nil
ಇದೊಂದು ವಿನೂತನವಾದ ಶೈಕ್ಷಣಿಕ ಮನೋವಿಜ್ಞಾನದ ಗ್ರಂಥ. ಇದರ ಪುಟಪುಟಗಳಲ್ಲೂ ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಪುಲ ಮನೋವೈಜ್ಞಾನಿಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಗ್ರಂಥದ ಪರಿವಿಡಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು, ಅಲ್ಲಿಯ ಶೀರ್ಷಿಕೆಗಳು ವಿದ್ಯಾರ್ಥಿಗಳ ಮನಸ್ಸನ್ನು ಸೆರೆಹಿಡಿಯುತ್ತವೆ. ಶಿಕ್ಷಣದ ಜೀವಾಳವಾಗಿರುವ ವಾಚನ, ವ್ಯಾಸಂಗ, ಮನನ ಮುಂತಾದವುಗಳ ಸ್ವರೂಪದ ಕುರಿತು ಸಂಕ್ಷಿಪ್ತವಾದರೂ ಮನಮುಟ್ಟುವಂತೆ ವಿವರಿಸಿದ್ದಾರೆ. ಒಟ್ಟು ಶಿಕ್ಷಣದ ಪ್ರಕ್ರಿಯೆಗಳಾದ ಕಲಿಕೆಗೆ ಪ್ರೇರಣೆ, ಏಕಾಗ್ರತೆಯ ಸಂವರ್ಧನೆ, ಸಮಯದ ನಿರ್ವಹಣೆ, ಓದಿನ ವೇಗವನ್ನು ಹೆಚ್ಚಿಸಿಕೊಳ್ಳುವುದು, ಸುಂದರವಾಗಿ ಬರೆಯುವುದು, ನೂರಕ್ಕೆ ನೂರು ಅಂಕ ಗಳಿಕೆಯ ಅಭಿಲಾಷೆಯಿಂದ ಮುನ್ನಡೆಯುವುದು, ಪರೀಕ್ಷೆಯ ಬಗೆಗಿನ ಭಯಭೀತಿಗಳನ್ನು ಧೈರ್ಯದಿಂದ ಎದುರುಗೊಂಡು ನಿರ್ವಹಿಸುವುದು- ಹೀಗೆ ವಿದ್ಯಾರ್ಥಿಗಳಿಗೆ ಸೂಕ್ತ ಹಾಗೂ ವಾಸ್ತವಿಕ ಮಾರ್ಗದರ್ಶನ ಮಾಡಬಲ್ಲ ಸಂಗತಿಗಳನ್ನು ಬಹು ಸರಳವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಿದ್ದಾರೆ.
Nil
"ನಾನು ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬಡವರ ಜತೆ ಬೆಳೆದೆ. ಥಂಡಿ ನೆಲದಲ್ಲಿ ಗೋಣಿ ತಾಟಿನ ಮೇಲೆ ಬಡವರು ಮಲಗುವ ಹಾಗೆ ನಾನೂ ಥಂಡಿ ನೆಲದಲ್ಲಿ ಮಲಗಿದೆ; ಅವರ ದುಃಖದಲ್ಲಿ ಭಾಗಿಯಾದೆ. ನನ್ನ ಸೋದರರ ಬಗೆಗಿನ ಮತ್ತು ಜಗದ ಬಗೆಗಿನ ನನ್ನ ಧೋರಣೆಗಳು ಎಂದಿಗೂ ಬದಲಾಗುವುದಿಲ್ಲ. ನಾನು ಹುಟ್ಟಿ ಬೆಳೆದ ವರ್ಗ ಅನುಭವಿಸಿದ ಅಮಾನವೀಯ ಕ್ರೌರ್ಯ ಮತ್ತು ಅನ್ಯಾಯವನ್ನು ತೊಡೆದುಹಾಕಲು ವಿಫಲನಾದಲ್ಲಿ ಗುಂಡಿಟ್ಟುಕೊಂಡು ಸಾಯುವೆ. ನಾನು ನನ್ನ ಸಮುದಾಯವನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಇದೇ ನೀವು ನನ್ನ ಬದುಕಿನಿಂದ ಕಲಿಯುವ ಪಾಠ. ನನ್ನ ಬದುಕು ನಿಮಗೆಲ್ಲರಿಗೂ ತೆರೆದ ಪುಸ್ತಕ." ಡಾ. ಬಿ. ಆರ್. ಅಂಬೇಡ್ಕರ್
ಯಾವುದೇ ಇತಿಹಾಸ ರಚಿಸುವಾಗ ಸಾಮಾನ್ಯವಾಗಿ ಪುರುಷ ಪ್ರಧಾನವಾದ ಇತಿಹಾಸಕ್ಕೇ ಒತ್ತು ನೀಡುತ್ತೇವೆ ರಾಜರು ಹಾಗೂ ಅವರ ಮಾಂಡಳಿಕರು ಹಾಕಿಸಿರುವ ಶಾಸನಗಳು, ಬರೆಸಿರುವ ಬರಹಗಳಲ್ಲಿ ಶ್ರೀ ಅಡಳಿತಗಾರರ ಬಗ್ಗೆ ಮಾಹಿತಿ ದೊರೆಯದಿರುವುದು. ಆಕರ ಸಾಮಗ್ರಿಯ ಕೊರತೆಯಾಗಿದೆ. ಡಾ. ಸಂದ್ಯಾ ಅವರು ಅಂತಹ ಕಾಲದ ಸ್ತ್ರೀಯರು ಹೇಗೆ ಬಾಳಿ-ಬದುಕಿದರೆಂಬ ಬಗ್ಗೆ ಪ್ರಾಚೀನ ಕರ್ನಾಟಕದ ಮಹಿಳಾಲೋಕ ಕೃತಿಯಲ್ಲಿ ತೋರಿಸಲು ಶ್ರಮಿಸಿದ್ದಾರೆ. ಇದರಲ್ಲಿಯೂ ಚೆನ್ನಾಗಿ ಆಡಳಿತ ನಡೆಸಿದ, ರಾಜಕೀಯದಲ್ಲಿದ್ದ ಶ್ರೀಯರ ಉಲ್ಲೇಖವೇ ಹೆಚ್ಚಾಗಿದೆ. ಮಕ್ಕಳಿಲ್ಲದೆ ರಾಜ ಸತ್ತಾಗ ರಾಜ್ಯದ ಜವಾಬ್ದಾಲ ಹೊತ್ತ ಮಹಿಳೆಯರು ಅಸ್ತಿತ್ವವನ್ನು ಉಳಿಸಲು ಪಟ್ಟ ಕಷ್ಟ-ನಷ್ಟಗಳನ್ನು, ಕರ್ನಾಟಕದಲ್ಲಿ ರಾಣಿಯರ ದತ್ತಕಗಳು ಅಧ್ಯಾಯದಲ್ಲಿ ವಿವರಿಸಿದ್ದಾರೆ. ಹಾಗೆಯೇ ಪೆಣ್ಣುಯ್ಯಲ್, ಸಂಗೀತ-ನೃತ್ಯಕಲೆಗಳಿಗೆ ಪ್ರಾಚೀನ ಅರಸಿಯರ ಕೊಡುಗೆ, ಮಹಿಳೆಯರ ಸಾಹಸ, ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮೊದಲಾದ ಅಧ್ಯಾಯಗಳಲ್ಲಿ ಮಹಿಳೆಯರು ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದರೆಂಬ ಬಗ್ಗೆ ವಿವರಿಸಿದ್ದಾರೆ. ಹೆಚ್ಚಿಗೆ ಶಾಸನಗಳನ್ನಾಧರಿಸಿ ಬರೆದಿರುವ ಈ ಲೇಖನಗಳ ಗುಚ್ಛ ಒಂದು ಅಧಿಕೃತ ಕೃತಿಯಾಗಿದೆ. ಇಲ್ಲಿ ಊಹಾ ಪೋಹಗಳಾಗಲೀ, ಕಲ್ಪಿತ ವಿಷಯಗಳಿಗಾಗಲೀ ಸ್ಥಳವಿಲ್ಲ. ಹೀಗಾಗಿ ಪ್ರಾಚೀನ ಕರ್ನಾಟಕದ ಮಹಿಳೆಯರ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಧಿಕೃತ ಮಾಹಿತಿಯುಳ್ಳ ಗ್ರಂಥ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಇಂತಹ ಅಧಿಕೃತ ಮಾಹಿತಿಯುಳ್ಳ ಗ್ರಂಥ ರಚಿಸಿದ ಶ್ರೀಮತಿ ಸಂಧ್ಯಾ ಅವರು ಅಭಿನಂದನಾರ್ಹರು. -ದೇವರಕೊಂಡಾರೆಡ್ಡಿ
Showing 121 to 150 of 270 results