| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಭುವನೇಶ್ವರಿ ರು. ಅಂಗಡಿ | Bhuvaneshwari Ru Angadi |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | 9789359330471 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವಿಜ್ಞಾನವು ಜನಸಾಮಾನ್ಯರ ಗಮನವನ್ನು ಕಲೆ, ಸಾಹಿತ್ಯದಂತೆ ಬಲವಾಗಿ ಸೆಳೆಯಲಾರದು. ಹೆದ್ದಾರಿಗೆ ಬಹು ದೂರದಲ್ಲಿರುವ ಹೂವಿನ ನರುಗಂಪಿನಂತೆ ಅವಸರದ ಪಯಣಿಗರಿಗೆ ಅದು ಅವೇದ್ಯ. ಆದರೆ ಇಂದು ನಾವೆಲ್ಲ ವೈಜ್ಞಾನಿಕ ಸಾಧನೆಗಳ ಫಲವನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಜನಸಾಮಾನ್ಯರು ಸಹ ಅವುಗಳ ಕುರಿತು ಸ್ಕೂಲ ತಿಳುವಳಿಕೆಯನ್ನಾದರೂ ಪಡೆಯುವುದು ಅಗತ್ಯ. ಅದು ಅವರನ್ನು ವೈಜ್ಞಾನಿಕವಾಗಿ ಸಾಕ್ಷರರನ್ನಾಗಿ ಮಾಡುತ್ತದೆ. ವೈಜ್ಞಾನಿಕ ថ (scientific literacy) ಪ್ರಸಾರ ಮಾಡುವುದು ಜನಪ್ರಿಯ ವಿಜ್ಞಾನ ಸಾಹಿತ್ಯ.
ಶ್ರೀಮತಿ ಭುವನೇಶ್ವರಿ ಅಂಗಡಿಯವರು ಜನಪ್ರಿಯ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಇದೀಗ ಪಾದಾರ್ಪಣೆ ಮಾಡಿದ್ದಾರೆ. ಅವರೇ ಹೇಳುವಂತೆ ವಿಜ್ಞಾನ ವಿಷಯ ಕುರಿತಾಗಿ ಅವರು ಬರೆದ ಪ್ರಥಮ ಗ್ರಂಥವಿದು. ಓರ್ವ ಕವಿಯತ್ರಿಯಾಗಿ ಈಗಾಗಲೇ ಅವರು ಹೆಸರು ಮಾಡಿದ್ದಾರೆ. ನಾಡಿನ ಪತ್ರಿಕೆಗಳಲ್ಲಿ ಅವರ ಕವನಗಳು ಪ್ರಕಟವಾಗಿವೆ. ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಅವರ ಕಾವ್ಯ ಪ್ರತಿಭೆಗೆ ಹಲವಾರು ಪ್ರಶಸ್ತಿ ಸನ್ಮಾನಗಳು ಸಂದಿವೆ. ಮೂಲತಃ ಅವರು ವಿಜ್ಞಾನ ಪದವೀಧರೆ, ಅದರೊಡನೆ ಕವಿಯತ್ರಿಯೂ ಆದಕಾರಣ ಅವರಿಗೆ ಭಾಷೆಯ ಮೇಲೆ ಪ್ರಭುತ್ವವಿದೆ. ಶೈಲಿ ಸುಂದರವಾಗಿದೆ. ಅವರು ರಚಿಸಿದ "ಕಿಚನ್ ಲ್ಯಾಬೋರೇಟರಿ" ಪುಸ್ತಕದಲ್ಲಿ ಇವೆಲ್ಲ ಮೇಲೈಸಿವೆ. ಲೇಖನದ ಶೀರ್ಷಿಕೆಗಳೇ ಕುತೂಹಲ ಕೆರಳಿಸುವಷ್ಟು ಸಶಕ್ತವಾಗಿವೆ. ಇದಕ್ಕಿಂತಲೂ ಸರಳವಾಗಿ ಹೇಳಲು ಸಾಧ್ಯವಿಲ್ಲವೆನ್ನುವಷ್ಟು ಸರಳ ನಿರೂಪಣೆ. ಆದ್ದರಿಂದ ಲೇಖನಗಳು ಮಕ್ಕಳ ಮನಃಪಟಲದ ಮೇಲೆ ಪ್ರಗಾಢವೂ ಸಚೇತನವೂ ಆದ ಬಿಂಬವನ್ನುಳಿಸಬಲ್ಲವು. ವಿಜ್ಞಾನ ಸಾಹಿತ್ಯ ಕೃಷಿಯನ್ನು ಲೇಖಕಿಯರು ಮುಂದುವರಿಸಿದ್ದಲ್ಲಿ, ಆ ಪಥದಲ್ಲಿ ಗಾಢವಾದ ಹೆಜ್ಜೆ ಗುರುತುಗಳನ್ನು ಮೂಡಿಸಬಲ್ಲರೆಂಬ ಭರವಸೆಯನ್ನು ಮೊದಲ ಪುಸ್ತಕದಿಂದಲೇ ಸಾಬೀತುಪಡಿಸಿದ್ದಾರೆ.
ಪ್ರೊ. ಡಿ.ಆರ್. ಬಳೂರಗಿ ವೈಜ್ಞಾನಿಕ ಲೇಖಕರು
ಭುವನೇಶ್ವರಿ ರು. ಅಂಗಡಿ | Bhuvaneshwari Ru Angadi |
0 average based on 0 reviews.