ಇತ್ತೀಚೆಗೆ ಬರೆಯುತ್ತಿರುವ ಕತೆಗಾರರಲ್ಲಿ ನೀವು ಹೆಚ್ಚು ಇಷ್ಟವಾಗುತ್ತೀರಿ. ಮನುಷ್ಯರ ಮನಸ್ಸಿನೊಳಗೆ ನೀವು ಪ್ರವೇಶಿಸುತ್ತಿರುವ ರೀತಿ ನನಗೆ ಆಶ್ಚರ್ಯವನ್ನು ತಂದಿದೆ... ಮನುಷ್ಯನಿಗೆ ಅಂಥಾ ಹೇಳಿಕೊಳ್ಳುವಂತಹಾ ಗುರಿ-ಉದ್ದೇಶಗಳಿರುವುದಿಲ್ಲ. ಆತ ಭಾವ ಜೀವಿಯಾಗಿರುತ್ತಾನೆ. ಭ್ರಮಾಜೀವಿಯಾಗಿರುತ್ತಾನೆ. ಮನುಷ್ಯ ಜಗತ್ತು ಇವುಗಳಿಂದಲೇ ನಿರ್ಮಾಣವಾಗಿದೆ. ಆಗುತ್ತಲೂ ಇರುತ್ತದೆ. ನಿಮ್ಮ 'ನಿರ್ಗಮನ', 'ಒಂದುಹನಿ ಪ್ರೀತಿಗಾಗಿ', 'ಆ ಇನ್ನರ್ಧ', 'ನಾನು ನಾನಲ್ಲ', 'ಕಾಲ', 'ಚಿಟ್ಟೆ' ಹೀಗೆ ಹೆಚ್ಚು ಕಡಿಮೆ ಎಲ್ಲಾ ಕತೆಗಳೂ ನನಗೆ ಬಹಳ ಇಷ್ಟವಾದವು. ಮೇಲಿನ ಕತೆಗಳನ್ನು ಎರಡೆರಡು ಬಾರಿ ಓದಿದೆ. "ಹಾರಲು ಮರೆತ ಚಿಟ್ಟೆಗಳಂತೆ ಹೂವುಗಳು ಬಿದ್ದಿದ್ದವು' ಎಂಬ ವಾಕ್ಯ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ.
ಅಕ್ಷರಸ್ಥರಲ್ಲದ ನಮ್ಮ ಹಳ್ಳಿಯ ಜನ, ಅದರಲ್ಲೂ ಹೆಣ್ಮಕ್ಕಳು ತಮ್ಮ ಬದುಕಿನ, ಕಷ್ಟಗಳ ಮಾತಾಡುವಾಗ "ಅಯ್ಯೋ ಕುಸ್ಮಾ, ನನ್ ಕತೆ ಬೆಳಗಾನ ಯೋಳುದ್ರೂ ಮುಗಿಯಲ್ಲ, ನೀ ಒಂದ್. ಬುಕ್ಕೇ ಬರ್ದ್ ಬುಡಬೋದು" ಅಂತಿರ್ತಾರೆ. ಅವರ ಪಾಲಿಗೆ ಕತೆಗಳೆಂದರೆ ಕಷ್ಟಗಳು. ಅಲ್ಲವೆನ್ನಲಾಗದು. ಅವರೊಳಗೆಲ್ಲಾ ಕತೆ ಇದೆ. ಕತೆ ಎಂಬುದು ಒಳಲೋಕ ಬಗೆದಾಗ ಕಾಣುವ ನೋಟ ಬದುಕು ಕೊಡುವ ಆಘಾತಗಳಿಂದ ಕಾಣುವ ಬೆಳಕನ್ನೂ, ಕಾಣೆಯನ್ನೂ ದೀಪವಾಗಿಸಿ ದಾಟಿಸಲು ಕಂಡುಕೊಂಡ ದಾರಿ. ಕತೆ, ನಮ್ಮನ್ನು ಈ ಜಗತ್ತಿನಲ್ಲಿರುತ್ತಲೇ, ಈ ಜಗತ್ತಿನಿಂದ ಕೆಲಹೊತ್ತಾದರೂ ಬೇರೆಡೆಗೆ ಒಯ್ಯುವ ಮಾಯಾಚಾಪೆ. ಒಂದು ದಿವೌಷಧ. ಕಲೆ ಮತ್ತು ಅಧ್ಯಾತ್ಮ ಎರಡೂ, ಮನುಷ್ಯರ ವೈಯಕ್ತಿಕ ಸಂಕಟಗಳನ್ನು ಲೋಕದ ಪ್ರಶ್ನೆಗಳಾಗಿಸುವ, ಉತ್ತರ ಹುಡುಕುವ, ಸಂಕಟಗಳನ್ನು ಸಾಂತ್ವನವಾಗಿಸುವ ಪ್ರಕ್ರಿಯೆಗಳು. ಅಂತಹ ಕತೆಗಳು ಎಲ್ಲರೊಳಗೂ ಇರುತ್ತವೆ. ಕೆಲವರು ಬರೆಯುತ್ತಾರಷ್ಟೇ!
NA
nil
Showing 121 to 150 of 552 results