#
nil
ಯಂತ್ರ ಕಥೆ ಯಂತ್ರ ಸಾಧನಗಳ ಉಗಮ, ಇತಿಹಾಸ ಹಾಗೂ ದೈನಂದಿನ ಬದುಕಿನಲ್ಲಿ ಅವುಗಳ ಪಾತ್ರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಒಂದು ಪ್ರಯತ್ನ. ವಿಜ್ಞಾನದ ಪ್ರಗತಿಯಲ್ಲಿ ಯಂತ್ರಗಳ ಪಾತ್ರ ಮಹತ್ತರ. ಪ್ರತಿಯೊಂದು ಯಂತ್ರವೂ ವಿಕಾಸದ ಹಾದಿಯಲ್ಲಿ ತನ್ನ ವಿಶಿಷ್ಟ ಕೊಡುಗೆ ನೀಡಿದೆ. ಯಂತ್ರೋಪಜೀವಿ ಮಾನವನಿಗೆ ಈ ಪರಂಪರೆಯ ಅಧ್ಯಯನ ಅನಿವಾರ್ಯ, ಲಾಭದಾಯಕ. ಈ ಪುಸ್ತಕದ ಲೇಖಕರಾದ ಶ್ರೀ ಎಂ. ಶಿವಕುಮಾರ್ ಸ್ವತಃ ಯಂತ್ರ ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿರುವವರು, ಹಲವು ಯಂತ್ರ ಹತಾರಗಳ ವಿನ್ಯಾಸಕ್ಕೆ, ನಿರ್ಮಾಣಕ್ಕೆ ಕಾರಣ ಪುರುಷರು. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಲೇಖಕರ ಈ ಕೃತಿ ವಿಜ್ಞಾನ ವಿಷಯಕ್ಕೆ ಸಾಹಿತ್ಯದ ಮೆರುಗನ್ನು ಪಡೆದಿದ್ದು, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಥಮ ಪ್ರಶಸ್ತಿ ಪಡೆದ ಪುಸ್ತಕವಾಗಿದೆ.
ಭಾರತದ ವಿವಿಧ ನೆಲೆಗಳನ್ನು ದಾಟಿದ ವ್ಯಕ್ತಿಯ ಕಾಲ್ಪನಿಕ ಪ್ರಯಾಣವನ್ನು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳಲ್ಲಿ ತೋರುವ ರೋಮಾಂಚಕ ಸಂಕಲನ. ಈ ಲೇಖನಗಳಲ್ಲಿ, ಲೇಖಕರು ಭೇಟಿಯಾದ ಜನರ ನವಜೀವನ, ಹಳೆಯ ರಿವಾಜುಗಳು, ವೈಶಿಷ್ಟ್ಯಪೂರ್ಣ ಸಂಸ್ಕೃತಿ ಮತ್ತು ಪ್ರಾಚೀನ ಪರಂಪರಿಗಳನ್ನು ಹಂಚಿಕೊಂಡಿದ್ದಾರೆ.ಕೊಡಗಿನ ಆನೆಗಳ ವರ್ತನೆ ಕುರಿತು ಬರೆದ ಲೇಖನವು ಯಾತ್ರೆಯನ್ನು ಅಪೂರ್ವವಾದ ಸೌಂದರ್ಯದಿಂದ ಕೂಡಿಸಿದೆ. ಅತ್ಯಂತ ಸರಳ- ಲಾಲಿತ್ಯಪೂರ್ಣ ಬರವಣಿಗೆಯನ್ನು ಹೊಂದಿರುವ ಕೃತಿ 'ಯಾತ್ರೆ '
Showing 4021 to 4050 of 5447 results