nil
#
ನಿತ್ಯ ಬದುಕಿನಲ್ಲಿ ಬರುವ ಆಗು ಹೋಗುಗಳ ನಡುವೆ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಅವರವರ ನಿರ್ಧಾರಗಳು ಅವರಿಗೆ ಸರಿ ಎನ್ನಿಸುತ್ತದೆ. ನಮ್ಮ ನಿರ್ಧಾರಗಳು ಪ್ರಾಪಂಚಿಕ ಆಗು ಹೋಗುಗಳಿಗೆ ಹೊಂದಾಣಿಕೆ ಇದ್ದರೆ ಬದುಕು ಸ್ವಲ್ಪವಾದರೂ ಸುಗಮವಾಗಬಹುದು. ಈ ದಿಕ್ಕಿನಲ್ಲಿ ಕೆಲವು ತಾತ್ವಿಕ ವಿಚಾರಗಳನ್ನು ತರ್ಕದ ದೃಷ್ಟಿಯಿಂದ ಮಂಡಿಸಲಾಗಿದೆ. ಈ ಬರಹಗಳು ಬೇರೆಲ್ಲಿಯೂ ಪ್ರಕಟವಾಗಿಲ್ಲ.
Nil
ನಾಡಿನ ಹೆಸರಾಂತ ಸಾಹಿತಿಗಳು, ತತ್ತ್ವ ದರ್ಶನಗಳ ರಸಮಯ ವ್ಯಾಖ್ಯಾನಕಾರರೂ ಆಗಿರುವ ಜಿ. ಬಿ. ಹರೀಶರು ಬರೆದಿರುವ ಸಾ.ಕೃ. ರಾಮಚಂದ್ರ ರಾಯರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ ದುಃಖವೂ ಆಗುತ್ತದೆ. ಬಹುಶ: ಅವರು ಅಮೆರಿಕದಲ್ಲೋ, ಜರ್ಮನಿಯಲ್ಲೋ ಹುಟ್ಟಿ ಆ ದೇಶಗಳ ಇತಿಹಾಸ ಇಂಡಿಕ್, ಅಧ್ಯಯನ ವಿಭಾಗಗಳಲ್ಲಿ ದುಡಿದಿದ್ದರೆ ಈಗಿಗಿಂತ ಹೆಚ್ಚಿನ ಜಗದ್ವಿಖ್ಯಾತಿ, ಧನ ಸಂಪಾದನೆ ಮಾಡಿ ಮೇಲೇರಬಹುದಿತ್ತು. ಆಸ್ತಿಕ ಸಮಾಜವೇನೋ ಅವರನ್ನು ಗೌರವಿಸಿತ್ತು. ಆದರೆ ಇದ್ದಷ್ಟು ದಿನ ಅವರಿಗೆ ಒಂದು ಪದ್ಮಪ್ರಶಸ್ತಿಯೂ ಬರಲಿಲ್ಲ ಎಂಬುದೇ ನಮ್ಮ ಕಾಲದ ಮಹಿಮೆಯನ್ನು ಹೇಳುತ್ತದೆ. ರಾಯರು ತುಂಬು ಜೀವನ ನಡೆಸಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ಪ್ರಾಕೃತ ಪಾಳಿ ಭಾಷೆಗಳ ಕಣಜವನ್ನು ತಿಳಿವಿನಿಂದ ತುಂಬಿದರು. ಸಾವಿರದ ಹೊಳೆಯುವ ಈ ಸಾಲಿಗ್ರಾಮಕ್ಕೆ ಇದು ನಮಸ್ಕಾರ ಪೂರ್ವಕ ನುಡಿ ನಮನ.
Showing 151 to 180 of 270 results