• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ತೃಷೆ | Trushe

nil

₹225   ₹200

Buy Now
ತೆರೆದ ಮನಸ್ಸಿನ ಪುಟಗಳು | Tereda Manassina Putagalu

ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಬರೆದಂತವು. ಹೆಚ್ಚಿನ ಕಥೆಗಳು ಮಹಿಳಾ ಪ್ರಧಾನ ಕಥೆಗಳು. ವರದಕ್ಷಿಣೆ, ಗಂಡು ಮಗುವಿನ ಮೋಹ, ನಶಿಸಿ ಹೋಗುತ್ತಿರುವ ಸಂಬಂಧಗಳ ಮೌಲ್ಯ, ಹಣದ ವ್ಯಾಮೋಹ ಮೊದಲಾದ ಸಾಮಾಜಿಕ ಸಮಸ್ಯೆಗಳ ಕುರಿತಾಗಿರುವ ಕಥೆಗಳಲ್ಲಿ ನೀತಿ ಪಾಠವಿದೆ. ಅಮ್ಮ. ಬಲಿದಾನ, ಮನೆಯ ಅದೃಶ್ಯ ಕಂಬಗಳು ನಮ್ಮಲ್ಲೇ ಎಲ್ಲೋ ನಡೆದಿರಬಹುದಾದ ಕಥೆಗಳು. ಸುಂದರಗೊಂದಲ, ಮ್ಯಾಜಿಕ್ ಲ್ಯಾಂಪ್, ಅದಲು ಬದಲು ಕಥೆಗಳು ಗಂಭೀರ ಕಥೆಗಳ ನಡುವೆ ತಿಳಿ ಹಾಸ್ಯ ಹೊಂದಿದೆ. ಜೊತೆಗೆ ಹೆಚ್ಚಿನ ಕಥೆಗಳು ಯುವ ಜನತೆಗೆ ಪಾಠವಾಗಬಲ್ಲ ಕಥೆಗಳು.

₹200   ₹178

Buy Now
ತೇರು | Teru

₹250   ₹223

Buy Now
ತ್ಯಾಗಕ್ಕಿಲ್ಲ ನೂಕುನುಗ್ಗಲು | Tyagakkilla Nookunuggalu

ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.

₹150   ₹128

Buy Now
ತ್ಯಾಗಕ್ಕಿಲ್ಲ ನೂಕುನುಗ್ಗಲು ಇಬುಕ್ | Tyaagakkilla Nookunuggalu Ebook

ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.

₹140   ₹70

Buy Now
ತ್ರಿಕೋಣ ಪ್ರೇಮ ತಂದ ದುರಂತ | Trikona prema tanda duranta

1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ವಿ. ಗುರುಪ್ರಸಾದ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು ಮತ್ತು ಕರ್ನಾಟಕ ಕೇಡರ್ ಅನ್ನು ನೀಡಲಾಯಿತು. ಬೀದರ್, ಗುಲ್ಬರ್ಗ ಮತ್ತು ಕೊಡಗು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಗುಲ್ಬರ್ಗ ರೇಂಜ್‌ನ ಡಿಐಜಿ Read More...

₹150   ₹134

Buy Now
ಥೇರೀಗಾಥಾ ಕಾಣಿಸಿದ ಹೆಣ್ಣು|THERIGATHA KANISIDA HENNU : Boudha Dharmadalli Mahile

“ಮುಕ್ತಿಯ ಹಾದಿಯಲ್ಲಿ ಸಾಗುವಾಗ ಗಂಡು ಸ್ವಭಾವ ಮತ್ತು ಹೆಣ್ಣು ಸ್ವಭಾವ ಎನ್ನುವುದಕ್ಕೆ ಏನಾದರೂ ಪ್ರಸ್ತುತತೆ ಇದೆಯೇ," ಅನ್ನುವುದು ಥೇರೀ ಸೋಮಾಳ ಪ್ರಶ್ನೆ. ಇದು ಬೌದ್ಧಧರ್ಮದಲ್ಲಿ ಮಹಿಳೆಯನ್ನು ಕುರಿತ ಓದಿಗೆ ಹಲವು ಕಿಟಕಿಗಳನ್ನು ಒಟ್ಟಿಗೆ ತೆರೆಯುತ್ತದೆ. 2500 ವರ್ಷಗಳ ಹಿಂದಿನ ಸಮಾಜದಲ್ಲಿದ್ದ ವಿಭಿನ್ನ ಧರ್ಮಗಳಲ್ಲಿ ಮಹಿಳೆಯರು ಇರಲೇ ಇಲ್ಲ ಎನ್ನಬಹುದು. ಹಾಗಿದ್ದಾಗ ಅವರಿಗೆ ಸ್ವತಂತ್ರವಾಗಿ ಮುಕ್ತಿಸಾಧನೆ ಸಾಧ್ಯ ಎಂಬ ಕಲ್ಪನೆಯಂತೂ ಕನಸು ಬಿಡಿ. ಅವರೇನಿದ್ದರೂ ಮುಕ್ತಿಸಾಧನೆಗೆ ಅಡ್ಡಿ ಅನ್ನೋ ಅಂಬೋಣವಿತ್ತು ಅಷ್ಟೆ. ಹಾಗಂತ ಮಹಿಳೆಯರು ಮೋಕ್ಷಸಾಧನೆಗೆ ಅಡ್ಡಿ ಅನ್ನೋ ಅಂತಹ ಮಾತುಗಳು ಬೌದ್ಧ ಧರ್ಮದಲ್ಲಿ ಇರಲೇ ಇಲ್ಲ ಅಂತಲೂ ಅಂದುಕೊಳ್ಳಬಾರದು. ಅಷ್ಟಾದರೂ ಹೆಣ್ಣಿಗೆ ಸಂಬಂಧಿಸಿದಂತೆ ಬೌದ್ಧ ಧರ್ಮ ಬೇರೇನೆ. ಏಕೆಂದರೆ, ಮಹಿಳೆಯರಿಗೆ ಮೋಕ್ಷಸಿದ್ಧಿ ಸಾಧ್ಯ ಎಂದು ಬುದ್ಧ ಘಂಟಾಘೋಷವಾಗಿ ಹೇಳಿದ. ಚರ್ಚೆ, ಜಿಜ್ಞಾಸೆ, ಮುಕ್ತ ಸಂವಾದಗಳಿಗೆ ಬೇಕಾದ ಆವರಣ ಸೃಷ್ಟಿಯಾಗಿತ್ತು. ಹೆಣ್ಣುಮಕ್ಕಳು ಸ್ವತಂತ್ರವಾಗಿ, ದಿಟ್ಟವಾಗಿ ತಮಗೇನು ಬೇಕು ಅಂತ ಹೇಳೋದನ್ನು ಅದು ಸಾಧ್ಯವಾಗಿಸಿತ್ತು. ಹೆಣ್ಣುಮಕ್ಕಳು ನಿಯಮಗಳನ್ನು ಧೈರ್ಯವಾಗಿ ಪ್ರಶ್ನಿಸಿದರು. ಇಂದು ಕೂಡ ನಾವು ಚರ್ಚೆಮಾಡುವುದಕ್ಕೆ ಸಂಕೋಚ ಮಾಡಿಕೊಳ್ಳುವ ಮುಟ್ಟು, ಬಸಿರು, ಲೈಂಗಿಕ ಬಯಕೆಗಳು ಮುಂತಾದ ವಿಷಯಗಳನ್ನು ಅಂದು ಉಳಿದ ಭಿಕ್ಕುಗಳು ಮತ್ತು ಬುದ್ಧನ ಜೊತೆಗೆ ಚರ್ಚಿಸುವುದಕ್ಕೆ ಅವರಿಗೆ ಸಾಧ್ಯವಾಗಿತ್ತು. ಇದನ್ನು ಸ್ವೀಕರಿಸುವಂತಹ ಮನಃಸ್ಥಿತಿಯನ್ನು ಪುರುಷರಲ್ಲಿ ಮತ್ತು ಸಮಾಜದಲ್ಲಿ ಹುಟ್ಟುಹಾಕುವ ಅವಶ್ಯಕತೆ ಇಂದಿಗೂ ಇದೆ. ತಮ್ಮ ಕಾಲದೊಂದಿಗೆ ಆ ಮಹಿಳೆಯರು ಅನುಸಂಧಾನ ಮಾಡಿದ ಅಪೂರ್ವ ಕ್ರಮ ಇಂದಿಗೂ ಪ್ರಸ್ತುತ.

₹195   ₹174

Buy Now