nil
#
ಸಿದ್ದು ಜಿ ಕೊಳಕುರ್
‘ ಪ್ರೀತಿ ‘ ಇದು ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹ್ರದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದುಯಾವ ಪ್ರತಿಬಂಧಕ್ಕೂ ಒಳ ಪಡುವುದು ಕಷ್ಟ.
ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ನಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನ ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 14 ಕೃತಿಗಳು, 400ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿ, 2022ರಲ್ಲಿ ರವಿದಾತಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ದಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ' ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. * ಅನುರಾಯ ಶಾಲ್ಮಲೆ " ಎಂಬ ಈ ಐತಿಹಾಸಿಕ ಕಾದಂಬರಿಯ ಮೂಲವಸ್ತು ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋದೆ ಎಂಬ ಪ್ರದೇಶವನ್ನು ಕ್ರಿ.ಶ 1678ರಿಂದ 1718ರ ವರೆಗೆ ಆಳ್ವಿಕೆ ಮಾಡಿದ ಪರಾಕ್ರಮಿ, ಸಾಹಿತಿ, ಸಂಗೀತ ತಜ್ಞ ಅರಸ. ಈತನ ಶ್ರೇಷ್ಠ ಸಾಧನೆಯೆಂದರೆ ಕ್ರಿಶ 1680ರಲ್ಲೇ ಭಾರತದಲ್ಲಿ ಮೊದಲ ಬಾರಿಗೆ ಬ್ರಿಟಿಷರನ್ನು ಸೋಲಿಸಿದ ಮಹೋನ್ನತ ಶ್ರೇಯ, ಈತನನ್ನ ಕಥಾವಸ್ತುವನ್ನಾಗಿಸಿಕೊಂಡು ಕೃತಿಕಾರರು ಈ ಕಾದಂಬರಿಯನ್ನು ರಚಿಸಿದ್ದಾರೆ. ఈ ఐతియౌనిక ఊరు ಕಾದಂಬರಿಯನ್ನು ಓದುಗರು ಸ್ವಾಗತಿಸುವರೆಂದು ನಂಬಿದ್ದೇನೆ. -ಪ್ರಕಾಶಕ
ಹೊಸುರೆಲೆಗಳನ್ನು ಹುಡುಕುತ್ತಲೇ ಸಾಗುತ್ತಿರುವ ಮನುಷ್ಯನಿಗೆ, ಎಡತಾಗುತ್ತಲೇ ಇರುವ ಪ್ರಶ್ನೆ "ನಾನ್ಯಾರು?' ಎಂಬುದು. ಇದು ಅಧ್ಯಾತ್ಮದ 'ಅಲೌಕಿಕ ನಾನು' ಅಲ್ಲ, ಬದಲಿಗೆ ನಮ್ಮ ಅರಿವಿನಲ್ಲೇ ಇರುವ 'ಲೌಕಿಕ ನಾನು' ಜಟಿಲವಾದ ಪ್ರಶ್ನೆಯಾದ್ದರಿಂದ ಕಟ್ಟಿಕೊಳ್ಳುವ ಉತ್ತರವೂ ಶಿಥಿಲವಾಗಿರುತ್ತದೆ. ರಾಜ್ಯದ ನಾನಾ ಕಡೆಗಳಿಂದ ಬೆಂಗಳೂರಿನಂತಹ ಮಹಾನಗರಕ್ಕೆ ಬಂದು ಬದುಕು ಕಟ್ಟಿಕೊುವ ಯುವಕ ಯುವತಿಯರಿಗೆ ಕಾಡುವುದೂ ಇದೇ ಪ್ರಶ್ನೆ ಈ ಕಾದಂಬರಿಯಲ್ಲಿರುವುದು ಅಂತಹ ಯುವಪ್ರೇಮಿಗಳಿಬ್ಬರ ಕಥನ. ಜನಸಮೂಹವನ್ನು ಅಪ್ಪಳಿಸಿದ ಕರೋನಾದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥನ, ಅವರು ದಂಪತಿಗಳಾದ ನಂತರವೂ ವಿಸ್ತರಿಸುವ ದಾಂಪತ್ಯದ ಕಥನ. ನೈಜ ಬದುಕು, ಪ್ರಾರಂಭಹಾಗೂ ಅಂತ್ಯ ಎಂಬ ಒತ್ತಡಗಳಿಂದ ಮುಕ್ತವಾಗಿರುವುದರಿಂದ; ಇಲ್ಲಿನ ಪಾತ್ರಗಳಿಗೂ ಆ ಹೊರೆಯನ್ನು ಹೇರಲಾಗಿಲ್ಲ. ಆ ನಿಟ್ಟಿನಲ್ಲಿ ಇದೊಂದು ಹೊಸಪ್ರಯೋಗ ಎಂದು ಆಶಿಸುತ್ತೇನೆ. ಡಾ| ಶ್ರೀಧರ್ ಕೆ ಬಿ
Showing 91 to 120 of 3301 results