nil
ಅದು 1939ನೇ ಇಸವಿ. ದೆಹಲಿಯ ಬ್ರಿಟಿಷ್ ಅಧಿಕಾರಿಯ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಚಲಪತಿಯನ್ನು ಜರ್ಮನಿಯು ಆಕ್ರಮಿಸಿಕೊಂಡಿದ್ದ ಆಸ್ಟ್ರಿಯಾದ ಸಾಲ್ಬರ್ಗ್ ಸ್ವಶ (ಗೂಢಚಾರ)ನಾಗಿ ಕಳುಹಿಸುತ್ತಾನೆ ಆ ಬ್ರಿಟಿಷ್ ಅಧಿಕಾರಿ. ಜರ್ಮನ್ ಸೈನಿಕರ ಗುಟ್ಟುಗಳನ್ನು ದೇಶಪ್ರೇಮಿ ಆಸ್ಟ್ರಿಯನ್ನರಿಗೆ ರವಾನೆ ಮಾಡುತ್ತಿದ್ದ ಚಲಪತಿಯನ್ನು ಸೈನಿಕರು ಹಿಡಿಯಲು ಸನ್ನಾಹ ನಡೆಸುತ್ತಾರೆ. ಆಗ ಜೀವ ಉಳಿಸಿಕೊಳ್ಳಲು ಈ ಸ್ವಶನು ಮಾಡುವ ಸಾಹಸಗಳು... ಕುತೂಹಲಭರಿತ ಕಾದಂಬರಿ....
ಬದುಕಿನ ಸುಖ, ದುಃಖ, ಪ್ರೀತಿ, ನಗು, ಸಂಬಂಧ, ವಿಡಂಬನೆ, ಹಾಸ್ಯ, ಚೋದ್ಯಗಳ ಕೋಸುಂಬರಿಯಂತಿದೆ ಈ ವಿಶಿಷ್ಟ ಕೃತಿ.
ಚಲನಶೀಲತೆ ಈ ಕಾದಂಬರಿಯ ಮುಖ್ಯವಾದ ಪ್ರತಿಮೆ ಎಂದು ನನ್ನ ಭಾವನೆ. ಚಲನೆ ಎಡೆಬಿಡದೆ ನಿರ್ಮಲಾಳನ್ನು ಭಾವಲೋಕದಿಂದ ಭಾವನೆಗಳ ಲೋಕಕ್ಕೆ, ವಾಸ್ತವ ಲೋಕದಿಂದ ಯಥಾರ್ಥವಾದ ಆತ್ಮ ಶುದ್ಧಿಯ ಮತ್ತು ಮುಂದುವರಿದು ಆತ್ಮ ಬೋಧೆಯ ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಹೀಗೆ ಎಲ್ಲೆಲ್ಲಿ ನೋಡಿದರೂ ಬದುಕಿನ ಚಲನಶೀಲತೆಯನ್ನು ಬರವಣಿಗೆಯ ಮೂಲಕ ಸೆರೆ ಹಿಡಿಯಲು ಕಿರಣ್ ಅವರು ಪ್ರಯತ್ನಿಸಿದ್ದಾರೆ. ಡಾ. ಜಿ.ಬಿ. ಹರೀಶ (ಮುನ್ನುಡಿಯಿಂದ)
ಜೀವನೋತ್ಸಾಹ ಮತ್ತು ವಿಷಾದ ಹಾಸುಹೊಕ್ಕಾಗಿರುವ ಸಂಗತಿಗಳನ್ನು ಬಿ.ಯು. ಗೀತಾ ಸೊಗಸಾಗಿ ಹಿಡಿದಿಡಬಲ್ಲ ಕಾದಂಬರಿಕಾರರು ಗೀತಾ ಸಂಭಾಷಣೆಯಲ್ಲೇ ಕತೆ ಕಟ್ಟುತ್ತಾ ಹೋಗುತ್ತಾರೆ. ಜೀವನಾನುಭವ, ಕಲ್ಪನೆ ಮತ್ತು ಬಾಲ್ಯದ ನೆನಪುಗಳೊಂದಿಗೆ ಬರೆಯುವ ಗೀತಾ ಸೃಷ್ಟಿಸುವ ಪಾತ್ರಗಳು ಕೂಡ ಬದುಕಿಗೆ ಅಂಟಿಕೊಂಡಂತೆ ಇರುತ್ತವೆ. ಹಾಲಲ್ಲಿ ಕೆನೆಯಾಗಿ ಕಾದಂಬರಿಯ ಶೀರ್ಷಿಕೆಯಲ್ಲೇ ಗೀತಾ ಅವರಿಗೆ ವಿಶಿಷ್ಟವಾದ ಸಂವೇದನೆ ಮತ್ತು ಕೌಟುಂಬಿಕ ಒಳನೋಟ ಕಾಣಿಸುತ್ತದೆ ಹಾಲಿನ ಕೆನೆಯಾಗಬೇಕಾದರೆ ಹಾಲು ಕುದಿಯಬೇಕು ನಂತರ ತಣಿಯಬೇಕು. ಹೆಣ್ಣಿನ ಬದುಕು ಕೂಡ ಇಂಥದ್ದೇ ಚಕ್ರದಲ್ಲಿ ಸಿಲುಕಿ ಅನುಭವಿಸುವ ಉದ್ದೇಗದ ಅಳಲು, ನಿರಾತಂಕದ ಹುಯಿಲು ಈ ಕತೆಯನ್ನು ಸುಪ್ತವಾಗಿ ಪೊರೆಯುತ್ತದೆ. ಕತೆ, ಕಾದಂಬರಿ, ಸಂಭಾಷಣೆ ಬರೆಯುತ್ತಾ ಬದುಕಿನ ರುಚಿ ಹೆಚ್ಚಿಸುವ ಸಂಗತಿಗಳ ಬಗ್ಗೆ ವಿಶೇಷ ಪ್ರೀತಿಯುಳ್ಳ ಗೀತಾ ಅವರ ಅನೇಕ ಕಾದಂಬರಿಗಳನ್ನು ನಾನು ಸ್ವಯಿಚ್ಛೆಯಿಂದ ಓದಿದ್ದೇವೆ. ಅವರು ಬರೆದ ಧಾರಾವಾಹಿಗಳನ್ನು ನೋಡಿದ್ದೇನೆ. ಅವರು ಅಭಿನಯ ಚತುರರೂ ಹೌದು. ಅವರ ಬಳಗ ಕೂಡ ದೊಡ್ಡದು. ಅವರ ಜೀವನಪ್ರೀತಿ, ಹುರುಪು ಮತ್ತು ಇಂಗಿತಜ್ಞತೆ ಅವರೊಳಗಿರುವ ಕಾದಂಬರಿಕಾರ್ತಿಯ ನೆರವಿಗೆ ಬಂದಿದೆ. ಹೀಗಾಗಿಯೇ ಸರಳವಾಗಿ ಸಾಗುವ ಕಾದಂಬರಿಗಳಲ್ಲೂ ಜೀವಕ್ಕೆ ಹತ್ತಿರವೆನಿಸುವ ಸನ್ನಿವೇಶ, ಮಾತು, ಅಂತರಾರ್ಥಗಳು ಮಿಂಚುವಂತೆ ಗೀತಾ ಬರೆಯುತ್ತಾರೆ. ಈ ಕಾದಂಬರಿಯಲ್ಲಿ ಅವರ ಬಾಲ್ಯ, ತಾರುಣ್ಯ ಮತ್ತು ನಡುವಯಸ್ಸಿನ ವಿವೇಕ ಬೆರೆತಿದೆ. ಹೀಗಾಗಿ ಇದು ಕೆನೆಗಟ್ಟಿದೆ. ಜೋಗಿ
ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಡ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್ನಲ್ಲಿ ನಡೆಸುವ ಹೋರಾಟವಿದೆ. ಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.
Showing 691 to 720 of 731 results