nil
#
ಕನ್ನಡದ ಪ್ರತಿಭಾಶಾಲಿ ಲೇಖಕಿ, ಅಧ್ಯಾಪಕರಾದ ದೀಪಾ ಹಿರೇಗುತ್ತಿ ಅವರು ಬರೆದಿರುವ ವ್ಯಕ್ತಿತ್ವ ವಿಕಸನದ ಬರಹದ ಪುಸ್ತಕ ಇದಾಗಿದೆ. ಜೀವನದಲ್ಲಿ ಸೋಲು, ಗೆಲುವು ಸಹಜ. ಗೆಲುವಿನಿಂದ ನಾವು ಪಾಠ ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಪಾಠ ಕಲಿಸುತ್ತೆ. ಅದಕ್ಕೇ ಲೇಖಕರು ಇಲ್ಲಿ ‘ಸೋಲೆಂಬ ಗೆಲುವು’ ಎಂಬ ಹೆಸರನ್ನು ಪುಸ್ತಕಕ್ಕೆ ಇಟ್ಟಿದ್ದಾರೆ. ಹಲವು ಸಾಧಕರ ಹಿಂದೆ ನೋವು, ಅಪಮಾನ, ತಾತ್ಸಾರ, ನಿಂದನೆಗಳು ಇರುತ್ತವೆ. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಛಲ ಬಿಡದೆ ತನ್ನ ಗುರಿ ಸಾಧನೆಗಾಗಿ ಮುನ್ನುಗ್ಗುವವನೇ ನಿಜವಾದ ಸಾಧಕ ಆಗುತ್ತಾನೆ ಎಂಬ ಗುಣಾಂಶ ಈ ಪುಸ್ತಕದಲ್ಲಿದೆ. ಅಂತಹ ಮಹಾನ್ ಸಾಧಕರ ಜೀವನ ಚಿತ್ರಣ ಇಲ್ಲಿದೆ. ಇವರೆಲ್ಲರೂ ಪುಸ್ತಕ ಓದುವವರಿಗೆ ಸ್ಫೂರ್ತಿ, ಪ್ರೇರಣೆ ನೀಡುತ್ತಾರೆ.
ಸೋಲೆಂಬುದು ಅಲ್ಪವಿರಾಮ, ಬದುಕು ಬದಲಿಸಬಹುದು ಭಾಗ - 3 ಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ: ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ. ನಮ್ಮ ಬದುಕಿನ ನಿಘಟಿನಿಂದ `ಸೋಲು` ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಿಲ್ಲ. ಎಲ್ಲವೂ ಸವಾಲು.
Showing 4921 to 4950 of 5261 results