ಭಾರತೀಯರಾದ ನಮ್ಮ ಪಾಲಿಗೆ ದೇವಾಲಯಗಳು ಜೀವನಮಾರ್ಗಕ್ಕೆ ಅವಶ್ಯಕವಾದ ಶ್ರದ್ಧಾಕೇಂದ್ರಗಳಾಗಿವೆ. ದೇವಾಲಯಗಳು ಸಮಾಜ-ಸಂಸ್ಕೃತಿ ಇತಿಹಾಸ-ಧರ್ಮ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ನಮ್ಮೊಟ್ಟಿಗೆ ಸಾಗಿ ಬಂದಿವೆ. ಇವುಗಳ ಆಳ-ವೈಶಾಲ್ಯಗಳ ಬಗೆಗೆ ಚಿಂತನ-ಮಂಥನಗಳೂ ನಡೆದುಕೊಂಡು ಬಂದಿವೆ. ಆಲಯಗಳ ಬಗೆಗಿನ ನಮ್ಮ ಶ್ರವಣಾತ್ಮಕ ಅರಿವಿಗಿಂತ ಮಿಗಿಲಾಗಿ ಅವುಗಳನ್ನು ಕಣ್ಣುಂಬ ಕಂಡು ಮಾನಸಿಕ ಸಂತೋಷ-ಸಮಾಧಾನ-ಶಾಂತಿಗಳನ್ನು ಪಡೆಯಬೇಕೆಂದು ನಾವು ಸದಾ ಹಂಬಲಿಸುತ್ತೇವೆ.
ಈ ಪುಸ್ತಕವನ್ನು ಬರೆದ ಡಾ. ಸತ್ಯವತಿ ಮೂರ್ತಿಯವರ ಕನ್ನಡ ಪ್ರೇಮ ಮತ್ತು ಸಾಧನೆಯೂ ಗಮನಾರ್ಹ. ವಿವಿಧ ಪ್ರಕಾರಗಳ ಹಲವು ಪುಸ್ತಕಗಳನ್ನು ರಚಿಸಿರುವ ಇವರು, ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ (ರಾಯಲ್ ಕಾಲೇಜ್ ಆಫ್ ಮ್ಯೂಸಿಕ್) ನಡೆದ ಅಖಿಲ ಭಾರತೀಯ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ, ಸಾಹಿತ್ಯ ರಚನೆ, ಸಂಶೋಧನೆ ಮತ್ತು ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಇಂಗ್ಲೆಂಡಿನ ಸರ್ಕಾರದ ವತಿಯಿಂದ 'ಪ್ರಿಸನ್ ಮಿನಿಸ್ಟರ್' ಆಗಿ ನೇಮಕಾತಿಯಾಗಿರುವುದು ಹೆಮ್ಮೆಯ ವಿಚಾರ. ವಿದೇಶದಲ್ಲಿ ನೆಲೆಸಿದ್ದು, ಇಷ್ಟೆಲ್ಲಾ ಬಿಡುವಿಲ್ಲದ ಕೆಲಸದ ನಡುವೆಯೂ, ಕನ್ನಡದ ಕುರಿತು, ಕನ್ನಡದ ಸಣ್ಣ ಕಥೆಗಳ ಕುರಿತು ಅಪಾರ ಅಭಿಮಾನವಿಟ್ಟುಕೊಂಡು, ಈ ಕೃತಿಯನ್ನು ಬರೆದಿರುವುದು ಸಹ ಎಲ್ಲರೂ ಹೆಮ್ಮೆ ಪಡುವ ವಿಚಾರ. "ಸಣ್ಣ ಕಥೆಗಳಲ್ಲಿ ಜೀವನ ತತ್ವ"ದಂತಹ ಅಪರೂಪದ ಕೃತಿಯನ್ನು ಕನ್ನಡದ ಓದುಗರಿಗೆ ನೀಡಿರುವ ಡಾ. ಸತ್ಯವತಿ ಮೂರ್ತಿಯವರನ್ನು ಮನಸಾರೆ ಅಭಿನಂದಿಸುತ್ತೇನೆ. -ಶಶಿಧರ ಹಾಲಾಡಿ
ಆತ್ಮೀಯರೆ, ನಾನು ನಿಮ್ಮ ತನಾಶಿ. ಟಿ.ಎನ್. ಶಿವಕುಮಾರ್, ಮಂಡ್ಯಕೊಪ್ಪಲು. ಇದೋ ಕನಕದಾಸರ ಹರಿಭಕ್ತಿಸಾರವನ್ನು ಅರ್ಥ ಮತ್ತು ವ್ಯಾಖ್ಯಾನ ಸಹಿತ ಕನ್ನಡಿಗರ ಮಡಿಲಿಗೆ ಇಡುತ್ತಿದ್ದೇನೆ. ಹರಿಯ ವರ್ಣನೆಯನ್ನೂ, ಲೀಲಾವಿಲಾಸಗಳನ್ನೂ, ಹಾಡಿ ತಣಿಯದ ದಾಸರ ಪದ ಸಾಮ್ರಾಜ್ಯವು ನನ್ನ ವ್ಯಾಖ್ಯಾನದ ಜೊತೆಗೆ ನಿಮ್ಮೊಡನಿದೆ. ಇದು ನಿಮ್ಮ ಮೈಮನಗಳನ್ನು ಪುಳಕಗೊಳಿಸಿದರೆ ನನ್ನ ಶ್ರಮ ಸಾರ್ಥಕ. ಹರಿ ನಾಮ ಸಂಕೀರ್ತನೆಯು ಕನ್ನಡನಾಡಿನ ಮನೆಮನಗಳಲ್ಲಿ ಮೊಳಗಲಿ, ತಾವು ಓದಿ ಹಾರೈಸಿ, ಹರಸಿ,
ಚಲನಶೀಲತೆ ಈ ಕಾದಂಬರಿಯ ಮುಖ್ಯವಾದ ಪ್ರತಿಮೆ ಎಂದು ನನ್ನ ಭಾವನೆ. ಚಲನೆ ಎಡೆಬಿಡದೆ ನಿರ್ಮಲಾಳನ್ನು ಭಾವಲೋಕದಿಂದ ಭಾವನೆಗಳ ಲೋಕಕ್ಕೆ, ವಾಸ್ತವ ಲೋಕದಿಂದ ಯಥಾರ್ಥವಾದ ಆತ್ಮ ಶುದ್ಧಿಯ ಮತ್ತು ಮುಂದುವರಿದು ಆತ್ಮ ಬೋಧೆಯ ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಹೀಗೆ ಎಲ್ಲೆಲ್ಲಿ ನೋಡಿದರೂ ಬದುಕಿನ ಚಲನಶೀಲತೆಯನ್ನು ಬರವಣಿಗೆಯ ಮೂಲಕ ಸೆರೆ ಹಿಡಿಯಲು ಕಿರಣ್ ಅವರು ಪ್ರಯತ್ನಿಸಿದ್ದಾರೆ. ಡಾ. ಜಿ.ಬಿ. ಹರೀಶ (ಮುನ್ನುಡಿಯಿಂದ)
Showing 31 to 35 of 35 results