• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಕಥಾ ಸಾಗರಿ | Kathasagari

ಇದು ಮಕ್ಕಳ ಪ್ರತಿಯಾಗಿದ್ದರೂ ಹಿರಿಯರು ಕೂಡ ಓದಿ ಆನಂದಿಸುವಂಥದ್ದು. ಪಾಲಕರು ಓದಿ ಮಕ್ಕಳಿಗೂ ಓದಿಸಿ ಟಿವಿ ಕಂಪ್ಯೂಟರ್ ಮೊಬೈಲ್ ಗಳಿಗಿಂತ ಪುಸ್ತಕಗಳನ್ನು ಓದುವುದು ಮಕ್ಕಳ ವಿಕಾಸ ಹಾಗೂ ಆರೋಗ್ಯದ ಹಿತೈದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು ಉತ್ತಮ ಪುಸ್ತಕಗಳನ್ನು ಮಕ್ಕಳಿಂದ ಓದಿಸಿ ಅವರ ವ್ಯಕ್ತಿತ್ವ ವಿಕಸನವಾದರೆ ಈ ಪುಸ್ತಕ ಬರೆದದ್ದು ಸಾರ್ಥಕವಾದಂತೆ

₹120   ₹102

ಕಂದಕ | Kandaka

'ಕಂದಕ' ಈ ಕೃತಿಯ ಲೇಖಕರಾದ ಭಾರದ್ವಾಜ ಕೆ. ಆನಂದತೀರ್ಥ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ನಿವಾಸಿ, ಕೆ. ಆನಂದತೀರ್ಥ ಮತ್ತು ಸುಮಿತ್ರಮ್ಮ ದಂಪತಿಯ ಮಗ. ಎಂ.ಎ. ಪದವೀಧರ ಭಾರದ್ವಾಜರಿಗೆ ಕೃಷಿ, ಪತ್ರಿಕೋದ್ಯಮ, ಬರವಣಿಗೆ, ಪ್ರವಾಸ ಎಲ್ಲವೂ ಹವ್ಯಾಸ. ಇವರ ಅವನಿ'ಗೆ (ಕವನ ಸಂಕಲನ), ನೆನಪುಗಳು ಮಾಸುವ ಮುನ್ನ (ಎಂ.ಸಿ. ನಾಣಯ್ಯ ಅವರ ಜೀವನ ಚರಿತ್ರೆಯ ನಿರೂಪಣೆ) ಕಾನನದ ಅಂಚಿನಲ್ಲಿ (ಕಾದಂಬರಿ), ಕಳೆದುಕೊಂಡವರು (ಕಾದಂಬರಿ), ಕಣಿವೆಯ ಆಳದಿಂದ (ಅಂಕಣ ಬರಹಗಳ ಸಂಗ್ರಹ), ಕನವರಿಕೆಗಳು (ಲಲಿತ ಪ್ರಬಂಧಗಳ ಸಂಗ್ರಹ), ಕಂದಿಲು (ಕೆಲವು ನಿವೃತ್ತ ಶಿಕ್ಷಕರ ಸಂಕ್ಷಿಪ್ತ ಜೀವನ ಚರಿತ್ರೆ), ಕೌತುಕವಲ್ಲದ ಕ್ಷಣಗಳು (ಲಲಿತ ಪ್ರಬಂಧಗಳ ಸಂಗ್ರಹ), ನೀರು ನುಗ್ಗಿದ ಮೇಲೆ (ಪ್ರಬಂಧಗಳ ಸಂಗ್ರಹ) ಹಾಗೂ ಕರೋನಯ್ಯ ಬಂದವ್ನಿಗೆ (ಕಾದಂಬರಿ), ಸಂದಾಯಿ(ಕಾದಂಬರಿ), ಕ್ರಮಣ (ಕಾದಂಬರಿ) ಈಗಾಗಲೇ ಪ್ರಕಟವಾಗಿದೆ. -ಎನ್. ನಾಗರಾಜ್‌ ರಾವ್ ರಂಗಕರ್ಮಿ ಬಸವನಗುಡಿ, ಬೆಂಗಳೂರು.

₹265   ₹225

ಕನಸುಗಳ ಶ್ರಾದ್ಧ | Kanasugala Shraaddha

ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?

₹200   ₹170

ಕನ್ನಡ ಕಜ್ಜಾಯ | Kannada Kajjaya

ಜ ಕನ್ನಡವೆಂದರೆ ಬರಿ ನುಡಿಯಲ್ಲ. ಕನ್ನಡ ಒಂದು ಸಮೃದ್ಧ ಜನಮಾನಸದ ಜೀವ ಚೈತನ್ಯ. ನವೆಂಬರ್ ಒಂದರಂದು ಭಾವ ಅಲ್ಲ. ಆವಾಹಿಸಿಕೊಳ್ಳುವ ನಿತ್ಯವೂ ನಮ್ಮಲ್ಲಿ ಹರಿಯುತ್ತಿರಬೇಕು. ಪ್ರತಿನಿತ್ಯ ಕನ್ನಡದ ಏನಾದರೂ ಒಂದು ಹೊಸ ಸಂಗತಿ ತಿಳಿದುಕೊಳ್ಳಬೇಕು. ಕನ್ನಡ ಲೋಕದ ಅಗಾಧತೆಯನ್ನು, ವಿಸ್ಮಯಗಳನ್ನೂ ಸರಳವಾಗಿ ತಿಳಿದುಕೊಳ್ಳಬೇಕು. ಪುಟ್ಟ ಪುಟ್ಟ ಹೆಜ್ಜೆ ಇಟ್ಟರೆ, ನಂತರ ಕನ್ನಡ ತಾನೇ ನಮ್ಮನ್ನು ತುಂಬಿಕೊಳ್ಳುತ್ತದೆ. ಹಾಗೆ ಕನ್ನಡವನ್ನೇ ಮನಸಲ್ಲಿ ತುಂಬಿಕೊಂಡಾಗ, ಉಳಿಸುವ, ಬೆಳೆಸುವ. ಹೋರಾಡುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲೆಲ್ಲೂ ಕನ್ನಡಮ್ಮನೇ ಕಾಣುತ್ತಾಳೆ. ಅವಳೇ ನಮ್ಮನ್ನು ಅಪ್ಪಿಕೊಳ್ಳುತ್ತಾಳೆ. ಹಾಗೆ ದಿನಕ್ಕೆ ಒಂದು ಕನ್ನಡ ಚಿಂತನೆ ಕೊಡುವ, ಕನ್ನಡದ ವಿಸ್ಮಯಗಳನ್ನು ಪರಿಚಯಿಸುವ ನಿತ್ಯ ಕನ್ನಡ ಚಿಂತನೆಯ ಪುಸ್ತಕ ಇದು.

₹295   ₹251

ಕವಚ | Kavacha

ಕರ್ಣನಿಗೆ ಪೂರ್ವ ಜನ್ಮದಲ್ಲಿ ಸಹಸ್ರ ಕವಚಗಳಿದ್ದುವೆಂದೂ, ಅದನ್ನು ನರ ಮತ್ತು ನಾರಾಯಣರೆಂಬ ಋಷಿಗಳು ಯುದ್ಧದಲ್ಲಿ ಕತ್ತರಿಸುತ್ತ ಬಂದರೆಂಬುದು ಕಥೆ. ಅವುಗಳಲ್ಲಿ ಒಂದು ಕವಚ ಉಳಿದು ಬಂತು. ಅದನ್ನು ಕತ್ತರಿಸುವುದಕ್ಕಾಗಿ ಕೃಷ್ಣಾರ್ಜುನರು ಈ ಜನ್ಮದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಜೀವನೊಬ್ಬನಿಗೆ ಅನೇಕ ಕವಚಗಳು, ಕರ್ಣನಂತೆ. ಅವುಗಳನ್ನು ಕಳೆದುಕೊಳ್ಳುತ್ತ, ಕಳೆದುಕೊಳ್ಳುತ್ತ ಸಾಗುವುದೇ ಅವನ ಪಾಡು. ಆ ಕವಚಗಳು ಲೋಹದ ಕವಚಗಳಲ್ಲ. ಕವಚ ಸಾಂಕೇತಿಕ ಅಷ್ಟೇ. ಕರ್ಣನ ಬದುಕೂ ಈ ಕವಚಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಅದನ್ನೇ ಕಾದಂಬರಿಯೂ ಧ್ವನಿಸುತ್ತದೆ..

₹185   ₹157

ಕಾಗೆ ಮೇಷ್ಟ್ರು | Kage Meshtru

ವೀರಲೋಕದ 63ನೇ ಕೃತಿ ವಿಕ್ರಮ್ ಹತ್ವಾರ್ ಅವರ “ಕಾಗೆ ಮೇಷ್ಟ್ರು”… ಝೀರೋ ಮತ್ತು ಒಂದು’ ಹಾಗು ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನದಿಂದ ಓದುಗರನ್ನು ಸೆಳೆದಿರುವ ವಿಕ್ರಮ ಹತ್ವಾರ್, ಕನ್ನಡದ ಅನನ್ಯ ಕತೆಗಾರ ಮತ್ತು ಕವಿ. ಹೊಸ ಭಾಷೆ, ವಿಶಿಷ್ಟ ವಸ್ತು-ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಯುಗದ ಪಲ್ಲಟಗಳು, ಜಾಗತೀಕರಣ ಸಂದರ್ಭದಲ್ಲಿನ ಮನುಷ್ಯ ಸಂಬಂಧಗಳು, ದ್ವಂದ್ವಗಳು, ಆಧುನಿಕ ಮನುಷ್ಯನ ಸಂಕಟ ತವಕ-ತಾಕಲಾಟ ಹುಡುಕಾಟ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಮೌಲ್ಯ – ಇವು ವಿಕ್ರಮ ಹತ್ವಾರರ ಕತೆಗಳಲ್ಲಿ ವಿಮರ್ಶಕರು ಗುರುತಿಸಿರುವ ಕೆಲವು ವಿಶೇಷತೆಗಳು. ಪ್ರಸ್ತುತ ‘ಕಾಗೆ ಮೇಷ್ಟ್ರು’ ಎಂಬ ಕಥಾ ಸಂಕಲನದಲ್ಲಿ ಹುಟ್ಟು ಸಾವು ಎನ್ನುವ ಎರಡು ತುರೀಯ ಸತ್ಯಗಳ ನಡುವೆ, ಮನುಷ್ಯನ ನೆಮ್ಮದಿಯ ಹುಡುಕಾಟದಲ್ಲಿ ವೇದ್ಯವಾಗುವ ಅಸಂಖ್ಯ ಅಣು ಸತ್ಯಗಳ ಮೇಳವಿದೆ. ಬದುಕಿನ ಅಸಂಗತ ಕ್ಷಣಗಳ ಆಳದಲ್ಲಿ ಹುದುಗಿರುವ ದರ್ಶನವು ಕತೆಗಾರನ ಕಾವ್ಯ ಕುಸುರಿಯಲ್ಲಿ ಅನಾವರಣಗೊಳ್ಳುವ ಸೋಜಿಗವನ್ನು ಓದಿನ ಮಾಯೆಯಲ್ಲೇ ಅನುಭವಿಸಬೇಕು. ಇಂಥ ಅನುಭವ ಸುಖದ ಸೆಳೆತ ಈ ಕತೆಗಳನ್ನು ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ. ಓದುವ ನಶೆ ನಿಮಗೇರಲಿ…

₹125   ₹106

ಕಿತ್ತೂರು ಹುಲಿ ಸಂಗೊಳ್ಳಿ ರಾಯಣ್ಣ | Kitturu Huli Sangolli Rayanna

ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮಳ ಮೈಗಾವಲು ಪಡೆಯ ವಿಶ್ವಾಸಿಕ ನಾಯಕ. ಕಿತ್ತೂರು ಸಂಸ್ಥಾನವನ್ನು ಕಬಳಿಸಲು ಉದ್ದೇಶಿಸಿದ ಬ್ರಿಟಿಷರ ವಿರುದ್ಧ ಸಿಡಿದೆದ್ದವನು. ಕಿತ್ತೂರು ಆಂಗ್ಲರ ವಶವಾದ ನಂತರವೂ ಅವನು ಸರದಾರ ಅವರಾದಿ ವೀರಪ್ಪನವರ ಜೊತೆ ಕೂಡಿಕೊಂಡು ಸುರಪುರ, ಶಿವಗುತ್ತಿ ಮೊದಲಾದ ಸಂಸ್ಥಾನಗಳ ಸಹಾಯ ಪಡೆದದ್ದಲ್ಲದೆ ಅನೇಕ ಜನ ದರೋಡೆಕೋರರ ಮನಸ್ಸುಗಳನ್ನು ಒಲಿಸಿಕೊಂಡು ಅವರ ಸಹಾಯದಿಂದ ಆರು ಸಾವಿರ ಯೋಧರ ಪಡೆಯೊಂದನ್ನು ಸಂಘಟಿಸುತ್ತಾನೆ. ಆದರೆ ನೇಗಿನಹಾಳ ಮತ್ತು ಬೊದಾನಪುರದ ಗೌಡರು ಮೋಸ ಮಾಡಿ ಸೆರೆ ಹಿಡಿದು ಅವನನ್ನು ಬ್ರಿಟಿಷರಿಗೆ ಒಪ್ಪಿಸುತ್ತಾರೆ. ಅವರು ಅವನನ್ನು ನಂದಗಡದ ಬಯಲಿನಲ್ಲಿ ನೇಣುಗಂಬಕ್ಕೆ ಏರಿಸುತ್ತಾರೆ.

₹575   ₹489

ಕುಣಿಗಲ್ ಟು ಕಂದಹಾರ್ | Kunigal To Kandahar

ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ಅನುಭವ ಕಥನ ಓದಲು ಸಿದ್ಧರಾಗಿ! ಆಫ್ಘಾನಿಸ್ತಾನವೆಂಬ ಕೌತುಕ ರಾಷ್ಟ್ರದ, ಹೊರಜಗತ್ತಿಗೆ ನಿಲುಕದ ಅನೂಹ್ಯ ಲೋಕವೊಂದರ ಅನಾವರಣ.

₹260   ₹221

ಕೃಷಿ ಯಾಕೆ ಖುಶಿ? | Krushi Yake Khushi

ಬಹಳ ಹಿಂದೆ ಪೂರ್ಣಚಂದ್ರ ತೇಜಸ್ವಿಯವರಿಗೊಂದು ಪ್ರಶ್ನೆ ಕೇಳಿದ್ದೆ. “ನೀವು ಮೊದಮೊದಲು ಕಥೆ, ಕಾದಂಬರಿ, ಕಾವ್ಯ, ನಾಟಕ ಇತ್ಯಾದಿಗಳನ್ನು ಬರೆದವರು.

₹150   ₹128

ಕೈ ಹಿಡಿದು ನೀ ನಡೆಸು ತಂದೆ | Kai Hididu Nee Nadesu Tande

ಇದೊಂದು ತಂದೆ, ಮಗನ ಬೆಳವಣಿಗೆಗೆ ಕೊಡುವ ಟಿಪ್ಸ್ ಪುಸ್ತಕವಾಗಿದೆ. ಹೆಚ್ಚೆಂದರೆ ಹತ್ತು ಸಾಲುಗಳಲ್ಲಿ ವಿಶ್ವವಾಣಿ ಸಂಪಾದಕರು, ಲೇಖಕರೂ ಆದ ವಿಶ್ವೇಶ್ವರ ಭಟ್ ಅವರು ಮಗನಿಗೆ ತಂದೆ ನೀಡುವ ಸದ್ವಿಚಾರಗಳ ಆಣಿಮುತ್ತುಗಳಾಗಿವೆ. ಮಗನಿಗೆ ನೇರವಾಗಿ ಹೇಳುವ ಧಾಟಿಯಲ್ಲಿರುವ ಇಲ್ಲಿನ ಬರಹಗಳು ಬಹಳ ಆಪ್ತವಾಗಿವೆ. ‘ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟು’ ಎನ್ನುವ ಹಾಗೆ; ಮಗನ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವ ಅಪರೂಪದ ಪುಸ್ತಕವಾಗಿದೆ. ನಿಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ-ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕಾಗಿ ನೀವು ಓದಲೇಬೇಕಾದ ಪುಸ್ತಕವಿದು. ಮಗನಿಗೆ ಅಪ್ಪ ಯಾವತ್ತೂ ಒಳ್ಳೆಯ ಸ್ನೇಹಿತ ಎಂಬುದು ಈ ಪುಸ್ತಕದ ಸಂದೇಶವಾಗಿದೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಬರೆದಿರುವ ವಿಶಿಷ್ಟ ಪುಸ್ತಕ. ತಂದೆಯೊಬ್ಬ ಮಗನಿಗೆ ಕೊಡಬಹುದಾದ ಆಪ್ತ ಸಲಹೆಗಳು ಹೇಗಿರಬಲ್ಲವು ಎಂಬುದನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

₹250   ₹213

ಕ್ರಮಣ | Kramana

'ಕ್ರಮಣ' ಈ ಕೃತಿಯ ಲೇಖಕರಾದ ಭಾರದ್ವಾಜ ಕೆ. ಆನಂದತೀರ್ಥ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ನಿವಾಸಿ, ಕೆ. ಆನಂದತೀರ್ಥ ಮತ್ತು ಸುಮಿತ್ರಮ್ಮ ದಂಪತಿಯ ಮಗ. ಎಂ.ಎ. ಪದವೀಧರ ಭಾರದ್ವಾಜರಿಗೆ ಕೃಷಿ, ಪತ್ರಿಕೋದ್ಯಮ, ಬರವಣಿಗೆ, ಪ್ರವಾಸ ಎಲ್ಲವೂ ಹವ್ಯಾಸ. ಇವರ ಅವನಿ?ಗೆ (ಕವನ ಸಂಕಲನ), ನೆನಪುಗಳು ಮಾಸುವ ಮುನ್ನ (ಎಂ.ಸಿ. ನಾಣಯ್ಯ ಅವರ ಜೀವನ ಚರಿತ್ರೆಯ ನಿರೂಪಣೆ) ಕಾನನದ ಅಂಚಿನಲ್ಲಿ (ಕಾದಂಬರಿ), ಕಳೆದುಕೊಂಡವರು (ಕಾದಂಬರಿ), ಕಣಿವೆಯ ಆಳದಿಂದ (ಅಂಕಣ ಬರಹಗಳ ಸಂಗ್ರಹ), ಕನವರಿಕೆಗಳು (ಲಲಿತ ಪ್ರಬಂಧಗಳ ಸಂಗ್ರಹ), ಕಂದಿಲು (ಕೆಲವು ನಿವೃತ್ತ ಶಿಕ್ಷಕರ ಸಂಕ್ಷಿಪ್ತ ಜೀವನ ಚರಿತ್ರೆ), ಕೌತುಕವಲ್ಲದ ಕ್ಷಣಗಳು (ಲಲಿತ ಪ್ರಬಂಧಗಳ ಸಂಗ್ರಹ), ನೀರು ನುಗ್ಗಿದ ಮೇಲೆ (ಪ್ರಬಂಧಗಳ ಸಂಗ್ರಹ) ಹಾಗೂ ಕರೋನಯ್ಯ ಬಂದವಿಗೆ (ಕಾದಂಬರಿ), ಸಂದಾಯಿ (ಕಾದಂಬರಿ) ಈಗಾಗಲೇ ಪ್ರಕಟವಾಗಿದೆ. (ಕಾದಂಬರಿ), ಕಂದಕ ಈಗಾಗಲೇ ಪ್ರಕಟವಾಗಿದೆ.

₹375   ₹319

ಕ್ರಿಕೆಟಾಯಣ | Cricketayana

ಕ್ರಿಕೆಟ್ ಅಂದರೆ ಕೇವಲ ರನ್ನು ವಿಕೆಟ್ಟು ಬಾಲ್‌ಗಳ ಆಟವಲ್ಲ, ಅಲ್ಲಿ ದೊಡ್ಡದೊಂದು ಇತಿಹಾಸ, ದಾಖಲೆ, ಕೌತುಕ, ಸ್ವಾರಸ್ಯ, ರೋಚಕ ಕಥನ, ವಿವಾದ, ಆಕ್ರೋಶ, ಸೇಡು, ಜೋಶ್, ತಮಾಷೆ, ಪರಿಶ್ರಮ… ಎಲ್ಲವೂ ಇದೆ.

₹230   ₹196

ಕ್ಷಯ | Kshaya

‘ಕ್ಷಯ’ ಕಾದಂಬರಿಯು ಗಾತ್ರದಲ್ಲಿ ಚಿಕ್ಕದಿದ್ದರೂ (…ಪುಟಗಳು) ಅಚ್ಚರಿಪಡುವಷ್ಟು ಸಾಂದ್ರವಾದ ಹಾಗೂ ಅಷ್ಟೇ ವಿಸ್ಮತವಾದ ಜಗತ್ತೊಂದು ಅದರೊಳಗಿದೆ. ಹೊನ್ನಾವರ ಹತ್ತಿರದ, ಕರಾವಳಿಯ ಒಂದು ಚಿಕ್ಕ ಹಳ್ಳಿಯ ಪರಿಸರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಾದಂಬರಿಯ ಕಥಾಜಗತ್ತಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ.

₹120   ₹102

ಖದೀಜಾ (ಐತಿಹಾಸಿಕ ಕಾದಂಬರಿ) | Khadeeja - A Historical Novel

ಹಿಂದಿನದು ಬೇರೆ. ಇಂದು ಮಾತ್ರ ಮನುಷ್ಯನ ಜೀವನದ ಹಲವು ವ್ಯವಹಾರಗಳಲ್ಲಿ ಸಾಹಿತ್ಯವು ಒಂದು ಎನ್ನುವುದರತ್ತ ಅದರ ಬೆಳವಣಿಗೆ ಇದೆ. ಆದರೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಹೊರತಾದ ಮರುಕ್ಷಣವೇ ಸಾಹಿತ್ಯವೂ ಸಗಟು ಅಷ್ಟೇ.

₹215   ₹183

ಗದಾಯುದ್ಧಂ | Gadayuddham

ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ. 'ಗದಾಯುದ್ಧ'ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.

₹350   ₹298

ಗಾಯಗೊಂಡ ಸಾಲುಗಳು | Gayagonda Salugalu

ಸದಾಶಿವ ಸೊರಟೂರು ಅವರ ಬರಹಕ್ಕೆ ಇರುವ ಶಕ್ತಿಗೆ ನಾನು ಬೆರಗಾಗಿದ್ದೇನೆ. ಅವರ ಬರಹಕ್ಕೆ ಮಾಂತ್ರಿಕ ಶಕ್ತಿ ಇದೆ. ಇವರು ಕಥೆ ಬರೆಯಲಿ, ಕವಿತೆ ಬರೆಯಲಿ, ಲೇಖನ ಬರೆಯಲಿ ಎಲ್ಲದರಲ್ಲೂ ಸೊರಟೂರುತನವನ್ನು ಉಳಿಸುತ್ತಾರೆ. ಇವರ ಅಪಾರ ಓದು, ತನ ಓದುಗನನು ಗನನ್ನು ಓದಲು ಇವರು ಪಟ್ಟಿರುವ ಶ್ರಮ ಇವರ ಬರಹಗಳ ಯಶಸ್ಸಿಗೆ ಕಾರಣ. ಈಗ 'ಗಾಯಗೊಂಡ ಸಾಲುಗಳು ಕವನ ಸಂಕಲನದ ಜೊತೆಗೆ ಹಾಜರಾಗಿದ್ದಾರೆ. ಇವರ ಕವಿತೆಗಳಲ್ಲಿ ಕಳೆದು ಹೋಗೋಣ ಬನ್ನಿ ಜಿ. ಎನ್. ಮೋಹನ್

₹110   ₹83

ಗೌಡ ಪರಂಪರೆ | Gouda Parampare

ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ, ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತಬಂದಿದ್ದಾರೆ.ಇವರು ಮೂಲತಃ ಕೃಷಿಕರು. ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿಗುರುತಿಸಲಾಗಿದೆ

₹325   ₹276

ಚಂದನವನದೊಳ್ | Chandanavanadol

ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿತ, ಕಲಾತ್ಮಕ, ಮಕ್ಕಳ, ಉಪಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಹಲವರ ಕಥೆ, ಕಾದಂಬರಿಗಳು ಚಿತ್ರಗಳಾಗಿವೆ. ಕಾವ್ಯಗಳು ಹಾಡುಗಳಾಗಿವೆ. ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪೈಕಿ ಮೂವರು ಚಿತ್ರ ನಿರ್ದೇಶನ ಮಾಡಿದ್ದಾರೆ. ಸಂಭಾಷಣೆಯೇ ಇಲ್ಲದ ಚಿತ್ರಗಳು, ಒಂದೇ ಟೇಕ್‌ನಲ್ಲಿ ತಯಾರಾದ ಚಿತ್ರಗಳು, ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರೀಕರಣವಾದ ಚಿತ್ರಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಚಿತ್ರಗಳು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರಗಳು ಇಲ್ಲಿವೆ. ಇನ್ನು ಕನ್ನಡದಲ್ಲಾದ ಪ್ರಯೋಗಗಳಿಗೆ ಲೆಕ್ಕವಿಲ್ಲ. ಹಲವು ದಾಖಲೆಗಳು, ಸಾಹಸಗಳು, ವೈಶಿಷ್ಟ್ಯಗಳು, ಸ್ವಾರಸ್ಯಗಳು, ಹೆಗ್ಗಳಿಕೆಗಳು ಕನ್ನಡ ಚಿತ್ರರಂಗದಲ್ಲಿ ಆಗಿದೆ. ಇವೆಲ್ಲವನ್ನೂ ಮೆಲುಕು ಹಾಕುವ ಪ್ರಯತ್ನವೇ 'ಚಂದನವನದೊಳ್'. ಮುಂದಿನ ತಲೆಮಾರಿನ ಚಿತ್ರಕರ್ಮಿಗಳಿಗೆ ಮತ್ತು ಸಿನಿಮಾಸಕ್ತರಿಗೆ ಕೈಪಿಡಿಯಾಗಬಲ್ಲ ಪುಸ್ತಕ ಇದು.

₹395   ₹336

ಚಂದ್ರಾ ಲೇಔಟ್ | Chandra Layout

ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಹಲವೆಡೆ ಇರುವ ಶೋಷಣೆ, ಮೂಢನಂಬಿಕೆ ಮತ್ತು ಜಾತೀಯತೆ, ಕೌಟುಂಬಿಕ ಸಂಘರ್ಷಗಳು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಭ್ರಷ್ಟ ವ್ಯವಸ್ಥೆಯ ಚಿತ್ರಣಗಳ ಕಥೆಗಳು ಪ್ರಸ್ತುತ ಸಂದರ್ಭಗಳಿಗೆ ಹಿಡಿದ ಕೈಗನ್ನಡಿಯಾಗಿವೆ.

₹135   ₹115

Sold Out
ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ | Chalukya Chakravarthy Immadi Pulikeshi

ಉತ್ತರಾಪಥೇಶ್ವರ ಎಂಬ ಬಿರುದಾಂಕಿತ, ಕಾನ್ಯಕುಬ್ಬದ ಸಾಮ್ರಾಟ, ಅಪಾರ ಸೈನ್ಯವನ್ನು ಹೊಂದಿದ ಹರ್ಷವರ್ಧನನಂತಹ ಮಹಾಪ್ರತಾಪಿಯನ್ನು ರಣತಂತ್ರದ ಮೂಲಕವೇ ಬಾದಾಮಿ ಚಾಲುಕ್ಯ ಪುಲಿಕೇಶಿ ಸೋಲಿಸಿದ್ದಲ್ಲದೇ, ಸೌಜನ್ಯ ಮತ್ತು ಸ್ನೇಹ ವಿಶ್ವಾಸಗಳಿಂದ ಅವನ ಹೃದಯವನ್ನು ಗೆದ್ದು ಅವನಿಂದಲೇ ಪರಮೇಶ್ವರ ಪುಲಿಕೇಶಿ ಎಂದು ಹೊಗಳಿಸಿಕೊಂಡ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕುರಿತ ಐತಿಹಾಸಿಕ ಕಾದಂಬರಿ.

₹450   ₹382

ಚಿಕ್ಕಪುಟ್ಟಮ್ಮನವರ ಗೃಹನ್ಯಾಯ | Chikkaputtammanavara Gruhanyaya

ಇಲ್ಲಿರುವ ಕತೆಗಳು ಕೂಡ ಸ್ತ್ರೀ ಸಂವೇದನೆಯ ಸುತ್ತ ಸುತ್ತುವ ಕತೆಗಳಾಗಿದ್ದು, ಸಾಮಾಜಿಕ ಹಾಗು ಕೌಟುಂಬಿಕ ನೆಲೆಯಲ್ಲಿ ಹೆಣ್ಣಿನ ತುಮುಲಗಳು, ಹುಡುಕಾಟ, ಸ್ಥಿತಪ್ರಜ್ಞೆ, ಜವಾಬ್ದಾರಿಗಳು, ಎದುರಿಸಬೇಕಾದ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಪದರು ಪದರುಗಳಾಗಿ ಬಿಡಿಸಿ ಹೇಳಲಾಗಿದೆ.

₹140   ₹119

ಚಿತ್ರ-ವಿಚಿತ್ರ | Chitra Vichitra

ಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ.. ಇವೆಲ್ಲಕ್ಕಿಂತ ಮೀರಿದ ಒಂದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಹಾಗೆ ನೋಡಿದರೆ ನನಗೆ ನನ್ನ ಸಂಸ್ಕೃತಿ ಕಲಿಸಿದರಲ್ಲಿ ಸಿನಿಮಾದ ಪಾಲು ಇದೆ. ಒಂದು ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿಸುವ ತಾಕತ್ತು ಸಶಕ್ತವಾಗಿರುವ ಕ್ಷೇತ್ರವಿದು. ನನ್ನೆಲ್ಲ ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಮುಂದಿದ್ದ ಪ್ರಶ್ನೆ? ಬದುಕುವುದಕ್ಕಾಗಿ ಕೆಲಸ ಮಾಡುವುದಾ..? ಅಥವಾ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದಾ..?

₹220   ₹187

ಜಗತ್ತಿನ ಭೀಕರ ಯುದ್ಧಗಳು | Jagattina Bheekara Yuddhagalu

ಜಗತ್ತನ್ನು ಕಟ್ಟಿದವರು ಮತ್ತು ಕಟ್ಟುತ್ತಿರುವವರೆಂದರೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು ಪಿರಮಿಡ್ ಳಿಂದ ಹಿಡಿದು ಯಾವುದೇ ನಾಗರಿಕ ತೊಟ್ಟಿಲುಗಳನ್ನು ಕಟ್ಟಿ ಬೆಳೆಸಿದವರು ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರು, ಜೊತೆಗೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಮೂಕಪ್ರಾಣಿಗಳು, ಜಗತ್ತಿನಲ್ಲಿ ಮುಂದೆಯೂ ಈ ತಾರತಮ್ಯ ಹೀಗೆ ಮು೦ದುವರಿಯುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು ಮಹನೀಯರು ಹುಟ್ಟಿ ಬಂದು ಈ ಅಸಮಾನತೆಯ ಸಮಾಜದ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡರೆ ವಿನಹಃ ಈ ಜಗತ್ತು ಮಾತ್ರ ಬದಲಾಗಲೇ ಇಲ್ಲ.

₹495   ₹421

ಜನ ನಾಯಕ | Jananayaka

ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ

₹125   ₹106

ಜನಮಿತ್ರ ಅರಸು | Janamitra Arasu

ಜನಮಿತ್ರ ಅರಸು ನಾಟಕವು ದೇವರಾಜ ಅರಸು ಅವರ ಸಮಾಜಮುಖಿ ಕೊಡುಗೆಗಳನ್ನು ಹೇಳುತ್ತದೆ. ಅವರು ಚಿಂತಿಸಿದ ಜನಪರ ಸಾಧನೆಗಳು ದೇಶದ ಯಾವುದೇ ರಾಜ್ಯದಲ್ಲೂ ಜಾರಿಗೆ ಬಂದಿಲ್ಲ.

₹80   ₹68