nil
#
"ಅಯ್ಯಾ ಹುಡುಗ ನಿನಗೇನು ಗೊತ್ತು ನಮ್ಮ ಸಂಕಟ ಮಕ್ಕಳನ್ನು ಮಂಚದ ಕೆಳಗೆ ಮಲಗಿಸಿ ನಾವು ಮಂಚದ ಮೇಲೆ ಗಿರಾಕಿಗಳೊಂದಿಗೆ ಚಿಕ್ಕಂದ ಆಡುತ್ತೇವೆ. ಹೊಟ್ಟೆಯಲ್ಲಿ ಸಂಕಟ ಹೊಗೆಯಾಡುತ್ತಿದ್ದರೂ ನಾವು ನಗುತ್ತಿರುತ್ತೇವೆ ಗಿರಾಕಿಗಳ ಖಷಿಪಡಿಸಲು, ಗಿರಾಕಿಗಳೇ ನಮಗೆ ದೇವರು. ಇದೆಲ್ಲಾ ಹೊಟ್ಟೆ ತುಂಬಿಸಿಕೊಳ್ಳಲು ನಾವಾಡುತ್ತಿರುವ ನಾಟಕವೆಂದು ನಮ್ಮ ಪುಟ್ಟ ಕಂದಮ್ಮಗಳಿಗೂ ತಿಳಿದ ಸತ್ಯ." -ಕಾಮಾಟಿಪುರದ ವೇಶ್ಯ
ಡಾ. ವಸುಂಧರಾ ಭೂಪತಿ
NA
ಎಚ್.ಎನ್. ಯಾದವಾಡ
‘ಇಕಿಗಾಯ್ ಪಯಣ’ ಎಂಬ ಈ ಕೃತಿಯಲ್ಲಿ, ಹೆಕ್ಟರ್ ಗಾರ್ಸಿಯ ಮತ್ತು ಫ್ರಾನ್ಸಿಸ್ಕ್ ಮಿರೆಯೆಸ್ ಎಂಬ ಈ ಇಬ್ಬರೂ ಲೇಖಕರು ‘ಇಕಿಗಾಯ್: ದೀರ್ಘ ಮತ್ತು ಸಂತಸಕರ ಜೀವನಕ್ಕೆ ಜಪಾನಿಯರ ಗುಟ್ಟು’ ಎಂಬ ಅಂತರಾಷ್ಟಿçÃಯ ಮಟ್ಟದಲ್ಲಿ ಉತ್ತಮವಾಗಿ ಮಾರಾಟಗೊಂಡ ತಮ್ಮ ಈ ಹಿಂದಿನ ಕೃತಿಯನ್ನು ಮತ್ತೊಂದು ಹೆಜ್ಜೆ ಮುಂದೆ ಒಯ್ದಿದ್ದಾರೆ. ಅದು ಹೇಗೆಂದರೆ ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ನಿಮ್ಮ ಹಿತವಲಯದಿಂದಾಚೆಗೆ ಹೆಜ್ಚೆ ಇರಿಸುವುದು, ಇಂತಹ ಪ್ರಾಯೋಗಿಕ ಕಸರತ್ತುಗಳ ಮುಖಾಂತರ ನಿಮ್ಮದೇ ಇಕಿಗಾಯ್‌ನ್ನು ಕಂಡುಕೊಳ್ಳುವುದು. ಇಕಿಗಾಯ್ ಎಂಬುದು, ನಮ್ಮ ಗಾಢ ಅನುರಕ್ತಿ, ಹಂಬಲ (ನಾವೇನನ್ನು ಪ್ರೀತಿಸುತ್ತೇವೊ ಅದು), ನಮ್ಮ ಉದ್ದಿಷ್ಟ ಕಾರ್ಯ (ಏನನ್ನು ನಾವು ಕೊಡುಗೆಯಾಗಿ ನೀಡಲು ಆಶಿಸುತ್ತೇವೊ ಅದು), ನಮ್ಮ ಪ್ರವೃತ್ತಿ (ಜಗತ್ತಿಗೆ ನಾವು ಅರ್ಪಿಸಬೇಕಿರುವ ಉಡುಗೊರೆ) ಹಾಗೂ ನಮ್ಮ ಉದ್ಯೋಗ(ನಮ್ಮ ಗಾಢ ಅನುರಕ್ತಿಗಳು ಮತ್ತು ಪ್ರತಿಭೆಗಳು ಜೀವನೋಪಾಯಕ್ಕೊಂದು ದಾರಿಯಾಗಬಲ್ಲವು) ಇವೆಲ್ಲವೂ ಸಂಧಿಸಿ ನಮಗೊಂದು ವೈಯಕ್ತಿಕ ಅರ್ಥ ನೀಡುವ ಜಾಗ. ನೀವು ಒಂದು ಸಮತೋಲನದ ಜೀವನವನ್ನನುಭವಿಸಲು ಶಕ್ಯವಾಗುವಂತೆ ಈ ಎಲ್ಲಾ ಮೂಲಧಾತುಗಳನ್ನು ಒಗ್ಗೂಡಿಸುವಲ್ಲಿ ಈ ಪುಸ್ತಕ ನಿಮಗೆ ಸಹಾಯ ಮಾಡುತ್ತದೆ. ನಮ್ಮ ಇಕಿಗಾಯ್ ಎಂಬುದು ಬದಲಾವಣೆಗೆ ತೀರ ಸಾಮ್ಯವಾದುದ್ದು: ಅದು ನಾವು ಬದುಕಿನ ಯಾವ ಹಂತದಲ್ಲಿದ್ದೇವೆAಬುದರ ಮೇಲೆ ಅವಲಂಬಿಸಿ ಪರಿವರ್ತಿತವಾಗುವ ಒಂದು ನಿಯತಾಂಕ. ನಾವು ‘ಅಸ್ತಿತ್ವದಲ್ಲಿರುವುದರ ಕಾರಣ/ಹೇತು’ ಅಂದರೆ ನಮ್ಮ ಇಕಿಗಾಯ್ ಎಂಬುದೇನಿದೆಯೋ ಅದು ನಮಗೆ ೧೫ ವರ್ಷವಾಗಿದ್ದಾಗ ಇದ್ದುದ್ದರ ಮಟ್ಟದಲ್ಲೇ ನಮಗೆ ಎಪ್ಪತ್ತು ವರ್ಷವಾದಾಗಲೂ ಇರುವುದಿಲ್ಲ. ಮೂರು ವಿಭಾಗಗಳ ಮುಖಾಂತರ, ಈ ಪುಸ್ತಕವು ಅದನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವಲ್ಲಿ ನಿಮಗೆ ಸಹಾಯ ಮಾಡುತ್ತದೆ- ನೀವು ನಿಮ್ಮ ವರ್ತಮಾನ ಕಾಲವನ್ನು ಸುಖವಾಗಿ ಅನುಭವಿಸುವ ಸಲುವಾಗಿ, ನಿಮ್ಮ ಭೂತಕಾಲವನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತಾ, ನಿಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸುವಲ್ಲಿ ಒಂದು ಸಾಧನವಾಗಿ ಕೆಲಸಗೈವುದು.
Showing 301 to 330 of 3301 results