• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Sub Categories

Authors

Languages

Book Type

Clear All
Filter
ಜಾಲ/jaala

nil

₹150   ₹134

Buy Now
ಡೆಡ್‌ಲೈನ್ ಕತೆಗಳು | Deadline Kathegalu

ಸಂಜಯ ಈ ಕಾಲದ ಯುವ ಕತೆಗಾರ, ಆತನ ಕಥನ ಶಕ್ತಿ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಅವನ ಕತೆಗಳು ವಿದ್ಯಾರ್ಥಿ ಕಥಾ ಪ್ರಶಸ್ತಿಗಳನ್ನು ಪಡೆದಿವೆ. ಸಿದ್ದ ಸೂತ್ರಗಳನ್ನು ಯಾವ ಮುಲಾಜಿಲ್ಲದೆ ಸೈಡಿಗೆ ತಳ್ಳಿ, ತನ್ನದೇ ಭಾಷೆ ಮತ್ತು ನರೇಷನ್ ಮೂಲಕ ಹೊಸ ಕತೆ ಅಲ್ಲದಿದ್ದರೂ ಹೊಸತನ ಕೂಡಿರುವ ಕತೆಗಳನ್ನು ಕಟ್ಟಿದ್ದಾನೆ. ತನ್ನ ಜೀವನಾನುಭವಕ್ಕೆ ಎಟುಕಿದಷ್ಟು ಭಾಷೆಯನ್ನು ಅತಿ ನಾಜೂಕಾಗಿ, ಅಷ್ಟೇ ಚುರುಕಾಗಿಯೂ ಬಳಸಿದ್ದಾನೆ. 'ದ್ಯಾಮಜ್ಜಿ ಪುರಾಣ' 'ಗುಲ್ಕಮ್ಮ' 'ನೀರಿಲ್ಲದ ನದಿಯ ಊರಿಂದ ನಡೆದು ಬಂದವರು' 'ಕಲ‌ರ್ ಕಲರ್ ಬಲೂನ್' 'ಉದ್ಭವ ಸೇತುವೆ' ಕತೆಗಳಲ್ಲಿ ಸ್ಪಷ್ಟವಾಗಿ ನೇರವಾಗಿ ಎಲ್ಲ ಕಾಲಕ್ಕೂ ಸಲ್ಲುವ ಕಥೆಗಾರನಾಗಿ ಸಂಜಯ್ ಕಾಣಿಸಿಕೊಳ್ಳುತ್ತಾನೆ. ಸಂಜಯನ ಎಷ್ಟೋ ಕತೆಗಳು ಪದಮಿತಿಗೆ, ಡೆಡ್ ಲೈನ್ ಇಟ್ಟುಕೊಂಡು ಸ್ಪರ್ಧೆಗಾಗಿ ಬರೆದ ಕತೆಗಳೇ ಆಗಿವೆ. ಹಾಗಾಗಿ ಕೆಲವು ಮಾದರಿಗೆ, ಇಂತಹ ಪತ್ರಿಕೆಗಳಿಗೆ ಇಂಥ ಕಥಾವಸ್ತು ಇದ್ರೆ ಗೆಲ್ಲುವುದು ಎಂಬ ಸಹಜ ಆಸೆಯಿಂದ ಕಟ್ಟಿದ ಕತೆಗಳು. ಅವು ಕೂಡ ಕೆಲವೊಂದು ಸಲ ಸಂಜಯನ ಅಸೆಯನ್ನು ಮಣಿಸಿ ಅವನೊಳಗಿನ ಕತೆಗಾರನ್ನು ಗೆಲ್ಲಿಸಿವೆ. ಹಾಗಾಗಿ ಕತೆಗಳು ಗೆದ್ದಿವೆ..! ಜಯರಾಮಚಾರಿ ಮುನ್ನುಡಿಯಿಂದ

₹150   ₹134

Buy Now
ತಿತ್ತಿಬ್ಬಾಸನ ಟೈಟಾನ್ ವಾಚು | tittibvaasana titan watchu

. ದಿಲೀಪ್ ಎನ್ನೆ ಒಳ್ಳೆಯ ಕಥೆಗಾರನೆಂಬುದಕ್ಕೆ 'ತಿತ್ತಿದ್ವಾಸನ ಟೈಟಾನ್ ವಾಚು' ಕಥಾ ಸಂಕಲನದೊಳಗಿನ ಒಂಬತ್ತು ಕಥೆಗಳೇ ಸಾಕ್ಷಿ. ಎರಡನೇ ಕಥಾಸಂಕಲನ ಪ್ರಕಟಿಸುತ್ತಿರುವ ಈ ಹೊತ್ತಿನಲ್ಲಿ ವಿಲೀಪರ ಬರವಣಿಗೆಯ ಕೈವಾಡಕ್ಕೆ ಮತ್ತಷ್ಟು ಕಳೆ ಕೂಡಿಕೊಂಡಿದೆ. ಈ ಕಳೆ ಕೂಡಿಕೊಂಡಿರುವುದಕ್ಕೆ ಮಾಯ್ತಾರ ಮಲೆಮಾದಯ್ಯನ ತಳಮನೆಯಾದ ಕೊಳ್ಳೇಗಾಲ ಸೀಮೆಯ ಆಡುಮಾತಿನ ಚಂದ, ಮಾನವ ಜೀವನದ ಚಿತ್ರ-ವಿಚಿತ್ರ ಆಯಾಮಗಳ ಅಂದ, ಜೀವನದ ಒಳಪದರುಗಳಲ್ಲಿ ಅಡಗಿರುವ ವೃಥೆಯ ನಿನಾದ ಮುಂತಾದುವೆಲ್ಲಾ ಕಾರಣವಾಗಿದೆ. ಇವೆಲ್ಲವುಗಳನ್ನೂ ತಮ್ಮದೇ ಆದ ಕಲಾತ್ಮಕ ಶೈಲಿಯಲ್ಲಿ ನಿರೂಪಿಸುತ್ತಾ ಒಮ್ಮೊಮ್ಮೆ ನವ್ಯ ಕಥೆಗಳ ರೂಪದಲ್ಲಿ. ಒಮ್ಮೊಮ್ಮೆ ಮೌಖಿಕ ಕಾವ್ಯಕಥನದ ಧಾಟಿಯಲ್ಲಿ ಕಥೆ ಹೇಳುವ ದಿಲೀಪರ ಕಥನ ಸಾಮರ್ಥ್ಯ ಹುಬ್ಬೇರಿಸುತ್ತದೆ. ಬಂಜಗೆರೆ ಜಯಪ್ರಕಾಶ

₹180   ₹153

Buy Now
ತೃಷೆ | Trushe

nil

₹225   ₹200

Buy Now
ತೆರೆದ ಮನಸ್ಸಿನ ಪುಟಗಳು | Tereda Manassina Putagalu

ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಬರೆದಂತವು. ಹೆಚ್ಚಿನ ಕಥೆಗಳು ಮಹಿಳಾ ಪ್ರಧಾನ ಕಥೆಗಳು. ವರದಕ್ಷಿಣೆ, ಗಂಡು ಮಗುವಿನ ಮೋಹ, ನಶಿಸಿ ಹೋಗುತ್ತಿರುವ ಸಂಬಂಧಗಳ ಮೌಲ್ಯ, ಹಣದ ವ್ಯಾಮೋಹ ಮೊದಲಾದ ಸಾಮಾಜಿಕ ಸಮಸ್ಯೆಗಳ ಕುರಿತಾಗಿರುವ ಕಥೆಗಳಲ್ಲಿ ನೀತಿ ಪಾಠವಿದೆ. ಅಮ್ಮ. ಬಲಿದಾನ, ಮನೆಯ ಅದೃಶ್ಯ ಕಂಬಗಳು ನಮ್ಮಲ್ಲೇ ಎಲ್ಲೋ ನಡೆದಿರಬಹುದಾದ ಕಥೆಗಳು. ಸುಂದರಗೊಂದಲ, ಮ್ಯಾಜಿಕ್ ಲ್ಯಾಂಪ್, ಅದಲು ಬದಲು ಕಥೆಗಳು ಗಂಭೀರ ಕಥೆಗಳ ನಡುವೆ ತಿಳಿ ಹಾಸ್ಯ ಹೊಂದಿದೆ. ಜೊತೆಗೆ ಹೆಚ್ಚಿನ ಕಥೆಗಳು ಯುವ ಜನತೆಗೆ ಪಾಠವಾಗಬಲ್ಲ ಕಥೆಗಳು.

₹200   ₹178

Buy Now
ದಡ ಸೇರಿಸು ತಂದೆ | Dada Serisu Tande

‘ದಡ ಸೇರಿಸು ತಂದೆ’ ಅಮರೇಶ ನುಗಡೋಣಿ ಅವರ 6ನೇ ಕತಾಸಂಕಲನ. ಇಲ್ಲಿಯ ಕತೆಗಳು ಪ್ರಸ್ತುತ ಗ್ರಾಮದಲ್ಲಿ ಉರಿಯುತ್ತಿರುವ ನೈಜ ಸಮಸ್ಯೆಗಳನ್ನು ಜ್ವಲಿಸುತ್ತದೆ. ಲೇಖಕರ ಗಮನಕ್ಕೆ ಬಂದು ಕಾಡಿದ ಮರ್ಯಾದಾ ಹತ್ಯೆಗಳು, ಗುಂಪುಗಳ ಮೂಲಕ ಹಿಂಸಿಸುವ ನಡೆ, ವೈವಿಧ್ಯಮಯ ಬದುಕಿನ ಚಿತ್ರಗಳು ಈ ಸಂಕಲನದ ಪ್ರಧಾನ ಆಕರ್ಷಣೆ. ಒಟ್ಟು ಎಂಟು ಕತೆಗಳು ಸಮಕಾಲೀನರ ಚಿತ್ರಣಗಳನ್ನು ತೆರೆದಿಡುವಲ್ಲಿ ಸಫಲವಾಗಿದೆ.

₹200   ₹178

Buy Now