೊಂಡು ಓದಲಾಗುವುದಿಲ್ಲ. ಈ ಇಡೀ ಪುಸ್ತಕದಲ್ಲಿ ಓದುಗನಿಗೊಂದು ಅಂತಹ ಆಸ್ವಾದ ದೊರೆಯುವುದು ಖಂಡಿತ. ಇಲ್ಲಿ ಕಾಗಕ್ಕ-ಗುಬ್ಬಕ್ಕನ ಕಥೆಗಳಿಲ್ಲ. ಇಲ್ಲಿರುವುದೆಲ್ಲ ನಮ್ಮ-ನಿಮ್ಮ ಕಥೆಗಳೇ. ನಾವುಗಳು ಹಿಂದೆಂದೋ ನೋಡಿದ್ದೋ, ಕೇಳಿದ್ದೋ, ಅನುಭವಿಸಿದ ಅನುಭವಗಳೋ ಕಥೆಗಳಾಗಿ ನಮ್ಮ ಮುಂದೆ ನಿಂತಂತೆ ಭಾಸವಾಗುತ್ತದೆ. ಮಲೆನಾಡ ಸೊಗಡಿರುವ ಕಥೆಗಳು, ಬಯಲು ಸೀಮೆಗೂ ಸಲ್ಲುತ್ತವೆ. ಇಲ್ಲಿರುವ ಹೆಂಗಳೆಯರ ನೋವುಗಳು, ಗಂಡಸರನ್ನೂ ಕಾಡುತ್ತವೆ. ಕೆಲವೊಂದು ಕಥೆಗಳು ತರ್ಕಕ್ಕೆ ದೂಡಿದರೆ, ಇನ್ನಷ್ಟು ಕಥೆಗಳು ಮನಸ್ಸನ್ನು ಆದ್ರ್ರಗೊಳಿಸುತ್ತವೆ. ನನ್ನ ಪ್ರಕಾರ ಈ ಪುಸ್ತಕವನ್ನ ಒಂದೇ ಗುಕ್ಕಿನಲ್ಲಿ ಓದಲಾಗುವುದಿಲ್ಲ. ಅದಕ್ಕೆ ಕಾರಣ ಇಲ್ಲಿ ಪ್ರಸ್ತಾಪವಾಗಿರುವ ವಿಷಯಗಳು. ಒಂದು ಕಥೆಯ ವಿಷಯವನ್ನ ಅರಗಿಸಿಕೊಂಡು ಮುಂದಿನ ವಿಷಯಕ್ಕೆ ತಮ್ಮನ್ನ ತಾವು ತೆರೆದುಕೊಳ್ಳಲು ಖಂಡಿತ ಓದುಗನಿಗೆ ಸಮಯಬೇಕು. ಅಷ್ಟು ಗಾಢವಾಗಿವೆ ವಿಷಯಗಳು. ಉಳಿದಂತೆ, ಓದುಗರಿಗೆ ಶ್ರೀಮತಿ ಶುಭಶ್ರೀ ಭಟ್ ಹೊಸಬರಲ್ಲ. ಅವರಿಗೆ ಭಾಷೆಯ ಮೇಲೆ ಮತ್ತು ಬರಹದ ಮೇಲಿರುವ ಅದ್ಭುತ ಹಿಡಿತದ ಬಗ್ಗೆ ಓದುಗರಿಗೆ ತಿಳಿದೇ ಇದೆ. ಹಾಗಾಗಿ ಅದರ ಬಗ್ಗೆ ಹೆಚ್ಚೇನೂ ಹೇಳದೆ, ಮತ್ತೊಂದು ಭಾವಯಾನಕ್ಕೆ ತಯಾರಾಗಿ ಎಂದಷ್ಟೇ ಹೇಳಬಲ್ಲೆ. ಕಥೆಗಳು ನಿಜಕ್ಕೂ ಅದ್ಭುತವಾಗಿ ಮೂಡಿಬಂದಿವೆ. ಓದಿ ನೋಡಿ ಒಮ್ಮೆ... ಹ್ಯಾಪಿ ರೀಡಿಂಗ್. - ಅರ್ಜುನ್ ದೇವಾಲದಕೆರೆ
ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಪ್ರತಿಮಾ ವಿಧಾನ ಭಿನ್ನ, ಸಂಜ್ಞಾ ಕ್ರಮವೂ ಭಿನ್ನ. ಸಾಹಿತ್ಯದ ಮೂಲಧಾತುವಾದ ಶಬ್ದವು ಅಮೂರ್ತವಾಗಿರುತ್ತದೆ. ಈ ಅಮೂರ್ತ ಧಾತುವನ್ನು ಇಟ್ಟುಕೊಂಡು ಸಾಹಿತಿ ಮೂರ್ತ ಬಿಂಬವನ್ನು ಕಟ್ಟುತ್ತಿರುತ್ತಾನೆ. ಸಿನಿಮಾದಲ್ಲಿ ಮೂಲಧಾತುವಾದ ಬಿಂಬವೇ ಮೂರ್ತ. ನಿರ್ದೇಶಕ ಅದರ ನೆರವಿನಿಂದ ಕೃತಿ ಕಟ್ಟುತ್ತಿರುವಾಗ ಮೂರ್ತವನ್ನು ಮೀರಿ ಅಮೂರ್ತವನ್ನು ತರಬಲ್ಲ ಬಿಂಬದ ಹುಡುಕಾಟದಲ್ಲಿರುತ್ತಾನೆ. ಅಂದರೆ ಅಮೂರ್ತದಿಂದ ಮೂರ್ತ ಬಿಂಬ ಕಟ್ಟುವ ಸಾಹಿತಿಯ ನುಡಿಗಟ್ಟು ಮೂರ್ತದಿಂದ ಅಮೂರ್ತಕ್ಕೆ ಜಿಗಿಯಬಲ್ಲ ಬಿಂಬಕ್ಕೆ ಹುಡುಕುವ ಸಿನಿಮಾ ನಿರ್ದೇಶಕನಿಗೆ ಊರುಗೋಲಾಗಲಾರದು. 2000ದ ಸುಮಾರಿಗೆ ಸಿನಿಮಾ ವ್ಯಾಖ್ಯಾನದಲ್ಲಿ ಬಹಳ ಬದಲಾವಣೆ ಆಗಿತ್ತು. ಸಿನಿಮಾ ವಿಶ್ಲೇಷಣೆಯಲ್ಲಿ 'ಬಿಂಬ'ದ ಜೊತೆಗೆ 'ಬಿಂಬನ'ವನ್ನೂ ಒಂದು ಮೌಲ್ಯವಾಗಿ ಪರಿಗಣಿಸತೊಡಗಿದರು. ತೆರೆಯ ಮೇಲೆ ಕಾಣುವುದು ಬಿಂಬಗಳಾದರೆ ಅವನ್ನು ಸೃಷ್ಟಿ ಮಾಡಲು ಆಯ್ದುಕೊಳ್ಳುವ ತಾಂತ್ರಿಕ ಅಂಶಗಳು ಬಿಂಬನವನ್ನು ಸೂಚಿಸುತ್ತವೆ. ಸಿನಿಮಾದ ಬಿಂಬಗಳು ಅಲಿಪ್ತವಲ್ಲ, ಅವು ಯಂತ್ರಜನ್ಯವಾದರೂ ಅವನ್ನು ಸೃಷ್ಟಿ ಮಾಡುತ್ತಿರುವವರ ಇಷ್ಟಾನಿಷ್ಟಗಳು ಬಿಂಬಗಳಲ್ಲಿ ಹಾಗೂ ಬಿಂಬನ ಕ್ರಮದಲ್ಲಿ ವ್ಯಕ್ತವಾಗುತ್ತಾ ಇರುತ್ತವೆ. ಟೆಕ್ನಾಲಜಿಯ ಬಗ್ಗೆ ಮನುಷ್ಯನಿಗೆ ಯಾವಾಗಲೂ ಸೆಳೆತ, ಕುತೂಹಲ ಮತ್ತು ಭಯ ಇದ್ದೇ ಇರುತ್ತದೆ. ಸೆಳೆತಕ್ಕೆ ಕಾರಣ ಅದು ತನ್ನ ಬದುಕನ್ನು ಇನ್ನಷ್ಟು ಸುಂದರಮಾಡುತ್ತದೆ ಎನ್ನುವ ಭ್ರಮೆ, ತನಗೆ ಅಸಾಧ್ಯ, ನಿಗೂಢ ಎನಿಸಿದ್ದನ್ನು ಅದು ಸಾಧ್ಯ ಮಾಡಿಕೊಡುತ್ತಾದ್ದರಿಂದ ಕುತೂಹಲ, ಅದರ ಸ್ವರೂಪ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವಾದ್ದರಿಂದ ಭಯ-ಈ ಮೂರು ಭಾವನೆಗಳು ಬೇರೆ ಬೇರೆಯಾಗಿ ಅಥವಾ ಒಟ್ಟಾಗಿಯೇ ಕೂಡಿ ಅನಿರ್ವಚನೀಯ ಅನುಭವವೊಂದನ್ನು ನೀಡುತ್ತಿರುತ್ತದೆ.
ಡಾ. ರೇಷ್ಮಾ ಉಳ್ಳಾಲ್
ಸುರೇಶ್ ಪದ್ಮನಾಭನ್
ಉಮಾ ರಾವ್
ಶ್ರೀಪಾದ ಭಟ್ ಬಿ
Showing 2971 to 3000 of 4981 results