• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ರಾಜಪಥ | rajapatha

ಸೋಲನ್ನು ಸೋಲಿಸಿ ಗೆಲ್ಲುವವರಿಗಾಗಿ... ಕನ್ನಡದ ಖ್ಯಾತ ಅಂಕಣಕಾರರು ಹಾಗು ಖ್ಯಾತ ವಾಗ್ಮಿಗಳು ಆಗಿರುವ ರಾಜೇಂದ್ರ ಭಟ್ ಕೆ ಅವರು ಬರೆದಿರುವ ಸ್ಫೂರ್ತಿದಾಯಕ ಅಂಕಣ ಬರಹಗಳಲ್ಲಿ ಆಯ್ದ ಕೆಲವು ಲೇಖನಗಳು ಈ ಪುಸ್ತಕದಲ್ಲಿವೆ. ಅವರ ಲೇಖನಗಳಲ್ಲಿ ಹೆಚ್ಚು ಸ್ಫೂರ್ತಿ ಮತ್ತು ಪ್ರೇರಣೆಗಳು ಇರುತ್ತವೆ ಎಂದು ಓದುಗರು ಈಗಾಗಲೇ ತುಂಬು ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಐದು ವರ್ಷಗಳಿಂದ ಒಂದು ದಿನವೂ ಬಿಡದೆ ಇಂತಹ ಅಂಕಣಗಳನ್ನು ಬರೆಯುವುದು ಸವಾಲಿನ ಕೆಲಸ. ಏಕತಾನತೆ ಬಾರದ ಹಾಗೆ ನೋಡಿಕೊಳ್ಳುವುದು. ಪ್ರತೀ ನಿತ್ಯವೂ ಹೊಸ ವೈವಿಧ್ಯಗಳಿಗೆ ತೆರೆದುಕೊಳ್ಳುವುದು ಸುಲಭವಲ್ಲ. ಅವರಿಗೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಗಣಿತ, ಸಂಗೀತ, ಕಲೆ, ಕ್ರಿಕೆಟ್, ಕ್ರೀಡೆ, ಸಿನೆಮಾ, ಆಧ್ಯಾತ್ಮ, ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ ಎಲ್ಲ ವಿಭಾಗಗಳಲ್ಲಿಯೂ ಆಸಕ್ತಿ ಮತ್ತು ಅಧ್ಯಯನಗಳು ಇರುವ ಕಾರಣ ಈ ಸರಣಿ ಬರವಣಿಗೆಯು ಅವರಿಗೆ ಸಾಧ್ಯವಾಗಿದೆ. ಅವರು ಲೇಖನದಲ್ಲಿ ಇರುವ ಭಾವನಾತ್ಮಕ ಮತ್ತು ಸೃಜನಾತ್ಮಕ ಸಾಲುಗಳು ನಿಮ್ಮನ್ನು ಪುಸ್ತಕ ಕೆಳಗಿಡಲು ಬಿಡದೆ ಸರಾಗವಾಗಿ ಓದಿಸಿಕೊಂಡು ಹೋಗುವುದು. ಬಹು ಬೇಡಿಕೆಯ ಭಾಷಣಕಾರರು ಮತ್ತು ವಿಕಸನ ತರಬೇತುದಾರರೂ ಆಗಿರುವ ರಾಜೇಂದ್ರ ಭಟ್ಟರ ದಶಕಗಳ ಓದು ಮತ್ತು ಅನುಭವ ಇಲ್ಲಿ ಹೆಪ್ಪುಗಟ್ಟಿ ಗೆಲುವಿನ 'ರಾಜಪಥ'ವನ್ನೇ ನಿರ್ಮಿಸಿದೆ. ಲೆಜೆಂಡ್ ವ್ಯಕ್ತಿಗಳ ಬದುಕಿನಲ್ಲಿ ನಡೆದ ಸ್ಫೂರ್ತಿದಾಯಕವಾದ ಅಂಶಗಳು, ಅವರ ಬದುಕಲ್ಲಿ ಮೂಡಿದ್ದ ಮಹತ್ವದ ತಿರುವುಗಳು, ಗೆಲುವಿಗೆ ಕಾರಣವಾದ ಅಂಶಗಳು, ಬದುಕಿನಲ್ಲಿ ಸೋಲುಗಳನ್ನು ಅವರು ಗೆದ್ದ ರೀತಿ, ಅವರಿಗೆ ದೊರೆತ ಉಡ್ಡಯನ ವೇದಿಕೆಗಳು, ಸಾಧಕರ ಬದ್ದತೆ... ಇವೆಲ್ಲವೂ ನಮಗೆ ಲೇಖಕರ ಸುಂದರ ಬರವಣಿಗೆಯ ಮೂಲಕ ಕಣ್ಣಿಗೆ ಕಟ್ಟುತ್ತವೆ. ಆಡಂಬರ ಉಪಮೆಗಳ ಗೊಡವೆಯಿಲ್ಲದೆ ಸುಲಭವಾಗಿ ಓದಿಸಿಕೊಂಡು ಹೋಗುವ ಶಕ್ತಿಯು ಈ ಲೇಖನಗಳಿಗಿವೆ. ರಾಜಪಥವು ರಾಜೇಂದ್ರ ಭಟ್ಟರ ಟ್ರೆಂಡ್ ಸೆಟ್ಟಿಂಗ್ ಅಂಕಣ ಲೇಖನಗಳಿಂದ ಸಿಂಗಾರವಾಗಿದೆ. ಎಡೆಬಿಡದೆ ಪ್ರತಿನಿತ್ಯವೂ ಅಂಕಣ ಬರಹಗಳ, ಸ್ಫೂರ್ತಿ ಮಾತುಗಳ ಮೂಲಕ ಗೆಲುವಿನ ರಹದಾರಿಯನ್ನೇ ನಿರ್ಮಿಸಿಕೊಡುವ ಶ್ರೀಯುತರ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿ ಸಾಗಲಿ....

₹180   ₹144

ಸಂಗೀತ ಶರಧಿ | Sangeetha Sharadhi

'ಸಂಗೀತ ಶರಧಿ' ಇದು ನಮ್ಮ ರಾಷ್ಟ್ರದ ಹೆಮ್ಮೆಯ ಸಂಗೀತ ದಿಗ್ಗಜಗಳ ಬದುಕಿನ ಕಥೆ. ಅವರ ಬದುಕಿನ ಸಂದೇಶದ ಕಥೆ. ನಮ್ಮ ನಾಡು ಮರೆಯಲೇಬಾರದ ಲೆಜೆಂಡ್ಸ್ ಅವರು. ಅದರಲ್ಲೂ ಕೆಲವರು ಎಲೆಯ ಮರೆಯ ಕಾಯಿಯಂತೆ ತಮ್ಮ ಬದುಕನ್ನು ಸವೆಸಿದವರು. ಭಾರತೀಯ ಸಂಸ್ಕೃತಿಯನ್ನು ಶ್ರೀಮಂತವಾಗಿ ಮಾಡಿದವರು. ಯಾರು ಸಂಗೀತವನ್ನು ಪ್ರೀತಿಸುತ್ತಾರೆಯೋ ಅವರು ಓದಲೇಬೇಕಾದ ಪುಸ್ತಕ ಇದು. ರಾಜೇಂದ್ರ ಭಟ್ ಕೆ

₹200   ₹178

ಸಂತೃಪ್ತಿ | Santrupti

ಪ್ರತಿಭಾನ್ವಿತ ವಿಶ್ರಾಂತ ಶಿಕ್ಷಕಿಯಾಗಿರುವ ಶ್ರೀಮತಿ ಪುಷ್ಪಾ ಜೋಗಿಯವರು, ತಮ್ಮ ನಿವೃತ್ತಿಯ ನಂತರ, ತಾವು ಹಸ್ತ ಪ್ರತಿಯಲ್ಲಿ ಜೋಡಿಸಿಟ್ಟ ಬರಹಗಳನ್ನೆಲ್ಲಾ ಕೃತಿ ರೂಪದಲ್ಲಿ ಪ್ರಕಟಿಸಲಾರಂಭಿಸಿದ್ದಾರೆ. ಈಗಾಗಲೇ ಅವರು ಭಾವ ಲಹರಿ, ನಮ್ಮೂರ ಬೈಲಗುತ್ತು, ಐಸಿರದ ಬೂಡು, ಪಂಚ ಪುರ್ಪಗಳೆಂಬ ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿ ಸಾಹಿತ್ಯ ಪ್ರಿಯರ ನಡುವೆ ಜನಾನುರಾಗಿಯಾಗಿದ್ದಾರೆ. ಸಂತೃಪ್ತಿ ನಾಟಕ ಕೃತಿಯು ಅವರ ಐದನೇ ಕೃತಿಯಾಗಿದೆ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಕ್ಕೆ ಅದರದ್ದೇ ಆದ ಮಹತ್ವವಿದೆ. ಅವುಗಳು ರಂಗದಲ್ಲಿ ಅಭಿನಯಿಸಲ್ಪಟ್ಟಾಗ ಜನ ಮಾನಸದಲ್ಲಿ ಭದ್ರವಾಗಿ ನೆಲೆಯೂರುತ್ತದೆ.

₹150   ₹134