ಕವನ ಸಂಕಲನಗಳ ಅಂಗಳದಲ್ಲಿ ಬಿರಿದ ಮಲ್ಲಿಗೆಯ ಘಮ ಸದಾ ಹೊಸತು. ರೋಹಿತ್ ನಾಗೇಶ್ ಹೆಸರು ಇದೀಗ ಹೊಸ ಸೇರ್ಪಡೆ. ದೂರದರ್ಶನ ಮತ್ತು ಸಿನಿಮಾ ಕಲಾವಿದರಾಗಿ ನಮ್ಮೆಲ್ಲರಿಗೂ ಪರಿಚಿತರಾಗಿರುವ ರೋಹಿತ್ ನಾಗೇಶ್ ಅವರು ಉದ್ಯಮಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸುವ ಗುರುವೂ ಹೌದು. ಸಕಲೇಶಪುರದ ಹತ್ತಿರದ ವಿಶಾಲ ಹುಲ್ಲುಹಾಸು, ಗಗನಚುಂಬಿಸಿದಂತೆ ಕಾಣುವ ಗುಡ್ಡಗಳು, ಹಾಗೂ ಕಾಫಿ ಎಸ್ಟೇಟ್‌ಗಳ ಪರಿಸರದಿಂದ ಹೊರಟ ಅವರ ಬದುಕಿನ ಯಾನ, ಬೆಂಗಳೂರು ಹಾಗೂ ಅನೇಕ ದೇಶಗಳನ್ನು ಸುತ್ತುವ ಮೂಲಕ ಅವರನ್ನು ಗಟ್ಟಿಗೊಳಿಸಿದೆ. ಏಕಕಾಲಕ್ಕೆ ಅವರೊಳಗಿನ ಕವಿಯನ್ನೂ ಸಲಹಿದೆ. ಭಾವನೆಗಳ ಅಭಿವ್ಯಕ್ತಿಗೆ ಕವನ ರಚನೆ ಸರಳ ಮಾರ್ಗ. ಈ ಸರಳ ಮಾರ್ಗದಲ್ಲಿ ತಮ್ಮ ಮಾರ್ಗವನ್ನು ಹುಡುಕಿಕೊಂಡಿರುವ ರೋಹಿತ್ ನಾಗೇಶ್ ಅವರ ಕವಿತೆಗಳಲ್ಲಿ ಬದಲಾದ ಕಾಲ ಮತ್ತು ಗತಿಗಳನ್ನು ದಾಖಲಿಸಿದ ಸಾಲುಗಳಿವೆ. ಮನುಷ್ಯ ಸಹಜ ಭಾವನೆ ಮತ್ತು ಕಲ್ಪನೆಗಳ ಮೊತ್ತವಿದೆ. ರೋಹಿತರ ಈ ಚಾರಣ ಆರೋಹಣವಾಗಲಿ, ಮುಂದಿನ ದಿನಗಳಲ್ಲಿ ಅವರ ಭಾವ ಪ್ರಭಾವಳಿಯೊಳಗೆ ಇನ್ನಷ್ಟು ಅನುಭವ ಮತ್ತು ಕಲ್ಪನೆಗಳು ದಕ್ಕಲಿ, ಆ ಮೂಲಕ ಕಾವ್ಯಪ್ರಭೆ ಹೊರಹೊಮ್ಮಲಿ ಎಂದು ಆಶಿಸಿ ಶುಭಕೋರುತ್ತೇನೆ. ನಿಮ್ಮ ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರ ಸಾಹಿತಿ ನಿರ್ದೇಶಕರು
ಜೀವ ಕಾರುಣ್ಯದ ಕವಿತೆಗಳನ್ನು ಒಳಗೊಂಡ ಈ ಕೃತಿಯನ್ನು ಓದಲು ಹತ್ತು ಹಲವು ಕಾರಣಗಳಿವೆ. ಬಹುತ್ವದ ಆಶಯವನ್ನು ಕಟ್ಟಿಕೊಡುವ ಸಂಕಲನ ಸಮಕಾಲೀನ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.
ಅವರವರ ಅಂತರಂಗದ ಅರಿವು ಅವರವರಿಗೇ ಎಂಬ ಭಾವವಿಲ್ಲಿದೆ. ಚಿಗುರಿದ ಆ ಮರದಲ್ಲಿ ಕುಳಿತು ಒಗರು ಮೆಲ್ಲುವ ಎಲ್ಲ ಕೋಗಿಲೆಗಳೂ ಹಾಡುತ್ತಿರುವುದಿಲ್ಲ ಎಂಬ ಸಾಲು ಮನಮುಟ್ಟುತ್ತದೆ. ಒಂದು ಮರ ಕಡಿದು ಉರುಳಿಸಿದ ಮೇಲೆ ಎಂಬ ಕವಿತೆ ಕವಯಿತ್ರಿಯೊಳಗಿನ ಪ್ರಕೃತಿ ಪ್ರೇಮ ಮತ್ತು ಜೀವನ ಪ್ರೀತಿಗೆ ಸಾಕ್ಷಿಯಂತಿದೆ. ಒಂದು ಮರ ಕಡಿದು ಉರುಳಿಸಿದ ಮೇಲೆ ಚಿಟ್ಟೆ ಪಟಗುಡುವುದಿಲ್ಲ ಹಕ್ಕಿ ಹಾಡುವುದಿಲ್ಲ ಗೂಡು ಮಾಡುವುದಿಲ್ಲ ಅಳಿಲು ಆಡುವುದಿಲ್ಲ ಹೀಗೆ ಒಂದು ಮರದೊಂದಿಗೆ ಅಂತ್ಯವಾಗುವ ಹಲವು ಜೀವಗಳ ಬದುಕಿನ ವ್ಯಥೆ ಇಲ್ಲಿ ವ್ಯಕ್ತವಾಗಿದೆ.
ಸದಾಶಿವ ಸೊರಟೂರು ಅವರ ಬರಹಕ್ಕೆ ಇರುವ ಶಕ್ತಿಗೆ ನಾನು ಬೆರಗಾಗಿದ್ದೇನೆ. ಅವರ ಬರಹಕ್ಕೆ ಮಾಂತ್ರಿಕ ಶಕ್ತಿ ಇದೆ. ಇವರು ಕಥೆ ಬರೆಯಲಿ, ಕವಿತೆ ಬರೆಯಲಿ, ಲೇಖನ ಬರೆಯಲಿ ಎಲ್ಲದರಲ್ಲೂ ಸೊರಟೂರುತನವನ್ನು ಉಳಿಸುತ್ತಾರೆ. ಇವರ ಅಪಾರ ಓದು, ತನ ಓದುಗನನು ಗನನ್ನು ಓದಲು ಇವರು ಪಟ್ಟಿರುವ ಶ್ರಮ ಇವರ ಬರಹಗಳ ಯಶಸ್ಸಿಗೆ ಕಾರಣ. ಈಗ 'ಗಾಯಗೊಂಡ ಸಾಲುಗಳು ಕವನ ಸಂಕಲನದ ಜೊತೆಗೆ ಹಾಜರಾಗಿದ್ದಾರೆ. ಇವರ ಕವಿತೆಗಳಲ್ಲಿ ಕಳೆದು ಹೋಗೋಣ ಬನ್ನಿ ಜಿ. ಎನ್. ಮೋಹನ್
ಕವಿತೆಗೆ ಓದುಗರೇ ಇಲ್ಲವೆನ್ನುವವರ ಮುಂದೆ ಇಲ್ಲಿನ ಕವಿತೆಗಳನ್ನು ನಿಲ್ಲಿಸಬೇಕು. ಯಾಕೆಂದರೆ ಅಬ್ದುಲ್ ರಶೀದ್ ಅವರ ಕವಿತೆಗಳನ್ನು ಓದುವುದೇ ಒಂದು ಪರಮಸುಖ. ಅಷ್ಟು ತೀಕ್ಷ್ಮವಾದ ವೇಗ ಇಲ್ಲಿನ ಕವಿತೆಗಳಿಗಿವೆ. ಇಲ್ಲಿನ ಕವಿತೆಗಳು ಓದುಗನೊಳಗೆ ಹುದುಗಿರುವ ಕವಿಯನ್ನು ಬಡಿದೆಬ್ಬಿಸುವುದಂತು ನಿಜ!
nil
ಆವರಣಗಳಿಂದ ಕಳಚಿಕೊಂಡ ಆತ್ಮದ ಹೊನಲು ಈ ಕವಿತೆಗಳಲ್ಲಿವೆ.. ವಿವರಿಸಲು ಹೋದರೆ ಮಾತು ಸೋಲುತ್ತದೆ. ಈ ಕವಿತೆಗಳನ್ನು ಓದಿದಾಗ, ಒಂದು ವಿಚಿತ್ರವಾದ ನಿರುಮ್ಮಳ ಶಾಂತ ಸ್ಥಿತಿಯ ಅನುಭೂತಿ ಉಂಟಾಗುತ್ತದೆ.
ಗೊತ್ತಿದೆ, ಗೊತ್ತಾಗುತ್ತಿದೆ ಎಂಬ ಭಾಸವನ್ನು ಹುಟ್ಟಿಸುತ್ತಲೆ ಗೊತ್ತಿಲ್ಲದ ವಿಸ್ತಾರದ ಕಡೆಗೆ ಇಲ್ಲಿನ ಕವಿತೆಗಳು ತುಡಿಯುತ್ತವೆ.
ವೀರಲೋಕ ಮತ್ತು ಪ್ರಜಾವಾಣಿ ಸಹೋಯೋಗದ ಈ ʼಕಾವ್ಯಸಂಕ್ರಾಂತಿ ಸ್ಪರ್ಧೆʼಗೆ ಬಂದಿದ್ದ ಸಾವಿರಾರು ಕವಿತೆಗಳಲ್ಲಿ ಈ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಈ ಸಂಕಲನದ ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿದೆ. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಸವಾಲಿನದ್ದಾಗಿತ್ತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ. -ಎಚ್.ಎಸ್.ವೆಂಕಟೇಶಮೂರ್ತಿ, ತೀರ್ಪುಗಾರರು
ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿಯವರು ಹೇಳಿರುವಂತೆ ಬಿಟ್ಟುಬಿಡದೆ ಓದಿಸಿಕೊಳ್ಳುವ ಕಾಡುವ ಗುಣ ಇಲ್ಲಿನ ಕವಿತೆಗಳಿಗೆ ಇವೆ.