• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಲಾವಣ್ಯವತಿ

nil

₹90   ₹80

ಲಾಸ್ಟ ಡೇಸ್ ಆಫ್ ಲೆಜೆಂಡ್ಸ್ | Last Days Of Legends

ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ.

₹225   ₹191

ಲಾಸ್ಟ ಡೇಸ್ ಆಫ್ ಲೆಜೆಂಡ್ಸ್ ಇಬುಕ್ | Last days of legends Ebook

ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ. ಕನ್ನಡ ಚಿತ್ರರಂಗದ ಲೆಜೆಂಡ್‌ಗಳ ಕೊನೆಯ ದಿನಗಳ ಚಿತ್ರಣ ಇಲ್ಲಿದೆ. ನಿಮ್ಮ ಇಷ್ಟ ಕಲಾವಿದರ ಬಗ್ಗೆ ನೀವಿಲ್ಲಿ ಓದಿದ ಮೇಲೆ ನಮ್ಮ ಮನಸ್ಸು ಮೂಕವಾಗುತ್ತೆ. ಈ ಪುಸ್ತಕ ಭಾವಸ್ಪರ್ಶಿಯಾಗಿದೆ, ಹೃದಯಸ್ಪರ್ಶಿಯಾಗಿದೆ. ಕಲಾವಿದರ ಹೃದಯವಿದ್ರಾವಕ ಘಟನೆಗಳ ಚಿತ್ರಣ ನಮ್ಮ ಕರುಳು ಹಿಂಡಿ ಮನಕಲಕುತ್ತವೆ. ಒಂದು ಕಾಲದಲ್ಲಿ ತೆರೆಯ ಮೇಲೆ ಮಿಂಚಿದವರು ಇನ್ನೊಂದು ಕಾಲದಲ್ಲಿ ಹಲವು ಸಂಕಷ್ಟಗಳಿಂದ ನರಳುವ ಕಥಾನಕ ನಮ್ಮ ಮನ ಕರಗಿಸಿಬಿಡುತ್ತದೆ.

₹225   ₹113

ಲಿಂಗಾಯತ ಚಳುವಳಿ (2017-18) | Lingayata Chaluvali 2017-18

ಇತಿಹಾಸವನ್ನು ಯಥಾವತ್ತಾಗಿ ದಾಖಲಿಸುವುದು ಪ್ರಜ್ಞಾವಂತ ನಾಗರಿಕನ ಲಕ್ಷಣ. ಸಮಾಜೋಧಾರ್ಮಿಕ ಚಳುವಳಿಯೊಂದರ ರಾಜಕೀಯ ಮಾನ್ಯತೆಗಾಗಿ ಶತಶತಮಾನಗಳಿಂದ ನಡೆದ ಚಳುವಳಿಯ ಮುಂದುವರಿದ ಭಾಗವಾಗಿ ೨೦೧೭-೧೮ರ ಲಿಂಗಾಯತ ಚಳುವಳಿ ವಿಪ್ಲವವಾಗಿ ಮಾರ್ಪಟ್ಟು, ಮನುಕುಲದಲ್ಲಿ ವೈಚಾರಿಕತೆಯನ್ನು ಬಡಿದೆಬ್ಬಿಸಿ, ಯಶಸ್ಸು ಕಾಣುತ್ತಿರುವ ಹೋರಾಟದ ಏಳುಬೀಳುಗಳ ವಿವಿಧ ಮಜಲುಗಳನ್ನು ಓದುಗನ ಕಣ್ಣಿಗೆ ಕಟ್ಟಿದಂತೆ ಅಕ್ಷರಗಳ ಚಿತ್ರ ಚಿತ್ರಿಸುವ ಮಾಂತ್ರಿಕತೆಯ ಕಲೆ ಜಿ. ಬಿ. ಪಾಟೀಲರಿಗೆ ಸಿದ್ದಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತ ಧರ್ಮ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿರುವ ಈ ಜನಾಂದೋಲನದ ಇತಿಹಾಸ ದಾಖಲಿಸುವ ಈ ಕೃತಿಗೆ ಅಭಿನಂದನೆ ಸಲ್ಲಿಸುವುದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಕರ್ನಾಟಕ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿ, ಅದನ್ನು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕೇಂದ್ರಕ್ಕೆ ರವಾನಿಸಿದೆ. ಸುಮಾರು ಆರು ವರ್ಷಗಳ ನಂತರ 'ಹಿಸ್ಟಾರಿಕಲ್ ಡಾಕ್ಯುಮೆಂಟರಿ' ರೂಪದಲ್ಲಿ ಈ ಗ್ರಂಥವನ್ನು ಪ್ರಕಟಿಸುತ್ತಿರುವುದು ಜಿ. ಬಿ. ಪಾಟೀಲರ ಸಾಧನೆಯ ಸಿಂಹಾವಲೋಕನದ ಬಗೆ ಹಾಗೂ ಮುಂದಿನ ಸಾಧನೆಯ ದಿಕ್ಕೂಚಿ. ಲೇಖನದ ಈ ಕೈಂಕರ್ಯ ಲಿಂಗಾಯತರಿಗೆ ಮಾತ್ರವಲ್ಲದೆ ಸರ್ವರಿಗೂ ಮಾರ್ಗದರ್ಶಿ ದೀವಿಗೆ. ಅವರನ್ನು ಬಲ್ಲ ನನಗೆ ಈ ಕಾರ್ಯ ಸಾಧನೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತ ಶುಭಹಾರೈಸುವೆ. - ಬಸವರಾಜ ಹೊರಟ್ಟಿ ( ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು )

₹450   ₹400

ಲೀಕ್ ಔಟ್ | Leak out

ಲೇಖಕಿ ಅಕ್ಷಥಾ ಪಾಂಡವಪುರ ಅವರ ಕತಾಸಂಕಲನ ಲೀಕ್ಔಟ್. ಈ ಸಂಕಲನದಲ್ಲಿ 11 ಕತೆಗಳಿವೆ. 2010 ರಿಂದ ಬರೆದಂತದ ಕಥೆಗಳು ಈ ಪುಸ್ತಕದಲ್ಲಿದ್ದು ಹೆಣ್ಣಿನ ಆಸೆ ಅಕಂಶೆ, ತಳಮಳ, ಬದುಕಿನ ಸಂಘರ್ಷ. ಸಂಬಂಧಗಳ ಏಣಿಗೆ ಎಷ್ಟು ಕಾಲಿಗಳು ಎಂಬ ಲೆಕ್ಕಾಚಾರದಲ್ಲಿರುವ ಈ ಕಥೆಗಳು ಕೆಲವು ವಾಸ್ತವಕ್ಕೆ ಹತ್ತಿರವಿದೆ ಎನ್ನಿಸಿದರೆ ಕೆಲವ ರಂಜನಿಯವಾಗಿವೆ. ಮುಖವಾಡಗಳ್ಳನ್ನು ಧರಿಸಿ ತುಂಬಾ ಸೀರಿಯಸ್ ಆಗಿ ಬದುಕು ನಡೆಸುವ, ಸದಾ ನಗುಮುಖವನ್ನು ಸಮಾಜಕ್ಕೆ ತೋರಬಯಸುವ ಎಲ್ಲರೂ ಕಾಣುವ ಕನಸುಗಳ ಸಂಖ್ಯೆಯಲ್ಲಿ fantasy ಯೇ ಹೆಚ್ಚು.... ಹಾಗೆ ಇಲ್ಲಿಯೂ ಸಹಾ ಜೀವನ & ಕನಸುಗಳ ಸಂಘರ್ಷದಲ್ಲಿ ಪಾತ್ರಗಳು ಹೇಗೆ ಕಾಣುತ್ತವೆ ಎಂಬುದನ್ನು ಹೆಚ್ಚು ಕಥೆಗಳಲ್ಲಿ ಕಾಣಬಹುದು..

₹150   ₹134

ಲೂಷನ್/Lu Hsun

nil

₹150   ₹134

ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ | Lets Make A Short Film

ಬೇರೆಯವರಿಗೆ ಕತೆ ಹೇಳುವ, ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ. ಕತೆಗಳಿರುವವರೆಗೂ ಮನುಷ್ಯನಿರುತ್ತಾನೆ. ಈಗ ಸ್ಮಾರ್ಟ್ ಯುಗ. ಎಲ್ಲರ ಕೈಯಲ್ಲೊಂದು ಸ್ಮಾರ್ಟ್ ಫೋನು. ಎಲ್ಲರ ಎದೆಯೊಳಗೆ ಕತೆಗಳಿರುವ ಕಾಲ. ಇಂತಹ ಕತೆಗಳನ್ನು ಸಶಕ್ತವಾಗಿ ದಾಟಿಸುವ ಮಾಧ್ಯಮ ದೃಶ್ಯಮಾಧ್ಯಮ. ಬನ್ನಿ ನಿಮ್ಮೊಳಗಿನ ಕತೆಗಳನ್ನು ದೃಶ್ಯಮಾಧ್ಯಮಕ್ಕೆ ತರೋಣ, ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ!

₹120   ₹102

ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ಇಬುಕ್ | Lets make a Short film Ebook

ಬೇರೆಯವರಿಗೆ ಕತೆ ಹೇಳುವ,ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿದಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ.

₹120   ₹60

ಲೈಫ್ 360 | Life 360

ಸೋತವರಿಗೆ, ಗೆಲುವನ್ನು ಎದುರು ನೋಡುವವರಿಗೆ, ಸಮಾನ ಮನಸ್ಕರಿಗೆ ಉಡುಗೊರೆಯಾಗಿ ನೀಡಲು ಈ ಕೃತಿ ಬೆಸ್ಟ್‌ ಆಯ್ಕೆ. ನಮ್ಮ ಬದುಕು ಹುಟ್ಟಿನಿಂದಲೇ ಶುರುವಾಗಬಹುದು. ಆದರೆ ಸೋಲು-ಗೆಲುವುಗಳು ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆಯೇ.. ಆಲೋಚನೆಗಳು ಇಲ್ಲದೆ ಬದುಕಿಲ್ಲ! ಬದುಕಿನ 360 ಕೋನದಲ್ಲೂ ಯೋಚಿಸುವಂತಹ ಶಕ್ತಿಯನ್ನು ನಾವು ಗಳಿಸದಿದ್ದರೆ ಖಂಡಿತ ಸ್ಪರ್ಧೆಯ ಸಾಲಿನಿಂದ ತುಂಬಾ ಹಿಂದೆ ಉಳಿದುಬಿಡುತ್ತೇವೆ. ಇವತ್ತು ಯಾರಿಗೂ ಹಿಂದೆ ಉಳಿಯಲು ಇಷ್ಟವಿಲ್ಲವಾದ್ದರಿಂದ ಆಲೋಚನಾಕ್ರಮದ ಬಗ್ಗೆ ಈ ಕೃತಿ ನಿಮಗೆ, ನಿಮ್ಮ ಗೊಂದಲಗಳಿಗೆ ಉತ್ತರಿಸುತ್ತಲೇ ನಿಮ್ಮ ಯಶಸ್ಸಿನ ದಾರಿಗೆ ನೆರವಾಗಬಲ್ಲದು..

₹250   ₹212